HOME » NEWS » Lifestyle » GARLIC CAN IMPROVE SEXUALL WELLNESS KVD

ಬೆಳ್ಳುಳ್ಳಿ ಸೇವನೆಯಿಂದ ಲೈಂಗಿಕ ಶಕ್ತಿ ಹೆಚ್ಚಾಗುತಂತೆ.. ಯಾವ ಸಮಯದಲ್ಲಿ, ಹೇಗೆ ಸೇವಿಸಬೇಕು?

ಬೆಳ್ಳುಳ್ಳಿ ಸೇವನೆಯಿಂದ ಲೈಂಗಿಕ ಶಕ್ತಿ ಹೆಚ್ಚಾಗುತ್ತಾ ಎನ್ನುವ ಪ್ರಶ್ನೆಗೆ ಹೌದು ಎನ್ನುತ್ತಿದೆ ಹೊಸ ಸಂಶೋಧನೆ. ಬೆಳ್ಳುಳ್ಳಿಯಲ್ಲಿನ ಅಂಶಗಳು ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುವಲ್ಲಿಯೂ ಸಹಾಯಕಾರಿಯಂತೆ.

Kavya V | news18-kannada
Updated:June 11, 2021, 10:33 PM IST
ಬೆಳ್ಳುಳ್ಳಿ ಸೇವನೆಯಿಂದ ಲೈಂಗಿಕ ಶಕ್ತಿ ಹೆಚ್ಚಾಗುತಂತೆ.. ಯಾವ ಸಮಯದಲ್ಲಿ, ಹೇಗೆ ಸೇವಿಸಬೇಕು?
ಬೆಳ್ಳುಳ್ಳಿ
  • Share this:
ಬೆಳ್ಳುಳ್ಳಿ ಪ್ರತಿಯೊಂದು ಅಡುಗೆ ಮನೆಯ ಕಾಯಂ ಸದಸ್ಯ. ಭಾರತೀಯ ಅಡುಗೆಗಳಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚಾಗಿ ಬಳಸಲಾಗುತ್ತೆ. ಏಷ್ಯಾದಲ್ಲಿ ಬೆಳ್ಳುಳ್ಳಿ ಬಳಕೆ ಹೆಚ್ಚಾಗಿದೆ. ಶತಮಾನಗಳ ಹಿಂದೆ ಬೆಳ್ಳುಳ್ಳಿಯನ್ನು ಆಹಾರ ಪದಾರ್ಥಕ್ಕಿಂತ ಒಂದು ಔಷಧಿಯಂತೆ ನೋಡುತ್ತಿದ್ದರಂತೆ. ಸಾಕಷ್ಟು ಔಷಧ ಗುಣಗಳು, ಗಾಯಗಳನ್ನು ಗುಣಪಡಿಸುವ ಶಕ್ತಿ ಬೆಳ್ಳುಳ್ಳಿಗೆ ಇದೆಯಂತೆ. ಇಂಥ ಬೆಳ್ಳುಳ್ಳಿ ಲೈಂಗಿಕ ಸಮಸ್ಯೆಗಳಿಗೂ ಉತ್ತಮ ಪರಿಹಾರವಂತೆ. ಬೆಳ್ಳುಳ್ಳಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು, ಹಲವು ಆರೋಗ್ಯ ಸಮಸ್ಯೆಗಳನ್ನು ಸರಿಪಡಿಸುತಂತೆ.

ಇನ್ನು ಬೆಳ್ಳುಳ್ಳಿ ಸೇವನೆಯಿಂದ ಲೈಂಗಿಕ ಶಕ್ತಿ ಹೆಚ್ಚಾಗುತ್ತಾ ಎನ್ನುವ ಪ್ರಶ್ನೆಗೆ ಹೌದು ಎನ್ನುತ್ತಿದೆ ಹೊಸ ಸಂಶೋಧನೆ. ಬೆಳ್ಳುಳ್ಳಿಯಲ್ಲಿನ ಅಂಶಗಳು ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುವಲ್ಲಿಯೂ ಸಹಾಯಕಾರಿಯಂತೆ. ಇದಕ್ಕಾಗಿಯೇ ಹಿಂದಿನ ಕಾಲದಲ್ಲಿ ಕೆಲವೊಂದು ಸಮಯಗಳಲ್ಲಿ ಬೆಳ್ಳುಳ್ಳಿ ಸೇವನೆಯನ್ನು ವರ್ಜಿಸುತ್ತಿದ್ದರಂತೆ. ಸಾಧು-ಸಂತರು ಬೆಳ್ಳುಳ್ಳಿಯಿಂದ ದೂರವಿರುವುದು ಇದೇ ಕಾರಣಕ್ಕಂತೆ.

ಬೆಳ್ಳಿಳ್ಳಿ ಸೇವನೆಯಿಂದ ರಕ್ತ ಪರಿಚಲನೆ ಸರಾಗವಾಗುತ್ತದೆ. ಇದು ಸ್ಖಲನ ಪ್ರಕ್ರಿಯಿಗೆ ಸಹಾಯಕಾರಿಯಾಗಿದೆ ಎನ್ನುತ್ತಾರೆ ತಜ್ಞರು. ಮನುಷ್ಯರು ಸೇರಿದಂತೆ ಕೆಲ ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆಯಿಂದ ಇದು ಸಾಬೀತಾಗಿದೆ. ದೀರ್ಘ ಕಾಲದವರೆಗೂ ಶೇಖರಿಸಿಟ್ಟ ಬೆಳ್ಳುಳ್ಳಿಯನ್ನು ಸೇವಿಸಿದಲ್ಲಿ ಲೈಂಗಿಕ ಸಮಸ್ಯೆಗಳಿಗೆ ಪರಿಹಾರವಾಗುತ್ತೆ.

ಇದನ್ನೂ ಓದಿ: ಶುಗರ್ ಇರುವವರಿಗೆ ಅನ್ನ ತಿನ್ನಲೇಬೇಕು ಅನಿಸುತ್ತಾ.. ಹಾಗಾದರೆ ಈ ಅಕ್ಕಿಗಳನ್ನು ಬಳಸುವುದು ಬೆಸ್ಟ್

ಬೆಳ್ಳುಳ್ಳಿ ಸೇವನೆಯಿಂದ ವೀರ್ಯದ ಫಲವತ್ತೆಯೂ ಹೆಚ್ಚುತ್ತದೆ ಎಂದು 18ಕ್ಕೂ ಹೆಚ್ಚು ಸಂಶೋಧನೆಗಳಿಂದ ತಿಳಿದು ಬಂದಿದೆ. ವೀರ್ಯ ಉತ್ಪತ್ತಿ, ಟೆಸ್ಟೋಸ್ಟರೆನ್​​ ಹಾರ್ಮೋನ್​ ಮೇಲೆಯೂ ಬೆಳ್ಳುಳ್ಳಿ ಪರಿಣಾಮ ಬೀರುತ್ತದೆ. ಬೆಳ್ಳುಳ್ಳಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್​​​ಗಳು ಹೃದಯಾಘಾತ ಸಂಭವವನ್ನು ತಗ್ಗಿಸುತ್ತದೆ. ಪ್ರಾಚೀನ ಕಾಲದಿಂದಲೂ ಆಹಾರದ ಭಾಗವಾಗಿರು ಬೆಳ್ಳುಳ್ಳಿಯಲ್ಲಿ ಅನೇಕ ಆರೋಗ್ಯಕರ ಅಂಶಗಳಿದ್ದು, ದಿನ ನಿತ್ಯದ ಬಳಕೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ.

ಕೆಲವು ಪುರಾತನ ಚಿಕಿತ್ಸಾ ಕ್ರಮಗಳ ಪ್ರಕಾರ ಬೆಳ್ಳುಳ್ಳಿ ತಲೆಹೊಟ್ಟನ್ನು ಸಂಪೂರ್ಣವಾಗಿ ಶಮನಗೊಳಿಸುವುದು. ಬೆಳ್ಳುಳ್ಳಿಯಲ್ಲಿ ವಿಟಮಿನ್ ಎ ಮತು ಸಿ ಸಮೃದ್ಧವಾಗಿರುತ್ತದೆ. ಸಲ್ಫರ್ ಸಂಯುಕ್ತಗಳು, ಫೈಬರ್, ಮೆಗ್ನೀಸಿಯಮ್, ಸೆಲೆನಿಯಮ್, ಜರ್ಮೇನಿಯಮ್ ಮತ್ತು ಅಮೈನೋ ಆಮ್ಲಗಳ ಉತ್ತಮ ಮೂಲ. ಇದರಲ್ಲಿ ಇರುವ ಪೋಷಕಾಂಶಗಳು ನೆತ್ತಿ, ಕೂದಲು ಹಾಗೂ ಚರ್ಮದ ಆರೈಕೆಗೆ ಉತ್ತಮ ಪೋಷಣೆ ನೀಡುವುದು.

ಇದನ್ನೂ ಓದಿ: ಜೂನ್ ತಿಂಗಳಲ್ಲಿ ಹುಟ್ಟಿದವರು ಭಾವುಕರು, ಬಟ್ಟೆ ಅಂದರೆ ಪ್ರಾಣ.. ಮತ್ತಷ್ಟು ಇಂಟ್ರೆಸ್ಟಿಂಗ್ ಸಂಗತಿ ಇಲ್ಲಿದೆಸಾಮಾನ್ಯವಾಗಿ ಕಚ್ಚಾ ಬೆಳ್ಳುಳ್ಳಿ ಖಾರ ಹಾಗೂ ಕಡು ಪರಿಮಳವನ್ನು ಹೊಂದಿರುತ್ತವೆ. ಅದನ್ನು ತಾಜಾ ರೂಪದಲ್ಲಿ ಸವಿಯುವುದು ಸ್ವಲ್ಪ ಕಷ್ಟ ಎನ್ನಲಾಗುವುದು. ತಾಜಾ ಬೆಳ್ಳುಳ್ಳಿಯನ್ನು ಹಾಗೆಯೇ ಸವಿಯುವುದರಿಂದ ಉತ್ತಮ ಪೋಷಕಾಂಶಗಳು ದೇಹಕ್ಕೆ ದೊರೆಯುತ್ತವೆ. ಅವು ನೇರವಾಗಿ ತಲೆ ಹೊಟ್ಟು ಹಾಗೂ ಚರ್ಮ ಸಂಬಂಧಿ ಸಮಸ್ಯೆಗಳನ್ನು ನಿಯಂತ್ರಿಸುತ್ತವೆ.
Published by: Kavya V
First published: June 11, 2021, 10:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories