ಎದೆ ಹಾಲಿನ (Breast Feeding) ಕೊರತೆ, ಸ್ತನ್ಯಪಾನ ಮಾಡಿಸಲು ಸಾಧ್ಯವಾಗದೇ ಇರುವ ಸಂದರ್ಭದಲ್ಲಿ ಶಿಶುಗಳಿಗೆ (Baby) ತಾಯಂದಿರು (Mother)ಹಾಲುಣಿಸಲು ಫಾರ್ಮುಲಾ ಹಾಲಿನ (Formula Milk) ಮೊರೆ ಹೋಗುತ್ತಾರೆ. ಫಾರ್ಮುಲಾ ಹಾಲಿನ ಬಗ್ಗೆ ಮುಂಚಿನಿಂದಲೂ ಪರ-ವಿರೋಧದ ಚರ್ಚೆ ಇದ್ದೇ ಇದೆ. ಲ್ಯಾನ್ಸೆಟ್ ವರದಿಯು ಫಾರ್ಮುಲಾ ಹಾಲಿನ ಬಗ್ಗೆ ಇತ್ತೀಚೆಗೆ ವರದಿ ಬಿಡುಗಡೆ ಮಾಡಿದ್ದು, ಫಾರ್ಮುಲಾ ಹಾಲಿನ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಮತ್ತು ಎದೆಹಾಲುಣಿಸುವಿಕೆಯ ಕಾಳಜಿಯನ್ನು ಎತ್ತಿಹಿಡಿದಿದೆ. ಲ್ಯಾನ್ಸೆಟ್ (Lancet) ವರದಿಯು ಫಾರ್ಮುಲಾ ಹಾಲಿನ ಕಂಪನಿಗಳ ಜಾಹೀರಾತುಗಳು ಮತ್ತು ಮಾರುಕಟ್ಟೆ ತಂತ್ರಗಳು ಮಹಿಳೆಯರನ್ನ ಹಾಲುಣಿಸುವ ಆರೋಗ್ಯಕರ (Health) ಮಾರ್ಗದಿಂದ ದೂರ ಸೆಳೆಯುವಂತೆ ಮಾಡುತ್ತಿದೆ ಎಂದು ಹೇಳಿದೆ.
ಎದೆ ಹಾಲುಣಿಸುವಿಕೆಯನ್ನು ರಕ್ಷಿಸಲು ಕರೆ
ಶಿಶುಗಳು ಮತ್ತು ಚಿಕ್ಕ ಮಕ್ಕಳ ಆಹಾರವನ್ನು ಪೂರೈಸುವ ಈ ಕಂಪನಿಗಳು ಪ್ರತಿ ವರ್ಷ ಸುಮಾರು $55 ಶತಕೋಟಿ ಆದಾಯವನ್ನು ಗಳಿಸುತ್ತಿವೆ. ಹಸುವಿನ ಹಾಲನ್ನು ಸಂಸ್ಕರಿಸುವ ಮೂಲಕ ಫಾರ್ಮುಲಾ ಹಾಲನ್ನು ತಯಾರಿಸಲಾಗುತ್ತದೆ. ಆದರೆ ತಜ್ಞರ ಪ್ರಕಾರ ಇದನ್ನು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಬೇಕು. ಹೀಗಾಗಿ ಎದೆ ಹಾಲುಣಿಸುವಿಕೆಯನ್ನು ರಕ್ಷಿಸಲು ಲ್ಯಾನ್ಸೆಟ್ ತುರ್ತು ಕರೆ ನೀಡಿದೆ.
"ಫಾರ್ಮುಲಾ ಹಾಲು ಮಾರ್ಕೆಟಿಂಗ್ ತಂತ್ರಗಳು ನ್ಯಾಯಯುತವಾಗಿಲ್ಲ"
ಫಾರ್ಮುಲಾ ಹಾಲು ಮಾರುಕಟ್ಟೆಯ ತಂತ್ರಗಳು ಕೆಲವು ಶೋಷಣೆಗಳನ್ನು ಒಳಗೊಂಡಿದೆ ಮತ್ತು ನಿಯಂತ್ರಣವನ್ನು ತುರ್ತಾಗಿ ಬಲಪಡಿಸಬೇಕು ಮತ್ತು ಸರಿಯಾಗಿ ಕಾರ್ಯಗತಗೊಳಿಸಬೇಕು ಎಂದು ಲ್ಯಾನ್ಸೆಟ್ ವರದಿಯು ತಿಳಿಸಿದೆ.
ಮಕ್ಕಳ ವೈದ್ಯರು, ಸಾರ್ವಜನಿಕ ಆರೋಗ್ಯ ತಜ್ಞರು, ವಿಜ್ಞಾನಿಗಳು, ಅರ್ಥಶಾಸ್ತ್ರಜ್ಞರು ಮತ್ತು ಶುಶ್ರೂಷಕಿಯರು ಸೇರಿದಂತೆ 12 ದೇಶಗಳ 25 ತಜ್ಞರ ವರದಿಗಳು, ವಾಣಿಜ್ಯ ಹಾಲು ಸೂತ್ರ ಕಂಪನಿಗಳು "ಪೋಷಕರ ಭಾವನೆಗಳನ್ನು ಬಳಸಿಕೊಳ್ಳುತ್ತವೆ ಮತ್ತು ಆರೋಗ್ಯ ಮತ್ತು ಹಕ್ಕುಗಳ ವೆಚ್ಚದಲ್ಲಿ ಮಾರಾಟವನ್ನು ಸೃಷ್ಟಿಸಲು ವೈಜ್ಞಾನಿಕ ಮಾಹಿತಿಯನ್ನು ಕುಶಲತೆಯಿಂದ ನಿರ್ವಹಿಸುತ್ತವೆ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸ್ತನ್ಯಪಾನದ ಲಾಭದ ಬಗ್ಗೆ ವರದಿ ಹೇಳಿದ್ದೇನು?
ಸ್ತನ್ಯಪಾನವು ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಅಪೌಷ್ಟಿಕತೆ, ಸಾಂಕ್ರಾಮಿಕ ರೋಗಗಳು ಮತ್ತು ಸಾವಿನಿಂದ ಶಿಶುಗಳನ್ನು ರಕ್ಷಿಸುತ್ತದೆ ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಎದೆಹಾಲುಣಿಸುವಿಕೆ, ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್‌ಗಳಿಂದ ತಾಯಂದಿರನ್ನು ರಕ್ಷಿಸಲು ಕೂಡ ಸಹಾಯ ಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಮೊದಲ ಆರು ತಿಂಗಳವರೆಗೆ ಶಿಶುಗಳಿಗೆ ಪ್ರತ್ಯೇಕವಾಗಿ ಹಾಲುಣಿಸಲು ಮತ್ತು ಎರಡು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರೆಗೆ ಸಾಲಿಡ್(ಘನ) ಆಹಾರದ ಜೊತೆಗೆ ಎದೆ ಹಾಲನ್ನು ನೀಡುವಂತೆ ಶಿಫಾರಸ್ಸು ಮಾಡುತ್ತದೆ.
ಸ್ತನ್ಯಪಾನ ಹಲವು ಪ್ರಯೋಜನಗಳನ್ನು ಹೊಂದಿದ್ದು, ಪ್ರಸ್ತುತ ಲ್ಯಾನ್ಸೆಟ್ ವರದಿಯು ಫಾರ್ಮುಲಾ ಹಾಲಿನ ಪೂರೈಕೆಯ ಕೆಲವು ಅಪಾಯಗಳನ್ನು ಸಹ ಸೂಚಿಸುತ್ತಿದೆ, ಫಾರ್ಮುಲಾ ಹಾಲಿನ ಉದ್ಯಮವು ಕಡಿಮೆ ಪೋಷಕ ಪುರಾವೆಗಳೊಂದಿಗೆ ತಮ್ಮ ಉತ್ಪನ್ನಗಳು ಸಾಮಾನ್ಯ ಶಿಶು ಆರೋಗ್ಯ ಮತ್ತು ಬೆಳವಣಿಗೆಯ ಸವಾಲುಗಳಿಗೆ ಪರಿಹಾರವಾಗಿದೆ ಎಂದು ಸೂಚಿಸಲು ಕಳಪೆ ವಿಜ್ಞಾನವನ್ನು ಬಳಸುತ್ತದೆ ಎಂದು ಹೇಳಿದೆ.
ಫಾರ್ಮುಲಾ ಹಾಲಿನ ಪ್ರಯೋಜನಗಳು ಬಗ್ಗೆ ಅಪಸ್ವರ
ಕಂಪನಿಗಳ ಜಾಹೀರಾತುಗಳು ಮೆದುಳು, ನ್ಯೂರೋ ಮತ್ತು ಐಕ್ಯೂನಂತಹ ಪದಗಳನ್ನು ಬಳಸುತ್ತವೆ. ಫಾರ್ಮುಲಾ ಹಾಲು ಹೆಚ್ಚಿನ ಪೋಷಕಾಂಶಗಳ ಜೊತೆಗೆ ಮಕ್ಕಳ ಸಂಪೂರ್ಣ ಆರೋಗ್ಯಕ್ಕೆ ಸಹಕಾರಿಯಾಗಿದೆ. ರಾತ್ರಿ ಶಿಶಗಳು ಉತ್ತಮವಾಗಿ ನಿದ್ರೆ ಮಾಡುತ್ತವೆ, ಬುದ್ಧಿವಂತಿಕೆಯನ್ನು ಉತ್ತೇಜಿಸುತ್ತದೆ ಎಂದು ಕಂಪನಿಗಳು ಹೇಳುತ್ತವೆ. ಆದರೆ ಈ ರೀತಿಯಾದ ಯಾವುದೇ ಪ್ರಯೋಜನಗಳು ಸಂಶೋಧನೆಯಲ್ಲಿ ಕಂಡುಬಂದಿಲ್ಲ ಎಂದು ದಕ್ಷಿಣದ ವಿಟ್ಸ್ ವಿಶ್ವವಿದ್ಯಾಲಯದ ಪ್ರೊಫೆಸರ್ ಲಿಂಡಾ ರಿಕ್ಟರ್ ಹೇಳಿದ್ದಾರೆ.
WHO ಶಿಫಾರಸ್ಸುಗಳ ಹೊರತಾಗಿಯೂ ವಿಶ್ವಾದ್ಯಂತ ಕೇವಲ 50% ತಾಯಂದಿರು ಮಾತ್ರ ಶಿಶುಗಳಿಗೆ ಎದೆಹಾಲು ನೀಡುತ್ತಾರೆ, ಇದರ ಪರಿಣಾಮವಾಗಿ ಪ್ರತಿ ವರ್ಷ ಸುಮಾರು US$350 ಶತಕೋಟಿ ಆರ್ಥಿಕ ನಷ್ಟವಾಗುತ್ತದೆ. ಇದಕ್ಕೆ ವಿರುದ್ಧ ಎನ್ನವುಂತೆ ಫಾರ್ಮುಲಾ ಮಿಲ್ಕ್ ಉದ್ಯಮವು ವಾರ್ಷಿಕವಾಗಿ ಬರೋಬ್ಬರಿ ಸುಮಾರು $ 55 ಶತಕೋಟಿ ಆದಾಯವನ್ನು ಗಳಿಸುತ್ತಿದೆ ಎಂದು ಲ್ಯಾನ್ಸೆಟ್‌ವರದಿಯು ತಿಳಿಸಿದೆ.
ಸ್ತನ್ಯಪಾನವು ಸಮಾಜದ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಉಲ್ಲೇಖಿಸಿರುವ ವರದಿಯು ಹೆಚ್ಚು ಪರಿಣಾಮಕಾರಿಯಾದ ಪ್ರಚಾರ, ಬೆಂಬಲ ಮತ್ತು ಸ್ತನ್ಯಪಾನ ರಕ್ಷಣೆಗಾಗಿ ಕರೆ ನೀಡಿದೆ. ಜೊತೆಗೆ ಶೋಷಣೆ ಮುಕ್ತ ಫಾರ್ಮುಲಾ ಹಾಲಿನ ಮಾರಾಟವನ್ನು ಕೊನೆಗೊಳಿಸಲು ಮತ್ತು ರಾಜಕೀಯ ಲಾಬಿಯನ್ನು ನಿಷೇಧಿಸುವ ಅಂತರರಾಷ್ಟ್ರೀಯ ಕಾನೂನು ಒಪ್ಪಂದಕ್ಕೂ ಕರೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ