Breakfast Recipe: ಭಾನುವಾರ ಸಿಂಪಲ್ ಆಗಿ ಬ್ಯಾಚೂಲರ್ ಗಳು ತಯಾರಿಸುವ ಬೆಳ್ಳುಳ್ಳಿ ಉಪ್ಪಿಟ್ಟು ಮಾಡಿ ಸವಿಯಿರಿ

ಇಂದು ನಾವು ನಿಮಗೆ ಸರಳವಾಗಿ ಮತ್ತು ರುಚಿಕರವಾದ ಬೆಳ್ಳುಳ್ಳಿ ಉಪ್ಪಿಟ್ಟು ಮಾಡುವ ವಿಧಾನ ಹೇಳುತ್ತಿದ್ದೇವೆ. ಮನೆಯಲ್ಲಿರುವ ಸಾಮಾಗ್ರಿ ಬಳಸಿ ಈ ಬೆಳ್ಳುಳ್ಳಿ ಉಪ್ಪಿಟ್ಟು (Garlic Upma/ Belluli Uppittu) ಮಾಡಬಹುದು.

ಉಪ್ಪಿಟ್ಟು

ಉಪ್ಪಿಟ್ಟು

  • Share this:
ಸಂಡೇ (Sunday) ಬಂದರೆ ಸ್ವಲ್ಪ ಸಮಯ ಹೆಚ್ಚು ಮಲಗೋಣ ಎಂದು ಗೃಹಿಣಿಯರು (Women) ಪ್ಲಾನ್ ಮಾಡಿಕೊಂಡಿರುತ್ತಾರೆ. ಅಷ್ಟೇ ತಡವಾಗಿ ಎದ್ದರೂ ತಿಂಡಿ ಮಾಡಲೇಬೇಕು.  ಹೊರಗಿನ ಆಹಾರ ಮಕ್ಕಳ ಆರೋಗ್ಯಕ್ಕೆ (Children Health) ಒಳ್ಳೆಯದಲ್ಲ ಅಂತ ಗೃಹಿಣಿಯರು ಎಷ್ಟೇ ಕಷ್ಟ ಎನಿಸಿದರೂ ಮನೆಯಲ್ಲಿಯೇ ತಿಂಡಿ ಸಿದ್ಧ ಮಾಡ್ತಾರೆ. ಇನ್ನೂ ಬ್ಯಾಚುಲರ್ ಗಳ (bachelor Life) ಪರಿಸ್ಥಿತಿ ತುಂಬಾ ಭಿನ್ನ. ಮನೆಯಲ್ಲಿ ಒಂದು ಸಾಮಾಗ್ರಿ ಇದ್ರೆ ಮತ್ತೊಂದು ಇರಲ್ಲ. ಪ್ರತಿದಿನ ಹೊರಗಿನ ತಿಂಡಿ (Out side Food) ತಿಂದು ಬೇಜಾರು ಆಗಿರುತ್ತದೆ. ಮನೆಯಲ್ಲಿ ಯಾವ ತಿಂಡಿ ಮಾಡಬೇಕು ಅಂತ ಯೋಚನೆ ಮಾಡುತ್ತಿದ್ರೆ, ಇಂದು ನಾವು ಹೇಳುವ ರೆಸಿಪಿ ಟ್ರೈ ಮಾಡಿ. ಉಪ್ಪಿಟ್ಟು (Uppittu) ಬೇಡ ಅಂತ ಮುಖ ತಿರುವ ಮಕ್ಕಳು ಬಾಯಿ ಚಪ್ಪರಿಸಿ ಇದನ್ನು ತಿನ್ನುತ್ತಾರೆ.

ಇಂದು ನಾವು ನಿಮಗೆ ಸರಳವಾಗಿ ಮತ್ತು ರುಚಿಕರವಾದ ಬೆಳ್ಳುಳ್ಳಿ ಉಪ್ಪಿಟ್ಟು ಮಾಡುವ ವಿಧಾನ ಹೇಳುತ್ತಿದ್ದೇವೆ. ಮನೆಯಲ್ಲಿರುವ ಸಾಮಾಗ್ರಿ ಬಳಸಿ ಈ ಬೆಳ್ಳುಳ್ಳಿ ಉಪ್ಪಿಟ್ಟು (Garlic Upma/ Belluli Uppittu) ಮಾಡಬಹುದು.

ಇದನ್ನೂ ಓದಿ: BreakFast Recipe: ಚಪಾತಿ, ದೋಸೆ, ಅನ್ನಕ್ಕೆ ರುಚಿಕರ ಬೆಂಡೆಕಾಯಿ ಮಸಾಲ ಕರಿ ಒಮ್ಮೆ ಟ್ರೈ ಮಾಡಿ

ಬೆಳ್ಳುಳ್ಳಿ ಉಪ್ಪಿಟ್ಟು ಮಾಡಲು ಬೇಕಾಗುವ ಸಾಮಾಗ್ರಿಗಳು

ಸೂಜಿ ರವೆ (ಸಣ್ಣ ರವೆ): 1 ಕಪ್

ಬೆಳ್ಳುಳ್ಳಿ: 6 ರಿಂದ 7 ಎಸಳು

ಜೀರಿಗೆ: ಒಂದು ಟೀ ಸ್ಪೂನ್

ಸಾಸಿವೆ: ಒಂದು ಟೀ ಸ್ಪೂನ್

ಹಸಿ ಮೆಣಸಿನಕಾಯಿ: 2

ಕಡಲೆಬೇಳೆ: 1 ಟೀ ಸ್ಪೂನ್

ಎಣ್ಣೆ: 3 ಟೀ ಸ್ಪೂನ್

ಕರಿಬೇವು: 4 ರಿಂದ 5

ಕೋತಂಬರಿ ಸೊಪ್ಪು

ಉಪ್ಪು: ರುಚಿಗೆ ತಕ್ಕಷ್ಟು

ಬೆಳ್ಳುಳ್ಳಿ ಉಪ್ಪಿಟ್ಟು ಮಾಡುವ ವಿಧಾನ

*ಮೊದಲಿಗೆ ಬೆಳ್ಳುಳ್ಳಿಯ ಮೇಲಿನ ಸಿಪ್ಪಿ ತೆಗೆದುಕೊಳ್ಳಿ. ಒಂದು ಎಸಳು ಎರಡು ಪೀಸ್ ಆಗುವಂತೆ ಜಜ್ಜಿಕೊಳ್ಳಿ.

*ನಂತರ ಸೂಜಿ ರವೆಯನ್ನು ಮಂದ ಉಷ್ಣದಲ್ಲಿ ನಾಲ್ಕರಿಂದ ಐದು ನಿಮಿಷ ಹುರಿದುಕೊಂಡು ಎತ್ತಿಟ್ಟುಕೊಳ್ಳಿ.

*ಈಗ ಒಂದು ಪಾತ್ರೆಯನ್ನು ಒಲೆಯ ಮೇಲಿಟ್ಟಕೊಂಡು ಗ್ಯಾಸ್  ಆನ್ ಮಾಡಿಕೊಳ್ಳಿ. ಗ್ಯಾಸ್ ಮಧ್ಯಮ ಉರಿಯಲ್ಲಿ ಇರುವಂತೆ ನೋಡಿಕೊಳ್ಳಿ.

*ಈಗ ಮೂರು ಟೀ ಸ್ಪೂನ್ ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಸಾಸಿವೆ ಮತ್ತು ಜೀರಿಗೆ ಹಾಕಿ. ಎರಡೂ ಕಪ್ಪು ಬಣ್ಣಕ್ಕೆ ಬರುತ್ತಿದ್ದಂತೆ ಕರಿಬೇವು ಹಾಕಿ ಬಾಡಿಸಿಕೊಳ್ಳಿ.

*ಈಗ ಕಡಲೆಬೇಳೆ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು.

*ತದನಂತರ ಸಣ್ಣದಾಗಿ ಕತ್ತರಿಸಿರುವ ಹಸಿ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನು ಹಾಕಿ ಫ್ರೈ ಮಾಡಬೇಕು.

*ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಎರಡು ಕಪ್ ನೀರು ಹಾಕಿ.

*ನೀರು ಉಕ್ಕು ಬರುತ್ತಿದ್ದಂತೆ ಹುರಿದಿಟ್ಟುಕೊಂಡಿರುವ ಸೂಜಿ ರವೆಯನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ರವೆ ಹಾಕುವ ಮುನ್ನ ಒಲೆ ಮಂದವಾಗಿ ಉರಿಯುತ್ತಿರಬೇಕು. ಇಲ್ಲವಾದ್ರೆ ಗಂಟು ಆಗಿ ರವೆಯ ರುಚಿ ಹಾಳಾಗುತ್ತದೆ.

*ರವೆ ಹಾಕಿದ ನಂತರ ಸಣ್ಣದಾಗಿ ಕತ್ತರಿಸಿಕೊಂಡಿರುವ ಕೋತ್ತಂಬರಿ ಸೊಪ್ಪು ಉದುರಿಸಿದ್ರೆ ರುಚಿಯಾದ ಬೆಳ್ಳುಳ್ಳಿ ಉಪ್ಪಿಟ್ಟು ಸವಿಯಲು ಸಿದ್ಧವಾಗುತ್ತದೆ.

ಇದನ್ನೂ ಓದಿ:  Food Recipe: ನೀವು ಡಿಫರೆಂಟ್ ಆಗಿ ಏನಾದ್ರೂ ತಿಂಡಿ ತಯಾರಿಸಬೇಕೇ? ಹಾಗಿದ್ರೆ ಈ ಬನ್ ದೋಸೆ ಒಮ್ಮೆ ಟ್ರೈ ಮಾಡಿ

ಇಲ್ಲಿ ಬೆಳ್ಳುಳ್ಳಿಗೆ ಪ್ರಾಮುಖ್ಯತೆ ನೀಡುತ್ತಿರೋದರಿಂದ ಈರುಳ್ಳಿ ಬಳಕೆ ಮಾಡಲ್ಲ. ಈ ಉಪ್ಪಿಟ್ಟು ಮೇಲೆ ಒಂದು ಟೀ ಸ್ಪೂನ್ ಗರಿ ಗರಿಯಾದ ತುಪ್ಪ ಅಥವಾ ಗಟ್ಟಿ ಮೊಸರು ಅಥವಾ ಹಸಿಕಾಯಿ ಚಟ್ನಿ ಜತೆ ಸವಿದ್ರೆ ಎರಡು ತುತ್ತು ಹೆಚ್ಚು ಹೋಗುತ್ತದೆ.

ಇನ್ನೂ ಹುಳಿ ಬೇಕಾದರೆ ಟೊಮಾಟೋ ಬದಲು ಹುಣಸೆ ಹಣ್ಣು ಬಳಸಿಕೊಳ್ಳಬಹುದು. ಇಲ್ಲಿ ಕಡಲೆಬೀಜ, ಉದ್ದಿನಬೇಳೆ ಹಾಗೂ ಯಾವುದೇ ತರಕಾರಿಯನ್ನು ಬಳಸಿಲ್ಲ. ಇದೆಲ್ಲ ಬಳಸಿದ್ರೆ ಅದು ನಾರ್ಮಲ್ ಉಪ್ಪಿಟ್ಟು ಆಗುತ್ತದೆ.
Published by:Mahmadrafik K
First published: