• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Diabetics: ಮಧುಮೇಹಿಗಳಿಗೆ ಗುಡ್​ನ್ಯೂಸ್​; ಇನ್ನೆರಡು ವರ್ಷದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ವಾರಕ್ಕೊಮ್ಮೆ ತೆಗೆದುಕೊಳ್ಳುವ ಇನ್ಸುಲಿನ್

Diabetics: ಮಧುಮೇಹಿಗಳಿಗೆ ಗುಡ್​ನ್ಯೂಸ್​; ಇನ್ನೆರಡು ವರ್ಷದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ವಾರಕ್ಕೊಮ್ಮೆ ತೆಗೆದುಕೊಳ್ಳುವ ಇನ್ಸುಲಿನ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೊವೊ ನಾರ್ಡಿಸ್ಕ್ ಸಂಸ್ಥೆ ಭಾರತದಲ್ಲಿ 2025 ರ ಎರಡನೇ ತ್ರೈಮಾಸಿಕದ ವೇಳೆಗೆ ವಾರಕೊಮ್ಮೆ ಇನ್ಸುಲಿನ್ ಯೋಜನೆಯನ್ನು ಆರಂಭಿಸುವ ಚಿಂತನೆಯನ್ನು ಮಾಡುತ್ತಿದೆ ಎಂದು ಕಂಪನಿಯ ಜಾಗತಿಕ ವ್ಯವಹಾರದ ವ್ಯವಸ್ಥಾಪಕ ನಿರ್ದೇಶಕ ಜಾನ್ ಸಿ ಡಾಬರ್ ತಿಳಿಸಿದ್ದಾರೆ.

  • Share this:

ಡಯಾಬಿಟೀಸ್ (Diabetes) ಸದ್ದಿಲ್ಲದೆ ಕಾಡುವ ಮಾರಣಾಂತಿಕ ರೋಗ.  ಚಿಕ್ಕವರಿಂದ ಹಿಡಿದು ವೃದ್ಧಾಪ್ಯದವರನ್ನೂ ಹಿಂಡಿಹಿಪ್ಪೆ ಮಾಡುವ ಈ ರೋಗಕ್ಕೆ ಮದ್ದೇ ಇಲ್ಲ ಎಂಬುದು ವಿಶ್ವವನ್ನೇ ಕಂಗೆಡಿಸಿರುವ ಸತ್ಯವಾಗಿದೆ. ವ್ಯಕ್ತಿಯನ್ನು ಅಣು ಅಣುವಾಗಿ ಕೊಲ್ಲುವ ಈ ಕಾಯಿಲೆ ವಿಶ್ವದಾದ್ಯಂತ ಪ್ರತಿಯೊಬ್ಬರನ್ನೂ ಕಾಡುತ್ತಿರುವ ರೋಗವಾಗಿದೆ. ಚುಚ್ಚುಮದ್ದು (Injection), ಮಾತ್ರೆಗಳು (Tablets), ಕಠಿಣ ಪಥ್ಯದ ಮೇಲೆ ಅವಲಂಬಿತರಾಗಿರುವ ಡಯಾಬಿಟೀಸ್ ರೋಗಿಗಳು ಕೊಂಚ ನಿರಾಳತೆಯನ್ನು ಕಂಡುಕೊಳ್ಳುವಂತಹ ಸುದ್ದಿಯೊಂದು ದೊರಕಿದೆ. ಡೆನ್ಮಾರ್ಕ್ ಮೂಲದ ನೊವೊ ನಾರ್ಡಿಸ್ಕ್ ಸಂಸ್ಥೆ ಪ್ರತಿನಿತ್ಯ ಇನ್ಸುಲಿನ್ ಡೋಸ್ ತೆಗೆದುಕೊಳ್ಳುವ ಬದಲಿಗೆ ಮಧುಮೇಹಿಗಳು ವಾರಕ್ಕೊಮ್ಮೆ ಇನ್ಸುಲಿನ್ ತೆಗೆದುಕೊಳ್ಳುವಂತಹ ವಿಧಾನದ ಮೇಲೆ ಕಾರ್ಯನಿರ್ವಹಿಸುತ್ತಿದ್ದು ಭಾರತದಲ್ಲಿರುವ (India) 50 ಲಕ್ಷಕ್ಕೂ ಅಧಿಕ ಇನ್ಸುಲಿನ್ (Insulin) ಅವಲಂಬಿತರಿಗೆ ಈ ಸೌಲಭ್ಯ ಆಶಾಕಿರಣವಾಗಲಿದೆ ಎಂದು ಭಾವಿಸಲಾಗಿದೆ.


ನೊವೊ ನಾರ್ಡಿಸ್ಕ್ ಸಂಸ್ಥೆ ಭಾರತದಲ್ಲಿ 2025 ರ ಎರಡನೇ ತ್ರೈಮಾಸಿಕದ ವೇಳೆಗೆ ವಾರಕೊಮ್ಮೆ ಇನ್ಸುಲಿನ್ ಯೋಜನೆಯನ್ನು ಆರಂಭಿಸುವ ಚಿಂತನೆಯನ್ನು ಮಾಡುತ್ತಿದೆ ಎಂದು ಕಂಪನಿಯ ಜಾಗತಿಕ ವ್ಯವಹಾರದ ವ್ಯವಸ್ಥಾಪಕ ನಿರ್ದೇಶಕ ಜಾನ್ ಸಿ ಡಾಬರ್ ತಿಳಿಸಿದ್ದಾರೆ.


ಸಾಂದರ್ಭಿಕ ಚಿತ್ರ


ಪ್ರಯೋಗಗಳಲ್ಲಿ ನಿರತವಾಗಿರುವ ಸಂಸ್ಥೆ


ನೊವೊ ನಾರ್ಡಿಸ್ಕ್ ಗ್ಲೋಬಲ್ ಬ್ಯುಸಿನೆಸ್ ಸೇವೆಗಳ ಕಾರ್ಪೊರೇಟ್ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾಬರ್ ಸಂಶೋಧನೆಯಿಂದ ಸಕಾರಾತ್ಮಕ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದ್ದು ಪ್ರಯೋಗಗಳ ಅತಿದೊಡ್ಡ ಕೇಂದ್ರಗಳನ್ನು ಭಾರತದಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ. ಸಂಸ್ಥೆಯು ಭಾರತದಲ್ಲಿ 217 ರೋಗಿಗಳನ್ನು ಒಳಗೊಂಡ 27 ಪ್ರದೇಶಗಳಲ್ಲಿ ಪ್ರಯೋಗಗಳನ್ನು ನಡೆಸುತ್ತಿದೆ. ಅಂದುಕೊಂಡಂತೆ ಆದರೆ 2025ರ ಎರಡನೇ ತ್ರೈಮಾಸಿಕದ ವೇಳೆಗೆ ಉತ್ಪನ್ನವನ್ನು ಹೊರತರುವ ಸಾಧ್ಯತೆಯಿದೆ ಎಂದು ನೊವೊ ನಾರ್ಡಿಸ್ಕ್ ಇಂಡಿಯಾದ ಕಾರ್ಪೊರೇಟ್ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಕ್ರಾಂತ್ ಶ್ರೋತ್ರಿಯಾ ತಿಳಿಸಿದ್ದಾರೆ.


ಬೇರೆ ಬೇರೆ ಯೋಜನೆಗಳನ್ನು ಆರಂಭಿಸಲಿರುವ ಸಂಸ್ಥೆ


ಜಾಗತಿಕ ಅಥವಾ US ಮಾರುಕಟ್ಟೆಯಲ್ಲಿ ಮತ್ತು ಭಾರತದಲ್ಲಿ ಉತ್ಪನ್ನದ ಬಿಡುಗಡೆಯ ನಡುವೆ ಸಾಮಾನ್ಯವಾಗಿ ಒಂಬತ್ತು ತಿಂಗಳಿಂದ ಒಂದು ವರ್ಷದ ಅಂತರವಿರುತ್ತದೆ.  ಏಕೆಂದರೆ ದೇಶದ ನಿಯಂತ್ರಕ ಮಂಡಳಿಗಳ ಪ್ರಕ್ರಿಯೆಗಳಿಗೆ ಉತ್ಪನ್ನಗಳು ಒಳಗಾಗಲು ಸಮಯ ಬೇಕಾಗುತ್ತದೆ. ಇಲ್ಲದಿದ್ದರೆ ಸಂಸ್ಥೆಯ ಜಾಗತಿಕ ಯೋಜನೆಗಳಲ್ಲಿ ಭಾರತವು ಬಹಳ ಮುಖ್ಯವಾದ ಭಾಗವಾಗಿದೆ ಎಂದು ತಿಳಿಸಿದ್ದಾರೆ. ನಾನೊಬ್ಬ ಭಾರತೀಯನಾಗಿ ಕಂಪನಿಯ ಅತ್ಯುತ್ತಮವಾದ ಉತ್ಪನ್ನವನ್ನೇ ನನ್ನ ದೇಶಕ್ಕೆ ಪ್ರಸ್ತುತಪಡಿಸುತ್ತೇನೆ ಎಂಬುದು ವಿಕ್ರಾಂತ್ ಅಭಿಪ್ರಾಯವಾಗಿದೆ.


ಸಾಂದರ್ಭಿಕ ಚಿತ್ರ


ಫಾರ್ಮಾ ದೈತ್ಯ ತನ್ನ 100 ವರ್ಷಗಳ ವಾರ್ಷಿಕೋತ್ಸವವನ್ನು ಫೆಬ್ರವರಿ 16 ರಂದು ಆಚರಿಸಿತು. ತಡವಾದ ಬೆಳವಣಿಗೆಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಕಂಪನಿಯು ವಾರಕ್ಕೊಮ್ಮೆ ಬೆಳವಣಿಗೆಯ ಹಾರ್ಮೋನ್ ಅನ್ನು ಪ್ರಾರಂಭಿಸಲು ಸಂಸ್ಥೆಯು ಉದ್ದೇಶಿಸುತ್ತಿದೆ ಎಂದು ಶ್ರೋತ್ರಿಯಾ ತಿಳಿಸಿದ್ದಾರೆ. ಇಂದು ಬೆಳವಣಿಗೆಯ ಹಾರ್ಮೋನ್ ದಿನಕ್ಕೊಮ್ಮೆ ಪ್ರಕ್ರಿಯೆಗೊಳ್ಳುತ್ತಿದ್ದು ಅದನ್ನು ವಾರಕ್ಕೊಮ್ಮೆ ಕಾರ್ಯಗತಗೊಳಿಸುವ ಯೋಜನೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.


ನಿಯಂತ್ರಕ ಸಮಯಾವಧಿ ಹಾಗೂ ಇನ್ನಿತರ ಕಾರಣಗಳಿಂದ ಇದಕ್ಕೆ ಒಂದು ಅಥವಾ ಒಂದೂವರೆ ವರ್ಷಕ್ಕಿಂತ ಹೆಚ್ಚು ಸಮಯ ಬೇಕಾಗಬಹುದು ಎಂಬುದು ಶ್ರೋತ್ರಿಯಾ ಅಭಿಮತವಾಗಿದೆ.


ಇನ್ಸುಲಿನ್‌ನ ಬೆಲೆ ಒಂದು ಕಪ್ ಕಾಫಿಗಿಂತಲೂ ಕಡಿಮೆ


ಭಾರತೀಯ ರೋಗಿಗಳಿಗೆ ಔಷಧದ ಸಮಂಜಸವಾದ ಬೆಲೆಯನ್ನು ತಿಳಿಸುತ್ತಾ ರೋಗವನ್ನು ನಿರ್ವಹಿಸದಿರುವ ವೆಚ್ಚವು ಅದನ್ನು ನಿರ್ವಹಿಸುವುದಕ್ಕಿಂತ 10 ಪಟ್ಟು ಹೆಚ್ಚು ಎಂದು ತಿಳಿಸಿದ್ದಾರೆ. ಇಂದಿನ ದಿನಗಳಲ್ಲಿ ಇನ್ಸುಲಿನ್ ವೆಚ್ಚ ಒಂದು ಕಪ್‌ ಕಾಫಿಯ ಬೆಲೆಗಿಂತಲೂ ಕಡಿಮೆಯಾಗಿದೆ ಎಂದು ಶ್ರೋತ್ರಿಯಾ ತಿಳಿಸಿದ್ದಾರೆ.


ಔಷಧದ ಉತ್ಪನ್ನಗಳಲ್ಲಿ ಹೊಸತನವನ್ನು ತಂದಾಗಲ್ಲಾ ಪ್ರಪಂಚದಾದ್ಯಂತ ಸಾಮಾನ್ಯ ಬೆಲೆ ಮಾನದಂಡವನ್ನು ನಾವು ಹೊಂದಿರುತ್ತೇವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಬೆಲೆಯ ಬಗ್ಗೆ ಖಚಿತತೆಯನ್ನು ಹೊಂದಿದ ನಂತರ ಎಲ್ಲಾ ದೇಶಗಳಿಗೆ ಸ್ವೀಕಾರಾರ್ಹವಾದ ವ್ಯಾಪ್ತಿಯಲ್ಲಿ ಬೆಲೆಗಳನ್ನು ಇರಿಸಲಾಗುತ್ತದೆ ಎಂಬುದು ಅವರ ಮಾತಾಗಿದೆ.


ಯೋಜನೆಗಳಲ್ಲಿ ಭಾರತದ ಪಾತ್ರವೇನು?


ಭಾರತವು 77 ಮಿಲಿಯನ್‌ಗಿಂತಲೂ ಹೆಚ್ಚಿನ ಮಧುಮೇಹಿಗಳಿದ್ದು ಔಷಧದ ಬಳಕೆಯಲ್ಲಿ ನಿರ್ಣಾಯಕ ಮಾರುಕಟ್ಟೆಯಾಗಿದೆ ಎಂಬುದು ಡಾಬರ್ ಹೇಳಿಕೆಯಾಗಿದೆ. ಆಸ್ಟ್ರೇಲಿಯಾದ ನಂತರ ವಾಣಿಜ್ಯಿಕವಾಗಿ ನೊವೊ ನಾರ್ಡಿಸ್ಕ್‌ಗೆ ಏಷ್ಯಾ ಪೆಸಿಫಿಕ್‌ನಲ್ಲಿ ಭಾರತ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. 1.4 ಶತಕೋಟಿ (140 ಕೋಟಿ) ಜನಸಂಖ್ಯೆ ಹೊಂದಿರುವ ದೇಶದಲ್ಲಿ 80 ಮಿಲಿಯನ್ (8 ಕೋಟಿ) ಕ್ಕೂ ಹೆಚ್ಚು ಜನರು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ಡಾಬರ್ ವಿವರಿಸಿದ್ದಾರೆ.


ಸಾಂದರ್ಭಿಕ ಚಿತ್ರ


ಭಾರತದಲ್ಲಿ ಜನರಿಗೆ ಉತ್ತಮ, ಪರಿಣಾಮಕಾರಿ ಮತ್ತು ನವೀನ ಚಿಕಿತ್ಸೆಯನ್ನು ಸಾಧ್ಯವಾದಷ್ಟು ವೇಗವಾಗಿ ತರಲು ಪ್ರಯತ್ನಿಸುವುದು ವಿಶ್ವನಾಯಕನ ದೊಡ್ಡ ಜವಾಬ್ದಾರಿಯಾಗಿದೆ ಎಂಬುದು ಡಾಬರ್ ಅಭಿಮತವಾಗಿದೆ.




ಸಂಪೂರ್ಣವಾಗಿ ಭಾರತಕ್ಕೆ ಬದ್ಧವಾಗಿದೆ


3.5 ಮಿಲಿಯನ್ (35 ಲಕ್ಷ) ಕ್ಕಿಂತ ಹೆಚ್ಚು ಜನರು ಔಷಧಗಳಿಗಾಗಿ ಸಂಸ್ಥೆಯನ್ನು ಅವಲಂಬಿಸಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಸಂಸ್ಥೆಯ ಆದಾಯಕ್ಕೆ ಭಾರತವು ಕೇವಲ 1 ಪ್ರತಿಶತದಷ್ಟು ಕೊಡುಗೆ ನೀಡಿದರೆ, ವಿಶ್ವಾದ್ಯಂತ ಕಂಪನಿಯನ್ನು ಅವಲಂಬಿಸಿರುವ ರೋಗಿಗಳ ಸಂಖ್ಯೆಗೆ ಸಂಬಂಧಿಸಿದಂತೆ ಅದರಲ್ಲಿ 8% ರೋಗಿಗಳು ಭಾರತದವರೇ ಆಗಿದ್ದಾರೆ ಎಂಬುದು ಡಾಬರ್ ಮಾತಾಗಿದೆ.

Published by:Monika N
First published: