Garlic And Health: ಬೆಳ್ಳುಳ್ಳಿಯಲ್ಲಿರುವ ಔಷಧೀಯ ಗುಣಗಳು ಯಾವ ಆರೋಗ್ಯ ಪ್ರಯೋಜನ ನೀಡುತ್ತವೆ?

ಆಯುರ್ವೇದದಿಂದ ವೈದ್ಯಕೀಯ ವಿಜ್ಞಾನದವರೆಗೆ ಬೆಳ್ಳುಳ್ಳಿ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗಿದೆ. ಅದೇ ವೇಳೆ ಬೆಳ್ಳುಳ್ಳಿ ಅನೇಕ ಪ್ರಯೋಜನ ಮತ್ತು ಹಾನಿ ಉಂಟು ಮಾಡುತ್ತದೆ ಎಂಬ ಅಂಶವನ್ನು ಬೆಂಬಲಿಸುತ್ತಾರೆ. ಬೆಳ್ಳುಳ್ಳಿ ವಿವಿಧ ಔಷಧೀಯ ಗುಣ ಹೊಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಭಾರತೀಯ (Indian) ಅಡುಗೆ ಮನೆಯಲ್ಲಿ (Kitchen Room) ಬೆಳ್ಳುಳ್ಳಿ (Garlic) ಪದಾರ್ಥವನ್ನು ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲೂ (Home) ಬಳಕೆ ಮಾಡಲಾಗುತ್ತದೆ. ಬೆಳ್ಳುಳ್ಳಿ ಮಸಾಲೆ ಪದಾರ್ಥಗಳಲ್ಲಿ ಒಂದಾಗಿದೆ. ಜೊತೆಗೆ ಬೆಳ್ಳುಳ್ಳಿಯನ್ನು ಹಲವು ಕಾಯಿಲೆಗಳಿಗೆ (Disease) ಔಷಧವಾಗಿ ಬಳಕೆ ಮಾಡಲಾಗುತ್ತದೆ. ಬೆಳ್ಳುಳ್ಳಿ ಇದರ ಘೋರವಾದ ವಾಸನೆ ಮತ್ತು ಘೋರ ರುಚಿಯಿಂದಾಗಿ ಜನರು ಇದನ್ನು ಸಾಕಷ್ಟು ಇಷ್ಟ ಪಡುತ್ತಾರೆ. ಅದೇ ವೇಳೆ ಕೆಲವರು ಬೆಳ್ಳುಳ್ಳಿ ಸೇವನೆ ತಪ್ಪಿಸಲು ಉತ್ತಮ ಎಂದು ಪರಿಗಣಿಸುತ್ತಾರೆ. ಆದರೆ ಬೆಳ್ಳುಳ್ಳಿ ಕೆಲವು ಗಂಭೀರ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ. ಮತ್ತು ಅವುಗಳ ಪರಿಣಾಮವನ್ನು ನಿಯಂತ್ರಿಸುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ಸಾಬೀತು ಪಡಿಸಿದೆ.

    ಬೆಳ್ಳುಳ್ಳಿ ಆರೋಗ್ಯಕ್ಕೆ ಪ್ರಯೋಜನಕಾರಿ

    ಆಯುರ್ವೇದದಿಂದ ವೈದ್ಯಕೀಯ ವಿಜ್ಞಾನದವರೆಗೆ, ಬೆಳ್ಳುಳ್ಳಿ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗಿದೆ. ಅದೇ ವೇಳೆ ಬೆಳ್ಳುಳ್ಳಿ ಅನೇಕ ಪ್ರಯೋಜನ ಮತ್ತು ಹಾನಿ ಉಂಟು ಮಾಡುತ್ತದೆ ಎಂಬ ಅಂಶವನ್ನು ಬೆಂಬಲಿಸುತ್ತಾರೆ. ಅಂತಹ ವೇಳೆ ಬೆಳ್ಳುಳ್ಳಿ ಪ್ರಯೋಜನಗಳು ಮತ್ತು ಹಾನಿ ತಿಳಿದ ನಂತರವೇ ನೀವು ಅದನ್ನು ಸೇವಿಸಲು ಪ್ರಾರಂಭಿಸುವುದು ಉತ್ತಮ.

    ಬೆಳ್ಳುಳ್ಳಿಯಲ್ಲಿರುವ ಔಷಧೀಯ ಗುಣಗಳು

    ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫರ್ಮೇಷನ್ ಸೈಟ್‌ ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಬೆಳ್ಳುಳ್ಳಿ ವಿವಿಧ ಔಷಧೀಯ ಗುಣ ಹೊಂದಿದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಬ್ಯಾಕ್ಟೀರಿಯಾ, ಆ್ಯಂಟಿ ಫಂಗಲ್ ಮತ್ತು ಆ್ಯಂಟಿ ವೈರಲ್ ಗುಣಗಳಿವೆ.

    ಇದನ್ನೂ ಓದಿ: ಆಗಾಗ ಶೀತ ಕಾಣಿಸಿಕೊಳ್ಳುತ್ತಿದ್ದರೆ ವಿಟಮಿನ್ ಸಿ ನಿಮ್ಮ ದೇಹ ಸೇರಲಿ

    ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಬೆಳ್ಳುಳ್ಳಿ ಸೇವಿಸಿ

    ಬೆಳ್ಳುಳ್ಳಿಯಲ್ಲಿರುವ ಔಷಧೀಯ ಗುಣಗಳಿಂದಾಗಿ, ಇದು ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಸಾಧ್ಯವಾಗುತ್ತದೆ. ವಾಸ್ತವದಲ್ಲಿ ಬೆಳ್ಳುಳ್ಳಿ ಕ್ಯಾನ್ಸರ್ ವಿರೋಧಿ ಗುಣ ಹೊಂದಿದೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ಕೆಲಸ ಮಾಡುತ್ತದೆ. ಇದು ಗಂಭೀರ ಮತ್ತು ಮಾರಣಾಂತಿಕ ಆಗಿದೆ. ಮತ್ತು ಅದರ ಪರಿಣಾಮವನ್ನು ನಿಯಂತ್ರಿಸುತ್ತದೆ.

    ಬೆಳ್ಳುಳ್ಳಿ ಅಧಿಕ ಬಿಪಿ ನಿಯಂತ್ರಣ ಮಾಡುತ್ತದೆ

    ಅಧಿಕ ರಕ್ತದೊತ್ತಡ ಕಡಿಮೆ ಮಾಡಲು ಬೆಳ್ಳುಳ್ಳಿ ತಿನ್ನುವುದು ಪ್ರಯೋಜನಕಾರಿ ಎಂದು ಹೇಳಲಾಗಿದೆ. ಒಂದು ಅಧ್ಯಯನದ ಪ್ರಕಾರ, ಬೆಳ್ಳುಳ್ಳಿ ಎಸ್-ಅಲ್ಲಿಲ್ಸಿಸ್ಟಿ ಎಂಬ ಜೈವಿಕ ಸಕ್ರಿಯ ಸಲ್ಫರ್ ಸಂಯುಕ್ತ ಹೊಂದಿದೆ. ಇದು 10 mmHg ಸಿಸ್ಟೊಲಿಕ್ ಒತ್ತಡ

    ಮತ್ತು 8 mmHg ಡಯಾಸ್ಟೊಲಿಕ್ ಒತ್ತಡ ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಅಲ್ಲದೇ ಗಂಧಕದ ಕೊರತೆಯಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಎದುರಾದರೂ ಬೆಳ್ಳುಳ್ಳಿ ರಕ್ತದೊತ್ತಡ ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.

    ಬೆಳ್ಳುಳ್ಳಿ ಪದಾರ್ಥವು ಹಲವು ರೀತಿಯ ಅನಾನುಕೂಲತೆಗಳನ್ನು ಹೊಂದಿದೆ

    ಬೆಳ್ಳುಳ್ಳಿ ಬಾಯಿ ಅಥವಾ ದೇಹದಲ್ಲಿ ದುರ್ವಾಸನೆ ಉಂಟು ಮಾಡಬಹುದು. ನೀವು ಹಸಿ ಬೆಳ್ಳುಳ್ಳಿ ಸೇವಿಸಿದರೆ, ಎದೆಯುರಿ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಶಸ್ತ್ರಚಿಕಿತ್ಸೆಗೆ ಮುನ್ನ ಬೆಳ್ಳುಳ್ಳಿ ಸೇವನೆ ಮಾಡುವುದು ರಕ್ತಸ್ರಾವ ಉಂಟು ಮಾಡಬಹುದು. ಬೆಳ್ಳುಳ್ಳಿ ಅಲರ್ಜಿ ಸಮಸ್ಯೆ ಉಂಟು ಮಾಡಬಹುದು.

    ಆರೋಗ್ಯ ಹಾನಿ ಕಡಿಮೆ ಮಾಡಲು ಬೆಳ್ಳುಳ್ಳಿಯನ್ನು ಹೇಗೆ ಬಳಸುವುದು ಉತ್ತಮ?

    ಬೆಳ್ಳುಳ್ಳಿ ಮಧ್ಯಾಹ್ನ ಅಥವಾ ರಾತ್ರಿಯ ಊಟದಲ್ಲಿ ಬಳಸಬಹುದು. ಜೊತೆಗೆ ಬೆಳ್ಳುಳ್ಳಿ ಇದನ್ನು ತರಕಾರಿ ಸೂಪ್ ನಲ್ಲಿ ಸೇರಿಸಿ ಸೇವನೆ ಮಾಡಬಹುದು. ಇದರ ಜೊತೆ ಬೆಳ್ಳುಳ್ಳಿ ಪೇಸ್ಟ್ ನ್ನು ಸಹ ಆಹಾರದಲ್ಲಿ ಬೆರೆಸಿ ಸೇವನೆ ಮಾಡಬಹುದು.

    ಇದನ್ನೂ ಓದಿ: ಈ ಕೆಲವು ಚಟುವಟಿಕೆಗಳಿಂದ ಮಧುಮೇಹ ನಿಯಂತ್ರಿಸಿ!

    ಇದರ ಜೊತೆ ಬೆಳ್ಳುಳ್ಳಿಯನ್ನು ನಿಮ್ಮ ಆಹಾರದಲ್ಲಿ ಸೀಮಿತ ಪ್ರಮಾಣದಲ್ಲಿ ಮಾತ್ರ ಸೇರಿಸಬೇಕು ಎಂಬುದನ್ನು ನೆನಪಿಡಿ. ನೀವು ಪ್ರತಿದಿನ ಹಸಿ ಅಥವಾ ಒಣ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವ ಮೊದಲು ಖಂಡಿತವಾಗಿ ವೈದ್ಯಕೀಯ ಸಲಹೆ ಪಡೆಯಿರಿ.
    Published by:renukadariyannavar
    First published: