Skin Care: ಚರ್ಮ ಸುಕ್ಕು ಸುಕ್ಕಾಗಿದೆಯಾ? ಹಾಗಾದ್ರೆ ಇಷ್ಟು ಮಾಡಿ ಸಾಕು..

Skin Care Tips: ಒಂದು ಅಧ್ಯಯನದ ಪ್ರಕಾರ, ನೀವು ಹೆಚ್ಚಿನ ಒತ್ತಡಕ್ಕೆ ಒಳಗಾದರೆ ನಿಮ್ಮ ಮುಖದ ಮೇಲೆ ಮೊಡವೆಗಳು ಬರುತ್ತವೆ. ಆದ್ದರಿಂದ ನಿಮಗೆ ಒತ್ತಡ ಎನಿಸಿದರೆ ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ಪ್ರತಿದಿನ ಹೊರಗೆ ಹೋದಾಗ ರಸ್ತೆಯ ಮೇಲಿರುವ ಧೂಳು, ಆ ವಾಯು ಮಾಲಿನ್ಯ ಮತ್ತು ಬಿಸಿಲಿನ ಕಿರಣಗಳಿಂದ ನಿಮ್ಮ ದೇಹದ ಚರ್ಮ(Skin) ಹಾಳಾಗುವುದನ್ನು ನೀವು ಸಾಮಾನ್ಯವಾಗಿ ಗಮನಿಸಿರುತ್ತಿರಿ. ನಿಮ್ಮನ್ನು ಭೇಟಿ ಮಾಡಿದ ನಿಮ್ಮ ಆಪ್ತರು ಸಹ ತುಂಬಾ ಸಲ ‘ಏನಿದು ನಿನ್ನ ದೇಹದ ಚರ್ಮ ಕಾಂತಿಹೀನವಾಗಿದೆ’ ಎಂದು ಹೇಳುವುದನ್ನು ಕೇಳಿರುತ್ತೀರಿ.ಪ್ರತಿದಿನ ನೀವು ಹೊರಗೆ ಹೋಗದೆ ಇರುವುದನ್ನು ತಪ್ಪಿಸಲು ಆಗುವುದಿಲ್ಲ. ಹೊರಗೆ ಹೋಗುವಾಗ ಸನ್‌ಸ್ಕ್ರೀನ್ ಬಳಸುವುದರ ಜೊತೆಗೆ, ಒಳಗಿನಿಂದ ನಿಮ್ಮ ಚರ್ಮದ ಆರೋಗ್ಯ(Skin Care) ಉತ್ತಮವಾಗಿರಿಸಿಕೊಳ್ಳುವುದು ಮುಖ್ಯವಾಗಿದೆ.

ನಿಮ್ಮ ಚರ್ಮದ ಆರೋಗ್ಯವನ್ನು ದೀರ್ಘ ಕಾಲದವರೆಗೆ ಕಾಪಾಡಿಕೊಳ್ಳುವುದು ಹೇಗೆ ಎಂದು ಆಲೋಚನೆ ಮಾಡುತ್ತಿದ್ದರೆ, ನಿಮ್ಮ ಜೀವನ ಶೈಲಿಯಲ್ಲಿ ಈ ಕೆಳಗಿನ ಬದಲಾವಣೆಗಳನ್ನು ಮಾಡಿಕೊಳ್ಳಿ.

ಚರ್ಮದ ಆರೋಗ್ಯಕ್ಕಾಗಿ ಉತ್ತಮ ಆಹಾರ ಸೇವಿಸಿ

ನಿಮ್ಮ ಒಟ್ಟಾರೆ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನೀವು ಸೇವಿಸುವಂತಹ ಆಹಾರ ಮುಖ್ಯವಾದ ಪಾತ್ರ ವಹಿಸುತ್ತದೆ. ಆರೋಗ್ಯಕರ ಆಹಾರವು ನಿಮ್ಮ ಚರ್ಮದ ಮೇಲೆ ಇರುವ ಕಪ್ಪು ಕಲೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ತೂಕ ಹೆಚ್ಚಾಗ್ತಿದೆಯಾ? ಹಾಗಾದ್ರೆ ABC ಜ್ಯೂಸ್ ಟ್ರೈ ಮಾಡಿ..

ಆದ್ದರಿಂದ ಕಬ್ಬಿಣಾಂಶ, ಕ್ಯಾಲ್ಸಿಯಂ, ಅಮೈನೋ ಆಮ್ಲಗಳು, ಮೆಗ್ನೀಷಿಯಂ ಮತ್ತು ನಾರಿನಂಶದಿಂದ ಸಮೃದ್ಧವಾಗಿರುವ ಉತ್ತಮ ಸಮತೋಲಿತ ಆಹಾರ ಸೇವಿಸುವುದನ್ನು ರೂಢಿಸಿಕೊಳ್ಳಿ. ಬಾದಾಮಿ, ಡಾರ್ಕ್ ಚಾಕೊಲೇಟ್, ಗ್ರೀನ್ ಟೀ ಮತ್ತು ಹಸಿರು ಎಲೆ ತರಕಾರಿಗಳನ್ನು ನೀವು ಸೇವಿಸುವ ಆಹಾರ ಪಟ್ಟಿಯಲ್ಲಿ ಸೇರಿಸಿಕೊಳ್ಳಿರಿ.

ಒತ್ತಡ ಕಡಿಮೆ ಮಾಡಿಕೊಳ್ಳಿ

ಈ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ನಮ್ಮಲ್ಲಿ ಹೆಚ್ಚಿನವರು ಇನ್ನೂ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಮತ್ತು ಹತ್ತಿರದ ಸಂಬಂಧಿಗಳು ಮತ್ತು ಸ್ನೇಹಿತರೊಂದಿಗೆ ಹೆಚ್ಚು ಸಂಪರ್ಕ ಹೊಂದಿಲ್ಲ. ಇದು ಸಹ ನಿಮ್ಮಲ್ಲಿ ಆತಂಕದ ಮಟ್ಟ ಹೆಚ್ಚಳಕ್ಕೆ ಕಾರಣವಾಗಬಹುದು ಮತ್ತು ಇದು ನಿಮ್ಮ ಚರ್ಮದ ಮೇಲೂ ಪರಿಣಾಮ ಬೀರಬಹುದು.

ಒಂದು ಅಧ್ಯಯನದ ಪ್ರಕಾರ, ನೀವು ಹೆಚ್ಚಿನ ಒತ್ತಡಕ್ಕೆ ಒಳಗಾದರೆ ನಿಮ್ಮ ಮುಖದ ಮೇಲೆ ಮೊಡವೆಗಳು ಬರುತ್ತವೆ. ಆದ್ದರಿಂದ ನಿಮಗೆ ಒತ್ತಡ ಎನಿಸಿದರೆ ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳಿ.

ಕೆಲಸದಿಂದ ವಿಶ್ರಾಂತಿ ಪಡೆದು ನೀವು ಸಾಕು ಪ್ರಾಣಿಯೊಂದಿಗೆ ಆಟವಾಡಬಹುದು, ಧ್ಯಾನ ಅಭ್ಯಾಸ ಮಾಡಬಹುದು, ನಿಮ್ಮ ಮನೆಯ ಗಿಡಗಳಿಗೆ ನೀರು ಹಾಕಬಹುದು, ಆಟ ಆಡಬಹುದು, ಕಾದಂಬರಿಯನ್ನು ಓದಬಹುದು ಅಥವಾ ಹಗಲಿನಲ್ಲಿ 20 ರಿಂದ 30 ನಿಮಿಷಗಳ ಚಿಕ್ಕ ನಿದ್ದೆಯನ್ನು ಸಹ ಮಾಡಬಹುದು.

ಆರೋಗ್ಯಕರ ಚರ್ಮಕ್ಕಾಗಿ ಸಾಕಷ್ಟು ನೀರು ಕುಡಿಯಿರಿ

ನೀವು ನಿಮ್ಮ ಚರ್ಮವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಲು ಪ್ರತಿದಿನ ಕನಿಷ್ಠ 8 ರಿಂದ 10 ಲೋಟ ನೀರನ್ನು ತಪ್ಪದೆ ಕುಡಿಯಿರಿ. ನೀವು ಹೆಚ್ಚು ನೀರನ್ನು ಸೇವಿಸಿದಷ್ಟೂ, ನಿಮ್ಮ ದೇಹದಲ್ಲಿರುವ ಹೆಚ್ಚಿನ ಮಾಲಿನ್ಯ ಕಾರಕಗಳನ್ನು ಹೊರಹಾಕಲು ಸಹಾಯವಾಗುತ್ತದೆ.

ನೀವು ಸಾಕಷ್ಟು ನೀರು ಕುಡಿಯದೆ ಇದ್ದರೆ ನಿಮ್ಮ ಚರ್ಮ ಮುದುಡಿಕೊಂಡು ಹೆಚ್ಚು ದುರ್ಬಲವಾಗಬಹುದು. ಕಲ್ಲಂಗಡಿ, ಕಿತ್ತಳೆ, ಸ್ಟ್ರಾಬೆರಿ ಮತ್ತು ಸೇಬುಗಳಂತಹ ನೀರಿನ ಅಂಶ ಹೆಚ್ಚಿರುವ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು.

ಹೆಚ್ಚು ಸಕ್ರಿಯವಾಗಿರಿ

ಈ ಕೋವಿಡ್ ಸಾಂಕ್ರಾಮಿಕದ ನಡುವೆ ಹೊರಗಡೆ ಹೆಚ್ಚು ಹೋಗದೆ ಮನೆಯಲ್ಲಿಯೇ ಕುಳಿತುಕೊಳ್ಳುವಂತೆ ಆಗಿದ್ದು, ಜೀವನ ಶೈಲಿ ದಾರಿ ತಪ್ಪಿದೆ ಎಂದರೆ ಸುಳ್ಳಲ್ಲ. ಪ್ರತಿ ಗಂಟೆಯ ಕೆಲಸದ ನಂತರ ನಿಮ್ಮ ಮನೆಯ ಮುಂದೆ ಅಥವಾ ಸುತ್ತಲೂ 10 ನಿಮಿಷಗಳ ಕಾಲ ವೇಗವಾಗಿ ನಡೆಯಿರಿ. ವಾರಕ್ಕೆ ಕನಿಷ್ಠ ಮೂರು ಬಾರಿ ಕೆಲವು ರೀತಿಯ ತಾಲೀಮು ಅಭ್ಯಾಸ ಮಾಡಿ.

ಇದನ್ನೂ ಓದಿ: ಬಾಡಿ ಆಯಿಲ್ - ಬಾಡಿ ಲೋಷನ್ ಯಾವುದು ಉತ್ತಮ ಆಯ್ಕೆ- ನಿಮ್ಮ ಗೊಂದಲಕ್ಕೆ ಇಲ್ಲಿದೆ ಪರಿಹಾರ .

ಒಂದು ಅಧ್ಯಯನದ ಪ್ರಕಾರ, ನಿಮ್ಮ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ದೈಹಿಕ ವ್ಯಾಯಾಮ ತುಂಬಾ ಮುಖ್ಯವಾಗಿದೆ.
Published by:Sandhya M
First published: