ಫ್ರಾನ್ಸ್ ವಿದ್ಯಾರ್ಥಿಗಳಿಗೆ ಸ್ಯಾನಿಟರಿ ಕಿಟ್ ಉಚಿತ; ಯಾವ ರಾಷ್ಟ್ರದಲ್ಲಿ ಮುಟ್ಟಿನ ಬಡತನ ಹೆಚ್ಚು?

ಸ್ಯಾನಿಟರಿ ಪ್ಯಾಡ್

ಸ್ಯಾನಿಟರಿ ಪ್ಯಾಡ್

ಮುಟ್ಟಿನ ಸಮಸ್ಯೆಯನ್ನು ವಿಶ್ವಸಂಸ್ಥೆಯು ಈಗಾಗಲೇ ಜಾಗತಿಕ ಸಾರ್ವಜನಿಕ ಆರೋಗ್ಯ ಮತ್ತು ಮಾನವ ಹಕ್ಕುಗಳ ಸಮಸ್ಯೆ ಎಂದು ಗುರುತಿಸಿದೆ. ಆದರೂ ಏಷ್ಯಾದ ರಾಷ್ಟ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಇನ್ನು ಮುಟ್ಟಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

  • Share this:

    ಬಾಲಕಿಯರು ಎದುರಿಸುವ ಮುಟ್ಟಿನ ಸಮಸ್ಯೆಯಿಂದಾಗಿ ಕೆಲವು ಪ್ರದೇಶದಲ್ಲಿ ಶಿಕ್ಷಣದಿಂದ ದೂರ ಉಳಿದಿದ್ದಾರೆ. ಬಾಲಕಿಯರು ಎದುರಿಸುವ ಮುಟ್ಟಿನ ಸಮಸ್ಯೆಯನ್ನು ಸುಲಭವಾಗಿಸಲು ಭಾರತ ಸರ್ಕಾರ ಇದೀಗ ಸ್ಯಾನಿಟರಿ ಪ್ಯಾಡ್​ಗಳನ್ನು ನೀಡುತ್ತಿದೆ. ಆದರೆ, ಕೆಲವು ಭಾಗಗಳಲ್ಲಿ ಯಶಸ್ವಿಯಾದರೆ ಇನ್ನು, ಕೆಲವು ಭಾಗದಲ್ಲಿ ಸ್ಯಾನಿಟರಿ ಪ್ಯಾಡ್ ಬಳಕೆ ಬಗ್ಗೆ ಮಾಹಿತಿ ತಿಳಿಸಬೇಕಾಗಿದೆ. ಆದರೆ, ಫ್ರಾನ್ಸ್ ದೇಶದಲ್ಲಿನ ವಿದ್ಯಾರ್ಥಿಗಳಿಗೆ ಅಲ್ಲಿನ ಸರ್ಕಾರಿ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ಮತ್ತು ಇತರೆ ಸುರಕ್ಷಾ ಕಿಟ್ ನೀಡುವ ಮೂಲಕ ಶಿಕ್ಷಣಕ್ಕೆ ಒತ್ತು ನೀಡಿದೆ.


    ಫ್ರಾನ್ಸ್ ದೇಶದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶಿಕ್ಷಣದಿಂದ ಬಾಲಕಿಯರು ದೂರ ಉಳಿಯಬಾರದು ಎಂದು ಅನೇಕ ಸವಲತ್ತುಗಳನ್ನು ಅಲ್ಲಿನ ಸರ್ಕಾರ ನೀಡಲು ಮುಂದಾಗಿದೆ. ಪ್ರತಿ ವಿದ್ಯಾರ್ಥಿಗಳಿಗೆ ಫ್ರಾನ್ಸ್ ದೇಶದಲ್ಲಿ ಬಾಲಕಿಯರು ಮುಟ್ಟಿನ ಅವಧಿ ವೇಳೆ ಎದುರಿಸುವ ಸಮಸ್ಯೆಯನ್ನು ಅರಿತು, ಮುಟ್ಟಿನ ಅವಧಿ ವೇಳೆ ಬೇಕಾಗುವ ಸುರಕ್ಷತಾ ಉತ್ಪನ್ನಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುವುದಾಗಿ ಫ್ರೆಂಚ್ ಸರ್ಕಾರ ಮಂಗಳವಾರ ಪ್ರಕಟಿಸಿದೆ.


    ಫ್ರೆಂಚ್ ಉನ್ನತ ಶಿಕ್ಷಣ ಸಚಿವ ಫ್ರೆಡೆರಿಕ್ ವಿಡಾಲ್ ಮಾತನಾಡಿ, ಮುಂದಿನ ಕೆಲವು ವಾರಗಳಲ್ಲಿ ವಿದ್ಯಾರ್ಥಿ ಮನೆಗಳಿಗೆ, ವಿದ್ಯಾರ್ಥಿಗಳ ಶಾಲೆಗಳಿಗೆ ಟ್ಯಾಂಪೂನ್ ಮತ್ತು ಸ್ಯಾನಿಟರಿ ಪ್ಯಾಡ್, ಶೌಚಾಲಯ ಟವೆಲ್ ಮತ್ತು ಮುಟ್ಟಿನ ವೇಳೆ ಬೇಕಾಗುವ ವಸ್ತುಗಳನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದ್ದಾರೆ.


    ಇದನ್ನೂ ಓದಿ: ಭಯಾನಕ ಘಟನೆ; ಆಲೂಗಡ್ಡೆಯೊಂದಿಗೆ ಹೃದಯ ಬೇಯಿಸಿ ಅಡುಗೆ ಮಾಡಿದ ಕೊಲೆಗಾರ!


    ಮುಟ್ಟಿನ (period) ಬಡತನ ಎಂದರೇನು?:


    ಶೌಚಾಲಯ ಬಳಕೆ ಮಾಡದೇ ಬಯಲಿಗೆ ಹೋಗುವುದು, ಅಗತ್ಯ ನೈರ್ಮಲ್ಯ ವಾತಾವರಣಕ್ಕೆ ಬೇಕಾದ ಮೂಲಸೌಕರ್ಯಗಳು ಸಿಗದೇ ಇದ್ದಾಗ period ಅಥವಾ ಋತುಚಕ್ರದ ಬಡತನ ಎಂದು ಕರೆಯಲಾಗುತ್ತದೆ. ಈ ಸಮಸ್ಯೆ ಆರ್ಥಿಕವಾಗಿ ಸದೃಢವಿಲ್ಲದ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಗ್ರಾಮೀಣ ಭಾಗಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಇನ್ನು ಮುಟ್ಟಿನ ಸಮಸ್ಯೆಯನ್ನು ವಿಶ್ವಸಂಸ್ಥೆಯು ಈಗಾಗಲೇ ಜಾಗತಿಕ ಸಾರ್ವಜನಿಕ ಆರೋಗ್ಯ ಮತ್ತು ಮಾನವ ಹಕ್ಕುಗಳ ಸಮಸ್ಯೆ ಎಂದು ಗುರುತಿಸಿದೆ. ಆದರೂ ಏಷ್ಯಾದ ರಾಷ್ಟ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಇನ್ನು ಮುಟ್ಟಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.


    ಯುನಿಸೆಫ್​ನ ವರದಿ ಪ್ರಕಾರ, ಮುಟ್ಟಿನ ಬಗ್ಗೆ ಹೆಚ್ಚಿನ ಬಾಲಕಿಯರಿಗೆ ಸಂಪೂರ್ಣ ಮಾಹಿತಿ ಇಲ್ಲ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಾಲಕಿಯರು ತಮ್ಮ ಮೊದಲ ದಿನದ ಮುಟ್ಟಿನ ಸಮಸ್ಯೆಯನ್ನು ಶಾಲೆಯಲ್ಲೇ ಕಳೆಯುವಂತೆ ಆಗುತ್ತದೆ. ಇನ್ನು, ಕಳೆದ ವರ್ಷ ಸ್ಕಾಟ್‌ಲ್ಯಾಂಡ್ನಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಮುಟ್ಟಿನ (period) ಉತ್ಪನ್ನಗಳನ್ನು ಉಚಿತವಾಗಿ ನೀಡಿದ ವಿಶ್ವದ ಮೊದಲ ರಾಷ್ಟ್ರ. ಈ ಯೋಜನೆಯಿಂದ ಇತರೆ ರಾಷ್ಟ್ರಗಳು ಪ್ರೇರಣೆಗೊಂಡು ತಮ್ಮ ದೇಶದ ವಿದ್ಯಾರ್ಥಿಗಳಿಗೆ ಮುಟ್ಟಿನ (period) ಉತ್ಪನ್ನಗಳನ್ನು ನೀಡಲು ಮುಂದೆಬಂದಿವೆ. ಇನ್ನು ಇಂಗ್ಲೆಂಡಿನಲ್ಲಿ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಉಚಿತ ಮುಟ್ಟಿನ ಉತ್ಪನ್ನಗಳನ್ನು ಪೂರೈಸಿದೆ. ಇನ್ನು, ಜೂನ್‌ನಿಂದ ವಿದ್ಯಾರ್ಥಿಗಳಿಗೆ ನ್ಯೂಜಿಲೆಂಡ್‌ನ ಉಚಿತ ಮುಟ್ಟಿನ ಉತ್ಪನ್ನಗಳನ್ನು ನೀಡಲು ಪ್ರಾರಂಭಿಸುತ್ತಿದೆ.


    ಭಾರತದಲ್ಲಿ ವಾರ್ಷಿಕವಾಗಿ 1 ಬಿಲಿಯನ್ ಸ್ಯಾನಿಟರಿ ಪ್ಯಾಡ್ ವಿಲೇವಾರಿ
    ಭಾರತದಲ್ಲಿ ವಾರ್ಷಿಕವಾಗಿ 1 ಬಿಲಿಯನ್ ಸ್ಯಾನಿಟರಿ ಪ್ಯಾಡ್‌ಗಳನ್ನು ವಿಲೇವಾರಿ ಮಾಡಲಾಗುತ್ತದೆ ಎಂದು ವಾಟರ್ ಏಡ್ ಸಂಸ್ಥೆಯ ವರದಿ ತಿಳಿಸಿದೆ. ಭಾರತ ಸರ್ಕಾರವು 2018ರಲ್ಲಿ ಸ್ಯಾನಿಟರಿ ಉತ್ಪನ್ನಗಳ ಮೇಲಿನ ವಿವಾದಾತ್ಮಕ 12% ತೆರಿಗೆಯನ್ನು ರದ್ದುಗೊಳಿಸಿತು.

    Published by:Sushma Chakre
    First published: