Beauty Tips: ಮೇಕಪ್ ಮಾಡುವಾಗ ಏನೆಲ್ಲ ಮುಖ್ಯವಾಗುತ್ತೆ ಗೊತ್ತಾ?

Makeup : ಇನ್ನು ಹೆಚ್ಚಿನ ಜನರು ಬೇಸ್  ಹಾಕಲು ವಿಭಿನ್ನ ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯ ಚರ್ಮದ ಕಾಳಜಿಯನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ಮೇಕಪ್ ಟ್ರೆಂಡ್  ಗಮನಿಸಿ ನೋಡಿ, ಬೇಸ್ ಅನ್ನು ಪರಿಪೂರ್ಣಗೊಳಿಸುವುದು ಬಹಳ ಮುಖ್ಯವಾಗುತ್ತದೆ. ಉತ್ತಮವಾಗಿ ಹೊಂದಿಸದ ಬೇಸ್ ಇಲ್ಲದದಿದ್ದಲ್ಲಿ ಯಾವುದೇ , ಮೇಕಪ್ ಟ್ರೆಂಡ್‌ಗಳು ಕೂಡ ಟ್ಯಾಕಿ ಮತ್ತು ಆಕರ್ಷಕವಾಗಿ ಕಾಣುವುದಿಲ್ಲ. ಇದು ಕೇವಲ ನಿಮ್ಮ ಚರ್ಮವನ್ನು ಫೌಂಡೇಶನ್, ಕನ್ಸೀಲರ್ ಮತ್ತು ಪ್ರೈಮಿಂಗ್ ಮತ್ತು ಪ್ರೆಪ್ ಉತ್ಪನ್ನಗಳ ಪದರಗಳಿಂದ ಮುಚ್ಚುವುದು ಮಾತ್ರವಲ್ಲ, ಪರಿಪೂರ್ಣ ಮೇಕಪ್ ಆಗಲು ಅನಿವಾರ್ಯ ಕೂಡ.

ಇನ್ನು ಹೆಚ್ಚಿನ ಜನರು ಬೇಸ್  ಹಾಕಲು ವಿಭಿನ್ನ ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯ ಚರ್ಮದ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು, ಚರ್ಮಕ್ಕೆ ಹಾನಿಯಾಗದಂತೆ ಬಳಸುವ ವಿಧಾನವನ್ನು ಕಂಡುಕೊಂಡಿದ್ದಾರೆ.

ನೀವು ಮೇಕಪ್ ಬಗ್ಗೆ ತಿಳಿದುಕೊಳ್ಳ  ಬೇಕಾಗಿರುವ ಮುಖ್ಯ ಮಾಹಿತಿಗಳು ಇಲ್ಲಿದೆ.

ಸರಿಯಾದ ಫೌಂಡೇಶನ್ ಆಯ್ಕೆ

ಪರಿಪೂರ್ಣವಾದ ಪೌಂಡೇಶನ್ ಕ್ರಿಮ್ ಆಯ್ಕೆ ಮಾಡುವುದು ಸುಲಭದ ಕೆಲಸವಲ್ಲ.  ನಿಮ್ಮ ಚರ್ಮಕ್ಕೆ ಸರಿ ಹೊಂದುವಂತೆ ಮಾಡುವುದು ಅತ್ಯಂತ ಮುಖ್ಯವಾಗುತ್ತದೆ. ನಾನ್-ಕಾಮೆಡೋಜೆನಿಕ್' ಯಾವುದೇ ಬೇಸ್ ಮೇಕಪ್ ಉತ್ಪನ್ನ ಸೂತ್ರ ಎನ್ನಬಹುದು.

ಇದನ್ನೂ ಓದಿ: ಸೆಲಬ್ರಿಟಿಗಳೆಲ್ಲಾ ಕಪ್ಪು ನೀರನ್ನೇ ಕುಡಿಯೋದಂತೆ ! ಏನಿದು ಬ್ಲಾಕ್ ವಾಟರ್, ಇದರ ಪ್ರಯೋಜನಗಳೇನು?

ನಿಮಗೆ ಸೂಕ್ತವಾದ ಫಿನಿಶ್ ಅನ್ನು ನಿರ್ಧರಿಸಲು ನಿಮ್ಮ ಚರ್ಮದ ಪ್ರಕಾರವನ್ನು ಮೊದಲು  ಗುರುತಿಸಿಕೊಳ್ಳಿ. ಎಣ್ಣೆಯುಕ್ತ ಚರ್ಮ ಹೊಂದಿರುವ ಮಹಿಳೆಯರು ಪೌಡರ್ ಮ್ಯಾಟ್ ಆರಿಸಿಕೊಳ್ಳುವುದು ಉತ್ತಮ. ವಿಶೇಷವಾಗಿ ಮೊಡವೆ-ಪೀಡಿತ ಚರ್ಮ ಹೊಂದಿರುವವರಿಗೆ. ಸ್ಯಾಲಿಸಿಲಿಕ್ ಆಮ್ಲ ಮತ್ತು ಚಹಾ ಮರದ ಎಣ್ಣೆಯಂತಹ ಪದಾರ್ಥಗಳನ್ನು ಬಳಸಿ. ವಯಸ್ಸಾದ ಚರ್ಮಕ್ಕಾಗಿ, ವಿಟಮಿನ್ ಇ ಮುಖ್ಯವಾಗುತ್ತದೆ.

ಕಲರ್ ಕನ್ಸಿಲರ್

ಕಲರ್ ಕನ್ಸಿಲರ್ ಗಳನ್ನು ಆಯ್ಕೆ ಮಾಡುವಾಗ ಅದು ಚರ್ಮದ ಟೋನ್​ಗೆ ಸರಿ ಹೊಂದುವಂತೆ ಆಯ್ಕೆ ಮಾಡುವುದು ಮುಖ್ಯವಾಗುತ್ತದೆ. ಫೌಂಡೇಶನ್ ಹಾಗೆಯೇ ಇದು ಕೂಡ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಆ ಬೇಸ್ ಅನ್ನು ಹಾಕುವಾಗ ಮೇಕಪ್ ಪರಿಕರಗಳು ಮತ್ತು ತಂತ್ರಗಳು ಎರಡೂ  ಬಹಳ ಮುಖ್ಯವಾಗುತ್ತದೆ.

ಬ್ರಷ್​ಗಳು

ದಪ್ಪವಾದ ಬ್ರಷ್  ಬೆಸ್ ಹಾಕಲು ಸೂಕ್ತ. ಇವುಗಳನ್ನು ಬಳಸುವಾಗ, ನಿಮ್ಮ ದಪ್ಪ ಪದರದಲ್ಲಿ ಸಮವಾಗಿ ಹರಡಿ. ಬ್ರಷ್ ಅನ್ನು ಐಸ್  ನೀರಿನಲ್ಲಿ  2 ನಿಮಿಷಗಳ ಕಾಲ ನೆನಸಿಡಿ. ಯಾವಾಗಲೂ ಬ್ರಷ್ ಬಳಸುವಾಗ ವೃತ್ತಾಕಾರದಲ್ಲಿ ಹಚ್ಚಬೇಕು.

ಇದನ್ನೂ ಓದಿ: ಅನ್ನ ತಿಂದರೆ ನಿದ್ರೆ ಬರುತ್ತದೆಯೇ? ಈ ಲೇಖನ ಓದಿದರೆ ಸಿಗುತ್ತದೆ ಸಮಸ್ಯೆಗೆ ಪರಿಹಾರ

ಸ್ಪಾಂಜುಗಳು

ಬ್ಯೂಟಿ ಬ್ಲೆಂಡರ್‌ಗಳು ಅಥವಾ ಮೇಕಪ್ ಸ್ಪಂಜುಗಳು ಬೇಸ್ ಹಾಕಲು ಅತ್ಯುತ್ತಮವಾದ ಆಯ್ಕೆ.  ಹಾಗೆಯೇ ಚರ್ಮದ ಆರೋಗ್ಯದ ದೃಷ್ಟಿಯಿಂದ ಅದನ್ನು ಸ್ವಚ್ಚ ಮಾಡುವುದು ಮುಖ್ಯವಾಗುತ್ತದೆ.

ಸೂಕ್ತವಾದ ತ್ವಚೆ ಉತ್ಪನ್ನಗಳನ್ನು ಬಳಕೆ ಮಾಡಬೇಕು.  ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸಿ ಮತ್ತು ಟೋನ್ ಮಾಡಿ ಮತ್ತು ಜೆಲ್ ಮಾಯಿಶ್ಚರೈಸರ್ ಬದಲಿಗೆ ಹಗುರವಾದ ವಿಟಮಿನ್ ಸಿ ಸೀರಮ್ ಬಳಸಿ. ಎಣ್ಣೆಯುಕ್ತ ಚರ್ಮವು ಕಡಿಮೆ ಪ್ರಮಾಣದ ಉತ್ಪನ್ನದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: