ರಕ್ತದೊತ್ತಡ ನಿಯಂತ್ರಿಸುವ ಈ ಐದು ಹಣ್ಣುಗಳನ್ನು ನೀವು ಸೇವಿಸಲೇಬೇಕು!

ಅಧಿಕ ಬಿಪಿಯ ಸ್ಥಿತಿಯನ್ನು ನಿರ್ವಹಿಸುವ ಅತ್ಯಂತ ಪರಿಣಾಮಕಾರಿ ವಿಧಾನವೆಂದರೆ ಸರಿಯಾದ ಆಹಾರ ಸೇವನೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

ಹೆಚ್ಚಿನ ಅರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಅಗತ್ಯವಿದೆ.ಅಧಿಕ ರಕ್ತದೊತ್ತಡವು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಜೀವನ ಶೈಲಿ ರೋಗಗಳಲ್ಲಿ ಒಂದಾಗಿದೆ. ಇದು ಅಪಾಯಕಾರಿ ರೋಗಕ್ಕೆ ಕಾರಣವಾಗುತ್ತದೆ, ವಿಶೇಷವಾಗಿ ಹೃದಯದ ಅರೋಗ್ಯದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ.ಅಧಿಕ ಬಿಪಿಯ ಸ್ಥಿತಿಯನ್ನು ನಿರ್ವಹಿಸುವ ಅತ್ಯಂತ ಪರಿಣಾಮಕಾರಿ ವಿಧಾನವೆಂದರೆ ಸರಿಯಾದ ಆಹಾರ ಸೇವನೆ. ಇನ್ನೂ ಬೇಸಿಗೆ ಕಾಲದಲ್ಲಿ , ಹಲವು ಬೇಸಿಗೆ ಹಣ್ಣುಗಳು ಅತ್ಯಂತ ಪೌಷ್ಟಿಕವಾಗಿದ್ದು ನಿಮ್ಮ ರಕ್ತದೊತ್ತಡ ಮಟ್ಟವನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತವೆ.


ಕೆಳಗೆ ಪಟ್ಟಿ ಮಾಡಿರುವ ಬೇಸಿಗೆಯ ಹಣ್ಣುಗಳು ರಕ್ತದೊತ್ತಡವನ್ನುಕಡಿಮೆಮಾಡಲುಸಹಾಯ ಮಾಡುತ್ತವೆ.ಬನ್ನಿಈ ಕುರಿತು ಇನಷ್ಟುತಿಳಿದುಕೊಳ್ಳೋಣ


ಕಲ್ಲಂಗಡಿಹಣ್ಣು


ಈ ಹಣ್ಣು ಕಡಿಮೆ ಕ್ಯಾಲೋರಿ ಅನ್ನು ಹೊಂದಿದೆ ಹಾಗೂ ಸಿಹಿ ರುಚಿಯದ್ದಾಗಿದೆ. ನೀವು ಈ ಹಣ್ಣಿನಿಂದ ಹಣ್ಣಿನ ಸಲಾಡ್ ಅಥವಾ ಜ್ಯೂಸ್‌ ಮಾಡಿಕೊಳ್ಳಬಹುದು ಮತ್ತು ಇತರೆ ಹಲವಾರು ತಿಂಡಿ ತಿನಿಸುಗಳನ್ನು ನೀವು ತಯಾರಿಸಿಕೊಳ್ಳಬಹುದು.ಇದು ರುಚಿಕರವಾದ ಹಣ್ಣು ಮಾತ್ರವಲ್ಲ, ವಿಟಮಿನ್ ಸಿ ಮತ್ತು ಎ, ಪೊಟ್ಯಾಶಿಯಂ, ಅಮೈನೋ ಆಸಿಡ್ಸ್, ಲೈಕೋಪೀನ್, ಸೋಡಿಯಂ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳನ್ನು ಒಳಗೊಂಡಿದೆ, ಇದು ದೇಹವು ಅಧಿಕ ರಕ್ತದೊತ್ತಡದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.


ಕಿವಿಹಣ್ಣು


ಈ ಹಣ್ಣಿನಲ್ಲಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಾಂಶಗಳಿದ್ದು ಅದು ನಿಮ್ಮ ಅಧಿಕ ರಕ್ತದೊತ್ತಡ ಮಟ್ಟವನ್ನು ಕಡಿಮೆ ಮಾಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಇದು ಫೈಬರ್, ವಿಟಮಿನ್ ಸಿ ಮತ್ತು ಫೋಲೇಟ್ ಅನ್ನು ಹೊಂದಿರುತ್ತದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕಿವಿ ಬಗ್ಗೆ ಉತ್ತಮವಾದ ವಿಷಯವೆಂದರೆ ನೀವು ಇದನ್ನು ದಿನನಿತ್ಯ ಸೇವಿಸಬಹುದು ಏಕೆಂದರೆ ಇದು ಗಮನಾರ್ಹವಾದ ಪೋಷಕಾಂಶಗಳನ್ನು ಹೊಂದಿದ್ದು ಇದು ಪಾರ್ಶ್ವವಾಯು, ಹೃದಯಾಘಾತ, ಮುಂತಾದ ರಕ್ತದೊತ್ತಡದಿಂದ ಉಂಟಾಗುವ ಹೃದಯ ರೋಗಗಳನ್ನು ತಡೆಯುತ್ತದೆ.


ಮಾವಿನಹಣ್ಣು


ನಮ್ಮೆಲ್ಲರಿಗೂ ಮಾವಿನ ಹಣ್ಣು ಎಂದರೆ ತುಂಬ ಇಷ್ಟ ಏಕೆಂದರೆ ಅದು ರುಚಿಕರವಾಗಿರುತ್ತದೆ! ಜೊತೆಗೆ, ಅಧಿಕ ರಕ್ತದೊತ್ತಡವನ್ನು ಕಪಾಡಿಕೊಳ್ಳಲು ಮಾವಿನ ಹಣ್ಣು ಉತ್ತಮ ಆಯ್ಕೆ. ಏಕೆಂದರೆ ಮಾವಿನ ಹಣ್ಣಿನಲ್ಲಿ ಫೈಬರ್ ಮತ್ತು ಬೀಟಾ ಕ್ಯಾರೋಟಿನ್ ಹೆಚ್ಚಾಗಿರುತ್ತದೆ, ಇವೆರಡೂ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ.


ಇದನ್ನು ಓದಿ: ಸರಳವಾಗಿ ಮೇಕಪ್ ಮಾಡಿಕೊಳ್ಳಲು ಇಲ್ಲಿದೆ ಸಿಂಪಲ್​ ಟಿಪ್ಸ್​

ಬಾಳೆಹಣ್ಣು


ಎಫ್‌ಡಿಐ ಪ್ರಕಾರ, ಪೊಟ್ಯಾಸಿಯಮ್ ಸಮೃದ್ಧವಾಗಿರುವ ಮತ್ತು ಕಡಿಮೆ ಸೋಡಿಯಂ ಇರುವ ಆಹಾರವು ಅಧಿಕ ರಕ್ತದೊತ್ತಡ, ಹೃದಯ ರೋಗಗಳು ಮತ್ತು ಪಾರ್ಶ್ವವಾಯು ವನ್ನು ತಡೆಯುತ್ತದೆ. ನಮಗೆ ತಿಳಿದಿರುವಂತೆ ಬಾಳೆಹಣ್ಣು ಪೊಟ್ಯಾಸಿಯಮ್ ಅಂಶವನ್ನು ಹೊಂದಿದೆ. ಬಾಳೆಹಣ್ಣು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ,  ಅಧಿಕ ರಕ್ತದೊತ್ತಡದ ವಿರುದ್ಧ ಹೋರಾಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಇದು ವಿಟಮಿನ್ ಸಿ ಮತ್ತು ಫೈಬರ್‌ನ ಸಮೃದ್ಧ ಮೂಲವಾಗಿದ್ದು, ಇದು ನಿಮ್ಮ ಬಿಪಿ ಸ್ಥಿತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.


ಸ್ಟ್ರಾಬೆರಿಗಳು


ಸ್ಟ್ರಾಬೆರಿಗಳನ್ನು ಇಷ್ಟಪಡಲು ಹಲವು ಕಾರಣಗಳಿವೆ. ಈ ರಿಫ್ರೆಶ್ ಹಣ್ಣು ಕೇಕ್, ಐಸ್ ಕ್ರೀಮ್ ಮತ್ತು ಚಾಕೊಲೇಟ್ ನಂತಹ ಆಹಾರಗಳಿಗೆ ಸೂಕ್ತವಾಗಿದೆ. ಇದರಲ್ಲಿ ಆಂಥೋಸಯಾನಿನ್ಸ್ (ಆ್ಯಂಟಿ ಆಕ್ಸಿಡೆಂಟ್ ಕಾಂಪೌಂಡ್ಸ್), ವಿಟಮಿನ್ ಸಿ, ಪೊಟ್ಯಾಶಿಯಂ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಿವೆ, ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


First published: