ಆರೋಗ್ಯ (Health ಚೆನ್ನಾಗಿ ಇಟ್ಟುಕೊಳ್ಳಲು ಸರಿಯಾದ ಪ್ರಮಾಣದ ಪೋಷಕಾಂಶದ (Nutrients) ಅಗತ್ಯತೆ ಇದೆ. ಇದು ದೇಹವು (Body) ಆಹಾರ ಮತ್ತು ಪಾನೀಯ (Food And Water) ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಇತ್ತೀಚಿ ದಿನಗಳಲ್ಲಿ ಜನರು (People) ಕಳಪೆ ಜೀವನಶೈಲಿ (Bad Lifestyle), ರೋಗ, ಮತ್ತು ಜಂಕ್ ಫುಡ್ ಸೇವನೆ ಮಾಡುವುದು ಸಮಸ್ಯೆ ಹೆಚ್ಚು ಮಾಡುತ್ತದೆ. ಜೊತೆಗೆ ಇದು ರೋಗ ನಿರೋಧಕ ಶಕ್ತಿ ಕಡಿಮೆ ಮಾಡುತ್ತದೆ. ಹಾಗಾಗಿ ಸಂಪೂರ್ಣ ದೇಹದ ವ್ಯವಸ್ಥೆಯನ್ನು ಮರು ಹೊಂದಿಸಲು ನಿರ್ವಿಶೀಕರಣದ ಅಗತ್ಯತೆ ಇದೆ. ಇದಕ್ಕಾಗಿ ನೀವು ನೈಸರ್ಗಿಕ ವಿಧಾನ ಆಯ್ಕೆ ಮಾಡಿಕೊಳ್ಳಿ. ಇದು ಆರೋಗ್ಯಕ್ಕೂ ಉತ್ತಮ.
ದೇಹದ ನಿರ್ವಿಷಗೊಳಿಸಿದಾಗ ಏನಾಗುತ್ತದೆ?
ದೇಹವನ್ನು ನಿರ್ವಿಷಗೊಳಿಸಿದಾಗ ರಕ್ತ ಶುದ್ಧವಾಗುತ್ತದೆ. ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಹಸಿವು ಮತ್ತು ಕಡುಬಯಕೆ ಕಡಿಮೆ ಆಗುತ್ತದೆ. ಹಾರ್ಮೋನು ಸಮತೋಲನ, ನಿದ್ರೆ ಸುಧಾರಿಸುವುದು, ಜೀರ್ಣಕ್ರಿಯೆ ಮತ್ತು ರೋಗ ನಿರೋಧಕ ಶಕ್ತಿ ಬಲಿಷ್ಠವಾಗುವುದು ಸೇರಿದಂತೆ ಹಲವು ಪ್ರಯೋಜನ ಸಿಗುತ್ತದೆ.
ಮೂತ್ರಪಿಂಡ, ಶ್ವಾಸಕೋಶ, ಯಕೃತ್ತು ಸೇರಿದಂತೆ ಪ್ರಮುಖ ಅಂಗಗಳಲ್ಲಿನ ಕೊಳೆಯೆಲ್ಲಾ ಹೊರಗೆ ಹೋಗಿ ಶುದ್ಧವಾಗುತ್ತದೆ. ಹೀಗಾಗಿ ನೀವು ದೇಹವನ್ನ ಡಿಟಾಕ್ಸ್ ಮಾಡುವುದು ತುಂಬಾ ಮುಖ್ಯ ಅಂತಾರೆ ಪೌಷ್ಟಿಕತಜ್ಞ ಲವ್ನೀತ್ ಬಾತ್ರಾ.
ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಡಿಟಾಕ್ಸ್ ನೀರು ಸಾಕಷ್ಟು ಫೇಮಸ್ ಆಗ್ತಿದೆ. ಡಿಟಾಕ್ಸ್ ನೀರಿನ ಪರಿಣಾಮದಿಂದ ದೇಹವು ಶುದ್ಧವಾಗುತ್ತದೆ. ಡಿಟಾಕ್ಸ್ ವಾಟರ್ ರೆಸಿಪಿಯು ದೇಹದ ಕೊಳೆ ಹೊರಗೆ ಹಾಕುತ್ತದೆ. ಜೊತೆಗೆ ಹಲವು ಆರೋಗ್ಯಕರ ಪ್ರಯೋಜನ ನೀಡುತ್ತದೆ.
ಕೊತ್ತಂಬರಿ ನೀರು
ಕೊತ್ತಂಬರಿ ನೀರು ನೈಸರ್ಗಿಕ ಡಿಟಾಕ್ಸ್ ಪಾನೀಯವಾಗಿದೆ. ಮೂತ್ರದ ಮೂಲಕ ದೇಹದ ಎಲ್ಲಾ ಕೊಳಕನ್ನು ತೆಗೆದು ಹಾಕುತ್ತದೆ. ಇನ್ಸುಲಿನ್ ಕಾರ್ಯವನ್ನು ಉತ್ತೇಜಿಸುತ್ತದೆ. ಯಕೃತ್ತಿನ ಆರೋಗ್ಯ ಕಾಪಾಡುತ್ತದೆ.
ಇದು ಚಯಾಪಚಯ ಚೆನ್ನಾಗಿಡುತ್ತದೆ. ಕೊತ್ತಂಬರಿ ಡಿಟಾಕ್ಸ್ ನೀರು ತಯಾರಿಸಲು ಒಂದು ಟೀ ಚಮಚ ಕೊತ್ತಂಬರಿ ಸೊಪ್ಪನ್ನು ರಾತ್ರಿ ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಇಲ್ಲವೇ ಕೊತ್ತಂಬರಿ ಬೀಜಗಳನ್ನು 10 ನಿಮಿಷ ನೀರಿನಲ್ಲಿ ಕುದಿಸಿ. ಶೋಧಿಸಿ ಮತ್ತು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.
ಸೇಬು ಮತ್ತು ದಾಲ್ಚಿನ್ನಿ ನೀರು
ಸೇಬು ಮತ್ತು ದಾಲ್ಚಿನ್ನಿ ನೀರು ಚಯಾಪಚಯಕ್ಕೆ ಸಹಕಾರಿ. ಇವುಗಳಲ್ಲಿನ ಉತ್ಕರ್ಷಣ ನಿರೋಧಕಗಳು ಮತ್ತು ಫ್ಲೇವನಾಯ್ಡ್ ಅತ್ಯುತ್ತಮ ಮೂಲ. ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ. ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ .
ಹೃದ್ರೋಗ ತಡೆಯುತ್ತದೆ. ದೇಹವನ್ನು ನಿರ್ವಿಷಗೊಳಿಸಡುತ್ತದೆ. ಒಂದು ಲೋಟ ನೀರಿನಲ್ಲಿ ಸೇಬಿನ ತುಂಡು, ಒಂದು ದಾಲ್ಚಿನ್ನಿ ಹಾಕಿ ಮತ್ತು ಕೆಲವು ಗಂಟೆಗಳ ಕಾಲ ಬಿಟ್ಟು ನಂತರ ಸೇವಿಸಿ.
ಸೌತೆಕಾಯಿ, ಪುದೀನ, ಶುಂಠಿ ಮತ್ತು ನಿಂಬೆ
ನಿಂಬೆ ನೈಸರ್ಗಿಕವಾಗಿ ಡಿಟಾಕ್ಸ್ ಮಾಡುತ್ತದೆ. ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ದೇಹದ ವಿಷವನ್ನು ಹೊರ ಹಾಕುತ್ತದೆ. ಪುದೀನಾ ಜೀರ್ಣಕ್ರಿಯೆಗೆ ಉತ್ತಮ. ಸೌತೆಕಾಯಿಯು 96% ನೀರು ಹೊಂದಿದೆ. ದೇಹಕ್ಕೆ ಹೆಚ್ಚುವರಿ ಜಲಸಂಚಯನ ಒದಗಿಸುತ್ತದೆ. ಶುಂಠಿಹೊಟ್ಟೆಯನ್ನು ಸ್ವಚ್ಛವಾಗಿಡುತ್ತದೆ.
ಸೌತೆಕಾಯಿ, ಪುದೀನಾ, ಶುಂಠಿ, ನಿಂಬೆಯ ಕೆಲವು ತುಂಡುಗಳನ್ನು ನೀರಿನಲ್ಲಿ ಚೆನ್ನಾಗಿ ಬೆರೆಸಿ. ಈ ಮಿಶ್ರಣವನ್ನು ರಾತ್ರಿ ಅಥವಾ ಕನಿಷ್ಠ 4 ಗಂಟೆ ಬಿಟ್ಟು ನಂತರ ಫಿಲ್ಟರ್ ಮಾಡಿ ಮತ್ತು ಸೇವಿಸಿ.
ಸ್ಟ್ರಾಬೆರಿ ಮತ್ತು ನಿಂಬೆ
ಸ್ಟ್ರಾಬೆರಿ ಮತ್ತು ನಿಂಬೆ ಮಿಶ್ರಿತ ನೀರು ಸೇವನೆ ದೇಹದ ಡಿಟಾಕ್ಸ್ ಮಾಡುತ್ತವೆ. ಸ್ಟ್ರಾಬೆರಿಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಉರಿಯೂತ ಕಡಿಮೆ ಮಾಡಲು ಮತ್ತು ಇನ್ಸುಲಿನ್ ಮಟ್ಟ ಕಾಪಾಡುತ್ತದೆ. ದೇಹದ ಪಿಹೆಚ್ ಮಟ್ಟವನ್ನು ಸಮತೋಲನ ಮಾಡಿತ್ತದೆ.
ನಾಲ್ಕು ಗಂಟೆವರೆಗೆ ಸ್ಟ್ರಾಬೆರಿ ಮತ್ತು ಕೆಲವು ನಿಂಬೆ ತುಂಡುನ್ನು ಗಾಜಿನ ನೀರಿನಲ್ಲಿ ನೆನೆಸಿಡಿ. ನಂತರ ಫಿಲ್ಟರ್ ಮಾಡಿ, ಈಗ ದಿನವಿಡೀ ಸ್ವಲ್ಪ ಸ್ವಲ್ಪ ಕುಡಿಯಿರಿ.
ಜೀರಿಗೆ ನೀರು
ಜೀರಿಗೆ ನೀರು ಔಷಧೀಯ ಗುಣ ಹೊಂದಿದೆ. ಇದು ದೇಹವನ್ನು ನಿರ್ವಿಷಗೊಳಿಸುತ್ತದೆ. ಚಯಾಪಚಯ ಹೆಚ್ಚುತ್ತದೆ. ತೂಕ ನಷ್ಟಕ್ಕೆ ಸಹ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: ದೇಹದಲ್ಲಿ ನೀರಿನ ಕೊರತೆ ನಿವಾರಿಸಲು ಯಾವ ಹಣ್ಣು-ತರಕಾರಿ ರಸ ಪ್ರಯೋಜನಕಾರಿ?
ರಾತ್ರಿ ಮಲಗುವ ಮುನ್ನ ಚಮಚ ಜೀರಿಗೆಯನ್ನು ಗ್ಲಾಸ್ ನಲ್ಲಿ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಫಿಲ್ಟರ್ ಮಾಡಿ ಮತ್ತು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ