Hair Care Tips: ತಿನ್ನೋಕಷ್ಟೇ ಅಲ್ಲ, ಆರೋಗ್ಯಕರ, ದಪ್ಪ ಕೂದಲಿಗೂ ಸಹಕಾರಿ ಈ ವೀಳ್ಯದೆಲೆ

ಕೂದಲಿನ ಪ್ರತಿಯೊಂದು ಸಮಸ್ಯೆ ಹೋಗಲಾಡಿಸಲು ವೀಳ್ಯದೆಲೆ ಸಹಕಾರಿ ಆಗಿದೆ ಎಂದು ಸಂಶೋಧನೆ ಹೇಳಿದೆ. ವೀಳ್ಯದೆಲೆ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧ ಆಗಿದೆ. ಇದು ತಲೆಹೊಟ್ಟು ಸಮಸ್ಯೆ ಹೋಗಲಾಡಿಸಲು ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ರಾತ್ರಿ ಊಟದ (Dinner) ನಂತರ ಕೆಲವರು ಸಿಹಿ ಪಾನ್ (Sweet Pan) ಸೇವಿಸಲು ಇಷ್ಟ ಪಡುತ್ತಾರೆ. ಕೆಲವರು ವಿಶೇಷ (Special) ಸಂದರ್ಭಗಳಲ್ಲಿ ಭಾರವಾದ ಊಟ ಸೇವನೆ ನಂತರ ಪಾನ್ ತಿನ್ನುತ್ತಾರೆ. ಇನ್ನು ಕೆಲವರು ದಿನವೂ ಅಡಿಕೆ ಎಲೆ ತಿನ್ನುತ್ತಾರೆ. ಅದಾಗ್ಯೂ ವೀಳ್ಯದೆಲೆ ಸೇವನೆ ಸಾಕಷ್ಟು ಆರೋಗ್ಯ ಪ್ರಯೋಜನ (Health Benefits) ತಂದು ಕೊಡುತ್ತದೆ. ವೀಳ್ಯದೆಲೆ ಮತ್ತು ಅಡಿಕೆ ಸೇವನೆ ಮಾಡುವುದು ಎಲ್ಲಾ ರೀತಿಯ ಒತ್ತಡದಿಂದ ತೆಗೆದು ಹಾಕುತ್ತದೆ. ಆಯುರ್ವೇದವು ವೀಳ್ಯದೆಲೆಯ ಪ್ರಯೋಜನಗಳ ಬಗ್ಗೆ ಹೇಳುತ್ತದೆ. ಕೂದಲಿನ ಬೆಳವಣಿಗೆಗೆ ಮತ್ತು ಕೂದಲ ಆರೈಕೆಯಲ್ಲಿ ವೀಳ್ಯದೆಲೆಯನ್ನು ಹೇಗೆ ಬಳಸಬೇಕು ಎಂದು ನಾವು ಇಲ್ಲಿ ತಿಳಿಯೋಣ.

    ವೀಳ್ಯದೆಲೆಯಲ್ಲಿ ಇರುವ ಪೋಷಕಾಂಶಗಳು

    ಕೂದಲಿನ ಪ್ರತಿಯೊಂದು ಸಮಸ್ಯೆ ಹೋಗಲಾಡಿಸಲು ವೀಳ್ಯದೆಲೆ ಸಹಕಾರಿ ಆಗಿದೆ ಎಂದು ಸಂಶೋಧನೆ ಹೇಳಿದೆ. ಭಾರತ ಸೇರಿದಂತೆ ಇತರೆ ಏಷ್ಯಾದ ದೇಶಗಳಲ್ಲಿ ವೀಳ್ಯದೆಲೆಗಳನ್ನು ಹವ್ಯಾಸವಾಗಿ ಸೇವನೆ ಮಾಡುತ್ತಾರೆ.

    ಕ್ಯಾಲೋರಿ, ಫೈಬರ್, ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳ ಹೊರತಾಗಿ, ಬೀಟೆಲ್ ಕ್ಯಾಲ್ಸಿಯಂ, ವಿಟಮಿನ್ ಸಿ, ಥಯಾಮಿನ್, ನಿಯಾಸಿನ್, ರೈಬೋಫ್ಲಾವಿನ್‌ನಂತಹ ಪೌಷ್ಟಿಕ ಸಂಯುಕ್ತಗಳನ್ನು ಇದು ಹೊಂದಿದೆ.

    ವೀಳ್ಯದೆಲೆ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧ ಆಗಿದೆ. ಇದು ತಲೆಹೊಟ್ಟು ಸಮಸ್ಯೆ ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದು ನೆತ್ತಿಯ ಮೇಲಿರುವ ಆಕ್ಸೆಸ್ ಆಯಿಲ್ ಅನ್ನು ತೆಗೆದು ಹಾಕುತ್ತದೆ. ಹಾಗೂ ಕೂದಲನ್ನು ದಪ್ಪವಾಗಿಸುತ್ತದೆ.

    ಇದನ್ನೂ ಓದಿ: ನಾಲಿಗೆ ಮೇಲೆ ಈ ರೀತಿ ಆದಲ್ಲಿ ವಿಟಮಿನ್ ಡಿ ಕೊರತೆಯಂತೆ, ಎಚ್ಚರ ವಹಿಸಿ

    ವೀಳ್ಯದೆಲೆ ಕೂದಲು ಕಾಳಜಿಯಲ್ಲಿ ಹೇಗೆ ಕೆಲಸ ಮಾಡುತ್ತದೆ?

    ವೀಳ್ಯದೆಲೆಯಲ್ಲಿರುವ ವಿಟಮಿನ್ ಸಿ ಕೂದಲು ಉದುರುವಿಕೆ ತಡೆಯುತ್ತದೆ. ಇದು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ. ಇದು ಕೂದಲು ಮತ್ತು ನೆತ್ತಿಯ ಸಮಸ್ಯೆ ಹೋಗಲಾಡಿಸುವ ಮೂಲಕ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

    ಕೂದಲು ಬೆಳವಣಿಗೆ ಉತ್ತೇಜಿಸುವ ಕೆಲವು ಸಲಹೆಗಳು ಹೀಗಿವೆ

    ಎಳ್ಳು ಮತ್ತು ಶುಂಠಿ : ಎಳ್ಳು ಬೀಜಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳಿವೆ. ಇದು ಕೂದಲಿಗೆ ಸಂಪೂರ್ಣ ಪೋಷಣೆ ನೀಡುತ್ತದೆ. ಶುಂಠಿಯಲ್ಲಿರುವ ವಿಟಮಿನ್‌ಗಳು, ಕೊಬ್ಬಿನಾಮ್ಲಗಳು ಮತ್ತು ಖನಿಜಗಳು ಕೂದಲು ಒಡೆಯುವುದು ಮತ್ತು ತುದಿ ಸೀಳುವಿಕೆ ತಡೆಯುತ್ತದೆ.

    ಎಳ್ಳು ಮತ್ತು ಶುಂಠಿ ಬಳಸುವುದು ಹೇಗೆ?

    ವೀಳ್ಯದೆಲೆಯನ್ನು ಎಳ್ಳು ಮತ್ತು ಶುಂಠಿಯ ಜೊತೆ ರುಬ್ಬಿರಿ. ಈ ಮಿಶ್ರಣವನ್ನು ತಲೆಯ ಬುಡಕ್ಕೆ ಹಚ್ಚಿರಿ. 60 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ. ಒಣ ವೀಳ್ಯದೆಲೆ, ಒಣಗಿದ ಶುಂಠಿ ಮತ್ತು ಎಳ್ಳಿನ ಪುಡಿಯನ್ನು ತೆಂಗಿನ ಎಣ್ಣೆಯ ಜೊತೆ ಬೆರೆಸಿದರೆ ಉತ್ತಮ ಪ್ರಯೋಜನ ಸಿಗುತ್ತದೆ.

    ಕ್ಯಾಸ್ಟರ್ ಆಯಿಲ್ ಮತ್ತು ತೆಂಗಿನ ಎಣ್ಣೆ ಹಾಕುವುದು

    ಕ್ಯಾಸ್ಟರ್ ಆಯಿಲ್ ನಲ್ಲಿ ರಿಸಿನೋಲಿಕ್ ಆಮ್ಲ ಕಂಡು ಬರುತ್ತದೆ. ಇದು ನೆತ್ತಿಯ ರಕ್ತ ಪರಿಚಲನೆ ಸುಧಾರಿಸುತ್ತದೆ. ತೆಂಗಿನ ಎಣ್ಣೆ ಮತ್ತು ಕ್ಯಾಸ್ಟರ್ ಆಯಿಲ್ ಎರಡರಲ್ಲೂ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು ಇವೆ. ಇದು ಯಾವುದೇ ನೆತ್ತಿಯ ಸಮಸ್ಯೆಯನ್ನು ಮೂಲದಿಂದ ನಿವಾರಿಸುತ್ತದೆ.

    ಕ್ಯಾಸ್ಟರ್ ಆಯಿಲ್ ಮತ್ತು ತೆಂಗಿನ ಎಣ್ಣೆ ಬಳಸುವುದು ಹೇಗೆ?

    5 ವೀಳ್ಯದೆಲೆ ಒಣಗಿಸಿ. ಅದನ್ನು ಪುಡಿ ಮಾಡಿ. ಅದರಲ್ಲಿ 2 ಚಮಚ ತೆಂಗಿನ ಎಣ್ಣೆ ಮತ್ತು 1 ಚಮಚ ಕ್ಯಾಸ್ಟರ್ ಆಯಿಲ್ ಅನ್ನು ಮಿಶ್ರಣ ಮಾಡಿ. ಮಿಶ್ರಣವನ್ನು ದುರ್ಬಲಗೊಳಿಸಲು 1 ಟೀಸ್ಪೂನ್ ನೀರನ್ನು ಸೇರಿಸಿ. ನೆತ್ತಿಯ ಮೇಲೆ ಮಸಾಜ್ ಮಾಡುವಾಗ ಈ ಹೇರ್ ಮಾಸ್ಕ್ ಅನ್ವಯಿಸಿ. ಒಂದು ಗಂಟೆಯ ನಂತರ ಗಿಡಮೂಲಿಕೆ ಶಾಂಪೂ ಬಳಸಿ ತೊಳೆಯಿರಿ.

    ತುಳಸಿ ಮತ್ತು ಕರಿಬೇವಿನ ಎಲೆ

    ತುಳಸಿ ಎಲೆಗಳು ಮುಚ್ಚಿ ಹೋಗಿರುವ ರಂಧ್ರಗಳನ್ನು ತೆರೆಯುತ್ತವೆ. ಹೆಚ್ಚುವರಿ ಎಣ್ಣೆಯನ್ನು ತೆಗೆದು ಹಾಕುತ್ತವೆ. ಬ್ಯಾಕ್ಟೀರಿಯಾ ವಿರೋಧಿ ಕರಿಬೇವಿನ ಎಲೆಗಳು ತಲೆಹೊಟ್ಟು ಸಮಸ್ಯೆಯನ್ನು ಮೂಲದಿಂದ ನಿವಾರಿಸುತ್ತದೆ.

    ಇದನ್ನೂ ಓದಿ: ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ಮಜ್ಜಿಗೆ ಬಳಸ್ತೀರಾ? ಹಾಗಾದ್ರೆ ತಪ್ಪದೇ ಓದಿ

    ತುಳಸಿ ಮತ್ತು ಕರಿಬೇವಿನ ಎಲೆ ಬಳಸುವುದು ಹೇಗೆ?

    ಎರಡು ದೊಡ್ಡ ವೀಳ್ಯದೆಲೆ ಪುಡಿ ಮಾಡಿ. ಅದರಲ್ಲಿ 10 ರಿಂದ 12 ತುಳಸಿ ಎಲೆಗಳನ್ನು ಪುಡಿ ಮಾಡಿ. ಮತ್ತು 10 ರಿಂದ 12 ಕರಿಬೇವಿನ ಎಲೆಗಳ ಪುಡಿ ಮಿಶ್ರಣ ಮಾಡಿ. ಅದಕ್ಕೆ ದಾಸವಾಳ ಹೂವಿನ ಎಲೆಯ ಪುಡಿ ಬೆರೆಸಿ. ಹೇರ್ ಮಾಸ್ಕ್ ಹಚ್ಚುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ.
    Published by:renukadariyannavar
    First published: