ನಾವು ಕೆಲವೊಮ್ಮೆ ನಮ್ಮ ಮನೆಯಲ್ಲಿ(Home) ಹೆಂಡತಿಯ(Wife) ಹುಟ್ಟುಹಬ್ಬವನ್ನು ಯಾವುದೋ ಕೆಲಸದ ಒತ್ತಡದಲ್ಲಿ ಮರೆತುಬಿಟ್ಟು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು(Birthday Wishes) ಸಹ ತಿಳಿಸದೆ ಹೋಗಿರುತ್ತೇವೆ. ಆದರೆ ಇದರಿಂದಾಗುವ ಪರಿಣಾಮವೆಂದರೆ, ಅಬ್ಬಬ್ಬಾ ಎಂದರೆ ಹೆಂಡತಿ ಕೋಪಿಸಿಕೊಂಡು ಕೆಲವು ದಿನಗಳು ನಮ್ಮ ಜೊತೆ ಮಾತಾಡದೆ ಇರಬಹುದು. ಆದರೆ ಸ್ವಲ್ಪ ದಿನಗಳ ನಂತರ ಮತ್ತೆ ಎಲ್ಲವೂ ಸಾಮಾನ್ಯವಾಗಿ ಸಂಸಾರದ ಬಂಡಿ ಯಥಾ ಪ್ರಕಾರ ಮುಂದಕ್ಕೆ ಸಾಗುತ್ತದೆ. ಆದರೆ ಇಲ್ಲೊಂದು ಸುಂದರ ದ್ವೀಪವಿದೆ(Island), ಅಲ್ಲಿ ನೀವೇನಾದರೂ ವಾಸಿಸುತ್ತಿದ್ದು, ನಿಮ್ಮ ಹೆಂಡತಿಯ ಜನ್ಮದಿನ ಮರೆತರೆ ನಿಮ್ಮ ಕಥೆ ಮುಗೀತು.
ಸಮೋವಾ ಎಂಬ ಹೆಸರಿನ ಸುಂದರ ದ್ವೀಪವು ನೋಡಲು ಸ್ವರ್ಗದಂತೆ ಸುಂದರವಾಗಿರಬಹುದು, ಆದರೆ ಅಜಾಗರೂಕ ಗಂಡಂದಿರು ಸ್ವಲ್ಪ ಮೈಮರೆತು ತನ್ನ ಮಡದಿಯ ಜನ್ಮದಿನ ಮರೆತರೆ ಅವನಿಗೆ ನರಕದ ಅನುಭವವಾಗುವುದಂತೂ ನಿಜ ಎಂದು ಹೇಳಬಹುದು.
ನೀವು ನಿಮ್ಮ ಮುದ್ದಿನ ಹೆಂಡತಿಯ ಜನ್ಮದಿನ ಮರೆತರೆ, ನಿಮ್ಮನ್ನು ಕಾನೂನು ತೊಂದರೆಗಳಿಗೆ ಸಿಲುಕಿಸಬಹುದು. ನೀವು ಸ್ಥಳೀಯರಲ್ಲದ ಕಾರಣಕ್ಕೆ ಅನೇಕ ಬಾರಿ ನೀವು ಸ್ಥಳೀಯರನ್ನು ಅವರು ಆ ಕಾನೂನನ್ನು ಅನುಸರಿಸಿದ್ದಾರೆಯೇ ಎಂದು ಕೇಳಲು ಬಯಸಬಹುದು. ಆದರೆ ಹೆಂಡತಿಯ ಜನ್ಮದಿನ ಮರೆತರೆ ಪೆಸಿಫಿಕ್ ಸಾಗರದ ಪಾಲಿನೇಷಿಯನ್ ಪ್ರದೇಶದ ಸಮೋವಾದಲ್ಲಿ ಸ್ಥಳೀಯರು ಕಾನೂನು ತೊಂದರೆಗೆ ಸಿಲುಕುವುದು ನಿಜವಂತೆ.
ಇದನ್ನೂ ಓದಿ: ಮಹಿಳೆಯಿಂದ ಕಲ್ಲಂಗಡಿಯನ್ನು ಕದ್ದು ತಿಂದ ಆನೆ-ವೈರಲ್ ಆಯ್ತು ಮುದ್ದಾದ ವಿಡಿಯೋ
ಈ ಹುಟ್ಟುಹಬ್ಬಗಳು ವಿಶೇಷವಾಗಿವೆ ಮತ್ತು ನಾವು ವ್ಯಕ್ತಿಯನ್ನು ವಿಶೇಷವೆಂದು ಭಾವಿಸಬೇಕು ಎಂಬುದರಲ್ಲಿ ಏನು ತಪ್ಪಿಲ್ಲ. ಆದರೆ ಸಮೋವಾದಲ್ಲಿ ಹೆಂಡತಿಯ ಜನ್ಮದಿನವನ್ನು ಪತಿರಾಯ ಮರೆತರೆ ಅದು ಕಾನೂನಿನ ಪ್ರಕಾರ ಅಪರಾಧ ಎಂಬ ಅಂಶವು
ಸ್ವಲ್ಪ ಹೆಚ್ಚು ಅಂತ ನಮಗೆಲ್ಲಾ ಅನ್ನಿಸಬಹುದು ಅಲ್ಲವೇ?
ಆದರೆ, ಸಮೋವಾದಲ್ಲಿ, ಪತಿ ಯಾವುದೋ ಕಾರಣಕ್ಕೆ ತನ್ನ ಹೆಂಡತಿಯ ಜನ್ಮದಿನ ಮರೆತರೆ, ಅವನು ಶಿಕ್ಷೆಯಾಗಿ ಜೈಲು ವಾಸವನ್ನೂ ಎದುರಿಸಬೇಕಾಗಬಹುದು.
ಸಮೋವಾದ ಕಾನೂನಿನ ಪ್ರಕಾರ, ಒಬ್ಬ ಪತಿ ತನ್ನ ಹೆಂಡತಿಯ ಜನ್ಮದಿನ ಮರೆತಿದ್ದರೆ, ಅದು ಅಪರಾಧದ ವರ್ಗಕ್ಕೆ ಸೇರುತ್ತದೆ. ಈ ಬಗ್ಗೆ ಪತ್ನಿ ಪೊಲೀಸರಿಗೆ ದೂರು ನೀಡಿದರೆ, ಪತಿ ಲಾಕಪ್ಗೆ ಹೋಗಬೇಕಾಗಬಹುದು. ಈಗ ಅಷ್ಟೊಂದು ಭಯಪಡುವ ಅಗತ್ಯವಿಲ್ಲ, ಏಕೆಂದರೆ ಪತಿ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ಕಾನೂನು ವ್ಯವಸ್ಥೆಗಳನ್ನು ಮಾಡಲಾಗಿದೆ.
ಮೊದಲ ಬಾರಿಗೆ ತನ್ನ ಹೆಂಡತಿಯ ಜನ್ಮದಿನ ಮರೆತ ನಂತರ, ಮುಂದಿನ ಬಾರಿ ಅದನ್ನು ಪುನರಾವರ್ತಿಸದಂತೆ ಪೊಲೀಸರು ಅವನಿಗೆ ಎಚ್ಚರಿಕೆ ನೀಡುತ್ತಾರೆ. ಗಂಡನ ಅದೃಷ್ಟ ಕೆಟ್ಟರೆ ಮತ್ತೆ ಅದೇ ತಪ್ಪು ಮಾಡಿದರೆ ಅವನಿಗೆ ಶಿಕ್ಷೆಯ ರೂಪದಲ್ಲಿ ಜೈಲಿಗೆ ಹೋಗಬೇಕಾಗಿ ಬರಬಹುದು.
ಪ್ರಪಂಚದಾದ್ಯಂತ ಇರುವ ವಿಚಿತ್ರ ಎನಿಸುವ ಕಾನೂನುಗಳನ್ನು ಒಮ್ಮೆ ನೋಡಿ
ಉತ್ತರ ಕೊರಿಯಾದಲ್ಲಿ, ನೀಲಿ ಜೀನ್ಸ್ನಲ್ಲಿ ನಿಮ್ಮ ಮನೆಯಿಂದ ಹೊರ ಬರುವುದು ಕಾನೂನು ಬಾಹಿರ ಎಂದು ಪರಿಗಣಿಸಲಾಗುವುದು. ನೀವು ಪೂರ್ವ ಆಫ್ರಿಕಾದಲ್ಲಿ ಜಾಗಿಂಗ್ಗೆ ಹೋಗಲು ಸಾಧ್ಯವಿಲ್ಲ,
ಇದನ್ನೂ ಓದಿ: ಉದ್ಯೋಗಿಯ ಮಗಳ ಜೀವ ಉಳಿಸಲು ಇಂಜೆಕ್ಷನ್ಗೆ 16 ಕೋಟಿ ರೂ. ನೀಡಿದ ಕಂಪನಿ
ಏಕೆಂದರೆ ಅದನ್ನು ದೇಶದಲ್ಲಿ ನಿಷೇಧಿಸಲಾಗಿದೆ.
ಚೂಯಿಂಗ್ ಗಮ್ ಅಗೆಯುವುದನ್ನು ಸಿಂಗಾಪುರದಲ್ಲಿ ನಿಷೇಧಿಸಲಾಗಿದೆ. ಏಕೆಂದರೆ ಅದು ಕೊಳಕನ್ನು ಉಂಟು ಮಾಡುತ್ತದೆ. ಒಕ್ಲಹೋಮಾದಲ್ಲಿ, ನೀವು ನಿಮ್ಮ ನಾಯಿಯ ಮೇಲೆ ರೇಗಾಡಿದರೆ ಸಹ ನೀವು ಸೆರೆಮನೆಗೆ ಹೋಗಬೇಕಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ