Life Partner: ಸಂಗಾತಿಯ ಹುಡುಕಾಟದಲ್ಲಿ ಇದ್ದೀರಾ? ಈ ನಾಲ್ಕು ಗುಣಗಳಿದ್ರೆ ಅವರೇ ನಿಮಗೆ ಪರ್ಫೆಕ್ಟ್ ಮ್ಯಾಚ್ ಅಂತೆ!

ಈ ಪ್ರಮುಖ ನಾಲ್ಕು ಗುಣಗಳು ನೀವು ಆಯ್ಕೆ ಮಾಡುವ ವ್ಯಕ್ತಿಗಳಲ್ಲಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಂಡು, ಮುಂದುವರೆದರೆ ಜೀವನ ಉತ್ತಮ ರೀತಿಯಲ್ಲಿ ಸಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಉತ್ತಮ ಜೀವನ ಸಂಗಾತಿ(Life Partner)ಯನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಲ್ಲ. ಜೀವನದುದ್ದಕ್ಕೂ ಜೊತೆಯಾಗುವ ವ್ಯಕ್ತಿಗಳನ್ನು ಆಯ್ಕೆ ಮಾಡುವಾಗ ಅವಸರ ಮಾಡದೇ ನಿಮಗೆ ಹೊಂದುವವರನ್ನು ಸೂಕ್ತವಾಗಿ ಆರಿಸಿಕೊಳ್ಳಬೇಕು. ಸಂಗಾತಿಯ ಆಯ್ಕೆಯು ಸರಿಯಾಗಿದ್ದರೆ ಜೀವನವು ಸುಖಮಯವಾಗಿರುತ್ತದೆ. ಸಂಗಾತಿ(Partner)ಯ ಆಯ್ಕೆ ಮಾಡುವಾಗ ಕೆಲವು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಈ ಗುಣ(Qualities)ಗಳು ಆ ವ್ಯಕ್ತಿಗಳಲ್ಲಿ ಕಂಡು ಬಂದರೆ ಅವರು ನಿಮ್ಮ ಜೀವನದ ಪರ್ಫೆಕ್ಟ್ ಮ್ಯಾಚ್ (Perfect Match) ಆಗುತ್ತಾರೆ. ಹಾಗಾದರೆ ಸಂಗಾತಿಯ ಆಯ್ಕೆ ಮಾಡುವಾಗ ಈ ಸಲಹೆಗಳನ್ನು ಅನುಸರಿಸಿ.

ನೀವು ಆಯ್ಕೆ ಮಾಡುವ ಸಂಗಾತಿಯಲ್ಲಿ ಈ ಗುಣಗಳಿರಲಿ

1) ಬದ್ಧತೆ Commitment
ಸಂಬಂಧವು ಎರಡು-ಮಾರ್ಗದ ರಸ್ತೆಯಾಗಿದ್ದು, ನಿಮ್ಮ ಸಂಬಂಧದ ಬಗ್ಗೆ ಬದ್ಧತೆ ಇರುವ ವ್ಯಕ್ತಿಯನ್ನು ಆರಿಸಿಕೊಳ್ಳಿ. ನೀವು ಆಯ್ಕೆ ಮಾಡುವ ವ್ಯಕ್ತಿ ಜೀವನದಲ್ಲಿ ಬದ್ಧತೆ, ಜವಾಬ್ದಾರಿ ಹೊಂದಿದ್ದಾನೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಅವರ ಪ್ರಮುಖ ಮೌಲ್ಯಗಳ, ನಂಬಿಕೆ ವ್ಯವಸ್ಥೆಗಳು ಮತ್ತು ಕುಟುಂಬ, ಭವಿಷ್ಯ, ಮದುವೆ, ಮತ್ತು ಪೋಷಕರ ಬಗ್ಗೆ ಈ ಎಲ್ಲಾ ವಿಚಾರಗಳ ಬಗ್ಗೆ ಅವರಿಗಿರುವ ಆಲೋಚನೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ.

ಇದನ್ನೂ ಓದಿ:  Health Tips: ಸರಿಯಾಗಿ ನಿದ್ರೆ ಬರ್ತಿಲ್ವ -ಇಲ್ಲಿದೆ ನೋಡಿ ಸೂಪರ್ ಟಿಪ್ಸ್

ಈ ಸಂಬಂಧವನ್ನು ಕಾರ್ಯಗತಗೊಳಿಸುವ ಅವರ ಬದ್ಧತೆಯು ನಿಮ್ಮ ಸಂಬಂಧದ ಅಡಿಪಾಯವನ್ನು ರೂಪಿಸುತ್ತದೆ. ವಿಶ್ವಾಸಾರ್ಹ ವ್ಯಕ್ತಿಯ ಆಯ್ಕೆ ಮಾಡಿ ಮತ್ತು ನಿಮಗಿಂತಲೂ ಹೆಚ್ಚು ಆತನ ಮೇಲೆ ನಂಬಿಕೆಯಿರಬೇಕು. ಇಂಥ ವ್ಯಕ್ತಿ ಮಾತ್ರ ನಿಮಗೆ ಜೀವನದಲ್ಲಿ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ.

2) ಪರಸ್ಪರ ಗೌರವ Mutual respect
ನೀವು ಆಯ್ಕೆ ಮಾಡುವ ಸಂಗಾತಿಯಲ್ಲಿ ಪರಸ್ಪರ ಗೌರವ ನೀಡುವ ಮತ್ತು ತೆಗೆದುಕೊಳ್ಳುವ ಗುಣವಿದೆಯೇ ಪರೀಕ್ಷಿಸಿ. ಗೌರವಾನ್ವಿತ ಪಾಲುದಾರಿಕೆಯು ನಿಮ್ಮನ್ನು ನಿಮ್ಮ ಸುಖಮಯ ಜೀವನದಲ್ಲಿ ಸುರಕ್ಷಿತವಾಗಿರಿಸುತ್ತದೆ. ನಿಮ್ಮ ಭವಿಷ್ಯದ ಆಲೋಚನೆಗಳನ್ನು ಅವರು ವಿಶೇಷವಾಗಿ ಪ್ರಶಂಸಿಸಬೇಕು.

ನಿಮ್ಮ ಸಂಗಾತಿ ನಿಮ್ಮ ವ್ಯಕ್ತಿತ್ವವನ್ನು ಗೌರವಿಸುವ, ನಿಮ್ಮ ಮಹತ್ವಾಕಾಂಕ್ಷೆಗಳು, ನಿಮ್ಮ ಆಯ್ಕೆಗಳು ಮತ್ತು ನಂಬಿಕೆಗಳನ್ನು ಪ್ರೋತ್ಸಾಹಿಸುವ, ಹಾಗೆಯೇ ನಿಮ್ಮ ಕುಟುಂಬ ಮತ್ತು ಸ್ನೇಹಿತರ ವಲಯವನ್ನು ಗೌರವಿಸುತ್ತಾರೆಯೇ ತಿಳಿದುಕೊಂಡು ಮುಂದಿನ ಹೆಜ್ಜೆ ಇಡಿ.

3) ಆಸಕ್ತಿಗಳನ್ನು ಹಂಚಿಕೊಳ್ಳಿ Shared interests
ನೀವು ಯಾರನ್ನಾದರೂ ನೋಡಿದ ತಕ್ಷಣ ಅವರೇ ನಮ್ಮ ಸಂಗಾಂತಿ ಎಂದು ನಿರ್ಧಾರ ಮಾಡಬಾರದು. ಜೀವನ ಸಂಗಾತಿಯನ್ನು ಆಯ್ಕೆಮಾಡುವಾಗ ಅವರೊಂದಿಗೆ ಹೆಚ್ಚು ಮಾತನಾಡಬೇಕು, ಅವರ ಬಗ್ಗೆ ತಿಳಿದುಕೊಳ್ಳಬೇಕು. ಇಬ್ಬರು ಪರಸ್ಪರ ವಿಷಯಗಳನ್ನು ಹಂಚಿಕೊಳ್ಳಬೇಕು.

ಇದನ್ನೂ ಓದಿ: Pregnancy: ಗರ್ಭಿಣಿಯರಲ್ಲಿ ಮಧುಮೇಹ ಸಮಸ್ಯೆ, ಯಾವ ಆಹಾರಗಳನ್ನು ತಿನ್ನಬೇಕು ಗೊತ್ತಾ?  

ನಿಮ್ಮ ಆಸಕ್ತಿಗಳು, ಹವ್ಯಾಸಗಳು ಇತ್ಯಾದಿಗಳನ್ನು ಇಬ್ಬರು ಚರ್ಚಿಸಿ ತಿಳಿದುಕೊಳ್ಳವುದು ಉತ್ತಮ. ಆತ ನಿಮ್ಮ ಆಲೋಚನೆಗಳಿಗೆ ಹೊಂದುವ ವ್ಯಕ್ತಿಯೇ ಎಂದು ತಿಳಿದುಕೊಳ್ಳಿ. ಇಬ್ಬರ ನಡುವೆ ಹೊಂದಾಣಿಕೆಯಾಗುತ್ತದೆಯೇ ನೋಡಿಕೊಳ್ಳಿ. ಇದು ಮುಂದೆ ಆಸಕ್ತಿ, ಇಷ್ಟದ ಅನ್ವಯ ಇಬ್ಬರು ಪರಸ್ಪರ ಅನುಸರಿಸಿ ಕೊಂಡು ಹೋಗಲು ಸಹಕರಿಸುತ್ತದೆ.

4) ಆರ್ಥಿಕ ಸ್ಥಿರತೆ ಬಗ್ಗೆ ಚರ್ಚಿಸಿ Financial stability
ಜೀವನದಲ್ಲಿ ಪ್ರೀತಿ ಜೊತೆ ಬದುಕಲು ಹಣವೂ ಮುಖ್ಯವಾಗುತ್ತದೆ. ಹಾಗಾಗಿ ಈ ವಿಚಾರದ ಬಗ್ಗೆಯೂ ಮಾತುಕತೆ ನಡೆಯಲಿ. ಸಂಸಾರದಲ್ಲಿ ಹಣಕಾಸಿನ ವಿಷಯಕ್ಕೆ ಬಂದಾಗ ಪಾರದರ್ಶಕತೆ ಮುಖ್ಯ. ಹೀಗಾಗಿ ಸಂಗಾತಿ ಆಯ್ಕೆ ಮಾಡುವಾಗ ಈ ಬಗ್ಗೆ ಮುಕ್ತವಾಗಿ ಮಾತನಾಡಿ. ನೀವು ಮೊದಲು ಯಾರೊಂದಿಗಾದರೂ ಡೇಟಿಂಗ್ ಮಾಡಲು ಪ್ರಾರಂಭಿಸಿದಾಗ, ಅವರ ಆರ್ಥಿಕ ಸ್ಥಿರತೆ ಬಗ್ಗೆ ಹೆಚ್ಚು ಆದ್ಯತೆ ನೀಡದಿರಬಹುದು ಆದರೆ ನೀವು ಹೆಚ್ಚು ಕಾಲ ಡೇಟಿಂಗ್ ಮಾಡುತ್ತಿದ್ದರೆ ಈ ವಿಷಯವನ್ನು ಚರ್ಚಿಸಿ.

ಪರಸ್ಪರರ ಆರ್ಥಿಕ ಪರಿಸ್ಥಿತಿ ಬಗ್ಗೆ ಮುಚ್ಚು ಮರೆ ಮಾಡದೇ ಎಲ್ಲವನ್ನು ಹೇಳಿಕೊಳ್ಳಿ. ನಿಮ್ಮ ಹಣಕಾಸಿನ ಗುರಿಗಳು ಏನೆಂದು ಹಂಚಿಕೊಳ್ಳಿ, ನೀವು ಎಲ್ಲಿ ಹೂಡಿಕೆ ಮಾಡಲು ಬಯಸುತ್ತೀರಿ ಮತ್ತು ನೀವು ಹಣಕಾಸುವನ್ನು ಹೇಗೆ ನಿಭಾಯಿಸುತ್ತೀರಿ ಎಲ್ಲವನ್ನೂ ಚರ್ಚಿಸಿ.

ಈ ಪ್ರಮುಖ ನಾಲ್ಕು ಗುಣಗಳು ನೀವು ಆಯ್ಕೆ ಮಾಡುವ ವ್ಯಕ್ತಿಗಳಲ್ಲಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಂಡು, ಮುಂದುವರೆದರೆ ಜೀವನ ಉತ್ತಮ ರೀತಿಯಲ್ಲಿ ಸಾಗುತ್ತದೆ.
Published by:Mahmadrafik K
First published: