Dehydration Problem: ದೇಹದಲ್ಲಿ ನೀರಿನ ಕೊರತೆ ನಿವಾರಿಸಲು ಯಾವ ಹಣ್ಣು-ತರಕಾರಿ ರಸ ಪ್ರಯೋಜನಕಾರಿ?

ಬಾಯಾರಿಕೆ ಆದಾಗ ನೀರು ಕುಡಿಯುವುದು ಮತ್ತು ಬಾಯಾರಿಕೆ ತಣಿಯುವವರೆಗೆ ನೀರು ಕುಡಿಯುವುದು ಉತ್ತಮ ರುಚಿ ಹೊಂದಿರುತ್ತದೆ. ಜೊತೆಗೆ ಕೆಲವು ಹಣ್ಣುಗಳು ಮತ್ತು ತರಕಾರಿಗಳು ತುಂಬಾ ನೀರಿನ ಅಂಶ ಹೊಂದಿರುತ್ತವೆ. ನೀವು ಇತರೆ ಪೋಷಕಾಂಶಗಳನ್ನು ಸಹ ಅವುಗಳ ಜ್ಯೂಸ್ ನಿಂದ ಪಡೆಯಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದೇಹದಲ್ಲಿ (Body) ನೀರಿನ ಕೊರತೆಯಿದ್ದರೆ (Lack of Water) ಸಾಕಷ್ಟು ರೀತಿಯಲ್ಲಿ ಅನಾರೋಗ್ಯ (Unhealthy) ಕಾಡುತ್ತದೆ. ಅದರಲ್ಲಿ ಚರ್ಮದ ತುರಿಕೆ (Skin Itching), ಚರ್ಮದ ದದ್ದು ಹಾಗೂ ಚರ್ಮದ ಇತರೆ ಸಮಸ್ಯೆಗಳು, ತಲೆನೋವು ಮತ್ತು ಸ್ನಾಯು ಸೆಳೆತಕ್ಕೆ ಕಾರಣ ಆಗಬಹುದು. ಯಾಕೆಂದ್ರೆ ಆರೋಗ್ಯಕರ ಮತ್ತು ಫಿಟ್ ಆಗಿ ಉಳಿಯಲು ಸಾಕಷ್ಟು ನೀರು ಕುಡಿಯುವುದು ತುಂಬಾ ಮುಖ್ಯ. ದೇಹವನ್ನು ಸದಾ ಹೈಡ್ರೀಕರಿಸಿ ಇರುವುದು ಬಹಳ ಮುಖ್ಯ. ಹೆಚ್ಚಿನ ಜನರು ಹೈಡ್ರೇಟೆಡ್ ಆಗಿರಲು ಸರಳವಾದ ನೀರು ಸೇವಿಸುವುದು ಸುಲಭ ಹಾಗೂ ಉತ್ತಮ ಮಾರ್ಗವೆಂದು ಹೇಳುತ್ತಾರೆ. ಸರಳವಾದ ನೀರು ಕುಡಿಯುವುದು ಮಾತ್ರ ಒಂದೇ ಮಾರ್ಗವಲ್ಲ. ನೀರಿನ ಜೊತೆಗೆ ನೀವು ತರಕಾರಿ ಮತ್ತು ಹಣ್ಣುಗಳ ಜ್ಯೂಸ್ ಕೂಡ ಸೇವನೆ ಮಾಡಬಹುದು.

    ಹಣ್ಣುಗಳು ಮತ್ತು ತರಕಾರಿಗಳಲ್ಲಿ ನೀರಿನಂಶ ಹೇರಳವಾಗಿದೆ

    ನೀವು ಬಾಯಾರಿಕೆ ಆದಾಗ ನೀರು ಕುಡಿಯುವುದು ಮತ್ತು ಬಾಯಾರಿಕೆ ತಣಿಯುವವರೆಗೆ ನೀರು ಕುಡಿಯುವುದು ಉತ್ತಮ ರುಚಿ ಹೊಂದಿರುತ್ತದೆ. ಜೊತೆಗೆ ಕೆಲವು ಹಣ್ಣುಗಳು ಮತ್ತು ತರಕಾರಿಗಳು ತುಂಬಾ ನೀರಿನ ಅಂಶ ಹೊಂದಿರುತ್ತವೆ. ನೀವು ಇತರೆ ಪೋಷಕಾಂಶಗಳನ್ನು ಸಹ ಅವುಗಳ ಜ್ಯೂಸ್ ನಿಂದ ಪಡೆಯಬಹುದು. ಮತ್ತು ನೀರಿನ ಕೊರತೆ ಪೂರೈಸಬಹುದು.

    ಹಣ್ಣುಗಳು ಮತ್ತು ತರಕಾರಿಗಳ ದೊಡ್ಡ ಪ್ರಯೋಜನ ಅಂದ್ರೆ ಅವು ನೀರಿನ ಪ್ರಮಾಣದೊಂದಿಗೆ ಫೈಬರ್, ವಿಟಮಿನ್ಗಳು, ಖನಿಜ, ಕ್ಯಾಲ್ಸಿಯಂ ಮತ್ತು ಪ್ರೋಟೀನ್ನಂತಹ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಹೊಂದಿವೆ. ಸಲಾಡ್ ಅಥವಾ ಸ್ಮೂಥಿಗಳ ರೂಪದಲ್ಲಿ ನೀವು ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಹಾಗಾದ್ರೆ ನಾವಿಂದು ಯಾವ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಹೆಚ್ಚು ನೀರಿನ ಅಂಶವಿದೆ ಎಂದು ತಿಳಿಯೋಣ.

    ಇದನ್ನೂ ಓದಿ: ತೂಕ ಹೆಚ್ಚಿಸಿಕೊಳ್ಳೋಕೆ ಈ ಆಹಾರಗಳು ಬೆಸ್ಟ್! ಪೋಷಕಾಂಶವೂ ಸಿಗುತ್ತೆ

    ಕಿತ್ತಳೆ

    ಡಯಟ್ ಮತ್ತು ಫಿಟ್‌ನೆಸ್‌ ವರದಿ ಹೇಳುವ ಪ್ರಕಾರ, ಕಿತ್ತಳೆಯಲ್ಲಿ 88 ಪ್ರತಿಶತ ನೀರಿನ ಅಂಶವಿದೆ. ಜೊತೆಗೆ ಫೈಬರ್, ಪೊಟ್ಯಾಸಿಯಮ್ ಇದು ವಿಟಮಿನ್ ಸಿ ಮತ್ತು ರೋಗದ ವಿರುದ್ಧ ಹೋರಾಟದ ಉತ್ಕರ್ಷಣ ನಿರೋಧಕಗಳಂತಹ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ.

    ಮಾವು

    ಮಾವಿನ ಹಣ್ಣಿನಲ್ಲಿ ನೀರಿನ ಅಂಶವು 83 ಪ್ರತಿಶತದವರೆಗೆ ಇದೆ. ಪೌಷ್ಟಿಕಾಂಶ ವಿಷಯಕ್ಕೆ ಬಂದ್ರೆಇದು ಪೊಟ್ಯಾಸಿಯಮ್, ವಿಟಮಿನ್ ಎ, ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಗಳ ಸಮೃದ್ಧ ಅಂಶ ಹೊಂದಿದೆ.

    ಅನಾನಸ್

    ಅನಾನಸ್ ಹಣ್ಣಿನ ನೀರಿನ ಅಂಶವು 86 ಪ್ರತಿಶತದ ವರೆಗೆ ಇದೆ. ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಸಿ, ಫೋಲೇಟ್ ಮತ್ತು ವಿಟಮಿನ್ ಎ ಸಹ ಸಾಕಷ್ಟು ಸಮೃದ್ಧವಾಗಿದೆ.

    ಪೇರಳೆ

    ಪೇರಳೆ ಹಣ್ಣಿನ ನೀರಿನ ಅಂಶವು 88 ಪ್ರತಿಶತದವರೆಗೆ ಇದೆ. ನಾವು ಅದರ ಪೌಷ್ಟಿಕಾಂಶದ ವಿಷಯದ ಬಗ್ಗೆ ನೋಡುವುದಾದ್ರೆ ಪೊಟ್ಯಾಸಿಯಮ್ ಪ್ರಮಾಣವು ತುಂಬಾ ಸಮೃದ್ಧವಾಗಿದೆ. ಇದರ ಜೊತೆಗೆ ಇದು ವಿಟಮಿನ್ ಎ, ಪೊಟ್ಯಾಸಿಯಮ್, ಬೀಟಾ-ಕ್ಯಾರೋಟಿನ್ ಮತ್ತು ರಂಜಕದ ಉತ್ತಮ ಮೂಲ ಸಹ ಹೊಂದಿದೆ.

    ಕುಂಬಳಕಾಯಿ

    ಕುಂಬಳಕಾಯಿ ತರಕಾರಿಯಲ್ಲಿ ನೀರಿನ ಅಂಶವು 94 ಪ್ರತಿಶತ ಇದೆ. ಇದರ ಪೌಷ್ಠಿಕಾಂಶವು ಸಾಕಷ್ಟು ಅಂಶಗಳ ಹೂರಣವಾಗಿದೆ. ಇದು ವಿಟಮಿನ್ ಸಿ ಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಇದು ದೈನಂದಿನ ಅಗತ್ಯತೆಯ 35% ಒಂದು ಕಪ್‌ನಲ್ಲಿ ಕಂಡು ಬರುತ್ತದೆ.

    ಇದನ್ನೂ ಓದಿ: ಚರ್ಮದ ವಿವಿಧ ಭಾಗಗಳಲ್ಲಿ ತುರಿಕೆ! ಇದಕ್ಕೇನು ಪರಿಹಾರ?

    ಸೌತೆಕಾಯಿ

    ಸೌತೆಕಾಯಿಯಲ್ಲಿ ನೀರಿನ ಅಂಶವು 95 ಪ್ರತಿಶತ ಇದೆ. ಸೌತೆಕಾಯಿ ಕ್ಯಾಲೋರಿಗಳಲ್ಲಿ ಬಹಳ ಕಡಿಮೆ ಹೊಂದಿದೆ. ಮತ್ತು ಸಣ್ಣ ಪ್ರಮಾಣದಲ್ಲಿ ವಿಟಮಿನ್ ಕೆ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅನ್ನು ಹೊಂದಿವೆ. ಇದು ವಿಟಮಿನ್ ಕೆ ಮತ್ತು ವಿಟಮಿನ್ ಎ ಯ ಉತ್ತಮ ಮೂಲವಾಗಿದೆ.
    Published by:renukadariyannavar
    First published: