Skin Care: ಈ ಹಣ್ಣುಗಳ ಸಿಪ್ಪೆಯನ್ನು ಬಿಸಾಡಬೇಡಿ; ಈ ರೀತಿ ಬಳಸಿ ತ್ವಚೆಯ ಕಾಂತಿ ಹೆಚ್ಚಿಸಿಕೊಳ್ಳಿ

ಬೇಸಿಗೆಯ ಸುಡು ಬಿಸಿಲಿನಲ್ಲಿ ನಿಮ್ಮ ಚರ್ಮ ಟ್ಯಾನ್ ಆಗಿದ್ದರೆ ಅಥವಾ ಆರೋಗ್ಯಕರ ಸ್ಕಿನ್ ಪಡೆಯಲು ನೀವು ಈ ಹಣ್ಣಿನ ಸಿಪ್ಪೆಗಳ ಪ್ರಯೋಜನ ಪಡೆಯಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೈಸರ್ಗಿಕ ಸಕ್ಕರೆ (Sugar) ಮತ್ತು ಅಗತ್ಯವಾದ ಪೋಷಕಾಂಶಗಳಿಂದ ತುಂಬಿರುವ ಹಣ್ಣುಗಳು ಪ್ರಕೃತಿಯಿಂದ ಸಿಗುವ ಉತ್ತಮ ಕೊಡುಗೆಯಾಗಿದೆ. ಹಣ್ಣುಗಳ ರುಚಿ ಮತ್ತು ಅವುಗಳ ಆರೋಗ್ಯ ಪ್ರಯೋಜನಗಳ (Health Benefits) ಬಗ್ಗೆ ಹೇಳೋದೇ ಬೇಡ. ಇವು ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದಲ್ಲಿ ಬಹು ಮುಖ್ಯ ಪಾತ್ರವಹಿಸುತ್ತವೆ. ಹಣ್ಣುಗಳು ಕೇವಲ ದೈಹಿಕ ಆರೋಗ್ಯ (Physical Health) ಮಾತ್ರವಲ್ಲದೇ ಸೌಂದರ್ಯದ ವಿಚಾರದಲ್ಲೂ ಚಮತ್ಕಾರಿಯಾಗಿವೆ. ಉತ್ತಮ ಚರ್ಮ ಮತ್ತು ಕೂದಲಿನ (Skin and Hair) ಆರೋಗ್ಯವನ್ನು ಇವು ಹೆಚ್ಚಿಸುತ್ತದೆ. ಹಣ್ಣುಗಳ ಉಪಯೋಗದ ಬಗ್ಗೆ ನಿಮಗೆ ತಿಳಿದೇ ಇದೆ, ಅದರಂತೆ ಅವುಗಳ ಸಿಪ್ಪೆಯ ಬಗ್ಗೆ ನಿಮಗೆ ಗೊತ್ತಾ.?

ಹೌದು ತಿರುಳು ತಿಂದು ಬಿಸಾಡುವ ಸಿಪ್ಪೆ ಹತ್ತಾರು ಪ್ರಯೋಜನಗಳನ್ನು ಹೊಂದಿದೆ. ಕೆಲವು ಹಣ್ಣುಗಳ ಸಿಪ್ಪೆ ಹಣ್ಣಿನಷ್ಟೇ ಉತ್ತಮ ಪ್ರಯೋಜನಗಳನ್ನು ಹೊಂದಿರುತ್ತದೆ. ಬೇಸಿಗೆಯಲ್ಲಿ ನಿಮ್ಮ ಚರ್ಮವನ್ನು ಆರೈಕೆ ಮಾಡಲು ಈ ಹಣ್ಣಿನ ಸಿಪ್ಪೆಗಳನ್ನು ನೀವು ಬಳಸಬಹುದು.

ಪಪ್ಪಾಯಿ, ಮಾವಿನಹಣ್ಣು, ಬಾಳೆಹಣ್ಣು, ನಿಂಬೆಹಣ್ಣು, ಕಿತ್ತಳೆ, ಕರಬೂಜುಗಳು, ಸೇಬುಗಳು, ಪೇರಳೆಗಳು, ಸೇರಿದಂತೆ ವಿವಿಧ ಹಣ್ಣುಗಳ ಹೊರಭಾಗದ ಸಿಪ್ಪೆಗಳು ಗಮನಾರ್ಹ ಪ್ರಮಾಣದ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು, ಖನಿಜಗಳು, ಸಸ್ಯ ಆಧಾರಿತ ಆಮ್ಲಗಳು ಮತ್ತು ಕಿಣ್ವಗಳನ್ನು ಹೊಂದಿರುತ್ತವೆ. ಹಣ್ಣಿನ ಸಿಪ್ಪೆಯ ಈ ಅಂಶಗಳು ಚರ್ಮದ ಟೋನ್ ಮತ್ತು ಗ್ಲೋ ಹೆಚ್ಚಿಸುತ್ತವೆ. ಬೇಸಿಗೆಯ ಸುಡು ಬಿಸಿಲಿನಲ್ಲಿ ನಿಮ್ಮ ಚರ್ಮ ಟ್ಯಾನ್ ಆಗಿದ್ದರೆ ಅಥವಾ ಆರೋಗ್ಯಕರ ಸ್ಕಿನ್ ಪಡೆಯಲು ನೀವು ಈ ಹಣ್ಣಿನ ಸಿಪ್ಪೆಗಳ ಪ್ರಯೋಜನ ಪಡೆಯಬಹುದು.

ಬೇಸಿಗೆಯಲ್ಲಿ ತ್ವಚೆಯ ಆರೈಕೆಗೆ ಸಹಕರಿಸುವ ಹಣ್ಣಿನ ಸಿಪ್ಪೆಗಳು

1) ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣು ಚರ್ಮವನ್ನು ತೇವಗೊಳಿಸುತ್ತದೆ ಮತ್ತು ಸ್ಕಿನ್ ಶುಷ್ಕವಾಗುವುದನ್ನು ತಡೆಯುತ್ತದೆ. ಬಾಳೆಹಣ್ಣನ್ನು ತಿಂದು ಸಿಪ್ಪೆ ಬಿಸಾಡುವ ಉತ್ತಮ ತ್ವಚೆ ಪರಿಹಾರಕ್ಕಾಗಿ ಸಿಪ್ಪೆಯನ್ನು ನಿಮ್ಮ ಮುಖದ ಮೇಲೆ ಕೆಲ ಹೊತ್ತು ಮಸಾಜ್ ಮಾಡಿಕೊಳ್ಳಬಹುದು. ಅಥವಾ ನಿಮ್ಮ ಮುಖವನ್ನು ತೊಳೆದ ನಂತರ, ತಾಜಾ ಬಾಳೆಹಣ್ಣಿನ ಸಿಪ್ಪೆಯಿಂದ ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ಕ್ಲೆನ್ಸರ್‌ನೊಂದಿಗೆ ಅದನ್ನು ತೊಳೆಯಿರಿ. ಚಳಿಗಾಲದಲ್ಲಿ, ಬಾಳೆ ಹಣ್ಣಿನ ಸಿಪ್ಪೆ ಉರಿಯೂತ, ತುರಿಕೆ ಮತ್ತು ಕಿರಿಕಿರಿಯನ್ನು ಸಹ ನಿವಾರಿಸುತ್ತದೆ. ಅಲ್ಲದೆ ಕಣ್ಣಿನ ಸುತ್ತ ಇರುವ ಡಾರ್ಕ್ ಸರ್ಕಲ್ ಮೇಲೆ ಬಾಳೆಹಣ್ಣಿನ ಸಿಪ್ಪೆಯನ್ನು ಉಜ್ಜುವುದರಿಂದ ಇದು ನಿವಾರಣೆಯಾಗುತ್ತದೆ.

ಇದನ್ನೂ ಓದಿ: ಪದೇ ಪದೇ ಕಾಣಿಸಿಕೊಳ್ಳೋ ಮೊಡವೆ ನಿವಾರಣೆಗೆ ತ್ವಚೆಯ ಹೊರಗಲ್ಲ ಒಳಗಿಂದಲೇ ಮದ್ದು ಮಾಡಿ

2) ಪಪ್ಪಾಯಿ ಸಿಪ್ಪೆ

ಪಪ್ಪಾಯಿ ಸಿಪ್ಪೆಯು ಪಾಪೈನ್ ಎಂಬ ಕಿಣ್ವವನ್ನು ಹೊಂದಿದೆ, ಇದು ಚರ್ಮದ ಕೋಶಗಳನ್ನು ಸರಿಪಡಿಸಲು ಮತ್ತು ಚರ್ಮವನ್ನು ಪುನರುಜ್ಜೀವನಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಮಂದ ಮತ್ತು ವಯಸ್ಸಾದ ಚರ್ಮಕ್ಕೆ ಜೀವರಕ್ಷಕವಾಗಿ ಕೆಲಸ ಮಾಡುತ್ತದೆ. ಇದು ಮೈಬಣ್ಣವನ್ನು ಹೊಳಪುಗೊಳಿಸುತ್ತದೆ ಮತ್ತು ಚರ್ಮಕ್ಕೆ ತಾರುಣ್ಯ, ಒಳ್ಳೆ ಲುಕ್ ನೀಡಲು ಸಹಕಾರಿಯಾಗಿದೆ. ಬಲಿತ ಪಪ್ಪಾಯಿ ಹಣ್ಣಿನ ಸಿಪ್ಪೆಯನ್ನು ಸ್ವಲ್ಪ ಮೊಸರು ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ಫೇಸ್ ಪ್ಯಾಕ್ ಹಾಕಿಕೊಳ್ಳಬಹುದು. ಒಣ ಚರ್ಮಕ್ಕೆ ಪಪ್ಪಾಯಿ-ಜೇನು ಫೇಸ್ ಮಾಸ್ಕ್ ಉತ್ತಮ ಪರಿಹಾರ.

ಇದನ್ನೂ ಓದಿ: ಸುಡು ಬಿಸಿಲು, ಮಕ್ಕಳ ಆಹಾರದಲ್ಲಿ ಈ ಪದಾರ್ಥಗಳನ್ನು ಮಿಸ್ ಮಾಡಲೇಬೇಡಿ

3) ಕಿತ್ತಳೆ ಸಿಪ್ಪೆ

ಕಿತ್ತಳೆ ಮತ್ತು ನಿಂಬೆಯಂತಹ ಸಿಟ್ರಸ್ ಹಣ್ಣುಗಳು ಎಣ್ಣೆಯುಕ್ತ ಅಥವಾ ಮೊಡವೆ ಪೀಡಿತ ಚರ್ಮವನ್ನು ಸಂಪೂರ್ಣವಾಗಿ ನಿವಾರಿಸುವ ಶಕ್ತಿ ಹೊಂದಿದೆ. ಈ ಈ ಸಿಟ್ರಸ್ ಹಣ್ಣುಗಳ ಸಿಪ್ಪೆಯನ್ನು ಒಣಗಿಸಿ ಮತ್ತು ಅವುಗಳನ್ನು ಪುಡಿಮಾಡಿ ಇಟ್ಟುಕೊಳ್ಳಬಹುದು. ಮನೆಯಲ್ಲಿಯೇ ನೀವು ನಿಮ್ಮ ಸ್ವಂತ DIY ಸ್ಕ್ರಬರ್ ಆಗಿ ಉಪಯೋಗಿಸಬಹುದು. ಈ ಪುಡಿ ಜೊತೆ ಸ್ವಲ್ಪ ನಿಂಬೆ ರಸ ಮತ್ತು ರೋಸ್ ವಾಟರ್ ಬೆರೆಸಿ ಮುಖಕ್ಕೆ ಅನ್ವಯಿಸಬಹುದು. ಅಲ್ಲದೆ ಅರಿಶಿನ ಮತ್ತು ಕಿತ್ತಳೆ ಪುಡಿಯನ್ನು ಲೋಳೆರಸದ ಜೊತೆ ಸಹ ಬಳಸಬಹುದು. ಆಯ್ಲಿ ಮತ್ತು ಮೊಡವೆ ಸ್ಕಿನ್ ಅನ್ನು ದೂರ ಮಾಡಲು ಈ ಹಣ್ಣಿನ ಸಿಪ್ಪೆಗಳು ಸಹಕಾರಿಯಾಗಿದೆ. ಇನ್ನುಮುಂದೆ ಕಿತ್ತಳೆ ಹಣ್ಣನ್ನು ತಿಂದು ಸಿಪ್ಪೆಯನ್ನು ಎಸೆಯುವ ಬದಲು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡು ಉತ್ತಮ ತ್ವಚೆಗಾಗಿ ಬಳಸಬಹುದು.
Published by:Pavana HS
First published: