• Home
  • »
  • News
  • »
  • lifestyle
  • »
  • Yoga Practice: ಯೋಗಾಭ್ಯಾಸಕ್ಕೆ ಹೊರಾಂಗಣ ಅಥವಾ ಒಳಾಂಗಣ ಯಾವ ವಿಧಾನ ಉತ್ತಮ?

Yoga Practice: ಯೋಗಾಭ್ಯಾಸಕ್ಕೆ ಹೊರಾಂಗಣ ಅಥವಾ ಒಳಾಂಗಣ ಯಾವ ವಿಧಾನ ಉತ್ತಮ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯೋಗ ಮಾಡುವುದು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ. ಯೋಗವು ಪ್ರತಿಯೊಬ್ಬರ ಜೀವನಕ್ಕೆ ಬಹಳ ಮುಖ್ಯ. ಯಾರು ಯೋಗ ಮಾಡುತ್ತಾರೋ ಅವರು ಆರೋಗ್ಯವಂತರಾಗಿರುತ್ತಾರೆ. ಯೋಗ ಮಾಡುವುದರಿಂದ ಸಾಕಷ್ಟು ಪ್ರಯೋಜನ ಪಡೆಯಬಹುದು.

  • Share this:

    ದಿನವೂ (Daily) ತಡವಾಗಿ ಏಳುವುದು ಸಾಕಷ್ಟು ಆರೋಗ್ಯ ಸಮಸ್ಯೆ (Health Problem) ತಂದೊಡ್ಡುತ್ತದೆ. ಹಾಗಾಗಿ ನಿಮ್ಮ ದಿನವನ್ನು ಬೆಳಗ್ಗೆ (Morning) ಬೇಗ ಏಳುವುದರೊಂದಿಗೆ ಆರಂಭಿಸಿ. ಬೆಳಗ್ಗೆ ನಿಯಮಿತವಾಗಿ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದು, ಯೋಗ (Yoga), ವಾಕಿಂಗ್, ವ್ಯಾಯಾಮ ಮಾಡುವುದು ದೇಹವು (Body) ಕಾಯಿಲೆಗಳಿಂದ (Disease) ದೂರವಿಡಲು ಸಾಕಷ್ಟು ಸಹಾಯ ಮಾಡುತ್ತದೆ. ಅದರಲ್ಲೂ ದಿನವೂ ಬೆಳಗ್ಗೆ ಬೇಗ ಎದ್ದು ಯೋಗ ಮಾಡುವುದು ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸುತ್ತದೆ. ಯೋಗವು ಪ್ರತಿಯೊಬ್ಬರ ಜೀವನಕ್ಕೆ ಬಹಳ ಮುಖ್ಯವಾಗಿ ಬೇಕು. ಯಾರು ಯೋಗ ಮಾಡುತ್ತಾರೋ ಅವರು ಆರೋಗ್ಯವಂತರಾಗಿರುತ್ತಾರೆ. ಯೋಗ ಮಾಡುವುದರಿಂದ ಸಾಕಷ್ಟು ಪ್ರಯೋಜನ ಪಡೆಯಬಹುದು.


    ಯೋಗ ಮಾಡುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ


    ಯೋಗದ ಪ್ರತಿಯೊಂದು ಆಸನವು ಒಂದೊಂದು ಆರೋಗ್ಯ ಪ್ರಯೋಜನ ಹಾಗೂ ಆರೋಗ್ಯ ಸಮಸ್ಯೆ ನಿವಾರಿಸುತ್ತದೆ. ದಿನವೂ ಯೋಗಾಭ್ಯಾಸ ರೂಢಿಸಿಕೊಂಡರೆ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ. ಬೊಜ್ಜು ಕರಗುತ್ತದೆ. ಬಿಪಿ, ಶುಗರ್ ನಂತ ಸಮಸ್ಯೆಗಳು ದೂರವಾಗುತ್ತವೆ.


    ಮಲಬದ್ಧತೆ, ಯಕೃತ್ತು ಸಮಸ್ಯೆ, ಕರುಳಿನ ಸಮಸ್ಯೆ, ಗ್ಯಾಸ್ಟ್ರಿಕ್, ಆಸಿಡಿಟಿ ಸಮಸ್ಯೆ ಹೀಗೆ ಹಲವು ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಜೊತೆಗೆ ಚರ್ಮಕ್ಕೆ ನೈಸರ್ಗಿಕ ಹೊಳಪು ಸಿಗುತ್ತದೆ. ವಯಸ್ಸಾಗುವಿಕೆ ಪ್ರಕ್ರಿಯೆ ನಿಧಾನವಾಗುತ್ತದೆ. ಕೂದಲು ಉದುರುವಿಕೆ ಸಮಸ್ಯೆ ಸಹ ಕಡಿಮೆ ಆಗುತ್ತದೆ.




    ಯೋಗವನ್ನು ಮನೆ ಮತ್ತು ಪರಿಸರದಲ್ಲಿ ಎಲ್ಲಿ ಮಾಡುವುದು ಉತ್ತಮ?


    ತುಂಬಾ ಜನರು ಯೋಗ ಮಾಡ್ತಾರೆ. ಕೆಲವರು ಗಾರ್ಡನ್, ಮನೆಯ ಟೆರೆಸ್ ಮೇಲೆ ಇನ್ನು ಕೆಲವರು ಮನೆಯೊಳಗೆ, ದೊಡ್ಡ ಗಾಳಿ ಬೆಳಕು ಬರುವ ಕೊಠಡಿಯಲ್ಲಿ ಯೋಗ ಮಾಡ್ತಾರೆ. ಹಾಗಾದ್ರೆ ಯೋಗವನ್ನು ಮನೆಯೊಳಗೆ ಮಾಡುವುದು ಸರಿಯೋ ಅಥವಾ ಮನೆಯಿಂದ ಹೊರಗೆ ಪರಿಸರದಲ್ಲಿ ಮಾಡುವುದು ಉತ್ತಮವೋ ಎಂಬುದನ್ನು ನಾವು ಇಲ್ಲಿ ತಿಳಿಯೋಣ.


    ಯೋಗ ಮಾಡುವಾಗ ನಿಧಾನವಾಗಿ ಮಾಡಬೇಕು. ಯೋಗಾಭ್ಯಾಸದ ವೇಳೆ  ಉಸಿರಾಟದ ಬಗ್ಗೆ ಗಮನವಿರಬೇಕು. ಮನಸ್ಸು, ದೇಹ ಮತ್ತು ಆತ್ಮಕ್ಕೆ ತಾಲೀಮು ಮಾಡುವುದೇ ಯೋಗವಾಗಿದೆ.


    ಯೋಗ ಮಾಡಲು ಹಲವು ಮಾರ್ಗಗಳು


    ಯೋಗವನ್ನು ಕೆಲವರು ತೆರೆದ ಮೈದಾನದಲ್ಲಿ ಅಭ್ಯಾಸ ಮಾಡುತ್ತಾರೆ. ಕೆಲವರು ಮನೆಯಲ್ಲಿ ಮಾಡ್ತಾರೆ. ಹಾಗಾದ್ರೆ ಯೋಗದ ಯಾವ ವಿಧಾನ ಉತ್ತಮ ಎಂಬುದರ ಬಗ್ಗೆ ಫಿಟ್ನೆಸ್ ತಜ್ಞ ವೈಭವ್ ಸೋಮಾನಿ ಹೇಳಿದ್ದಾರೆ.


    ಹೊರಾಂಗಣ ಯೋಗ


    ತೆರೆದ ಮೈದಾನ, ಗಾರ್ಡನ್, ಬಯಲು ಪ್ರದೇಶದಲ್ಲಿ ಯೋಗ ಮಾಡುವುದೇ ಹೊರಾಂಗಣ ಯೋಗ. ನಿಸರ್ಗದಲ್ಲಿ ಮಾಡುವ ಯೋಗ ಇದಾಗಿದೆ. ಇದರಲ್ಲಿ ಗಾಳಿ, ಸೂರ್ಯನ ಬೆಳಕು, ಮಣ್ಣು, ನೀರು ಪ್ರಕೃತಿಯ ಮಧ್ಯೆ ಯೋಗ ಮಾಡುವುದಾಗಿದೆ.


    ಸಾಂದರ್ಭಿಕ ಚಿತ್ರ


    ಬಯಲಿನಲ್ಲಿ ಯೋಗ ಮಾಡುವುದರಿಂದ ಹಲವು ಲಾಭಗಳಿವೆ. ಬಯಲಿನಲ್ಲಿ ಯೋಗ ಮಾಡಿದ್ರೆ ಸಾಕಷ್ಟು ಆಮ್ಲಜನಕ ಸಿಗುತ್ತದೆ. ಸ್ಥಳಾವಕಾಶದ ಕೊರತೆಯಿರುವುದಿಲ್ಲ. ಹಾಯಾಗಿ ಯೋಗಾಸನ ಮಾಡಬಹುದು.


    ಹೃದಯದ ಕಾರ್ಯ ಹೆಚ್ಚಾಗುತ್ತದೆ. ಗಮನ ಕೇಂದ್ರೀಕೃತವಾಗಿರುತ್ತದೆ. ಇದು ಮಾನಸಿಕ ವ್ಯಾಯಾಮ. ಹುಲ್ಲು ಮತ್ತು ನೆಲದ ಮೇಲೆ ಕಾಲು ಮತ್ತು ಕೈಗಳ ಸಂಪರ್ಕವು ಮಾನಸಿಕ ಶಾಂತಿ ನೀಡುತ್ತದೆ.


    ಮನೆಯಲ್ಲಿ ಯೋಗ ಮಾಡುವುದು


    ಹೆಚ್ಚು ಹೊರಗಿನ ಓಡಾಟ, ನಿದ್ರೆಯ ಕೊರತೆ, ಸಮಯದ ಅಭಾವ ಇದ್ದವರು ಮನೆಯಲ್ಲಿಯೇ ಯೋಗ ಮಾಡಬಹುದು. ಮನೆಯಲ್ಲಿ ಯೋಗ ಮಾಡಿದ್ರೆ ನಿಯಮಿತವಾಗಿ ಮಾಡಿ.


    ಮನೆಯಲ್ಲಿ ಯೋಗ ಮಾಡಿದ್ರೆ ಅಂತರ್ಮುಖಿ, ಉತ್ತಮ ಆಯ್ಕೆ ಮತ್ತು ನೆಮ್ಮದಿ ಇರುತ್ತದೆ. ಯಾವುದೇ ಹಿಂಜರಿಕೆ ಇಲ್ಲದೇ ಮಾಡಬಹುದು. ಯಾರೋ ನೋಡುತ್ತಾರೆ, ಏನು ಹೇಳುತ್ತಾರೋ ಎಂಬ ಭಯವಿಲ್ಲದೇ ನಿರ್ಭಯವಾಗಿ ಮತ್ತು ಅಡೆತಡೆಯಿಲ್ಲದೆ ಧ್ಯಾನ ಮಾಡಬಹುದು.


    ಇದನ್ನೂ ಓದಿ: ಆಹಾರದಲ್ಲಿ ಬಳಸುವ ಈ 3 ಬಿಳಿ ಪದಾರ್ಥಗಳು ಸ್ಥೂಲಕಾಯ ಹಾಗೂ ಹೃದಯಕ್ಕೆ ಹಾನಿಕರ!


    ಯೋಗ ಮಾಡಲು ಎರಡೂ ವಿಧಾನ ಉತ್ತಮ


    ಯೋಗಾಭ್ಯಾಸವನ್ನು ಹೊರಾಂಗಣ ಹಾಗೂ ಒಳಾಂಗಣ ಎಲ್ಲಿ ಬೇಕಾದ್ರೂ ಮಾಡಬಹುದು. ನಿಮ್ಮ ನೆಚ್ಚಿನ ಸ್ಥಳದಲ್ಲಿ, ನಿಮಗೆ ಖುಷಿ ಮತ್ತು ನೆಮ್ಮದಿ ಸಿಗುವಂತೆ ಯೋಗ ಮಾಡಿ ಆರೋಗ್ಯವಾಗಿರಿ ಅಂತಾರೆ ತಜ್ಞರು.

    Published by:renukadariyannavar
    First published: