Fruits For Diabetes: ಮಧುಮೇಹಿಗಳು ಈ ಹಣ್ಣುಗಳನ್ನು ಎಷ್ಟು ಬೇಕಾದ್ರೂ ತಿನ್ನಬಹುದು..

Health Tips: ಮಧುಮೇಹ ರೋಗಿಗಳಿಗೆ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗಲು ಸಕ್ಕರೆಯೊಂದೇ ಸಾಧನವಲ್ಲ, ಟೀ, ಕಾಫಿ, ಸಿಹಿಕರವಾದ ಪಾನೀಯಗಳು, ಇವುಗಳು ಕೂಡ ಸಕ್ಕರೆ ಅಂಶ ಹೆಚ್ಚಿಸಬಹುದು. ಇನ್ನು ಮಧುಮೇಹಿಗಳ ವಿಚಾರಕ್ಕೆ ಬಂದಾಗ ಹಣ್ಣುಗಳ ಚರ್ಚೆಯು ಮುನ್ನೆಲೆಗೆ ಬರುತ್ತದೆ. ಇದು ಗ್ಲೈಸೆಮಿಕ್ ಸೂಚ್ಯಂಕ, ಫ್ರಕ್ಟೋಸ್ ಮಟ್ಟಗಳ ನಿಯಂತ್ರಣವನ್ನು ಕೇಂದ್ರೀಕರಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರತಿನಿತ್ಯ ನಾವು ನೈಸರ್ಗಿಕ, ಸಕ್ಕರೆ ರಹಿತ, ಸಂಸ್ಕರಿಸಿದ ಆಹಾರಗಳ ಬದಲು ಸಿಹಿಯಾದ, ಕೊಬ್ಬಿನ ಅಂಶಗಳಿರುವ ಆಹಾರಕ್ಕೆ ಮೊರೆ ಹೋಗುತ್ತಿದ್ದೇವೆ. ಸಮತೋಲಿತ ಆಹಾರ ಕ್ರಮವನ್ನು ಸಂಪೂರ್ಣವಾಗಿ ಮರೆತೇ ಬಿಡುತ್ತಿದ್ದೇವೆ. ಇದೆಲ್ಲವೂ ತೂಕ ಹೆಚ್ಚಳ(Weightgain), ಬೊಜ್ಜು, ಮೆಟಾಬಾಲಿಕ್ ಸಿಂಡ್ರೋಮ್ ಮತ್ತು ಮಧುಮೇಹದಂತಹ(Diabetes) ರೋಗಗಳಿಗೆ ತುತ್ತಾಗುತ್ತಿದ್ದೇವೆ. ಮಧುಮೇಹ ರೋಗಿಗಳಾದ ಟೈಪ್-1,ಟೈಪ್-2 ಅಥವಾ ಗರ್ಭಾವಸ್ಥೆ ಹೀಗೆ ಯಾವುದೇ ಸ್ಥಿತಿಯಲ್ಲಿಯೂ ಪೌಷ್ಟಿಕ ತಜ್ಞರು, ಪೋಷಣಾ ಶಾಸ್ತ್ರಜ್ಞರು ಹೀಗೆ ಇವರು ತಮ್ಮ ಡಯೆಟ್‍ನಲ್ಲಿ ಸಕ್ಕರೆ ಅಂಶವನ್ನು ಸೇರಿಸಲು ಶಿಫಾರಸ್ಸು ಮಾಡುತ್ತಾರೆ.

ಮಧುಮೇಹ ರೋಗಿಗಳಿಗೆ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗಲು ಸಕ್ಕರೆಯೊಂದೇ ಸಾಧನವಲ್ಲ, ಟೀ, ಕಾಫಿ, ಸಿಹಿಕರವಾದ ಪಾನೀಯಗಳು, ಇವುಗಳು ಕೂಡ ಸಕ್ಕರೆ ಅಂಶ ಹೆಚ್ಚಿಸಬಹುದು. ಇನ್ನು ಮಧುಮೇಹಿಗಳ ವಿಚಾರಕ್ಕೆ ಬಂದಾಗ ಹಣ್ಣುಗಳ ಚರ್ಚೆಯು ಮುನ್ನೆಲೆಗೆ ಬರುತ್ತದೆ. ಇದು ಗ್ಲೈಸೆಮಿಕ್ ಸೂಚ್ಯಂಕ, ಫ್ರಕ್ಟೋಸ್ ಮಟ್ಟಗಳ ನಿಯಂತ್ರಣವನ್ನು ಕೇಂದ್ರೀಕರಿಸುತ್ತದೆ.

ಹಣ್ಣುಗಳಲ್ಲಿನ ಫ್ರಕ್ಟೋಸ್ ಅಂಶದಿಂದಾಗಿ ಮಧುಮೇಹ ರೋಗಿಯ ಆಹಾರದ ವಿಚಾರದಲ್ಲಿ ಚರ್ಚಾಸ್ಪದವಾಗಿದೆ. ನೈಸರ್ಗಿಕ ಸಕ್ಕರೆಯ ಒಂದು ರೂಪವಾದ ಫ್ರಕ್ಟೋಸ್ ಅನ್ನು ಅತಿಯಾಗಿ ಸೇವಿಸಿದರೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹಚ್ಚಬಹುದು, ಇದು ಮಧುಮೇಹಿಗಳಿಗೆ ಹಾನಿಕಾರಕವಾಗಿದೆ. ಇದರ ಬದಲು ಕಡಿಮೆ ಗ್ಲೈಸೆಮಿಕ್ ಅಂಶ ಹೊಂದಿರುವ ಕೆಲವು ಹಣ್ಣುಗಳು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ಇದನ್ನೂ ಓದಿ: ತೂಕ ಇಳಿಸಿಕೊಳ್ಳಲು ಈ ರೊಟ್ಟಿಗಳನ್ನು ಟ್ರೈ ಮಾಡಿ..

ಮಧುಮೇಹದ ರೋಗಿಗಳಿಗೆ ಉತ್ತಮ ಹಣ್ಣುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಟೈಮ್ಸ್ ನೌ ಡಿಜಿಟಲ್‌ NmamiLife ಸಂಸ್ಥಾಪಕ ಮತ್ತು ಸಿಇಓ ಆಗಿರುವ ಪೌಷ್ಟಿಕತಜ್ಞ Nmami ಅಗರ್ವಾಲ್ ಜೊತೆ ಮಾತನಾಡಿದೆ. ಇವರು ಆರೋಗ್ಯಕರ ಮತ್ತು ಸುರಕ್ಷಿತವಾದ ಗ್ಲೈಸೆಮಿಕ್ ಅಂಶ ಹೊಂದಿರುವ ಹಣ್ಣುಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಪೀಚ್: ಸಿಹಿ ಮತ್ತು ರಸಭರಿತವಾದ ಪೀಚ್‍ಗಳು ಮಧುಮೇಹ ಸ್ನೇಹಿಯಾಗಿದೆ. ಆಹಾರಕ್ರಮದಲ್ಲಿ ಅಳವಡಿಸಿಕೊಳ್ಳಲು ಇದು ಬಹುಮುಖ ಆಯ್ಕೆಯಾಗಿದೆ. ಒಂದು ಮಧ್ಯಮ ಪೀಚ್‍ನ ಗ್ಲೈಸೆಮಿಕ್ ಸೂಚ್ಯಂಕವು 42ರ ಆಸುಪಾಸಿನಲ್ಲಿದ್ದು ಇದು ಮಧುಮೇಹಿಗಳ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಮತ್ತು ತುಂಬ ಸಮಯದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹೆಚ್ಚುವರಿಯಾಗಿ, ಪೀಚ್‍ಗಳು ಪೊಟ್ಯಾಷಿಯಂ, ಫೈಬರ್ ಮತ್ತು ವಿಟಮಿನ್ ಎ ಹಾಗೂ ಸಿ ಯಂತಹ ಆರೋಗ್ಯಕರ ಪೋಷಕಾಂಶಗಳಿಂದ ತುಂಬಿವೆ.

ಚೆರ್ರಿ :ಎಂದೆಂದಿಗೂ ರುಚಿಕರವಾದ ಚೆರ್ರಿ ಆ್ಯಂಟಿಆಕ್ಸಿಡೆಂಟ್‍ಗಳು, ವಿಟಮಿನ್ ಸಿ ಮತ್ತು ಫೈಬರ್‌ನ ಶಕ್ತಿಕೇಂದ್ರವಾಗಿದ್ದು ಅದು ದೇಹದಲ್ಲಿನ ಸಕ್ಕರೆಯ ಚಯಾಪಚಯ ಕಡಿಮೆ ಮಾಡುತ್ತದೆ ಮತ್ತು ರಕ್ತದಲ್ಲಿ ಸಕ್ಕರೆ ಹೆಚ್ಚಳವಾಗುವುದನ್ನು ತಡೆಯುತ್ತದೆ. ಚೆರ್ರಿ ಜಿಐ ಸ್ಕೋರ್ ಅತ್ಯಂತ ಕಡಿಮೆ ಅಂದರೆ ಕೇವಲ 20. ಇದು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ತ್ವರಿತವಾಗಿ ಏರಿಕೆ ಕಾಣಲು ಬಿಡುವುದಿಲ್ಲ.

ಪ್ಲಮ್:ಪ್ಲಮ್ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವ ಉತ್ತಮ ಹಣ್ಣು. ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಜೊತೆಗೆ, ಪ್ಲಮ್‍ಗಳಲ್ಲಿ 15 ವಿವಿಧ ಜೀವಸತ್ವಗಳು ಮತ್ತು ಖನಿಜಗಳಿವೆ ಹಾಗೂ ಕ್ಯಾಲೋರಿಗಳು ಅತ್ಯಂತ ಕಡಿಮೆ ಇರುತ್ತದೆ. ಇದಲ್ಲದೆ, ಪ್ಲಮ್‍ನ ಜಿಐ ಸ್ಕೋರ್ 40 ಆಗಿದ್ದು ಇದು ಮಧುಮೇಹದಿಂದ ಬಳಲುತ್ತಿರುವವರಿಗೆ ಉತ್ತಮ ಆಯ್ಕೆಯಾಗಿದೆ.

ಕಿತ್ತಳೆ: ಕಿತ್ತಳೆ ಹಣ್ಣುಗಳಲ್ಲಿ ವಿಟಮಿನ್ ಸಿ, ಫೈಬರ್ ಮತ್ತು ಪೊಟ್ಯಾಷಿಯಂನಂತಹ ಪ್ರಮುಖ ವಿಟಮಿನ್‍ಗಳು ಮತ್ತು ಖನಿಜಗಳಿವೆ. ಅದಕ್ಕಾಗಿಯೇ ಇದನ್ನು ಮಧುಮೇಹದ ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಕಿತ್ತಳೆ ಹಣ್ಣುಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಏಕೆಂದರೆ ಅವುಗಳ ಫೈಬರ್ ಅಂಶವು ರಕ್ತದಲ್ಲಿ ನಿಧಾನವಾಗಿ ಸಕ್ಕರೆ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ದೀರ್ಘಕಾಲದವರೆಗೆ ಸ್ಥಿರಗೊಳಿಸುತ್ತದೆ. ಒಂದು ಕಿತ್ತಳೆ 40-43 ಅಥವಾ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿದೆ ಅಂದರೆ ಅದು ಜೀರ್ಣವಾಗುತ್ತದೆ, ಹೀರಲ್ಪಡುತ್ತದೆ ಮತ್ತು ದೇಹದಲ್ಲಿ ನಿಧಾನವಾಗಿ ಚಯಾಪಚಯಗೊಳ್ಳುತ್ತದೆ ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಕ್ರಮೇಣ ಏರಿಕೆ ಉಂಟುಮಾಡುತ್ತದೆ.

ಇದನ್ನೂ ಓದಿ: ಬಾಳೆಹಣ್ಣು ಹಾಳಾಗದಂತೆ ಕಾಪಾಡಲು ಹೀಗೆ ಮಾಡಿ..

ಸೇಬು: ಸೇಬಿನ ಗ್ಲೈಸೆಮಿಕ್ ಸೂಚ್ಯಂಕ ಅತ್ಯಂತ ಕಡಿಮೆ. ಅಂದರೆ, ಸೇಬುಗಳು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಯಾವುದೇ ತ್ವರಿತ ಏರಿಕೆ ಉಂಟುಮಾಡುವುದಿಲ್ಲ. ಇದಲ್ಲದೆ, ಸೇಬುಗಳು ಯೋಗ್ಯವಾದ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ ಮತ್ತು ಹೆಚ್ಚಿನ ಪ್ರಮಾಣದ ಫೈಬರ್ ಹೊಂದಿರುತ್ತದೆ, ಇದು ದೇಹದಲ್ಲಿ ಸಕ್ಕರೆಯನ್ನು ತ್ವರಿತವಾಗಿ ಹೀರಿಕೊಳ್ಳುವುದನ್ನು ತಡೆಯುತ್ತದೆ.
First published: