FREE! FREE! FREE! ನ್ಯೂಸ್​ 18 ಕನ್ನಡ ಫುಡ್​ ಫೆಸ್ಟಿವಲ್​! ಬನ್ನಿ ತಿನ್ನಿ ಎಂಜಾಯ್ ಮಾಡಿ!

ಔತಣ ಕೂಟದ ಮಹಾಹಬ್ಬವೇ ಏರ್ಪಟ್ಟಿರುವಾಗ ಈ ಫೆಸ್ಟಿವಲ್​ಗೆ ಬರೋದು ಅಂತಿಂಥ ಅತಿಥಿಯಲ್ಲ. ಬಿಗ್​ಬಾಸ್ ಮನೆಯ ಸ್ಪರ್ಧಿ, ಪಾಪುಲರಿ ಕುಕ್ಕರಿ ಶೋಗಳನ್ನು ನಡೆಸಿಕೊಡುವ ಖ್ಯಾತ ನಿರೂಪಕರಾದ ಮುರುಳಿ. ಜೊತೆಗೆ ತಿನಿಸು ತಿಂದು ಖುಷಿ ಪಡುವ ಮನಸ್ಸುಗಳನ್ನು ಮತ್ತಷ್ಟು ಮನರಂಜಿಸೋದಕ್ಕೆ ಬರುತ್ತಿದ್ದಾ​ರೆ ಖ್ಯಾತ ಗಾಯಕಿ ಅನುರಾಧ ಭಟ್.

zahir | news18
Updated:January 28, 2019, 6:43 PM IST
FREE! FREE! FREE! ನ್ಯೂಸ್​ 18 ಕನ್ನಡ ಫುಡ್​ ಫೆಸ್ಟಿವಲ್​! ಬನ್ನಿ ತಿನ್ನಿ ಎಂಜಾಯ್ ಮಾಡಿ!
ಫುಡ್​ ಫೆಸ್ಟಿವಲ್
zahir | news18
Updated: January 28, 2019, 6:43 PM IST
ಒಂದ್ ಕಡೆ ಹೋಳಿಗೆ..ಮತ್ತೊಂದ್ ಕಡೆ ಕರಾವಳಿ ಸ್ಪೆಷಲ್..ಸುತ್ತ ಮುತ್ತ ಎಲ್ಲಿ ನೋಡಿದ್ರೂ ನಿಮ್ಮ ಕಣ್ಣಿಗೆ ಕಾಣೋದು ಬಾಯಲ್ಲಿ ನೀರೂರಿಸೋ ತಿನಿಸು. ಅರೇ ಎಲ್ಲಿ ಯಾವಾಗ ಅಂತೀರಾ? ಮುಂದೆ ಓದಿ..

ನ್ಯೂಸ್ 18 ಕನ್ನಡದಿಂದ ಐದನೇ ಆವೃತ್ತಿಯ ಆಹಾರ ಮೇಳ ಆರಂಭವಾಗ್ತಿದೆ. ಫೆಬ್ರವರಿ 1, 2, 3ನೇ ತಾರೀಖು ವಿಧ ವಿಧವಾದ ಖಾದ್ಯ ನಿಮಗಾಗಿ ಕಾದಿರುತ್ತೆ. ಈ ಮೂರು ದಿನಗಳ ಕಾಲ ವಿವಿಧ ಸಸ್ಯಹಾರಿ ಖಾದ್ಯಗಳು ತಿಂಡಿಪೋತರಿಗಾಗಿ ಸಿದ್ಧವಿರುತ್ತೆ. ಇಷ್ಟಕ್ಕೂ ನ್ಯೂಸ್ 18 ಕನ್ನಡ ಆಹಾರ ಮೇಳ ಎಲ್ಲಿ ನಡೆಯುತ್ತಿದೆ ಗೊತ್ತಾ? ಮಲ್ಲೇಶ್ವರಂನ ಮಂತ್ರಿ ಮಾಲ್​ ಮುಂಭಾಗದಲ್ಲಿರೋ ಆರ್​. ಗುಂಡುರಾವ್​ ಮೈದಾನದಲ್ಲಿ.(ಮಲ್ಲೇಶ್ವರಂ ವೆಸ್ಟ್).

ಕೇವಲ ವೆರೈಟಿ ತಿಂಡಿ ತಿನಿಸು ಮಾತ್ರವಲ್ಲ. ಶಾಪಿಂಗ್ ಕೂಡ ಮಾಡಬಹುದು. ಮೋಜಿ ಮಸ್ತಿಗೋಸ್ಕರ ನಾನಾ ಶೋಗಳು ನಡೆಯುತ್ತೆ. ಅದೆಷ್ಟೇ ಅಲ್ಲ, ಸೆಲೆಬ್ರಿಟಿಗಳ ಕುಣಿತವನ್ನೂ ಕಣ್ತುಂಬಿಕೊಳ್ಳಬಹುದು. ಖ್ಯಾತ ಗಾಯಕರ ಕೋಗಿಲೆ ಧ್ವನಿ ಕೇಳಿ ಎಂಜಾಯ್ ಮಾಡಬಹುದು. ಅದರಲ್ಲೂ ನ್ಯೂಸ್​ 18 ಕನ್ನಡ ಐದನೇ ಆವೃತ್ತಿಯ ಆಹಾರ ಮೇಳದಲ್ಲಿ ಒಂದಲ್ಲ ಎರಡಲ್ಲ..ಬರೋಬ್ಬರಿ 70 ಕ್ಕೂ ಹೆಚ್ಚಿನ ಸ್ಟಾಲ್​ಗಳಿರಲಿದೆ. ಅಂದರೆ ಊಹಿಸಿಕೊಳ್ಳಿ ಎಷ್ಟು ಬಗೆಬಗೆಯ ಖ್ಯಾದ್ಯಗಳಿರಬೇಡ.

ಔತಣ ಕೂಟದ ಮಹಾಹಬ್ಬವೇ ಏರ್ಪಟ್ಟಿರುವಾಗ ಈ ಫೆಸ್ಟಿವಲ್​ಗೆ ಬರೋದು ಅಂತಿಂಥ ಅತಿಥಿಯಲ್ಲ. ಬಿಗ್​ಬಾಸ್ ಮನೆಯ ಸ್ಪರ್ಧಿ, ಪಾಪುಲರಿ ಕುಕ್ಕರಿ ಶೋಗಳನ್ನು ನಡೆಸಿಕೊಡುವ ಖ್ಯಾತ ನಿರೂಪಕರಾದ ಮುರುಳಿ. ಜೊತೆಗೆ ತಿನಿಸು ತಿಂದು ಖುಷಿ ಪಡುವ ಮನಸ್ಸುಗಳನ್ನು ಮತ್ತಷ್ಟು ಮನರಂಜಿಸೋದಕ್ಕೆ ಬರುತ್ತಿದ್ದಾ​ರೆ ಖ್ಯಾತ ಗಾಯಕಿ ಅನುರಾಧ ಭಟ್.

ಇದನ್ನೂ ಓದಿ: ಬಿಗ್​ ಬಾಸ್​ ವಿನ್ನರ್​ ಶಶಿ ಕುಮಾರ್: ಜನರ ಹೃದಯ ಗೆದ್ದಿರುವುದು ನವೀನ್ ಸಜ್ಜು!

ನ್ಯೂಸ್ 18 ಕನ್ನಡ ಮೊದಲ ಆಹಾರಮೇಳವನ್ನ ಬೆಂಗಳೂರಿನಲ್ಲಿಯೇ ಆಯೋಜಿಸಿತ್ತು. ನಂತರ ತುಮಕೂರು, ಧಾರವಾಡ, ಹುಬ್ಬಳ್ಳಿಯಲ್ಲೂ ಆಹಾರ ಮೇಳವನ್ನು ಏರ್ಪಡಿಸಿತ್ತು. ಈಗ ಮತ್ತೆ ಸಿಲಿಕಾನ್ ಸಿಟಿ ಜನರಿಗೆ ಔತಣಕೂಟ ಸಿದ್ಧಗೊಳಿಸಿದೆ. ಎಂಟ್ರಿ ಕೂಡ ಫ್ರಿ ಫ್ರಿ ಫ್ರಿ. ಅರೇ ಇನ್ಯಾಕ್ ತಡ. ವೀಕೆಂಡ್ ಬೇರೆ. . ಬನ್ನಿ ತಿನ್ನಿ ಎಂಜಾಯ್ ಮಾಡಿ.

ಇದನ್ನೂ ಓದಿ: ಲಕ್ಷ ಲಕ್ಷ ಸಂಬಳ ಬಿಟ್ಟು ಬಿಗ್​ ಬಾಸ್​ನಲ್ಲಿ 50 ಲಕ್ಷ ಗೆದ್ದ ಶಶಿ ಕುಮಾರ್​!
Loading...

First published:January 28, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...