• Home
  • »
  • News
  • »
  • lifestyle
  • »
  • Health Tips: ಹಣ್ಣುಗಳ ಸೇವನೆ ಎಷ್ಟು ಅನುಕೂಲಕರ? ಇವುಗಳ ಜೊತೆ ಬೇರೆ ಏನನ್ನು ತಿನ್ನಬೇಕು?

Health Tips: ಹಣ್ಣುಗಳ ಸೇವನೆ ಎಷ್ಟು ಅನುಕೂಲಕರ? ಇವುಗಳ ಜೊತೆ ಬೇರೆ ಏನನ್ನು ತಿನ್ನಬೇಕು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಲಾಡ್ ರೂಪದಲ್ಲಿ ಜನರು ಹಣ್ಣು ಸೇವನೆ ಮಾಡಲು ಹೆಚ್ಚು ಇಷ್ಟ ಪಡುತ್ತಾರೆ. ಜನರು ಹಣ್ಣಿನ ಆಹಾರವನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಕೆಲವರು ಹಣ್ಣುಗಳ ಆಹಾರ ಸೇವನೆ ಹೆಚ್ಚು ಮಾಡಲು ಇಷ್ಟ ಪಡುತ್ತಾರೆ. ನಿತ್ಯವೂ ವಿವಿಧ ರೀತಿಯ ಹಣ್ಣುಗಳ ಸೇವನೆ ಮಾಡಲು ಬಯಸುತ್ತಾರೆ.

  • Share this:

    ಆರೋಗ್ಯ (Health) ವರ್ಧಕವಾಗಿ ಹಲವು ಆಹಾರಗಳು (Foods) ಲಭ್ಯ ಇವೆ. ಹಲವು ಪದಾರ್ಥಗಳ (Ingredients) ಸೇವನೆ ಹೃದಯ (Heart) ಮತ್ತು ಇತರೆ ಕಾಯಿಲೆಗಳ (Disease) ನಿವಾರಣೆಗೆ ಸಹಕಾರಿ ಆಗಿದೆ. ತರಕಾರಿಗಳು ಮತ್ತು ಹಣ್ಣುಗಳು (Vegetables And Fruits), ಬೀಜಗಳು ಆರೋಗ್ಯ ಹೆಚ್ಚಿಸಲು ಸಹಕಾರಿ ಎಂಬುದು ಎಲ್ಲರಿಗೂ ಗೊತ್ತಿದೆ. ಹಣ್ಣುಗಳನ್ನು ತುಂಬಾ ಆರೋಗ್ಯಕರ ಎಂದು ವೈದ್ಯರು, ತಜ್ಞರು ಸೇರಿದಂತೆ ಬಹುತೇಕರು ಪರಿಗಣಿಸಲಾಗುತ್ತದೆ ಎಂದು ಹೇಳಿದ್ದಾರೆ. ಹಾಗಾಗಿ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಲು ತಜ್ಞರು ಶಿಫಾರಸು ಮಾಡುತ್ತಾರೆ. ಹಣ್ಣುಗಳ ಸೇವನೆ ಹಲವು ಪ್ರಯೋಜನ ನೀಡುತ್ತದೆ. ತೂಕ ಇಳಿಕೆ ಮತ್ತು ತೂಕ ನಿಯಂತ್ರಣಕ್ಕೆ ಹಣ್ಣುಗಳ ಸೇವನೆ ಮಾಡಲು ಸಹಕಾರಿ ಆಗಿದೆ.


    ಹಣ್ಣುಗಳ ಸೇವನೆ ಸಾಕಷ್ಟು ಪ್ರಯೋಜನಕಾರಿ


    ಸಲಾಡ್ ರೂಪದಲ್ಲಿ ಜನರು ಹಣ್ಣು ಸೇವನೆ ಮಾಡಲು ಹೆಚ್ಚು ಇಷ್ಟ ಪಡುತ್ತಾರೆ. ಜನರು ಹಣ್ಣಿನ ಆಹಾರವನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಕೆಲವರು ಹಣ್ಣುಗಳ ಆಹಾರ ಸೇವನೆ ಹೆಚ್ಚು ಮಾಡಲು ಇಷ್ಟ ಪಡುತ್ತಾರೆ. ನಿತ್ಯವೂ ವಿವಿಧ ರೀತಿಯ ಹಣ್ಣುಗಳ ಸೇವನೆ ಮಾಡಲು ಬಯಸುತ್ತಾರೆ.


    ಯಾರು ಹಣ್ಣುಗಳ ಸೇವನೆ ಹೆಚ್ಚು ಇಷ್ಟ ಪಡುತ್ತಾರೋ ಅವರು ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟದಲ್ಲಿ ಹಣ್ಣುಗಳ ಸೇವನೆ ಮಾಡಲು ಹೆಚ್ಚು ಉತ್ಸಾಹ ಮತ್ತು ಇಷ್ಟ ಪಡುತ್ತಾರೆ. ಈ ಅಭ್ಯಾಸ ಆರೋಗ್ಯಕ್ಕೆ ತುಂಬಾ ಹಾನಿಕರ ಎಂದು ನ್ಯೂಟ್ರಿಷನ್ ಕೋಚ್ ಡಾ.ರೀಮಾ ಬಣ್ಣಿಸಿದ್ದಾರೆ. ಈ ಅಭ್ಯಾಸದಿಂದ ಅನೇಕ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎಂದು ಹೇಳುತ್ತಾರೆ.


    ಇದನ್ನೂ ಓದಿ: ತ್ವಚೆಯ ಸಮಸ್ಯೆ ಇದ್ದಾಗ ಯಾವ ಪದಾರ್ಥಗಳ ಸೇವನೆ ತಪ್ಪಿಸಬೇಕು?


    ದಿನದ ಎಲ್ಲಾ ಊಟ ಮತ್ತು ತಿಂಡಿಯಲ್ಲಿ ಹಣ್ಣುಗಳ ಸೇವನೆ ಮಾಡುವುದು ಯಾಕೆ ಹಾನಿಕರ? ಮತ್ತು ಈ ತಪ್ಪನ್ನು ಹೇಗೆ ಸರಿಪಡಿಸಬಹುದು ಎಂದು ನಾವು ಇಲ್ಲಿ ನೋಡೋಣ.


    ಈ ಪೌಷ್ಟಿಕಾಂಶವು ಹಣ್ಣುಗಳಿಂದ ಲಭ್ಯವಿಲ್ಲ


    ಪೌಷ್ಟಿಕಾಂಶ ತರಬೇತುದಾರ ಡಾ.ರೀಮಾ ಅವರು ಹೇಳುವ ಪ್ರಕಾರ, ಹೆಚ್ಚಿನ ಹಣ್ಣುಗಳ ಸೇವನೆ ದೇಹಕ್ಕೆ ಕಾರ್ಬೋಹೈಡ್ರೇಟ್ ಮತ್ತು ಫೈಬರ್ ದೊರೆಯುವಂತೆ ಮಾಡುತ್ತದೆ. ಅವು ಪ್ರೋಟೀನ್ ಅಥವಾ ಆರೋಗ್ಯಕರ ಕೊಬ್ಬಿನ ಅಂತಹ ಕಡಿಮೆ ಪ್ರಮಾಣದ ಪೋಷಣೆ ಹೊಂದಿವೆ.


    ಈ ಕಾರಣಕ್ಕಾಗಿ ಬೆಳಗಿನ ಉಪಾಹಾರ, ಮಧ್ಯಾಹ್ನ ಅಥವಾ ರಾತ್ರಿಯ ಊಟದಲ್ಲಿ ಕೇವಲ ಹಣ್ಣುಗಳನ್ನು ತಿನ್ನುವ ಮೂಲಕ, ನೀವು ಕಾರ್ಬ್-ಭರಿತ ಆಹಾರ ಸೇವಿಸುತ್ತೀರಿ. ಇದು ಅಸಮತೋಲಿತ ಆಹಾರ ಆಗಿರುತ್ತದೆ.


    ಬೇಗ ಹಸಿವಾಗುತ್ತದೆ


    ಡಾ.ರೀಮಾ ಅವರ ಪ್ರಕಾರ, ಹಣ್ಣುಗಳು ದೀರ್ಘ ಕಾಲದವರೆಗೆ ಹಸಿವು ಆಗದಂತೆ ತಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಹಣ್ಣಿನ ಆಹಾರ ಸೇವನೆ ನಂತರ ನೀವು ಬೇಗನೆ ಹಸಿವು ಅನುಭವಿಸಬಹುದು. ಒಬ್ಬ ವ್ಯಕ್ತಿಯು ಊಟ ಮಾಡಿದ ತಕ್ಷಣ ಹಸಿದರೆ ಅನಾರೋಗ್ಯಕರ ಆಹಾರ ಸೇವಿಸುವ ಅಪಾಯವು ಹೆಚ್ಚಾಗುತ್ತದೆ. ಇದು ಬೊಜ್ಜು ಮತ್ತು ಇತರ ಕಾಯಿಲೆಗೆ ಕಾರಣ ಆಗುತ್ತದೆ.


    ಹಣ್ಣಿನ ಆಹಾರ ಜೊತೆ ಪ್ರೋಟೀನ್ ಮೂಲ ಸೇವಿಸಿ


    ಹಣ್ಣುಗಳೊಂದಿಗೆ ತರಕಾರಿಗಳು ಮತ್ತು ಇತರ ಆರೋಗ್ಯಕರ ಆಹಾರ ಸೇವಿಸಬೇಕು. ಒಬ್ಬರು ಹಣ್ಣಿನ ಆಹಾರ ಸೇವನೆ ಮಾಡಲು ಬಯಸಿದರೆ, ಅವರು ಪ್ರೋಟೀನ್ ಮೂಲಗಳನ್ನು ಹಣ್ಣುಗಳ ಜೊತೆ ಸಂಯೋಜಿಸಬಹುದು. ಮೊಸರು, ಪ್ರೋಟೀನ್ ಪುಡಿ, ಕಾಟೇಜ್ ಚೀಸ್, ಮೊಟ್ಟೆ, ಕುಂಬಳಕಾಯಿ ಬೀಜಗಳು ಮತ್ತು ಸೆಣಬಿನ ಬೀಜ ಹಣ್ಣುಗಳ ಜೊತೆ ಬೆರೆಸಿ ನೀವು ಪ್ರೋಟೀನ್ ಸೇವಿಸಬಹುದು.


    ಹಣ್ಣುಗಳ ಜೊತೆ ಆರೋಗ್ಯಕರ ಕೊಬ್ಬನ್ನು ಸೇರಿಸಿ


    ಬೆಳಗಿನ ಉಪಾಹಾರ, ಊಟ ಅಥವಾ ರಾತ್ರಿಯ ಊಟದಲ್ಲಿ ನೀವು ಹಣ್ಣುಗಳ ಜೊತೆ ಆರೋಗ್ಯಕರ ಕೊಬ್ಬನ್ನು ಸೇವಿಸಿ. ಈ ಪೌಷ್ಟಿಕಾಂಶ ಪಡೆಯಲು ವಾಲ್ನಟ್ಸ್, ಬಾದಾಮಿ, ಕಡಲೆಕಾಯಿ ಬೆಣ್ಣೆ, ಬಾದಾಮಿ ಬೆಣ್ಣೆ, ಸೂರ್ಯಕಾಂತಿ ಬೀಜಗಳು, ಚಿಯಾ ಬೀಜಗಳು ಮತ್ತು ಅಗಸೆ ಬೀಜ ತಿನ್ನಬಹುದು.


    ಇದನ್ನೂ ಓದಿ: ಮೂಳೆಗಳ ಕಾಯಿಲೆಗೆ ಕಾರಣವಾಗುವ ಲೂಬ್ರಿಕಂಟ್ ಎಂದರೇನು? ಇದನ್ನು ಪೂರೈಸುವ ಪದಾರ್ಥಗಳಿವು!


    ಮಧುಮೇಹ, ಥೈರಾಯ್ಡ್, ಬೊಜ್ಜು, ಪಿಸಿಓಎಸ್, ಇನ್ಸುಲಿನ್ ಪ್ರತಿರೋಧ ಮತ್ತು ಹಾರ್ಮೋನ್ ಅಸಮತೋಲನದಿಂದ ಬಳಲುತ್ತಿದ್ದರೆ ಈ ಸಲಹೆ ನೆನಪಿಡಬೇಕು.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು