• Home
  • »
  • News
  • »
  • lifestyle
  • »
  • Foxtail Millet: ನಿಮ್ಮ ಹೃದಯ ರಕ್ಷಣೆಗೆ ಈ ಸಿರಿಧಾನ್ಯ; ನವಣೆಯ ಮೂರು ಸರಳ ಪಾಕ ವಿಧಾನಗಳು ಇಲ್ಲಿವೆ

Foxtail Millet: ನಿಮ್ಮ ಹೃದಯ ರಕ್ಷಣೆಗೆ ಈ ಸಿರಿಧಾನ್ಯ; ನವಣೆಯ ಮೂರು ಸರಳ ಪಾಕ ವಿಧಾನಗಳು ಇಲ್ಲಿವೆ

ನವಣೆ

ನವಣೆ

ನವಣೆ ಸಾಕಷ್ಟು ಪ್ರಮಾಣದ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.

  • Share this:

ನಮ್ಮ ಆರೋಗ್ಯ(Health)ವನ್ನು ಕಾಪಾಡುವಂತಹ ಸಿರಿಧಾನ್ಯ ಅಥವಾ ಮಿಲ್ಲೆಟ್ಸ್‌( Millets) ‌‌‌‍ಗಳ ಸೇವನೆ ಈಗಿನ ಜೀವನ ಶೈಲಿಗೆ (Life Style) ಬಹುಮುಖ್ಯವಾಗಿದೆ. ನಾವು ಪ್ರತಿ ದಿನ ಸೇವಿಸುವ ಆಹಾರ (Food) ಪದಾರ್ಥಗಳಿಗೆ ಹೋಲಿಸಿದರೆ ಸಿರಿಧಾನ್ಯಗಳಲ್ಲಿ ಸಿಗುವ ಪೌಷ್ಟಿಕಾಂಶಗಳ (Protein) ಲಾಭ ಹೆಚ್ಚು. ಹೀಗಾಗಿ ಇವುಗಳ ಸೇವನೆ ಪ್ರತಿದಿನ ಅತ್ಯಗತ್ಯ. ಮಿಲೆಟ್ಸ್ ಗಳಲ್ಲಿ ನವಣೆ (ಫಾಕ್ಸ್‌ ಟೇಲ್ Foxtail Millet) ಪ್ರಮುಖವಾಗಿದ್ದು, ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ನವಣೆ ಅಕ್ಕಿಗೆ ಅತ್ಯುತ್ತಮ ಪರ್ಯಾಯವಾಗಿದೆ. ಫಾಕ್ಸ್‌ಟೈಲ್ ಹೊಟ್ಟುಗಳಲ್ಲಿನ ಪ್ರೋಟೀನ್ ಹೃದಯ ಸಂಬಂಧಿ ಸಮಸ್ಯೆಗಳನ್ನು (Heart Diseases) ನಿಯಂತ್ರಿಸುತ್ತದೆ ಎಂದು ಕಂಡುಬಂದಿದೆ.


ಹೃದ್ರೋಗಕ್ಕೆ ಮುಖ್ಯ ಕಾರಣವೆಂದರೆ ಪ್ಲೇಕ್ ನಿರ್ಮಾಣ ಅಥವಾ ಅಪಧಮನಿ ಕಾಠಿಣ್ಯದ ಕಾರಣದಿಂದಾಗಿ ಅಪಧಮನಿಗಳ ಕಿರಿದಾಗುವಿಕೆ. ಈ ಬೆಳೆಯಲ್ಲಿ ಕಂಡುಬರುವ ಫಾಕ್ಸ್‌ಟೈಲ್ ಮಿಲೆಟ್ ಬ್ರಾನ್ ಪೆರಾಕ್ಸಿಡೇಸ್ (ಎಫ್‌ಎಂಬಿಪಿ) ಈ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ.


ನವಣೆ ಸಾಕಷ್ಟು ಪ್ರಮಾಣದ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ನವಣೆಯ ನಿಯಮಿತ ಸೇವನೆಯು ಆಹಾರದ ನಾರಿನ ಉಪಸ್ಥಿತಿಯಿಂದಾಗಿ ತೂಕವನ್ನು ಕಳೆದುಕೊಳ್ಳಲು ಸಹ ಸಹಾಯ ಮಾಡುತ್ತದೆ.


ಇದನ್ನೂ ಓದಿ: Beauty Tips: ಅರ್ಧಗಂಟೆಯಲ್ಲಿ ಹೊಳೆಯುವ ತ್ವಚೆ ನಿಮ್ಮದಾಗುತ್ತೆ! ಮುಖದ ಮೇಲೆ ಮ್ಯಾಜಿಕ್ ಮಾಡೋ ಫೇಸ್ ಪ್ಯಾಕ್​ಗಳು


ನಿಮ್ಮ ನಿಯಮಿತ ಆಹಾರದಲ್ಲಿ ಸಿರಿಧಾನ್ಯವಾದ ನವಣೆಯನ್ನು ಸೇರಿಸಲು 3 ಸುಲಭವಾದ ಭಾರತೀಯ ಮಿಲೆಟ್ಸ್ ಪಾಕವಿಧಾನಗಳು ಇಲ್ಲಿವೆ.


1)ನವಣೆ ಮಿಲೆಟ್ಸ್ ದೋಸೆ


ಪದಾರ್ಥಗಳು:


ನವಣೆ - 200 ಗ್ರಾಂ
ಉದ್ದಿನಬೇಳೆ - 80 ಗ್ರಾಂ
ಮೆಂತ್ಯ - 1.5 ಟೀಸ್ಪೂನ್
ಉಪ್ಪು - ರುಚಿಗೆ
ಎಣ್ಣೆ - ಅಗತ್ಯವಿರುವಂತೆ


ವಿಧಾನ:


ನವಣೆ, ಉದ್ದಿನ ಬೇಳೆ ಮತ್ತು ಮೆಂತ್ಯಯನ್ನು ತಣ್ಣೀರಿನಲ್ಲಿ ತೊಳೆಯಿರಿ. ಅವುಗಳನ್ನು ಪ್ರತ್ಯೇಕ ಬಟ್ಟಲಿನಲ್ಲಿ ಆರು ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ನೆನೆಸಿಡಿ. ನಂತರ, ಅಗತ್ಯ ಪ್ರಮಾಣದ ನೀರನ್ನು ಸೇರಿಸುವ ಮೂಲಕ ರುಬ್ಬಿಕೊಂಡು ನಯವಾದ ಬ್ಯಾಟರ್ ಆಗಿ ಮಿಶ್ರಣ ಮಾಡಿ. ರುಚಿಗೆ ಉಪ್ಪು ಸೇರಿಸಿ, ಆರು ಗಂಟೆಗಳ ಕಾಲ ಹಿಟ್ಟು ಹುದುಗಲು ಬಿಡಿ. ನಂತರ ದೋಸೆ ಪ್ಯಾನ್ ಅನ್ನು ತೆಗೆದುಕೊಂಡು, ಎಣ್ಣೆಯಿಂದ ಗ್ರೀಸ್ ಮಾಡಿ, ಹಿಟ್ಟನ್ನು ಸುರಿಯಿರಿ ಮತ್ತು ಒಂದು ಲೋಟವನ್ನು ಬಳಸಿ ದುಂಡಗಿನ ಆಕಾರದಲ್ಲಿ ಹರಡಿ. ಚೆನ್ನಾಗಿ ಬೇಯಿಸಿ ಮತ್ತು ಅದನ್ನು ಸಾಂಬಾರ್ ಅಥವಾ ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಿರಿ


2) ನವಣೆ ಉಪ್ಪಿಟ್ಟು


ಎಳ್ಳಿನ ಎಣ್ಣೆ - 1 ಟೀಸ್ಪೂನ್
ಸಾಸಿವೆ ಬೀಜಗಳು - 1/4 ಟೀಸ್ಪೂನ್
ಉದ್ದಿನ ಬೇಳೆ - 1 ಟೀಸ್ಪೂನ್
ಕರಿಬೇವಿನ ಎಲೆಗಳು - 2 ಚಿಗುರುಗಳು, ಸಣ್ಣದಾಗಿ ಕತ್ತರಿಸಿದ ಹಸಿರು ಮೆಣಸಿನಕಾಯಿ - 1
ಒಣ ಕೆಂಪು ಮೆಣಸಿನಕಾಯಿ - 1
ಈರುಳ್ಳಿ - 1/2 ಕಪ್, ಸಣ್ಣದಾಗಿ ಕೊಚ್ಚಿದ
ಶುಂಠಿ - 1 ಇಂಚು, ಸಣ್ಣದಾಗಿ ಕೊಚ್ಚಿದ
ಅರಿಶಿನ ಪುಡಿ - 1/4 ಟೀಸ್ಪೂನ್
ಕ್ಯಾರೆಟ್ - 1/4 ಕಪ್, ಸಣ್ಣದಾಗಿ ಕೊಚ್ಚಿದ
ಹಸಿರು ಬೀನ್ಸ್ - 1/4 ಕಪ್, ಸಣ್ಣದಾಗಿ ಕೊಚ್ಚಿದ
ನವಣೆ - 1 ಕಪ್
ನಿಂಬೆ - 1
ಉಪ್ಪು - ರುಚಿಗೆ
ಕೊತ್ತಂಬರಿ ಸೊಪ್ಪು - 2 ಟೇಬಲ್ಸ್ಪೂನ್
ತುಪ್ಪ - 1 ಚಮಚ


ತಯಾರಿಸುವ ವಿಧಾನ


ಕುಕ್ಕರ್‌ನಲ್ಲಿ, ಬಿಸಿ ಎಣ್ಣೆಗೆ ಸಾಸಿವೆ ಮತ್ತು ಉದ್ದಿನಬೇಳೆ ಸೇರಿಸಿ, ಇವು ಸಿಡಿದ ನಂತರ ಹಸಿರು ಮತ್ತು ಕೆಂಪು ಮೆಣಸಿನಕಾಯಿಗಳನ್ನು ಸೇರಿಸಿ. ನಂತರ, ಈರುಳ್ಳಿ ಮತ್ತು ಶುಂಠಿ ಸೇರಿಸಿ. ಅವು ಮೃದುವಾದ ಬಳಿಕ, ಕರಿಬೇವಿನ ಎಲೆಗಳು, ಅರಿಶಿನ ಪುಡಿ, ಬೀನ್ಸ್, ಕ್ಯಾರೆಟ್, ನವಣೆ ಉಪ್ಪು ಮತ್ತು 2.5 ಕಪ್ ನೀರು ಸೇರಿಸಿ. ಕುಕ್ಕರ್ ಐದಾರು ಸೀಟಿಗಳನ್ನು ಹೊಡೆಯಲು ಬಿಡಿ. ಮುಚ್ಚಳ ತೆಗೆದು ನಂತರ ಅದಕ್ಕೆ ಒಂದು ನಿಂಬೆ ರಸವನ್ನು ಹಿಂಡಿ 5 ನಿಮಿಷ ಮತ್ತೆ ಕುದಿಸಿ. ನಂತರ ಕೊತ್ತಂಬರಿ ಸೊಪ್ಪನ್ನು ಬೆರೆಸಿ. ಇದನ್ನು ಟೊಮೆಟೊ ಚಟ್ನಿಯೊಂದಿಗೆ ಬಿಸಿಯಾಗಿ ಬಡಿಸಿ


ಇದನ್ನೂ ಓದಿ:  Health Care: ತುಪ್ಪ ಮತ್ತು ಜೇನುಪ್ಪವನ್ನು ಮಿಶ್ರಣ ಮಾಡಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರ ಎನ್ನುತ್ತೆ ಆಯುರ್ವೇದ!


3) ಫಾಕ್ಸ್ಟೈಲ್ ಖಿಚಡಿ


ಫಾಕ್ಸ್ಟೈಲ್ - ½ ಕಪ್
ಮೂಂಗ್ ದಾಲ್ - ½ ಕಪ್
ನೀರು - 2.5 ಕಪ್ ಗಳು
ಕ್ಯಾರೆಟ್, ಬೀನ್ಸ್, ಬಟಾಣಿ, ಕ್ಯಾಪ್ಸಿಕಂ – 1ಕಪ್
ಮೇಥಿ ಎಲೆಗಳು - ¼ ಕಪ್
ಟೊಮೆಟೊ - 1
ತುಪ್ಪ - 1.3 ಟೀಸ್ಪೂನ್
ಶುಂಠಿ - 1 ಟೀಚಮಚ, ತುರಿದ
ಜೀರಿಗೆ - ½ ಟೀಚಮಚ
ಕೆಂಪು ಮೆಣಸಿನ ಪುಡಿ - ½ ಟೀಚಮಚ
ಅರಿಶಿನ ಪುಡಿ - ¼ ಟೀಚಮಚ
ಗರಂ ಮಸಾಲಾ - ¼ ಟೀಚಮಚ
ಉಪ್ಪು - ರುಚಿಗೆ


ವಿಧಾನ
ನವಣೆ ಮತ್ತು ಬೇಳೆಯನ್ನು ಸ್ವಚ್ಛಗೊಳಿಸಿ ಒಂದು ಗಂಟೆ ನೆನೆಸಿಡಿ. ಕುಕ್ಕರ್‌ ಬಿಸಿ ಮಾಡಿ ತುಪ್ಪವನ್ನು ಹಾಕಿ. ನಂತರ ಜೀರಿಗೆ ಮತ್ತು ಶುಂಠಿ ಸೇರಿಸಿ. ನಂತರ ಎಲ್ಲಾ ತರಕಾರಿಗಳನ್ನು ಸೇರಿಸಿ ಮತ್ತು ಮೂರು ನಿಮಿಷಗಳ ಕಾಲ ಹುರಿಯಿರಿ.


ಅರಿಶಿನ, ಕೆಂಪು ಮೆಣಸಿನಕಾಯಿ, ಗರಂ ಮಸಾಲಾ ಪುಡಿ ಮತ್ತು ಉಪ್ಪು ಸೇರಿಸಿ ಕೈಯಾಡಿಸಿ. ನಂತರ ಬೇಳೆ ಮತ್ತು ನವಣೆ ಸೇರಿಸಿ ಮತ್ತು ಮೂರು ನಿಮಿಷಗಳ ಕಾಲ ಹುರಿಯಿರಿ. ಬಳಿಕ ನೀರು ಸೇರಿಸಿ ಕುಕ್ಕರ್ ನಲ್ಲಿ 2-3 ಸೀಟಿ ಹೊಡೆಯಲು ಬಿಡಿ. ನಂತರ ಮುಚ್ಚಳ ತೆಗೆದು ಸ್ವಲ್ಪ ತುಪ್ಪವನ್ನು ಸೇರಿಸಿ. ಮಸಾಲೆಯುಕ್ತ ಉಪ್ಪಿನಕಾಯಿ ಮತ್ತು ಪಾಪಡ್‌ನೊಂದಿಗೆ ಬಿಸಿಯಾಗಿ ಬಡಿಸಿ.

Published by:Mahmadrafik K
First published: