Women’s Health: ನಲವತ್ತು ವರ್ಷಗಳ ನಂತರ ಮಹಿಳೆಯರು ತಮ್ಮ ಆರೋಗ್ಯಕ್ಕಾಗಿ ಯಾವ ವಿಟಮಿನ್ ಸಮೃದ್ಧ ಪದಾರ್ಥ ಸೇವಿಸಬೇಕು?

ವಯಸ್ಸು ಹೆಚ್ಚುತ್ತಾ ಹೋದಂತೆ ಮಹಿಳೆಯರು ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆ ಹಾಗೂ ದೇಹದ ವಿವಿಧ ಭಾಗಗಳಲ್ಲಿ ನೋವಿನ ತೊಂದರೆ ಅನುಭವಿಸುತ್ತಾರೆ. ನಲವತ್ತು ವರ್ಷ ವಯಸ್ಸಿನ ನಂತರ ಮಹಿಳೆಯರು ಯಾವ ಜೀವಸತ್ವ ಮತ್ತು ಪೋಷಕಾಂಶಯುಕ್ತ ಆಹಾರ ಪದಾರ್ಥ ಸೇವನೆ ಮಾಡಬೇಕು ಎಂದು ತಿಳಿಯೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವಯಸ್ಸಾಗುತ್ತಾ (Age) ಹೋದಂತೆ ಅನೇಕ ರೀತಿಯಲ್ಲಿ ದೇಹ (Body) ಮತ್ತು ಆರೋಗ್ಯವನ್ನು (Health) ಕಾಪಾಡಿಕೊಳ್ಳಬೇಕಾಗುತ್ತದೆ. ದೇಹದ ಆರೋಗ್ಯ ವಯಸ್ಸಾದಂತೆ ತುಂಬಾ ಸೂಕ್ಷ್ಮವಾಗುತ್ತಾ ಹೋಗುತ್ತದೆ. ದೇಹಕ್ಕೆ ಹೆಚ್ಚಿನ ಜೀವಸತ್ವಗಳು (Nutrition) ಮತ್ತು ಖನಿಜಗಳು ಬೇಕಾಗುತ್ತವೆ. ಅದರಲ್ಲೂ ಮಹಿಳೆಯರ (Women’s) ದೇಹದಲ್ಲಿ 40 ವರ್ಷಗಳ ನಂತರ ಅನೇಕ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಅಂದ್ರೆ ಮಹಿಳೆಯರ ಆಹಾರ ಮತ್ತು ಪಾನೀಯಗಳ ಬಗ್ಗೆ ಅಜಾಗರೂಕತೆ ವಹಿಸುವುದು. ಮತ್ತು ದೈಹಿಕ ಬದಲಾವಣೆಗಳು ಉಂಟಾಗುವುದು. ಮಕ್ಕಳಾದ ನಂತರ ಮತ್ತು ಹಾರ್ಮೋನುಗಳ ಅನೇಕ ಬದಲಾವಣೆಗಳು, ಮಹಿಳೆಯರು ಬೇಗ ಕಾಯಿಲೆಗೆ ತುತ್ತಾಗುವಂತೆ ಮಾಡುತ್ತದೆ.

    ಮಹಿಳೆಯರ ಆರೋಗ್ಯಕ್ಕೆ ವಿಟಮಿನ್ ತುಂಬಾ ಅತ್ಯಗತ್ಯ

    ನಲವತ್ತು ವರ್ಷ ವಯಸ್ಸಿನ ನಂತರ ಮಹಿಳೆಯರು ಯಾವ ಜೀವಸತ್ವ ಮತ್ತು ಪೋಷಕಾಂಶಯುಕ್ತ ಆಹಾರ ಪದಾರ್ಥ ಸೇವನೆ ಮಾಡಬೇಕು ಎಂದು ನಾವು ಇಲ್ಲಿ ತಿಳಿಯೋಣ.

    ವಿಟಮಿನ್ ಡಿ : ವಯಸ್ಸು ಹೆಚ್ಚುತ್ತಾ ಹೋದಂತೆ ಮಹಿಳೆಯರು ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆ ಹಾಗೂ ದೇಹದ ವಿವಿಧ ಭಾಗಗಳಲ್ಲಿ ನೋವಿನ ತೊಂದರೆ ಅನುಭವಿಸುತ್ತಾರೆ. ಅಂತಹ ಸ್ಥಿತಿಯಲ್ಲಿ, ಮಹಿಳೆಯರು ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧ ಆಗಿರುವ ಆಹಾರ ಪದಾರ್ಥ ಸೇವನೆ ಮಾಡಬೇಕು.

    ಇದನ್ನೂ ಓದಿ: ಈಸ್ಟ್ರೊಜೆನ್ ಹಾರ್ಮೋನ್ ಮಟ್ಟ ಹೆಚ್ಚಾದರೆ ಯಾವ ಸಮಸ್ಯೆ ಉಂಟಾಗುತ್ತದೆ?

    ಇದು ನಿಮಗೆ ಕೀಲು ನೋವು ಮತ್ತು ಬೆನ್ನು ನೋವಿಗೆ ಪರಿಹಾರ ನೀಡುತ್ತದೆ. ಹಾಲು, ಚೀಸ್, ಅಣಬೆ, ಸೋಯಾ, ಬೆಣ್ಣೆ, ಓಟ್ ಮೀಲ್, ಕೊಬ್ಬಿನ ಮೀನು, ಮೊಟ್ಟೆ ಸೇರಿದಂತೆ ಹಲವು ಪ್ರಕಾರದ ಆಹಾರ ಪದಾರ್ಥಗಳನ್ನು ಸೇವನೆ ಮಾಡಿ.

    ವಿಟಮಿನ್ ಸಿ : ಮಹಿಳೆಯರು ಆಹಾರ ಪದಾರ್ಥ ಸೇವನೆ ಮತ್ತು ಕೆಲವು ಹಣ್ಣುಗಳು ಮತ್ತು ತರಕಾರಿ ರಸ ಕುಡಿಯುವ ಬಗ್ಗೆ ಸ್ವಲ್ಪ ಅಸಡ್ಡೆ, ನಿರ್ಲಕ್ಷ್ಯ ತೋರುತ್ತಾರೆ. ಇದರಿಂದಾಗಿ ರೋಗ ನಿರೋಧಕ ಶಕ್ತಿ ದುರ್ಬಲ ಆಗುತ್ತದೆ. 40 ವರ್ಷಗಳ ನಂತರ ಆದಷ್ಟು ಆಹಾರದಲ್ಲಿ ವಿಟಮಿನ್ ಸಿ ಸಮೃದ್ಧ ಆಗಿರುವ ಆಹಾರ ಸೇವನೆ ಮಾಡಬೇಕು. ಇದಕ್ಕಾಗಿ ನಿಂಬೆ, ಕಿತ್ತಳೆ, ಹಸಿರು ತರಕಾರಿ ಮತ್ತು ನೆಲ್ಲಿಕಾಯಿ ಸೇರಿದಂತೆ ಪ್ರಮುಖ ಪದಾರ್ಥ ಸೇವನೆ ಮಾಡಿ.

    ವಿಟಮಿನ್ ಇ : ಹೆಚ್ಚುತ್ತಿರುವ ವಯಸ್ಸಿನ ಅಂಶವು ಕೆಲವೊಮ್ಮೆ ಮಹಿಳೆಯರ ಮುಖದಲ್ಲಿ ಚೆನ್ನಾಗಿ ಕಾಣಿಸುತ್ತದೆ. ಅಂತಹ ಸ್ಥಿತಿಯಲ್ಲಿ, ಮಹಿಳೆಯರು ವಿಟಮಿನ್ ಇ ಸಮೃದ್ಧ ಆಗಿರುವ ಪದಾರ್ಥಗಳನ್ನು ಸೇವನೆ ಮಾಡಬೇಕು. ವಿಟಮಿನ್ ಇ, ನಿಮ್ಮ ಚರ್ಮ, ಕೂದಲು ಮತ್ತು ಉಗುರುಗಳ ಆರೋಗ್ಯ ಕಾಪಾಡುತ್ತದೆ. ಇದು ಸುಕ್ಕು, ಕಲೆ ಸಮಸ್ಯೆ ದೂರ ಆಗುತ್ತದೆ. ವಿಟಮಿನ್ ಇ ಗಾಗಿ, ನೀವು ಬಾದಾಮಿ, ಕಡಲೆಕಾಯಿ, ಬೆಣ್ಣೆ ಮತ್ತು ಪಾಲಕ್ ಸೇವನೆ ಮಾಡಿ.

    ವಿಟಮಿನ್ ಎ : ಮಹಿಳೆಯರು 40 ರಿಂದ 45 ವರ್ಷಗಳಲ್ಲಿ ಋತುಬಂಧ ಹಾಗೂ ಕೊನೆಗೊಳ್ಳುವ ಅವಧಿ ಸಾಕಷ್ಟು ಆರೋಗ್ಯ ಸಮಸ್ಯೆ ತಂದೊಡ್ಡುತ್ತದೆ. ಅಂತಹ ಸ್ಥಿತಿಯಲ್ಲಿ ಹಾರ್ಮೋನುಗಳ ಬದಲಾವಣೆ ಸಹ ಬರುತ್ತವೆ. ಕೆಲವೊಮ್ಮೆ ಇದರ ಪರಿಣಾಮ ನಿಮ್ಮ ಆರೋಗ್ಯದ ಮೇಲೂ ಗೋಚರ ಆಗುತ್ತದೆ.

    ಅಂತಹ ಸಮಯದಲ್ಲಿ, ಮಹಿಳೆಯರು ವಿಟಮಿನ್ ಎ ಸಮೃದ್ಧ ಆಗಿರುವ ಆಹಾರ ಸೇವನೆ ಮಾಡಬೇಕು. ವಿಟಮಿನ್ ಎ ಗಾಗಿ, ನೀವು ಕ್ಯಾರೆಟ್, ಪಪ್ಪಾಯಿ, ಕುಂಬಳಕಾಯಿ ಬೀಜಗಳು ಮತ್ತು ಪಾಲಕ್ ಸೇವನೆ ಮಾಡಬಹುದು.

    ಇದನ್ನೂ ಓದಿ: ಕೂದಲ ಆರೈಕೆಗೆ ಕಡಲೆ ಹಿಟ್ಟಿನ ಹೇರ್ ಮಾಸ್ಕ್; ತಯಾರಿಸೋದು ಹೇಗೆ?

    ವಿಟಮಿನ್ ಬಿ : ಮಹಿಳೆಯರು ವಯಸ್ಸಾಗುತ್ತಾ ಹೋದಂತೆ ವಿಟಮಿನ್ ಬಿ ಸಮೃದ್ಧವಾಗಿರುವ ಆಹಾರ ಸೇವನೆ ಮಾಡಿ. ಇದು ನಿಮ್ಮ ಮಾನಸಿಕ ಆರೋಗ್ಯ ಉತ್ತಮ ಮಾಡುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ವಿಟಮಿನ್ ಬಿ 9 ಬಹಳ ಮುಖ್ಯ. ಇದಕ್ಕಾಗಿ, ನೀವು ಬೀನ್ಸ್, ಧಾನ್ಯಗಳು, ಯೀಸ್ಟ್ ಮುಂತಾದ ಆಹಾರ ಸೇವನೆ ಮಾಡಿ.
    Published by:renukadariyannavar
    First published: