Ganesh Chaturthi 2022: ಗಣೇಶನಿಗೆ ಈ ಸ್ವೀಟ್​ಗಳನ್ನು ನೈವೇದ್ಯ ಮಾಡಿದ್ರೆ ಶ್ರೇಷ್ಠವಂತೆ

Prasad to Offer Ganpati: ಈ ವಿಶೇಷ ದಿನದಂದು ಕೆಲ ವಿಶೇಷ ಪದಾರ್ಥಗಳನ್ನು ನೈವೇದ್ಯ ಮಾಡುವುದರಿಂದ ಗಣೇಶನಿಗೆ ಸಂತೃಪ್ತಿ ಆಗುತ್ತದೆ ಎನ್ನಲಾಗುತ್ತದೆ. ಹಾಗಾದ್ರೆ ಯಾವ ಆಹಾರಗಳನ್ನು ಮಾಡಬೇಕು ಎಂಬುದು ಇಲ್ಲಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತದಲ್ಲಿ (India) ವೈಭವದಿಂದ ಆಚರಿಸುವ ಹಬ್ಬಗಳಲ್ಲಿ (Festival)  ಗೌರಿ ಗಣೇಶ ಹಬ್ಬ (Gowri Ganesha) ಕೂಡ ಒಂದು. ಈ ಹಬ್ಬವನ್ನು ವಿನಾಯಕ ಚತುರ್ಥಿ, ಗಣೇಶ ಚತುರ್ಥಿ ಮತ್ತು ಚೌತಿ ಹಬ್ಬವೆಂದು ಸಹ ಕರೆಯುತ್ತಾರೆ. ಈ ದಿನ ಗಣೇಶನಿಗೆ ಪ್ರಿಯವಾದ ವಸ್ತುಗಳನ್ನು ಮಾಡಿ ನೈವೇದ್ಯ ಮಾಡಲಾಗುತ್ತದೆ. ಗಣೇಶ ಹಬ್ಬಕ್ಕೆ ಇನ್ನು ಕೆಲ ದಿನಗಳು ಬಾಕಿ ಇದೆ. ಈಗಾಗಲೇ ಜನರು ಹಬ್ಬಕ್ಕೆ ತಯಾರಿ ಆರಂಭಿಸಿದ್ದಾರೆ. ಗೌರಿ- ಗಣೇಶಕ್ಕೆ ಹಬ್ಬಕ್ಕೆ ಅಲಂಕಾರ (Decoration), ಗಣೇಶನ ಮೂರ್ತಿ, ಅಡುಗೆ ಹೀಗೆ ಎಲ್ಲದಕ್ಕೂ ಸಿದ್ಧತೆ ಆರಂಭವಾಗಿದೆ. ಹಾಗೆಯೇ ಜನರು ಮೋದಕ, ಕಾಯಿ ಕಡುಬು ಮಾಡಲು ಸಜ್ಜಾಗಿದ್ದಾರೆ. ಆದರೆ ಗಣೇಶನಿಗೆ ಪ್ರಿಯವಾದ ಇನ್ನೂ ಕೆಲವು ಆಹಾರಗಳಿವೆ (Food). ಹೌದು, ಈ ವಿಶೇಷ ದಿನದಂದು ಕೆಲ ವಿಶೇಷ ಪದಾರ್ಥಗಳನ್ನು ನೈವೇದ್ಯ ಮಾಡುವುದರಿಂದ ಗಣೇಶನಿಗೆ ಸಂತೃಪ್ತಿ ಆಗುತ್ತದೆ ಎನ್ನಲಾಗುತ್ತದೆ. ಹಾಗಾದ್ರೆ ಯಾವ ಆಹಾರಗಳನ್ನು ಮಾಡಬೇಕು ಎಂಬುದು ಇಲ್ಲಿದೆ.  

ರವೆ ಉಂಡೆ

ಈ ಸ್ವೀಟ್​​ಗೆ ಹೆಚ್ಚಿನ ಫ್ಯಾನ್ಸ್ ಇದ್ದಾರೆ. ರವೆ ಉಂಡೆ ಮಾಡಿದ ಕೆಲವೇ ದಿನಗಳಲ್ಲಿ ಖಾಲಿ ಆಗುತ್ತದೆ. ಇದನ್ನು ಸಕ್ಕರೆ, ರವೆ, ಹಾಲು, ಕೊಬ್ಬರಿ ಬಳಸಿ ತಯಾರಿಸಲಾಗುತ್ತದೆ. ಪುರಾಣಗಳ ಪ್ರಕಾರ ರವೆ ಉಂಡೆ ಎಂದರೆ ಗಣೇಶನಿಗೆ ಬಹಳ ಇಷ್ಟವಂತೆ. ಗಣೇಶನ ಹಬ್ಬದ ದಿನ ನೀವೂ ಸಹ ರವೆ ಉಂಡೆ ಮಾಡಿ ನೈವೇದ್ಯ ಮಾಡಬಹುದು.

ಮೋತಿಚೂರ್ ಲಡ್ಡು

ಮೋತಿಚೂರ್ ಲಡ್ಡು ಎಂದರೆ ಎಲ್ಲರ ಬಾಯಲ್ಲಿ ನೀರು ಬರುತ್ತದೆ. ಇದು ದೇವರ ನೈವೇದ್ಯಕ್ಕೆ ಬಹಳ ಶ್ರೇಷ್ಠ. ಇದರ ಸಿಹಿ ಮತ್ತು ರುಚಿಕರವಾದ ಸುವಾಸನೆಯು ಗಣೇಶನನ್ನು ಆಕರ್ಷಿಸುತ್ತದೆ ಎನ್ನಲಾಗುತ್ತದೆ. ಎಲ್ಲಾ ಹಬ್ಬದ ಸಂದರ್ಭಗಳಲ್ಲಿ, ಈ ರುಚಿಕರವಾದ ಖಾದ್ಯವನ್ನು ವಿವಿಧ ದೇವರುಗಳಿಗೆ ನೈವೇದ್ಯವಾಗಿ ನೀಡಲಾಗುತ್ತದೆ.



ಬಾಸುಂದಿ

ಪೂಜೆಯ ಸಮಯದಲ್ಲಿ, ಗಣೇಶನಿಗೆ ಅರ್ಪಿಸಲು ಬಾಸುಂದಿಯನ್ನು ತಯಾರಿಸಲಾಗುತ್ತದೆ. ಈ ರುಚಿಕರವಾದ ಬಾಸುಂದಿಯನ್ನು ತಯಾರಿಸಲು, ಪ್ಯಾನ್ ತೆಗೆದುಕೊಂಡು ಹಾಲನ್ನು ಹಾಕಿ ಕುದಿಸಿ. ಅದಕ್ಕೆ ಸಕ್ಕರೆ ಪುಡಿ, ಕೇಸರಿ ಎಳೆಗಳು, ಏಲಕ್ಕಿ ಪುಡಿ ಮತ್ತು ಸ್ವಲ್ಪ ಡ್ರೈ ಫ್ರೂಟ್ಸ್​ ಮತ್ತು ಬೀಜಗಳನ್ನು ಸೇರಿಸಿ. ಒಂದು ನಿಮಿಷ ಬೇಯಿಸಿ.

ಇದನ್ನೂ ಓದಿ: ಮದುವೆ ಟೈಮ್​ನಲ್ಲಿ ಕೂದಲ ಆರೈಕೆ ಹೀಗಿದ್ರೆ ಸೂಪರ್ ಹೇರ್​ಸ್ಟೈಲ್​ ಮಾಡ್ಬೋದು



ಸಟೋರಿ

ಗಣೇಶ ಚತುರ್ಥಿಯ ಸಮಯದಲ್ಲಿ, ಅನೇಕ ಜನರು ಈ ಸ್ವೀಟ್​ ಅನ್ನು ತಯಾರಿಸುತ್ತಾರೆ. ಈ ಸಿಹಿ ಮತ್ತು ಚಪ್ಪಟೆ ರೊಟ್ಟಿಯನ್ನು ತಯಾರಿಸಲು ಖೋಯಾ, ಹಾಲು, ತುಪ್ಪ ಮತ್ತು ಕಡಲೇ ಹಿಟ್ಟನ್ನು ಬಳಸಲಾಗುತ್ತದೆ. ಸಟೋರಿ ಒಂದು ವಿಶಿಷ್ಟವಾದ ರುಚಿಯನ್ನು ಹೊಂದಿರುತ್ತದೆ. ಈ ಪದಾರ್ಥವನ್ನು ಮನೆಯಲ್ಲಿಯೇ ಮಾಡಿ ಮತ್ತು ಹಬ್ಬದ ಸಂದರ್ಭದಲ್ಲಿ ಗಣೇಶನಿಗೆ ನೈವೇದ್ಯ ಮಾಡಿ.



ಪಾಯಸ

ಪಾಯಸ​ ಒಂದು ಪ್ರಸಿದ್ಧವಾದ ಸಿಹಿ ಆಹಾರ ಪದಾರ್ಥವಾಗಿದ್ದು, ಇದನ್ನು ಪ್ರತಿಯೊಂದು ಮನೆಯಲ್ಲೂ ಪ್ರತಿ ಹಬ್ಬದ ದಿನದಂದು ಮಾಡುತ್ತಾರೆ. ಶ್ಯಾವಿಗೆ ಪಾಯಸ, ಗೋಧಿ ಪಾಯಸ ಹೀಗೆ ಹಲವಾರು ವಿಧದ ಪಾಯಸಗಳನ್ನು ಮಾಡಿ, ದೇವರಿಗೆ ನೈವೇದ್ಯ ಮಾಡಲಾಗುತ್ತದೆ.

ಇದನ್ನೂ ಓದಿ: ನಿಮ್ಮ ಚಿನ್ನದ ಆಭರಣವನ್ನು ಸುಲಭವಾಗಿ ಕ್ಲೀನ್​ ಮಾಡಲು ಇಲ್ಲಿದೆ ಸೂಪರ್ ಹ್ಯಾಕ್ಸ್

ಬಾಳೆಹಣ್ಣು, ತೆಂಗಿನಕಾಯಿ

ಇನ್ನು ಗಣೇಶನಿಗೆ ಯಾವಾಗಲೂ ಬಾಳೆಹಣ್ಣು ಹಾಗೂ ತೆಂಗಿನಕಾಯಿ ಬಹಳ ಇಷ್ಟ. ಸಾಮಾನ್ಯವಾಗಿ ದೇವರಿಗೆ ಪೂಜೆ ಮಾಡುವಾಗ ತೆಂಗಿನಕಾಯಿ ಒಡೆದು, ಬಾಳೆಹಣ್ಣನ್ನು ಇಟ್ಟು ನೈವೇದ್ಯ ಮಾಡಲಾಗುತ್ತದೆ. ಆದರೆ ವಿಶೇಷವಾಗಿ ಬಾಳೆಹಣ್ಣು, ತೆಂಗಿನಕಾಯಿ ಸೇರಿಸಿ ಒಂದು ಸಿಹಿ ಪದಾರ್ಥ ಮಾಡಿ ಹಬ್ಬದ ದಿನ ನೈವೇದ್ಯ ಮಾಡುವುದು ಒಳ್ಳೆಯದು.
Published by:Sandhya M
First published: