HOME » NEWS » Lifestyle » FORGETTING MORE THINGS THAN BEFORE YOUR SLEEP SCHEDULE MAY BE TO BLAME STG LG

ಹಳೆಯದನ್ನು ಹೆಚ್ಚು ಮರೆಯುತ್ತಿದ್ದೀರಾ; ನಿದ್ರಾ ಸಮಸ್ಯೆ ನಿಮ್ಮನ್ನು ಕಾಡುತ್ತಿರಬಹುದು!

ಸಂಶೋಧನೆಯಲ್ಲಿ ಭಾಗವಹಿಸಿದ ಜನರಲ್ಲಿ ನಿದ್ರಾಹೀನತೆ ಸಮಸ್ಯೆ ಹೊಂದಿದವರು ಯೋಚಿಸುವ ಶಕ್ತಿ ಮತ್ತು ಜ್ಞಾಪಕ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಇವರು ಅತಿ ಕಡಿಮೆ ನಿದ್ರೆ ಮಾಡುತ್ತಿರುವುದರಿಂದ ಈ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

news18-kannada
Updated:March 2, 2021, 3:47 PM IST
ಹಳೆಯದನ್ನು ಹೆಚ್ಚು ಮರೆಯುತ್ತಿದ್ದೀರಾ; ನಿದ್ರಾ ಸಮಸ್ಯೆ ನಿಮ್ಮನ್ನು ಕಾಡುತ್ತಿರಬಹುದು!
ಸಾಂದರ್ಭಿಕ ಚಿತ್ರ
  • Share this:
ಚಿಂತೆ ಇಲ್ಲದವರಿಗೆ ಸಂತೆಯಲ್ಲೂ ನಿದ್ರೆ ಬರುತ್ತದೆ ಎಂದು ಗಾದೆ ಮಾತಿದೆ. ಇನ್ನು, ನಿದ್ರೆ ಕೂಡ ಉತ್ತಮ ಆರೋಗ್ಯದ ಒಂದು ಭಾಗ. ನಮ್ಮ ಆರೋಗ್ಯ ಮತ್ತು ವಿವೇಚನಾ ಶಕ್ತಿ ಉತ್ತಮವಾಗಿರಲು ಉತ್ತಮ ನಿದ್ರೆ ಅವಶ್ಯಕವಾಗಿರುತ್ತದೆ. ಇನ್ನು, ಇತ್ತೀಚಿನ ಅಧ್ಯಯನವೊಂದು ನಿದ್ರೆ ಸಮಸ್ಯೆ ಎದುರಿಸುತ್ತಿರುವವರ ಬಗ್ಗೆ ಸಂಶೋಧನೆ ಮಾಡಿ ಹಲವು ವಿಷಯಗಳಿಗೆ ಪರಿಹಾರವನ್ನು ಕಂಡುಕೊಂಡಿದೆ. ನೀವು ಈ ಹಿಂದೆ ಕಳೆದ ಹೆಚ್ಚಿನ ವಿಷಯಗಳನ್ನು ಮರೆತಿದ್ದೀರಾ ಎಂದರೆ ನಿಮ್ಮ ನಿದ್ರೆಯ ವೇಳಾಪಟ್ಟಿಯನ್ನು ದೂಷಿಸಬಹುದು ಎಂದು ಹೊಸ ಅಧ್ಯಯನವೊಂದು ಹೇಳುತ್ತದೆ.

ಉತ್ತಮ ನಿದ್ರೆ ಮೆದುಳಿಗೆ ಹಲವು ಪ್ರಯೋಜನವನ್ನು ನೀಡುತ್ತದೆ. ನಿಮ್ಮ ಜ್ಞಾಪಕ ಶಕ್ತಿಯನ್ನು ಕೂಡ ಸುಧಾರಿಸುವ ಶಕ್ತಿ ನಿದ್ರೆಗೆ ಇದೆ. ಸಂಶೋಧನೆಯಲ್ಲಿ ಭಾಗವಹಿಸಿದ ಅರ್ಧದಷ್ಟು ಜನರಲ್ಲಿ ಜ್ಞಾಪಕ ಶಕ್ತಿ ಕೊರತೆ ಹೊಂದಿದ್ದು, ಇವರೆಲ್ಲರೂ ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಸಮಸ್ಯೆ (ಗೊರಕೆ ಹೊಡೆಯುವುದು) ಎದುರಿಸುತ್ತಿದ್ದಾರೆ ಎಂದು ಕೆನಡಾದ ಟೊರೊಂಟೊ ವಿಶ್ವವಿದ್ಯಾಲಯದ ಅಧ್ಯಯನಕಾರ ಮಾರ್ಕ್ ಬೌಲೋಸ್ ಹೇಳಿದ್ದಾರೆ.

ಲಕ್ಷ ಲಕ್ಷ ಬಿಲ್ ಮಾಡಿಕೊಂಡು ನಿರ್ಮಿಸಿದ ಸೇತುವೆ ಮೂರೇ ತಿಂಗಳಲ್ಲಿ ಬೀಳುವ ಹಂತಕ್ಕೆ..!

ನಿದ್ರಾಹೀನತೆ ಸಮಸ್ಯೆಯಿಂದ ಜ್ಞಾಪಕಶಕ್ತಿ ಕೊರತೆ

ಸಂಶೋಧನೆಯಲ್ಲಿ ಭಾಗವಹಿಸಿದ ಜನರಲ್ಲಿ ನಿದ್ರಾಹೀನತೆ ಸಮಸ್ಯೆ ಹೊಂದಿದವರು ಯೋಚಿಸುವ ಶಕ್ತಿ ಮತ್ತು ಜ್ಞಾಪಕ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಇವರು ಅತಿ ಕಡಿಮೆ ನಿದ್ರೆ ಮಾಡುವುತ್ತಿರುವುದರಿಂದ ಈ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಸಂಶೋಧನಾ ಅಧ್ಯಯನಕ್ಕಾಗಿ ಜ್ಞಾಪಕ ಶಕ್ತಿ ಕೊರತೆ ಸಮಸ್ಯೆ ಹೊಂದಿರುವ ಸುಮಾರು 73 ವರ್ಷ ಆಸುಪಾಸಿನ 67 ಜನರು ಭಾಗವಹಿಸಿದ್ದರು. ಇವರಿಗೆ ಸಂಶೋಧನಾಕಾರರು ನಿದ್ರೆ, ಜ್ಞಾಪಕ ಶಕ್ತಿ, ಮನಸ್ಥಿತಿ ಕುರಿತಾಗಿ ಪ್ರಶ್ನಾವಳಿಗಳನ್ನು ಕೇಳಿದ್ದರು. ಸಂಶೋಧನೆಯಲ್ಲಿ ಭಾಗವಹಿಸಿದವರ ಜ್ಞಾಪಕ ಶಕ್ತಿ ಕೊರತೆಯನ್ನು ತಿಳಿದುಕೊಳ್ಳಲು 30 ಅಂಶಗಳ ಮೌಲ್ಯಮಾಪನವನ್ನು ಸಹ ಮಾಡಲಾಗಿತ್ತು. ಸಂಶೋಧನೆ ನಡೆಸಿದ ಬಳಿಕ ಶೇ.52ರಷ್ಟು ಜನರು ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
Youtube Video
ಸಕರಾತ್ಮಕವಾಗಿ ಯೋಚನೆಯಿಂದ ಹೆಚ್ಚು ಪ್ರಯೋಜನ

ನಿದ್ರಾಹೀನತೆ ಸಮಸ್ಯೆ ಹೊಂದಿದವರು ಹೆಚ್ಚು ಯೋಚನೆ ಮಾಡುವುದರಿಂದಾಗಿ ಅವರಿಗೆ ರಾತ್ರಿ ವೇಳೆ ಸರಿಯಾಗಿ ನಿದ್ರೆ ಬರುವುದಿಲ್ಲ. ನಕರಾತ್ಮಕವಾಗಿ ಯೋಚನೆ ಮಾಡಿ, ಜೀವನವನ್ನು ಜಿಗುಪ್ಸೆಯಿಂದ ಕಳೆಯುತ್ತಾರೆ. ಈ ಕಾರಣದಿಂದಾಗಿಯೂ ರಾತ್ರಿ ವೇಳೆ ನಿದ್ರೆ ಭಂಗಕ್ಕೆ ಕಾರಣವಾಗುತ್ತದೆ ಎಂದು ಹಲವು ಸಂಶೋಧನೆಗಳು ಹೇಳಿವೆ. ನಿದ್ರೆ ಸಮಸ್ಯೆ ಹೊಂದಿದವರು ಸಕರಾತ್ಮಕವಾಗಿ ಯೋಚನೆ ಜೊತೆಗೆ ಉತ್ತಮ ಜೀವನಕ್ರಮವನ್ನು ಅಳವಡಿಸಿಕೊಂಡರೆ ನಿದ್ರಾಹೀನತೆ ಸಮಸ್ಯೆಯಿಂದ ಪಾರಾಗಬಹುದು. ನಿಮ್ಮ ಜ್ಞಾಪಕ ಶಕ್ತಿಯನ್ನು ಕೂಡ ವೃದ್ಧಿಸಿಕೊಳ್ಳಬಹುದು ಎಂದು ಹಲವು ಸಂಶೋಧನೆಗಳಿಂದ ಬಹಿರಂಗವಾಗಿದೆ.
Published by: Latha CG
First published: March 2, 2021, 3:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories