ಕಿಂಗ್ ಖಾನ್ ಶಾರುಖ್​ಗೆ ಲೈಫ್ ಕೊಟ್ಟ ಖ್ಯಾತ ನಿರ್ದೇಶಕ ಈಗ 'ಸ್ಟೈಲ್ ಗುರು'

news18
Updated:September 4, 2018, 11:41 AM IST
ಕಿಂಗ್ ಖಾನ್ ಶಾರುಖ್​ಗೆ ಲೈಫ್ ಕೊಟ್ಟ ಖ್ಯಾತ ನಿರ್ದೇಶಕ ಈಗ 'ಸ್ಟೈಲ್ ಗುರು'
news18
Updated: September 4, 2018, 11:41 AM IST
-ನ್ಯೂಸ್ 18 ಕನ್ನಡ

'ಕುಚ್ ಕುಚ್ ಹೋತಾ ಹೈ', 'ಕಭಿ ಖುಷಿ ಕಭಿ ಗಮ್' ಚಿತ್ರಗಳನ್ನು ನೋಡಿದವರಿಗೆ ಕರಣ್ ಜೋಹರ್ ಎಂಬ ನಿರ್ದೇಶಕನ ಕಮಾಲ್ ತಿಳಿದಿರುತ್ತದೆ. ಪ್ರತಿ ಫ್ರೇಮ್​ನಲ್ಲೂ ಹೀರೊ ಅಥವಾ ಹೀರೋಯಿನ್​ನ್ನು ಸುರ ಸುಂದರವಾಗಿ ತೋರಿಸುವಲ್ಲಿ ಕರಣ್ ಒಂದು ಹೆಜ್ಜೆ ಮುಂದೆ ಎನ್ನಬಹುದು. ಸಾಮಾನ್ಯವಾಗಿ ಯಶಸ್ವಿ ನಿರ್ದೇಶಕರು ತಮ್ಮ ಚಿತ್ರಗಳು ಭರ್ಜರಿ ಹಿಟ್ ಆಗುತ್ತಿದ್ದಂತೆ ಡೈರೆಕ್ಟರ್ ಕ್ಯಾಪ್ ಬದಿಗಿರಿಸಿ ಹೀರೋ ಪಟ್ಟಕ್ಕೇರುವ ಸಾಹಸ ಮಾಡುತ್ತಾರೆ. ಇದು ಎಲ್ಲ ಚಿತ್ರರಂಗದಲ್ಲೂ ನಡೆಯುತ್ತಿರುವ ವಿಷಯ. ಆದರೆ ನಿರ್ದೇಶಕ ಕರಣ್ ಜೋಹರ್ ಮಾತ್ರ ಇವರ ನಡುವೆ ಭಿನ್ನವಾಗಿ ನಿಲ್ಲುತ್ತಾರೆ. ಏಕೆಂದರೆ ಕಳೆದ ಕೆಲ ವರ್ಷಗಳಿಂದ ಚಿತ್ರಗಳ ನಿರ್ಮಾಣದತ್ತ ಚಿತ್ತವನ್ನು ಕೇಂದ್ರೀಕರಿಸಿದ್ದ ಕರಣ್ ಈಗ ಏಕಧಂ ಸ್ಟೈಲ್ ಗುರು ರೂಪದಲ್ಲಿ ಪ್ರತ್ಯಕ್ಷರಾಗಿದ್ದಾರೆ.

ಬಾಲಿವುಡ್​ನಲ್ಲಿ ಚಿತ್ರಗಳ ಮೂಲಕ ಚಮತ್ಕಾರ ತೋರಿಸುವ ಕರಣ್ ಜೋಹರ್ ನಿಜ ಜೀವನದಲ್ಲಿ ಮಾತ್ರ ಅತ್ಯುತ್ತಮ ಹಾಸ್ಯಪ್ರಿಯ ಹಾಗೂ ವಿವಾದಾತ್ಮಕ ವ್ಯಕ್ತಿ. ಅಂತಹ ಕರಣ್ ಇದೀಗ ಮ್ಯಾನ್ಸ್ ವರ್ಲ್ಡ್​ ಮ್ಯಾಗಜಿನ್​ನ ಮುಖ ಪುಟದಲ್ಲಿ ಕಾಣಿಸಿಕೊಂಡು ಎಲ್ಲರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆ್ಯಕ್ಷನ್ ಕಟ್ ಹೇಳುತ್ತಿದ್ದ ಪ್ರತಿಭಾವನ್ವಿತ ನಿರ್ದೇಶಕ ಮ್ಯಾಗಜಿನ್​ಗಾಗಿ ಉದ್ದನೆಯ ಜಾಕೆಟ್ ಧರಿಸಿ ಸಖತ್ ಪೋಸ್ ನೀಡಿದ್ದಾರೆ.
A post shared by Karan Johar (@karanjohar) on


Loading...
ಗ್ರಾಫಿಕ್ ಟಿ-ಶರ್ಟ್ ಮತ್ತು ಲಾಂಗ್ ಜಾಕೆಟ್​ನಲ್ಲಿ ಮ್ಯಾಗಜಿನ್ ಮುಖಪುಟದಲ್ಲಿ ಕಾಣಿಸಿರುವ ಕರಣ್  ತಮ್ಮ ಕೇಶ ವಿನ್ಯಾಸವನ್ನು ಹಳೆಯ ಸ್ಟೈಲ್​ನಲ್ಲಿ ಉಳಿಸಿಕೊಂಡಿದ್ದಾರೆ. ರಿಗ್ಡ್ ಪ್ಯಾಂಟ್​ಗೆ ಕಪ್ಪು ಬಣ್ಣದ ಲೆದರ್ ಶೂ ಹಾಕಿರುವ ಕರಣ್ ಜೋಹರ್ ನೋಟವು ಎಲ್ಲರ ಕಣ್ಣು ಕುಕ್ಕುವಂತಿದೆ. ಫ್ಯಾಷನ್ ಮ್ಯಾಗಜಿನ್​ನಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರೂ ಈ ಹಿಂದೆ 'ಬಾಂಬೆ ವೆಲ್ವೆಟ್' ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ್ದರು. ಸದಾ ಹಸನ್ಮುಖಿಯಾಗಿರುವ ಕರಣ್ ಖಳ ನಾಯಕರಾಗುತ್ತಿದ್ದಂತೆ ಟ್ರೋಲ್​ ಪೇಜ್​ಗಳಿಗೆ ಆಹಾರವಾಗಿದ್ದರು. ತಮ್ಮ ಲೈಂಗಿಕ ಜೀವನದಿಂದ ಸದಾ ಹಾಸ್ಯಕ್ಕೀಡಾಗುವ ಕರಣ್ ಜೋಹರ್ ತೃತೀಯ ಲಿಂಗಿ ಎಂಬ ಮಾತುಗಳು ಬಾಲಿವುಡ್​ನಿಂದ ಆಗಾಗ್ಗೆ ಕೇಳಿ ಬರುತ್ತಿರುತ್ತದೆ. ಬಾಲಿವುಡ್​ ಕಿಂಗ್​ ಖಾನ್​ ಶಾರುಖ್​ರನ್ನು ಸೂಪರ್ ಸ್ಟಾರ್ ಮಾಡುವಲ್ಲಿ ಕರಣ್ ಪಾತ್ರ ಬಲು ದೊಡ್ಡದಿದೆ.​ಯಶಸ್ವಿ ಸಿನಿಮಾಗಳ ನಿರ್ದೇಶಕ, ಸೂಪರ್ ಡೂಪರ್ ಹಿಟ್ ಚಿತ್ರಗಳ ನಿರ್ಮಾಪಕರೆಂದೇ ಖ್ಯಾತಿ ಪಡೆದಿರುವ ಕರಣ್ ಜೋಹರ್ ಈಗ ಫ್ಯಾಷನ್ ಲೋಕದಲ್ಲಿ ಹೆಜ್ಜೆಯಿಟ್ಟಿದ್ದಾರೆ. ಮೊದಲ ಮ್ಯಾಗಜಿನ್​ನಲ್ಲೇ ಸ್ಟೈಲ್ ಗುರು ಎಂಬ ಪಟ್ಟವನ್ನು ತಮ್ಮದಾಗಿಸಿಕೊಂಡಿರುವುದು ನೋಡಿದರೆ ಮುಂದಿನ ದಿನಗಳಲ್ಲಿ ಕರಣ್ ಇಲ್ಲೂ ತಮ್ಮ ಕಮಾಲ್ ತೋರಿಸಲಿದ್ದಾರೆ ಎನ್ನಬಹುದು.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ