Modak Recipe: ಗಣೇಶ ಚತುರ್ಥಿಗೆ ಮಾಡಿ ರವೆ ಮೋದಕ, ಇಲ್ಲಿದೆ ಸುಲಭದ ರೆಸಿಪಿ

ಮೋದಕವು ಗಣೇಶನಿಗೆ ಬಹಳ ಪ್ರಿಯವಾದ ಸಿಹಿ ಪದಾರ್ಥವಾಗಿದೆ. ಹಾಗಾಗಿ ಗಣೇಶನ ಹಬ್ಬದಲ್ಲಿ ಮೋದಕಕ್ಕೆ ಪ್ರಧಾನ ಸ್ಥಾನವಿದೆ. ಗಣೇಶ ಚತುರ್ಥಿಯಂದು ಮೋದಕಗಳನ್ನು ಮುಖ್ಯವಾಗಿ ಪ್ರಸಾದವಾಗಿ ತಯಾರಿಸಲಾಗುತ್ತದೆ. ಇಲ್ಲಿ ರವೆ ಮೋದಕದ ರೆಸಿಪಿ ನೀಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸಂಕಷ್ಟಿ, ಗಣೇಶ ಚತುರ್ಥಿ (Ganesh Chaturthi) ಹೀಗೆ ಗಣೇಶನ ಆರಾಧನೆ (Worship) ವೇಳೆ ಏಕದಂತ, ಪ್ರಥಮ ಪೂಜ್ಯನೀಯ ಹಿಂದೂ ದೇವರಾದ (Hindu God) ಗಣಪತಿಗೆ ಮೋದಕ (Modak) ನೈವೇದ್ಯ ಮಾಡಲಾಗುತ್ತದೆ. ಗಣಪತಿಯ ಆರಾಧನೆಗೆ ಮುಖ್ಯವಾಗಿ ಲಂಬೋದರನಿಗೆ ಮೋದಕ ಬೇಕೇ ಬೇಕು. ಮೋದಕ ನೈವೇದ್ಯದಿಂದ ಗಣೇಶ ಪ್ರಸನ್ನನಾಗುತ್ತಾನೆ ಎಂಬ ನಂಬಿಕೆಯೂ ಇದೆ. ಇನ್ನು ಮೋದಕವು ಜನಪ್ರಿಯ ಹಿಂದೂಗಳು ಮಾಡುವ ಸಿಹಿ ಪದಾರ್ಥವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಗಣೇಶನ ಹಬ್ಬ ಬರಲಿದೆ. ಪ್ರತೀ ವರ್ಷ ಗಣೇಶ ಚತುರ್ಥಿಯಂದು ವಿಶೇಷವಾಗಿ ಮೋದಕ ಸೇರಿದಂತೆ ಹಲವು ತರಹದ ಸಿಹಿ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ವಿವಿಧ ರೀತಿಯ ಪದಾರ್ಥಗಳನ್ನು ಬಳಸಿ ಮೋದಕ ರೆಡಿ ಮಾಡುವುದು ರೂಢಿಯಲ್ಲಿದೆ.

    ರವೆ ಮೋದಕ

    ವಿವಿಧ ರೀತಿಯ ಮೋದಕಗಳನ್ನು ತಯಾರಿಸುವುದನ್ನು ನೀವು ನೋಡಿರಬಹುದು. ಮೋದಕದ ವಿಧಗಳಲ್ಲಿ ಒಂದು ರವಾ ಮೋದಕವಾಗಿದೆ. ಇದನ್ನು 'ರವೆ ಮೋದಕ' ಎಂದೂ ಕರೆಯುತ್ತಾರೆ. ಈ ಪಾಕ ವಿಧಾನದಲ್ಲಿ ರವೆ, ತೆಂಗಿನಕಾಯಿ, ಬೆಲ್ಲ ಮತ್ತು ಏಲಕ್ಕಿ ಬಳಕೆ ಮಾಡಲಾಗುತ್ತದೆ. ಈ ಸಿಹಿ ವಿಶೇಷವಾಗಿ ಕರ್ನಾಟಕದಲ್ಲಿ ಹೆಚ್ಚು ಪ್ರಚಲಿತವಾಗಿದೆ.

    ಮತ್ತು ಹಬ್ಬದ ಸಮಯದಲ್ಲಿ ರವೆ ಮೋದಕ ಮಾಡುವುದು ದೇಶದಾದ್ಯಂತ ಪ್ರಸಿದ್ಧವಾಯಿತು. ಮೋದಕವು ಗಣೇಶನಿಗೆ ಬಹಳ ಪ್ರಿಯವಾದ ಸಿಹಿ ಪದಾರ್ಥವಾಗಿದೆ. ಹಾಗಾಗಿ ಗಣೇಶನ ಹಬ್ಬದಲ್ಲಿ ಮೋದಕಕ್ಕೆ ಪ್ರಧಾನ ಸ್ಥಾನವಿದೆ. ಗಣೇಶ ಚತುರ್ಥಿಯಂದು ಮೋದಕಗಳನ್ನು ಮುಖ್ಯವಾಗಿ ಪ್ರಸಾದವಾಗಿ ತಯಾರಿಸಲಾಗುತ್ತದೆ. ಹಾಗಾದರೆ ಮೋದಕ ಮಾಡುವ ಟೇಸ್ಟಿ ರೆಸಿಪಿ ಬಗ್ಗೆ ಇಲ್ಲಿ ನಾವು ತಿಳಿಯೋಣ.

    ಇದನ್ನೂ ಓದಿ: ಚಯಾಪಚಯ ಹೆಚ್ಚಿಸಲು ಮಸಾಲೆಯುಕ್ತ ಪದಾರ್ಥಗಳು ಬಹಳ ಒಳ್ಳೆಯದಂತೆ

    ರವೆ ಮೋದಕ ಮಾಡಲು ಬೇಕಾಗುವ ಸಾಮಗ್ರಿಗಳು ಯಾವವು?

    ಒಂದು ಕಪ್ ರವಾ

    ಒಂದು ಕಪ್ ನೀರು

    ಒಂದು ಟೀ ಚಮಚ ಉಪ್ಪು

    ಎರಡು ಚಮಚ ತುಪ್ಪ

    ಒಂದು ಕಪ್ ತುರಿದ ತೆಂಗಿನಕಾಯಿ

    ಒಂದು ಕಪ್ ಬೆಲ್ಲ

    ಒಂದು ಕಪ್ ನೀರು

    ಒಂದು ಟೀ ಚಮಚ ಏಲಕ್ಕಿ ಪುಡಿ

    ರವೆ ಮೋದಕ ಮಾಡುವ ವಿಧಾನ ಹೀಗಿದೆ

    ಮೊದಲ ಹಂತದಲ್ಲಿ : ಬಾಣಲೆ ತೆಗೆದುಕೊಳ್ಳಿ. ಅದರಲ್ಲಿ ಬೆಲ್ಲ ಹಾಕಿ ಸುಮಾರು ಒಂದು ಕಪ್ ನೀರು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಇದರಿಂದ ಬೆಲ್ಲ ಚೆನ್ನಾಗಿ ಕರಗುತ್ತದೆ. ಈಗ ಪ್ಯಾನ್ ಅನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಬೆಲ್ಲವು ಚೆನ್ನಾಗಿ ಕರಗಿದ ನಂತರ ಎಲ್ಲಾ ಕೊಳಕು ಹೋಗುತ್ತದೆ. ಈಗ ಬೆಲ್ಲವನ್ನು ಶೋಧಿಸಿ.

    ನಂತರ ಫಿಲ್ಟರ್ ಮಾಡಿದ ಬೆಲ್ಲದ ಸಿರಪ್ ಅನ್ನು ಬಿಸಿ ಮಾಡಿ. ಇದರಿಂದ ಅದು ಚೆನ್ನಾಗಿ ಊದಿಕೊಳ್ಳುತ್ತದೆ. ಈಗ ಈ ಸಿರಪ್‌ಗೆ ತುರಿದ ತೆಂಗಿನಕಾಯಿ ಸೇರಿಸಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಏಲಕ್ಕಿ ಪುಡಿ ಹಾಕಿ. ತೆಂಗಿನಕಾಯಿ ದಪ್ಪವಾಗುವವರೆಗೆ ಬೇಯಿಸಿ. ಈಗ ಮೋದಕ ಸ್ಟಫಿಂಗ್ ಸಿದ್ಧ ಆಗಿದೆ.

    ಎರಡನೇ ಹಂತದಲ್ಲಿ : ಈಗ ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ ರವೆ ಹಾಕಿ. ಸುಮಾರು 3 ನಿಮಿಷ ಕಾಲ ಫ್ರೈ ಮಾಡಿ. ಅದು ಕಂದು ಬಣ್ಣಕ್ಕೆ ತಿರುಗಿದ ನಂತರ ಅದನ್ನು ತಟ್ಟೆಗೆ ಹಾಕಿ. ನಂತರ ಅದೇ ಬಾಣಲೆಗೆ ಒಂದು ಕಪ್ ನೀರು ಮತ್ತು ಉಪ್ಪನ್ನು ಸೇರಿಸಿ. ನೀರು ಕುದಿ ಬರುವವರೆಗೆ ಬಿಸಿ ಮಾಡಿ. ನಂತರ ಅದಕ್ಕೆ ಹುರಿದ ರವೆ ಸೇರಿಸಿ.

    ಈಗ ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ರವಾ ಕೆಲವು ನಿಮಿಷಗಳ ಕಾಲ ಬೇಯಿಸಿ. ಮತ್ತು ಹಿಟ್ಟನ್ನು ಒಟ್ಟಿಗೆ ಬೆರೆಸಿ. ಉರಿ ಆಫ್ ಮಾಡಿ. ಮತ್ತು ರವೆಗೆ ಹಿಟ್ಟು ಮತ್ತು ತುಪ್ಪ ಸೇರಿಸಿ ಚೆನ್ನಾಗಿ ಬೆರೆಸಿ.

    ಇದನ್ನೂ ಓದಿ: ವಿಟಮಿನ್ ಬಿ 12 ಕೊರತೆಯಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ?

    ಮೂರನೇ ಹಂತದಲ್ಲಿ : ಈಗ ಸ್ವಲ್ಪ ಅಂಗೈಗೆ ಎಣ್ಣೆ ಹಚ್ಚಿರಿ. ನಿಮ್ಮ ಬೆರಳುಗಳಿಂದ ಸಣ್ಣ ಗಾತ್ರದ ರವೆ ಉಂಡೆ ಮಾಡಿ. ಮಧ್ಯಭಾಗದಲ್ಲಿ ಒತ್ತಿ ಅಗಲ ಮಾಡಿಕೊಳ್ಳಿ. ಅದಕ್ಕೀಗ ತೆಂಗಿನಕಾಯಿ-ಬೆಲ್ಲದ ಸ್ಟಫಿಂಗ್ ಅನ್ನು ಮಧ್ಯ ಭಾಗದಲ್ಲಿ ತುಂಬಿರಿ. ನಂತರ ಅದನ್ನು ಲಾಕ್ ಮಾಡಿ. ಅದನ್ನು ಮೋದಕದ ಆಕಾರದಕ್ಕೆ ತಿರುಗಿಸಿ. ನಂತರ ಸ್ಟೀಮರ್ ಪ್ಲೇಟ್ನಲ್ಲಿ ಇರಿಸಿ. 10 ನಿಮಿಷ ಸ್ಟೀಮ್ ಮಾಡಿ, ತೆಗೆಯಿರಿ. ಈಗ ರುಚಿಕರ ರವೆ ಮೋದಕ ರೆಡಿಯಾಗಿದೆ.
    Published by:renukadariyannavar
    First published: