• Home
  • »
  • News
  • »
  • lifestyle
  • »
  • Weight Loss: ತೂಕ ಇಳಿಕೆಯ ಜರ್ನಿಯಲ್ಲಿ ಈ ಪಾನೀಯ ಸೇರಿಸಿ ಹೊಟ್ಟೆ ಕೊಬ್ಬನ್ನು ವೇಗವಾಗಿ ಕರಗಿಸಿ!

Weight Loss: ತೂಕ ಇಳಿಕೆಯ ಜರ್ನಿಯಲ್ಲಿ ಈ ಪಾನೀಯ ಸೇರಿಸಿ ಹೊಟ್ಟೆ ಕೊಬ್ಬನ್ನು ವೇಗವಾಗಿ ಕರಗಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಯಾಪಚಯ ಕ್ರಿಯೆ ಸರಿಯಾಗಿ ಕೆಲಸ ಮಾಡದಿದ್ದರೆ ಇದು ಬೊಜ್ಜು ಹೆಚ್ಚಾಗುತ್ತದೆ. ತೂಕ ಕಳೆದುಕೊಳ್ಳಲು ಯಾವುದೇ ವಿಧಾನವನ್ನು ಪ್ರಯತ್ನಿಸುವ ಮೊದಲು ನೀವು ನಿಮ್ಮ ಚಯಾಪಚಯ ಕ್ರಿಯೆ ಸುಧಾರಿಸಲು ಪ್ರಯತ್ನ ಮಾಡಬೇಕು. ಹೆಚ್ಚುವರಿ ದೇಹದ ಕೊಬ್ಬನ್ನು ತೊಡೆದು ಹಾಕಲು ಕೆಲವು ರೀತಿಯ ಪಾನೀಯಗಳ ಸೇವನೆ ಮಾಡಬಹುದು.

ಮುಂದೆ ಓದಿ ...
  • Share this:

    ದಿನವೂ ನೀವು ಆಲಸ್ಯ ಮತ್ತು ಆಯಾಸ (Lethargy And Fatigue) ಅನುಭವಿಸುತ್ತಿದ್ದೀರಾ? ಜೊತೆಗೆ ನಿಮ್ಮ ತೂಕ ಹೆಚ್ಚಾಗುತ್ತಲೇ (Weight Gain) ಇದೆಯೇ? ಹಾಗಾದ್ರೆ ಅದಕ್ಕೆ ಮುಖ್ಯ ಕಾರಣ ನಿಮ್ಮ ಜೀರ್ಣಕ್ರಿಯೆ (Digestion) ಸರಿಯಾಗಿ ಕೆಲಸ (Work) ಮಾಡದೇ ಇರುವುದು. ನಿಮ್ಮ ಚಯಾಪಚಯ ಕ್ರಿಯೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಇದರರ್ಥ. ಚಯಾಪಚಯವು ದೇಹದೊಳಗೆ ಸಂಭವಿಸುವ ರಾಸಾಯನಿಕ ಪ್ರಕ್ರಿಯೆ ಆಗಿದೆ. ಸರಳ ಭಾಷೆಯಲ್ಲಿ ಹೇಳುವುದಾದರೆ ನಿಮ್ಮ ದೇಹದಲ್ಲಿ ಆಹಾರ ಶಕ್ತಿಯಾಗಿ ಪರಿವರ್ತಿಸುವುದನ್ನು ಚಯಾಪಚಯ ಎಂದು ಕರೆಯುತ್ತಾರೆ. ನಿಸ್ಸಂಶಯವಾಗಿ ಚಯಾಪಚಯ ನಿಧಾನವಾಗುತ್ತದೆ. ಹೀಗಾಗಿ ನಿಮ್ಮ ದೇಹದಲ್ಲಿನ ಆಹಾರವು ಸರಿಯಾಗಿ ಜೀರ್ಣ ಆಗುವುದಿಲ್ಲ. ಇದು ದೇಹದಲ್ಲಿ ವಿಷ ಮತ್ತು ಕೊಬ್ಬು ಸಂಗ್ರಹಗೊಳ್ಳಲು ಕಾರಣವಾಗುತ್ತದೆ.


    ತೂಕ ನಷ್ಟ ಪರಿಹಾರಗಳು ಏನು?


    ಚಯಾಪಚಯ ಕ್ರಿಯೆ ಸರಿಯಾಗಿ ಕೆಲಸ ಮಾಡದಿದ್ದರೆ ಇದು ಬೊಜ್ಜು ಹೆಚ್ಚಾಗಲು ಮುಖ್ಯ ಕಾರಣ ಆಗಿದೆ. ತೂಕ ಕಳೆದುಕೊಳ್ಳಲು ಯಾವುದೇ ವಿಧಾನವನ್ನು ಪ್ರಯತ್ನಿಸುವ ಮೊದಲು ನೀವು ನಿಮ್ಮ ಚಯಾಪಚಯ ಕ್ರಿಯೆ ಸುಧಾರಿಸಲು ಪ್ರಯತ್ನ ಮಾಡಬೇಕು.


    ಚಯಾಪಚಯ ಹೆಚ್ಚಿಸುವ ಮೂಲಕ ತೂಕ ಕಡಿಮೆ ಮಾಡಲು ಮತ್ತು ಹೆಚ್ಚುವರಿ ದೇಹದ ಕೊಬ್ಬನ್ನು ತೊಡೆದು ಹಾಕಲು ಕೆಲವು ರೀತಿಯ ಪಾನೀಯಗಳ ಸೇವನೆ ಮಾಡಬಹುದು. ಇದು ಹೆಚ್ಚುವರಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮನ್ನು ಶಕ್ತಿ ಹೆಚ್ಚಿಸುತ್ತದೆ.


    ಇದನ್ನೂ ಓದಿ: ನವರಾತ್ರಿಯ ಒಂಬತ್ತು ದಿನಗಳ ಉಪವಾಸದಲ್ಲಿ ಕೆಲವು ನೈಸರ್ಗಿಕ ಪಾನೀಯ ಸೇವನೆ ಆರೋಗ್ಯಕ್ಕೆ ಲಾಭಕಾರಿ!


    ಆಪಲ್ ಸೈಡರ್ ವಿನೆಗರ್


    ಎರಡರಿಂದ ಮೂರು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಒಂದು ಲೋಟ ನೀರಿಗೆ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದನ್ನು ಬೆಳಗ್ಗೆ ಸೇವನೆ ಮಾಡಬೇಕು. NCBI ಯ ವರದಿ ಪ್ರಕಾರ ಆಪಲ್ ಸೈಡರ್ ವಿನೆಗರ್ ಕರುಳನ್ನು ಸ್ವಚ್ಛಗೊಳಿಸಲು ನಿಮಗೆ ಸಹಾಯ ಮಾಡುತ್ತದೆ. ಇದು ನಿಮ್ಮ pH ಮಟ್ಟ ಮತ್ತು ನಿಮ್ಮ ಹೊಟ್ಟೆಯ ಆಮ್ಲ ಸ್ಥಿತಿ ಸುಧಾರಿಸುತ್ತದೆ. ಚಯಾಪಚಯ ಹೆಚ್ಚಿಸುತ್ತದೆ. ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ.


    ಕಪ್ಪು ಕಾಫಿ


    ಕಪ್ಪು ಕಾಫಿ ಶಕ್ತಿಯ ಉತ್ತಮ ಮೂಲ. ಬ್ಲ್ಯಾಕ್ ಕಾಫಿಯನ್ನು ವ್ಯಾಯಾಮಾದ ಮೊದಲು ಪಾನೀಯವಾಗಿ ಸೇವಿಸಲಾಗುತ್ತದೆ. ಮಧ್ಯಂತರ ಉಪವಾಸದ ವೇಳೆ ಕೀಟೋ ಆಹಾರದ ಸಮಯದಲ್ಲಿ ಇದನ್ನು ಸೇವಿಸುವಂತೆ ಹೇಳಲಾಗುತ್ತದೆ. ದೇಹದಲ್ಲಿ ಅನಿಲವು ರೂಪುಗೊಳ್ಳಬಾರದೆಂದರೆ ವ್ಯಾಯಾಮದ ಮೊದಲು ನೀವು ಕಪ್ಪು ಕಾಫಿ ಸೇವಿಸಬಹುದು.


    ಕ್ರೀಡಾ ಪೌಷ್ಟಿಕತಜ್ಞ ಮತ್ತು ಪ್ರಸಿದ್ಧ ಫಿಟ್ನೆಸ್ ತರಬೇತುದಾರ ಬ್ರಿಯಾನ್ ಡಿಸೋಜಾ ಅವರು ಹೇಳುವ ಪ್ರಕಾರ ಕಪ್ಪು ಕಾಫಿ, ಹೆಚ್ಚಿನ ಕ್ಯಾಲೊರಿ ಬರ್ನ್ ಮಾಡುತ್ತದೆ ಮತ್ತು ತೂಕ ನಷ್ಟಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ.


    ಹಸಿರು ಚಹಾ


    ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ವರದಿ ಪ್ರಕಾರ, ಹಸಿರು ಚಹಾ ಚಯಾಪಚಯ ಹೆಚ್ಚಿಸಲು ಮಾತ್ರ ಕೆಲಸ ಮಾಡುತ್ತದೆ. ಆಹಾರ ಸೇವನೆ ಬೇಗ ಜೀರ್ಣವಾಗುತ್ತದೆ. ಹಸಿರು ಚಹಾವನ್ನು ಊಟದ ನಂತರ ಸೇವಿಸಿ. ಆಹಾರ ತಜ್ಞರು, ರಾತ್ರಿ ಊಟಕ್ಕೆ ಪರ್ಯಾಯವಾಗಿ ಗ್ರೀನ್ ಟೀ ಕುಡಿಯುವ ಸಲಹೆ ನೀಡಬಹುದು.


    ಕಿತ್ತಳೆ ಹಣ್ಣಿನ ರಸ


    ಬೆಳಿಗ್ಗೆ ಎದ್ದ ನಂತರ ನೀವು ಕಿತ್ತಳೆ ಹಣ್ಣಿನ ರಸ ಕುಡಿಯಬಹುದು. ಕಿತ್ತಳೆ ಅಥವಾ ಮೋಸಂಬಿ ರಸವನ್ನು ಸೇವಿಸಬಹುದು. ಈ ರಸಗಳಲ್ಲಿ ಹೆಚ್ಚಿನ ಆಮ್ಲ ಅಂಶವಿದೆ. ಇದು ನಿಮ್ಮ ಚಯಾಪಚಯ ಹೆಚ್ಚಿಸಲು ಕೆಲಸ ಮಾಡುತ್ತದೆ. ನೇರವಾಗಿ ತೂಕ ಕಡಿಮೆ ಮಾಡುವುದಿಲ್ಲ. ಆದರೆ ನೀವು ಉತ್ತಮ ಜೀವಸತ್ವಗಳು ಮತ್ತು ಖನಿಜಗಳನ್ನು ಪಡೆಯಬಹುದು. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ.


    ಇದನ್ನೂ ಓದಿ: ಮುಟ್ಟಿನ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಇದ್ರೆ; ಈ ಪರಿಹಾರ ಬಳಸಿ


    ಸಾಕಷ್ಟು ನೀರು ಕುಡಿಯುವುದು


    ಸರಳ ನೀರಿನಲ್ಲಿ ಸಾಕಷ್ಟು ಶಕ್ತಿ ಇದೆ. ನೀರಿನ ಸೇವನೆಯು ಸ್ನಾಯುವಿನ ದ್ರವ್ಯರಾಶಿ ಕಾಪಾಡುತ್ತದೆ. ಇದು ನಿದ್ದೆ ಮಾಡುವಾಗಲೂ ಕ್ಯಾಲೊರಿ ಸುಡಲು ಸಹಾಯ ಮಾಡುತ್ತದೆ. ಆಹಾರದ ಪ್ರಮುಖ ಭಾಗ ನೀರು.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು