ಗೇಮ್ ಓವರ್: ಆನ್​ಲೈನ್​ ಗೇಮ್​ ನಿಯಂತ್ರಣಕ್ಕೆ ಮುಂದಾದ ಚೀನಾ ಸರ್ಕಾರ!

news18
Updated:September 4, 2018, 4:21 PM IST
ಗೇಮ್ ಓವರ್: ಆನ್​ಲೈನ್​ ಗೇಮ್​ ನಿಯಂತ್ರಣಕ್ಕೆ ಮುಂದಾದ ಚೀನಾ ಸರ್ಕಾರ!
news18
Updated: September 4, 2018, 4:21 PM IST
-ನ್ಯೂಸ್ 18 ಕನ್ನಡ

ಈ ಹಿಂದೆ ಸಮಯ ಸಿಕ್ಕಾಗೆಲ್ಲಾ ಮಕ್ಕಳು ಆಟದ ಮೈದಾನದಲ್ಲಿರುತ್ತಿದ್ದರು. ಆದರೆ ಅಂತಹ ಸನ್ನಿವೇಶಗಳು ಇಂದು ಕೇವಲ ಕಲ್ಪನೆಗಳು ಮಾತ್ರ. ಏಕೆಂದರೆ ಮಕ್ಕಳು ಸ್ವಲ್ಪ ಸಮಯ ಸಿಕ್ಕರೆ ಕಂಪ್ಯೂಟರ್ ಅಥವಾ ಮೊಬೈಲ್​ ಗೇಮ್ಸ್​ನಲ್ಲಿ ತಲ್ಲೀನರಾಗಿ ಬಿಡುತ್ತಾರೆ. ವಿಶ್ವದ ಅತಿದೊಡ್ಡ ಆನ್​ಲೈನ್ ಗೇಮಿಂಗ್ ಮಾರುಕಟ್ಟೆಯಾಗಿರುವ ಚೀನಾದಲ್ಲಿ ಇದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಬಾಲ್ಯದಲ್ಲಿ ನಕ್ಕು ನಲಿದು ಬದುಕಬೇಕಾದ ಮಕ್ಕಳು ಗೇಮ್ ಎಂಬ ಜೈಲಿನಲ್ಲಿ ಬಂಧಿಯಾಗಿ ಕಾಲ ಕಳೆಯುತ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತು ಕೊಂಡಿರುವ ಚೀನಾ ಸರ್ಕಾರ ಗೇಮ್ ಆಡುವುದರ ಮೇಲೆ ನಿರ್ಬಂಧ ಹೇರಲು ತೀರ್ಮಾನಿಸಿದೆ. ಅಪ್ರಾಪ್ತ ವಯಸ್ಸಿನವರಿಗೆ ನಿರ್ದಿಷ್ಟ ಸಮಯದವರೆಗೆ ಮಾತ್ರ ಗೇಮ್ ಆಡುವ ಅವಕಾಶ ನೀಡಲು ಕ್ರಮ ಕೈಗೊಳ್ಳಲಿದೆ. ದೇಶದಲ್ಲಿ ಹೆಚ್ಚುತ್ತಿರುವ ದೃಷ್ಟಿಹೀನತೆಯ ಸಮಸ್ಯೆಗೆ ಬಾಲ್ಯದಲ್ಲಿ ಗೇಮ್ಸ್​ ಆಡುತ್ತಿರುವುದು ಒಂದು ಕಾರಣವಾಗಿರುವುದರಿಂದ ಹೊಸ ಕ್ರಮಕ್ಕೆ ಚೀನಾ ಸರ್ಕಾರ ಮುಂದಾಗಿದೆ.

ಈ ಹಿಂದೆಯೇ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕಣ್ಣಿನ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಚೀನಿಯರಲ್ಲಿ ಕೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಯುವ ಜನರಲ್ಲಿ ಹದಗೆಡುತ್ತಿರುವ ದೃಷ್ಟಿ ದೋಷವನ್ನು ನಿವಾರಿಸುವ ಸಲುವಾಗಿ ಗೇಮ್ಸ್​ ಮೇಲೆ ನಿರ್ಬಂಧಗಳನ್ನು ಹೇರಲು ಸರ್ಕಾರ ಮುಂದಾಗಿದೆ ಎಂದು ಚೀನಾದ ಶಿಕ್ಷಣ ಸಚಿವಾಲಯದ ವೆಬ್​ಸೈಟ್​ನಲ್ಲಿ ತಿಳಿಸಲಾಗಿದೆ. ಚೀನಾದಲ್ಲಿ ವೇಗವಾಗಿ ಬೆಳೆಯುತ್ತಿರುವ ವಿಡಿಯೋ ಗೇಮ್ ಸಂಸ್ಕೃತಿಯನ್ನು ನಿಯಂತ್ರಿಸಲು ಸರ್ಕಾರ ಯೋಜನೆಗಳನ್ನು ಹಾಕಿಕೊಂಡಿದ್ದು, ಈಗಾಗಲೇ ಅಧಿಕಾರಿಗಳು ಗೇಮಿಂಗ್ ಅಡಿಕ್ಟ್ ಬಗ್ಗೆ ಮತ್ತು ಹಿಂಸಾತ್ಮಕ ರೂಪದ ಗೇಮ್​ಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ.

ಆನ್​ಲೈನ್​ನಲ್ಲಿ ಆಡಬಹುದಾದ ಆಟಗಳ ಸಂಖ್ಯೆಯನ್ನು ಮತ್ತು ಹೊಸ ಗೇಮ್​ ಬಿಡುಗಡೆಯನ್ನು ಸರ್ಕಾರ ಮಿತಿಗೊಳಿಸಿದ್ದು, ಅಪ್ರಾಪ್ತ ವಯಸ್ಕರಿಗೆ ಗೇಮ್ ಆಡಲು ನಿಶ್ಚಿತ ಕಾಲಾವಧಿ ವಿಧಿಸಲಾಗಿದೆ. ಅಲ್ಲದೆ ನಿಯಮ ಮತ್ತು ನಿಯಂತ್ರಣಗಳ ಕಾನೂನನ್ನು ಜಾರಿಗೆ ತರುವ ಮೂಲಕ ಗೇಮಿಂಗ್ ವ್ಯಸನವನ್ನು ಕಡಿಮೆಗೊಳಿಸಲು ಪ್ರಯತ್ನಿಸುವುದಾಗಿ ಚೀನಾ ಶಿಕ್ಷಣ ಸಚಿವಾಲಯ ತಿಳಿಸಿದೆ. ಈ ಹೊಸ ಕಾನೂನು ಜಾರಿಯಿಂದ ಇಂಟರ್​ನೆಟ್ ಗೇಮಿಂಗ್ ದೈತ್ಯ ಕಂಪನಿ ಟೆನ್​ಸೆಂಟ್​ ಚೀನಾ ಗೇಮ್ ಮಾರುಕಟ್ಟೆಯಲ್ಲಿ ಶೇ.5ರಷ್ಟು ತನ್ನ ಲಾಭವನ್ನು ಕಳೆದುಕೊಂಡಿದೆ. ಅದೇ ರೀತಿ ಯುಸ್​ನ ನಾಸಾಡಕ್ ಗೇಮ್ ಡೆವಲಪರ್  ಶೇ.9ರಷ್ಟು ಗೇಮಿಂಗ್ ಮಾರುಕಟ್ಟೆಯಲ್ಲಿ ಕುಸಿತ ಕಂಡಿದೆ ಎಂದು ತಿಳಿಸಿದೆ. ಇನ್ನೂ ಹಲವಾರು ಸಣ್ಣ ಕಂಪನಿಗಳು ಸರ್ಕಾರದ ನಿರ್ಬಂಧದಿಂದ ಮುಚ್ಚಿ ಹೋಗುವ ಭೀತಿಯಲ್ಲಿದೆ.

ಚೀನಾದಲ್ಲಿ ನಡೆಸಲಾದ ಅಧ್ಯಯನದಿಂದ ಮಕ್ಕಳಲ್ಲಿ ಸಮೀಪ ದೃಷ್ಟಿದೋಷ ಅಥವಾ ಮೈಹೊಪಿಯಾ ಸಮಸ್ಯೆಗಳು ಹೆಚ್ಚಾಗುತ್ತಿರುವುದು ಪತ್ತೆಹಚ್ಚಲಾಗಿತ್ತು. ಇದಕ್ಕೆ ಮುಖ್ಯ ಕಾರಣ ಹೆಚ್ಚಿನ ಸಮಯ ಡಿಜಿಟಲ್ ಸ್ಕ್ರೀನ್​ ನೋಡುವುದಾಗಿದೆ ಎಂದು ಸಂಶೋಧಕರು ತಿಳಿಸಿದ್ದರು. 2015ರಲ್ಲಿ ಬಿಡುಗಡೆಯಾದ ಈ ಅಧ್ಯಯನ ವರದಿ ಪ್ರಕಾರ 500 ಮಿಲಿಯನ್ ಚೀನಿಯರಲ್ಲಿ 450 ಮಿಲಿಯನ್ ಮಂದಿ ದೃಷ್ಟಿ ಸಮಸ್ಯೆಯನ್ನು ಹೊಂದಿದ್ದಾರೆ ಎಂದು ತಿಳಿಸಲಾಗಿದೆ. ಈ ಸಮಸ್ಯೆಯಿಂದ ಬಳಲುವವರಲ್ಲಿ ಅರ್ಧದಷ್ಟು ಜನರು ಕೇವಲ ಐದು ವರ್ಷದೊಳಗಿನ ಪುಟಾಣಿ ಮಕ್ಕಳು ಎಂದು ಈ ವರದಿಯಲ್ಲಿ ಎಚ್ಚರಿಸಲಾಗಿತ್ತು. ಹಾಗೆಯೇ 2012 ರಲ್ಲಿ ದೃಷ್ಟಿದೋಷದ ಸಮಸ್ಯೆಗಳಿಗಾಗಿ ಚೀನಾದವರು 100 ಬಿಲಿಯನ್​ ಡಾಲರ್​ನಷ್ಟು ಚಿಕಿತ್ಸಾ ವೆಚ್ಚ ಭರಿಸಿದ್ದರು ಎಂಬುದನ್ನು ಅಧ್ಯಯನ ತಂಡ ತಿಳಿಸಿದ್ದರು.

ಆದರೆ ಚೀನಾದಲ್ಲಿ ಜನಪ್ರಿಯವಾಗುತ್ತಿರುವ ಡಿಜಿಟಲ್ ಗೇಮಿಂಗ್ ನಿಯಂತ್ರಿಸಲು ಇದು ಕೇವಲ ಕಾರಣವಾಗಿದ್ದು, ಇತ್ತೀಚಿನ ದಿನಗಳಲ್ಲಿ ದೇಶದ ಯುವ ಜನರು ಹಿಂಸಾಚಾರ ಮತ್ತು ಜೂಜಾಟದತ್ತ ಮುಖ ಮಾಡಲು ಗೇಮ್​ನಲ್ಲಿರುವ ಅಂಶಗಳೇ ಗೇಮ್ ನಿಯಂತ್ರಣಕ್ಕೆ ಪ್ರಮುಖ ಕಾರಣವಾಗಿದೆ ಎಂದು ವರದಿಯೊಂದು ತಿಳಿಸಿದೆ. ಕಳೆದ ವರ್ಷ ಅಪ್ರಾಪ್ತ ಬಾಲಕನೊಬ್ಬ ಗೇಮ್​ನಿಂದ ಪ್ರೇರಿತನಾಗಿ ಮಹಿಳೆಯೊಬ್ಬರ ಕತ್ತು ಕೊಯ್ದಿರುವ ಘಟನೆ ಚೀನಾದಲ್ಲಿ ನಡೆದಿತ್ತು. ಈ ಪ್ರಕರಣವನ್ನು ಬೇಧಿಸಿದಾಗ 15ರ ಬಾಲಕ 'ಕಿಂಗ್ ಆಫ್ ಗ್ಲೋರಿ' ಗೇಮ್ ಆಟದಿಂದ ಪ್ರೇರಣೆಗೊಂಡು ಸಾಯಿಸಿರುವುದು ಬೆಳಕಿಗೆ ಬಂದಿದೆ. ಗೇಮ್​ನಲ್ಲಿದ್ದ ಸುಲಭವಾಗಿ ಕೊಲ್ಲುವ ವಿಧಾನವು ಬಾಲಕನಲ್ಲಿ ಹಿಂಸಾತ್ಮಕ ಚಿಂತನೆ ಮೂಡಿಸಲು ಕಾರಣವಾಗಿತ್ತು. ಇಂತಹ ಘಟನೆಗಳು ಇತ್ತೀಚಿನ ವರ್ಷಗಳಲ್ಲಿ ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೇಳಿ ಬರುತ್ತಿದ್ದು ಇದಕ್ಕೆ ಗೇಮ್ ಅಡಿಕ್ಟ್​ ಮುಖ್ಯ ಕಾರಣ ಎನ್ನಲಾಗುತ್ತಿದೆ. ಇದಕ್ಕಾಗಿ ಚೀನಾ ಸರ್ಕಾರ ದೇಶ ಗೇಮ್​ ಸಂಸ್ಕೃತಿಯನ್ನು ನಿಯಂತ್ರಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626