Health Tips: ಗರ್ಭಾವಸ್ಥೆಯಲ್ಲಿ ಕೇಸರಿ ಸೇವನೆಯ ಪ್ರಯೋಜನಗಳು ಇಲ್ಲಿದೆ.

Saffron Benefits: ಗರ್ಭಾವಸ್ಥೆಯಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುವುದು ಸಾಮಾನ್ಯ. ಹಾಗಾಗಿ ಹೆಚ್ಚು ಕಾಳಜಿಯ ಅವಶ್ಯಕತೆ ಇರುತ್ತದೆ. ಈ ಸಮಯದಲ್ಲಿ ಕೇಸರಿಯ ಸೇವನೆ ಮುಖ್ಯ ಪಾತ್ರವನ್ನುವಹಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇದು ನಿಮ್ಮ ಮೊದಲ ಬಾರಿಗೆ, ಎರಡನೆಯ ಅಥವಾ ಮೂರನೆಯ ಗರ್ಭಧಾರಣೆಯಾಗಿದ್ದರೂ ಸಹ  ಮಹಿಳೆಯ ಜೀವನದಲ್ಲಿ ಅತ್ಯಂತ ಸಂತೋಷದಾಯಕ ಸಮಯ ಮತ್ತು ಹೆಚ್ಚು ಕಾಳಜಿವಹಿಸಬೇಕಾಗಿರುವ ಸಮಯಗಳಲ್ಲಿ ಒಂದು. ತಾಯ್ತನದ ಭಾವನೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಗರ್ಭ ಧರಿಸಿರುವ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಿರಬೇಕು. ನಾವು ತಿನ್ನುವ ಆಹಾರ ನಮ್ಮ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನ ನಿರ್ಲಕ್ಷ್ಯ ಮಾಡಬಾರದು.

ತಾಯ್ತನವು ನಿಮ್ಮ ಜೀವನವನ್ನು ಬದಲಾಯಿಸುವ ಒಂದು ಸುಂದರ ಅನುಭವವಾಗಿದೆ. ಆದರೆ ಇದು ಹೆಚ್ಚಿನ ಜವಾಬ್ದಾರಿಯನ್ನು ಸಹ ನಿಮ್ಮ ಹೆಗಲೇರಿಸುತ್ತದೆ. ನೀವು ಗರ್ಭಿಣಿ ಎಂದು ನಿಮಗೆ ತಿಳಿದಾಗ, ಬಹುಶಃ ನಿಮ್ಮ ಮನಸ್ಸಿಗೆ ಬರುವ ಮೊದಲ ವಿಷಯವೆಂದರೆ ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ನಿಮ್ಮೊಳಗೆ ಬೆಳೆಯುತ್ತಿರುವ ಚಿಕ್ಕ ಮಗುವಿನ ಬಗ್ಗೆ ಕಾಳಜಿ ವಹಿಸುವುದು. ನೀವು ಆರೋಗ್ಯವಾಗಿರುವುದು ನಿಮಗೆ ಬಹಳ ಮುಖ್ಯವಾಗುತ್ತದೆ. ಸಮತೋಲಿತ ಆಹಾರ, ಒಳ್ಳೆಯ ಅಭ್ಯಾಸಗಳು ಮತ್ತು ಸಂತೋಷವಾಗಿರುವುದು ಸಹ ಪ್ರಮುಖ. ಆದರೆ, ಇವುಗಳ ನಡುವೆ, ಒಂಬತ್ತು ತಿಂಗಳಲ್ಲಿ ನಿಮ್ಮ ಆಹಾರದಲ್ಲಿ ಕೇಸರಿಯನ್ನು ಹೆಚ್ಚು ಸೇವಿಸಿ ಎಂದು ವೈದ್ಯರು ಹೇಳುತ್ತಾರೆ. ಕೇಸರಿ ಇದು ಸಾಮಾನ್ಯವಾಗಿ ಹಲವಾರು ಆಯುರ್ವೇದದ ಅಡುಗೆಗಳ ಭಾಗವಾಗಿದೆ ಮತ್ತು ಹಲವಾರು ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಇನ್ನು ಗರ್ಭಾವಸ್ಥೆಯಲ್ಲಿ ಕೇಸರಿಯ ಸೇವನೆ ಎಷ್ಟು ಪ್ರಯೋಜನಕಾರಿ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ನಿಮ್ಮ ಮೂಡ್ ಸ್ವಿಂಗ್ ನಿಭಾಯಿಸುತ್ತದೆ

ಈ ಒಂಬತ್ತು ತಿಂಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯೆಂದರೆ ಮೂಡ್ ಸ್ವಿಂಗ್. ಇದು ತ್ವರಿತ ಹಾರ್ಮೋನುಗಳ ಬದಲಾವಣೆಗಳು ಅಥವಾ ಗರ್ಭಾವಸ್ಥೆಯ ದೈಹಿಕ ತೊಂದರೆಗಳ ವಿವಿಧ ಅಂಶಗಳಿಂದ ಉಂಟಾಗುತ್ತದೆ. ಒಂದು ಕ್ಷಣದಲ್ಲಿ, ನೀವು ಜಗತ್ತಿನ ಬಗ್ಗೆ ಯೋಚಿಸಿ ಸಂತೋಷವಾಗಿರಬಹುದು. ಇನ್ನೊಂದು ಸಮಯದಲ್ಲಿ, ನೀವು ಅಳುತ್ತಾ ನಿಮ್ಮ ಹಾಸಿಗೆಯ ಒಂದು ಮೂಲೆಯಲ್ಲಿ ಕುಳಿತಿರಬಹುದು. ಈ ಮೂಡ್ ಸ್ವಿಂಗ್ಸ್ ನಿಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಇದಕ್ಕೆ ಉತ್ತಮ ಪರಿಹಾರ ಕೇಸರಿ ಸೇವನೆ. ಈ ಕೇಸರಿ ಸಿರೊಟೋನಿನ್ ಅನ್ನು ಉತ್ಪಾದಿಸುತ್ತದೆ, ಇದು ನಿಮ್ಮ ದೇಹದಲ್ಲಿ ರಕ್ತದ ಹರಿವನ್ನು ವರ್ಧಿಸುವ ಮೂಲಕ ನಿಮ್ಮ ಮೂಡ್ ಸ್ವಿಂಗ್ ನಿಭಾಯಿಸುತ್ತದೆ. ಇದು ನಿಮ್ಮ ಭಾವನಾತ್ಮಕ ಏರಿಳಿತಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮಲ್ಲಿ ಉತ್ಸಾಹವನ್ನು ಹೆಚ್ಚು ಮಾಡುತ್ತದೆ.

ಇದನ್ನೂ ಓದಿ: ಶುಂಠಿ ಚಹಾದಲ್ಲಿ ಏನೆಲ್ಲ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?

ಚನ್ನಾಗಿ ನಿದ್ರಿಸಲು ಸಹಾಯ ಮಾಡುತ್ತದೆ
ಈ ಗರ್ಭಾವಸ್ಥೆಯ ಸಮಯದಲ್ಲಿ ನೀವು ಅನುಭವಿಸುವ ಎಲ್ಲಾ ದೈಹಿಕ ಸಮಸ್ಯೆಗಳು ನಿಮ್ಮ ನಿದ್ರೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತವೆ. ನೀವು ರಾತ್ರಿಯಿಡೀ ನಿದ್ದೆ ಬರದೆ ಸಾಕಷ್ಟು ಸಮಯವನ್ನು ವ್ಯರ್ಥ ಮಾಡುತ್ತೀರಿ, ಈ ಸಮಸ್ಯೆಗೆ ಬೆಚ್ಚಗಿನ ಗಾಜಿನ ಕೇಸರಿ ಹಾಲನ್ನು ಕುಡಿಯುವುದು ಪರಿಹಾರ. ಇದು ನಿಮ್ಮ ಆತಂಕವನ್ನು ಶಮನಗೊಳಿಸುತ್ತದೆ ಮತ್ತು ನಿಮ್ಮ ಒಟ್ಟಾರೆ ಮನಸಿನ ಭಾವನೆಗಳನ್ನು ನಿಯಂತ್ರಿಸುತ್ತದೆ. ಆದ್ದರಿಂದ, ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ಸೆಳೆತವನ್ನು ನಿವಾರಿಸುತ್ತದೆ

ಗರ್ಭಾವಸ್ಥೆಯಲ್ಲಿ ಆಗುವ ಹಾರ್ಮೋನುಗಳ ಬದಲಾವಣೆಯಿಂದಾಗಿ ಸೆಳೆತ ಹೆಚ್ಚಾಗುತ್ತದೆ. ಕಲೆವೊಮ್ಮೆ ಅದನ್ನು ತಡೆದುಕೊಳ್ಳಬಹುದು, ಆದರೆ ಹೆಚ್ಚಿನ ಬಾರಿ ಆ ಸೆಳೆತವನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಕೇಸರಿ ಸೇವನೆಯ ಮೂಲಕ ಇವುಗಳನ್ನು ಸುಲಭವಾಗಿ ತಡೆಯಬಹುದು. ಕೇಸರಿ, ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನಿಮ್ಮ ಶರೀರದಲ್ಲಿನ ಎಲ್ಲಾ ಸ್ನಾಯು ನೋವುಗಳನ್ನು ಶಮನಗೊಳಿಸುತ್ತದೆ.

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
ಗರ್ಭಾವಸ್ಥೆಯು ರಕ್ತದೊತ್ತಡದ ಮಟ್ಟವನ್ನು ಪರಿಣಾಮ ಬೀರುತ್ತದೆ ಏಕೆಂದರೆ ಈ ಸಮಯದಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಆ ಸಮಯದಲ್ಲಿ ಸ್ವಲ್ಪ ಕೇಸರಿ ಸೇವಿಸಿದಾಗ, ನಿಮ್ಮ ರಕ್ತದೊತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
Published by:Sandhya M
First published: