Weight Loss Tips: ಸಾಮಾನ್ಯವಾಗಿ ತಿನ್ನುವ ಈ 5 ತಿಂಡಿಗಳನ್ನು ಬಿಟ್ಟರೆ ಸಾಕು ತೂಕ ಸುಲಭವಾಗಿ ಇಳಿಯುತ್ತೆ

From fried snacks to sugary drinks: ಹಸಿವಿನಿಂದ ಬಳಲುವುದು ನಿಮ್ಮನ್ನು ಮುಂಗೋಪಕ್ಕೆ ತಳ್ಳುವುದು ಮಾತ್ರವಲ್ಲ, ತೂಕ ಹೆಚ್ಚಿಸಲು ಕೂಡ ಕಾರಣವಾಗಬಹುದು. ಆದ್ದರಿಂದ ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ನೀವು ತಪ್ಪಿಸಬೇಕಾದ ಕೆಲವು ಆಹಾರಗಳನ್ನು ಇಲ್ಲಿದೆ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
weight loss diet: ತೂಕ ಹೆಚ್ಚಿಸುವಲ್ಲಿ ಅಥವಾ ತೂಕ ಇಳಿಸುವಲ್ಲಿ ಆಹಾರ ದೊಡ್ಡ ಪಾತ್ರವನ್ನು ವಹಿಸುತ್ತದೆ. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಕೇವಲ ಕಡಿಮೆ ಆಹಾರ ಸೇವಿಸುವುದು ಸಾಕಾಗುವುದಿಲ್ಲ ಎಂದು ನೀವು ತಿಳಿದಿರಬೇಕು. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಕೆಲ ಆಹಾರಗಳನ್ನು ತಪ್ಪಿಸಬೇಕು. ಕಡಿಮೆ ತೂಕ ಮತ್ತು ಅಧಿಕ ತೂಕವು ವೈದ್ಯಕೀಯ ಸಮಸ್ಯೆಗಳಿಗೆ ಕಾರಣವಾಗಬಹುದು, ಅದಕ್ಕಾಗಿಯೇ ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಸಣ್ಣಗಾಗಲು ಆರೋಗ್ಯಕರ ಆಹಾರ ಪದ್ಧತಿ ಮತ್ತು ಸಮಯಕ್ಕೆ ಸರಿಯಾಗಿ ತಿನ್ನುವುದು ಮುಖ್ಯ. ಹಸಿವಿನಿಂದ ಬಳಲುವುದು ನಿಮ್ಮನ್ನು ಮುಂಗೋಪಕ್ಕೆ ತಳ್ಳುವುದು ಮಾತ್ರವಲ್ಲ, ತೂಕ ಹೆಚ್ಚಿಸಲು ಕೂಡ ಕಾರಣವಾಗಬಹುದು. ಆದ್ದರಿಂದ ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ನೀವು ತಪ್ಪಿಸಬೇಕಾದ ಕೆಲವು ಆಹಾರಗಳನ್ನು ಇಲ್ಲಿದೆ ನೋಡಿ.

1 ಆಲೂಗಡ್ಡೆ ಚಿಪ್ಸ್

ಆಲೂಗಡ್ಡೆ ಚಿಪ್ಸ್ ಮತ್ತು ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಪ್ಪಿಸಬೇಕು. ಫ್ರೆಂಚ್ ಫ್ರೈಗಳು ಮತ್ತು ಆಲೂಗಡ್ಡೆ ಚಿಪ್ಸ್ ಆರೋಗ್ಯಕರವಲ್ಲ. ಆದರೆ ಸಂಪೂರ್ಣ ಆಲೂಗಡ್ಡೆ ಆರೋಗ್ಯಕ್ಕೆ ಒಳ್ಳೆಯದು. ಬೇಯಿಸಿ ತಿನ್ನುವುದರಿಂದ ಕ್ಯಾಲೊರಿಗಳಲ್ಲಿ ಭಾರವಾಗಿರುತ್ತದೆ.. ಫ್ರೆಂಚ್ ಫ್ರೈಗಳು ಮತ್ತು ಆಲೂಗಡ್ಡೆ ಚಿಪ್ಸ್ ಸೇವನೆಯು ತೂಕ ಹೆಚ್ಚಳಕ್ಕೆ ದೊಡ್ಡ ಕಾರಣವಾಗುತ್ತವೆ. ಒಂದು ಅಧ್ಯಯನದ ಪ್ರಕಾರ ಆಲೂಗಡ್ಡೆ ಚಿಪ್ಸ್ ಬೇರೆಲ್ಲಾ ಆಹಾರಕ್ಕಿಂತ ತೂಕ ಹೆಚ್ಚಿವಲ್ಲಿ ಮುಂಚೂಣಿಯಲ್ಲಿದೆ.

2 ಬಿಳಿ ಬ್ರೆಡ್

ಬಿಳಿ ಬ್ರೆಡ್ ಅತ್ಯಂತ ಪರಿಷ್ಕೃತ ಆಹಾರವಾಗಿದ್ದು, ಜೊತೆಗೆ ಹೆಚ್ಚು ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತದೆ. ಇದು ಹೆಚ್ಚಿನ ಗ್ಲೈಸೆಮಿಕ್ ಅಂಶವನ್ನು ಹೊಂದಿದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಇದು ದೇಹದ ತೂಕ ಹಚ್ಚಾಗಲು ಸಹಾಯಕಾರಿಯಾಗಿದೆ. ಅದ್ದರಿಂದ ವೈಟ್​ ಬ್ರೆಡ್​ ತಿನ್ನುವುದನ್ನು ತ್ಯಜಿಸಿ.

3 ಕೂಲ್​ ಡ್ರಿಂಕ್ಸ್​​

ಸೋಡಾದಂತಹ ಸಿಹಿಯಾದ ಪಾನೀಯಗಳು ವಿಶ್ವದ ಅನಾರೋಗ್ಯಕರ ಆಹಾರಗಳಲ್ಲಿ ಒಂದಾಗಿದೆ. ಅವು ತೂಕದ ಏರಿಕೆಗೆ ನಿಕಟವಾಗಿ ಸಂಬಂಧ ಹೊಂದಿವೆ. ತಂಪು ಪಾನೀಯಗಳನ್ನು ಅತಿಯಾಗಿ ಸೇವಿಸಿದಾಗ ಹಾನಿಕಾರಕ ಆರೋಗ್ಯ ಪರಿಣಾಮಗಳನ್ನು ಉಂಟು ಮಾಡಬಹುದು.

4 ಚಾಕಲೇಟ್​​​​ / ಕ್ಯಾಂಡಿಗಳು

ಕ್ಯಾಂಡಿ ಆರೋಗ್ಯಕ್ಕೆ ನಂಬಲಾಗದಷ್ಟು ಹಾನಿಕಾರಕವಾಗಿದೆ. ಚಿಕ್ಕ ಚಾಕಲೇಟ್​ನಲ್ಲಿ ಸಕ್ಕರೆ, ಹೆಚ್ಚುವರಿ ಎಣ್ಣೆಗಳು ಮತ್ತು ಸಂಸ್ಕರಿಸಿದ ಮೈದಾ ಇರುತ್ತದೆ. ಚಿಕ್ಕ ಪಾಕೇಟ್​ನಲ್ಲಿ ಬರುವ ಕ್ಯಾಂಡಿ ಬಾರ್ 200-300 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಸುಮ್ಮನೆ ಬಾಯಿಗೆ ಹಾಕಿಕೊಳ್ಳುವ ಚಿಕ್ಕ ಚಾಕಲೇಟ್​ ನಿಮ್ಮ ದೇಹದ ತೂಕವನ್ನು ಹೆಚ್ಚಿಸುವಲ್ಲಿ ದೊಡ್ಡ ಕೊಡುಗೆಯನ್ನು ಕೊಡುತ್ತದೆ.

5 ಬಾಟಲಿಗಳನ್ನು ಬರುವ ಹಣ್ಣಿನ ರಸ

ಬಹುಪಾಲು ಹಣ್ಣಿನ ರಸಗಳು ಹಣ್ಣಿನೊಂದಿಗೆ ಸ್ವಲ್ಪಮಟ್ಟಿಗೆ ಸಾಮ್ಯತೆಯನ್ನು ಹೊಂದಿರುತ್ತವೆ. ಹಣ್ಣಿನ ರಸವನ್ನು ಹೆಚ್ಚು ಸಂಸ್ಕರಿಸಲಾಗುತ್ತದೆ ಮತ್ತು ಸಕ್ಕರೆ ಹಾಕಿರಲಾಗುತ್ತದೆ. ಇವುಗಳನ್ನು ಹಣ್ಣಿನ ಪ್ಲೇವರ್​ ಮಾತ್ರ ಇದ್ದು ಹಣ್ಣಿನ ಯಾವ ಪೋಷಕಾಂಶವೂ ನಿಮಗೆ ಸಿಗಲ್ಲ. ಇವು ಕೇವಲ ಸಕ್ಕರೆ ಮತ್ತು ಕ್ಯಾಲರಿಗಳಾಗಿರುತ್ತವೆ.

ಇದನ್ನೂ ಓದಿ: Health Benefits of Carrots: ದಿನಕ್ಕೊಂದು ಹಸಿ ಕ್ಯಾರೆಟ್ ತಿಂದರೆ ಸಾಕು ತೆಳ್ಳಗೆ-ಬೆಳ್ಳಗೆ ಇರುತ್ತೀರಿ

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: