• Home
  • »
  • News
  • »
  • lifestyle
  • »
  • Skin Care: ಚಳಿಗಾಲದಲ್ಲಿ ತ್ವಚೆಯ ಆರೈಕೆಗೆ ಕ್ಯಾರೆಟ್ ಫೇಸ್ ಪ್ಯಾಕ್ ಹೀಗೆ ಮಾಡಿ!

Skin Care: ಚಳಿಗಾಲದಲ್ಲಿ ತ್ವಚೆಯ ಆರೈಕೆಗೆ ಕ್ಯಾರೆಟ್ ಫೇಸ್ ಪ್ಯಾಕ್ ಹೀಗೆ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಳಿಗಾಲದಲ್ಲಿ ಕ್ಯಾರೆಟ್ ಸೀಸನ್ ಕೂಡ ಇರುತ್ತದೆ. ಚಳಿಗಾಲದಲ್ಲಿ ಕ್ಯಾರೆಟ್ ಸೇವನೆ ತುಂಬಾ ಅವಶ್ಯಕ. ಕ್ಯಾರೆಟ್ ಚರ್ಮಕ್ಕೆ ತುಂಬಾ ಪ್ರಯೋಜನ ತಂದು ಕೊಡುತ್ತದೆ. ಕ್ಯಾರೆಟ್ ಫೇಸ್ ಪ್ಯಾಕ್ ಮಾಡುವುದು ಚರ್ಮಕ್ಕೆ ಹೆಚ್ಚಿನ ಪೋಷಣೆ ನೀಡುತ್ತದೆ. ಉತ್ತಮ ಫಲಿತಾಂಶ ನೀಡುತ್ತದೆ.

  • Share this:

    ಬದಲಾಗುತ್ತಿರುವ ಋತುವಿನಲ್ಲಿ ಚರ್ಮದ ಆರೈಕೆ (Skin Care) ಕೂಡ ಬದಲಾವಣೆ (Changes) ಮಾಡುವುದು ತುಂಬಾ ಅವಶ್ಯಕವಾಗಿದೆ. ಹೇಗೆ ದಿನವೂ ಆಹಾರ (Food) ಕ್ರಮ ಬದಲಾವಣೆ ಮಾಡುತ್ತೇವೆಯೋ, ಹಾಗೆಯೇ ಚಳಿಗಾಲದಲ್ಲಿ (Winter) ಚರ್ಮದ ಆರೈಕೆಯಲ್ಲಿ ಕೆಲವು ಬದಲಾವಣೆ ತರುವುದು ತುಂಬಾ ಮುಖ್ಯವಾಗಿದೆ. ತ್ವಚೆಯು ಚರ್ಮದ ಸಮಸ್ಯೆಗಳಿಂದ (Skin Problem) ರಕ್ಷಣೆ ಪಡೆಯಲು ಈ ಬದಲಾವಣೆ ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮ ತ್ವಚೆಯ ನೈಸರ್ಗಿಕ ಹೊಳಪು ಉಳಿಯಲು ಇದು ಸಹಕಾರಿ ಆಗಿದೆ. ಈ ಚಳಿಗಾಲದಲ್ಲಿ ಕ್ಯಾರೆಟ್ ಸೀಸನ್ ಕೂಡ ಇರುತ್ತದೆ. ಚಳಿಗಾಲದಲ್ಲಿ ಕ್ಯಾರೆಟ್ ಸೇವನೆ ತುಂಬಾ ಅವಶ್ಯಕ. ಕ್ಯಾರೆಟ್ ಚರ್ಮಕ್ಕೆ ತುಂಬಾ ಪ್ರಯೋಜನ ತಂದು ಕೊಡುತ್ತದೆ.


    ಕ್ಯಾರೆಟ್ ಫೇಸ್ ಪ್ಯಾಕ್ ಮಾಡುವುದು ಹೇಗೆ?


    ಕ್ಯಾರೆಟ್ ಫೇಸ್ ಪ್ಯಾಕ್ ಮಾಡುವುದು ಚರ್ಮಕ್ಕೆ ಹೆಚ್ಚಿನ ಪೋಷಣೆ ನೀಡುತ್ತದೆ. ಉತ್ತಮ ಫಲಿತಾಂಶ ನೀಡುತ್ತದೆ. ಚಳಿಗಾಲದ ಚರ್ಮದ ಆರೈಕೆಯ ದಿನಚರಿಯ ಭಾಗವಾಗಿ ಕ್ಯಾರೆಟ್ ಬಳಕೆ ಮಾಡುವುದು ಲಾಭಕಾರಿ.


    ಕ್ಯಾರೆಟ್ ಚರ್ಮಕ್ಕೆ ಹೇಗೆ ಪ್ರಯೋಜನಕಾರಿ?


    ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಕ್ಯಾರೆಟ್ ಜ್ಯೂಸ್‌ ನಲ್ಲಿದೆ. ಉತ್ಕರ್ಷಣ ನಿರೋಧಕಗಳು ಹಾನಿಗೊಳಗಾದ ಚರ್ಮವನ್ನು ಸುಧಾರಿಸುತ್ತವೆ. ವಿಟಮಿನ್ ಸಿ ಕಾಲಜನ್ ತಯಾರಿಸಲು ಸಹಾಯಕ. ಚರ್ಮದ ಆರೋಗ್ಯ ಸುಧಾರಿಸುತ್ತದೆ.


    ಚರ್ಮದ ಮೇಲೆ ಆರೋಗ್ಯಕರ ಹೊಳಪು ಕಾಪಾಡುತ್ತದೆ. ಹಾಗೂ ಎಣ್ಣೆಯುಕ್ತ ಚರ್ಮಕ್ಕೆ ಕ್ಯಾರೆಟ್ ತುಂಬಾ ಪ್ರಯೋಜನಕಾರಿ. ಕ್ಯಾರೆಟ್ ಸೇವನೆಯು ಸೂಕ್ಷ್ಮ ರೇಖೆಗಳು ಮತ್ತು ಸುಕ್ಕು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


    ಕ್ಯಾರೆಟ್‌ ಫೇಸ್ ಪ್ಯಾಕ್‌ ತಯಾರಿಸುವುದು ಹೇಗೆ?


    ಕ್ಯಾರೆಟ್ ಮತ್ತು ಜೇನುತುಪ್ಪದ ಫೇಸ್ ಪ್ಯಾಕ್


    ಒಂದು ಬಟ್ಟಲಿನಲ್ಲಿ ತುರಿದ ಕ್ಯಾರೆಟ್ ಹಾಗೂ ಅದಕ್ಕೆ ಒಂದು ಚಮಚ ಹಸಿ ಹಾಲು ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ. ಈ ಫೇಸ್ ಪ್ಯಾಕ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿರಿ. 15 ನಿಮಿಷದ ನಂತರ ತೊಳೆಯಿರಿ. ಈ ಫೇಸ್ ಪ್ಯಾಕ್ ಒಣ ಚರ್ಮಕ್ಕೆ ಉತ್ತಮ.


    ಜೇನುತುಪ್ಪವು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಕಚ್ಚಾ ಹಾಲು ಉತ್ತಮ ಕ್ಲೆನ್ಸರ್ ಆಗಿ ಕೆಲಸ ಮಾಡುತ್ತದೆ. ಇದು ತ್ವಚೆಯ ಶುಷ್ಕತೆ ಮತ್ತು ನಿಸ್ತೇಜತೆ ಸಮಸ್ಯೆ ನಿವಾರಿಸುತ್ತದೆ.


    ಕ್ಯಾರೆಟ್ ಮತ್ತು ಸೌತೆಕಾಯಿ ಫೇಸ್ ಪ್ಯಾಕ್


    ಒಂದು ಬಟ್ಟಲಿನಲ್ಲಿ ಒಂದು ಚಮಚ ಕ್ಯಾರೆಟ್ ರಸ, ಒಂದು ಚಮಚ ಸೌತೆಕಾಯಿ ಪೇಸ್ಟ್ ಸೇರಿಸಿ. ಅರ್ಧ ಟೀಚಮಚ ಕೆನೆ ಸೇರಿಸಿ , ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಮುಖದ ಮೇಲೆ ಹಚ್ಚಿ, 20 ನಿಮಿಷ ಬಿಟ್ಟು ಶುದ್ಧ ನೀರಿನಿಂದ ತೊಳೆಯಿರಿ.


    ಕ್ಯಾರೆಟ್ ಮತ್ತು ಪಪ್ಪಾಯಿ ಫೇಸ್ ಪ್ಯಾಕ್


    ಒಂದು ಬಟ್ಟಲಿನಲ್ಲಿ ಒಂದು ಚಮಚ ಕ್ಯಾರೆಟ್ ಪೇಸ್ಟ್, ಒಂದು ಚಮಚ ಪಪ್ಪಾಯಿ ಹಾಕಿ ಮಿಶ್ರಣ ಮಾಡಿ. ಚಮಚ ಹಸಿ ಹಾಲನ್ನು ಬೆರೆಸಿ. ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಅನ್ವಯಿಸಿ 20 ನಿಮಿಷ ಬಿಟ್ಟು ಮುಖವನ್ನು ಸ್ವಚ್ಛಗೊಳಿಸಿ. ಸೌತೆಕಾಯಿ ಉರಿಯೂತದ ಗುಣಲಕ್ಷಣ ಹೊಂದಿದೆ. ಚರ್ಮದ ಆರೋಗ್ಯ ಉತ್ತೇಜಿಸುತ್ತದೆ.


    ಇದನ್ನೂ ಓದಿ: ಮಳೆಗಾಲದಲ್ಲಿ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಸೂಪರ್ ಫುಡ್‌ಗಳೇ ಬೆಸ್ಟ್


    ಕ್ಯಾರೆಟ್ ಮತ್ತು ಕಡಲೆ ಹಿಟ್ಟಿನ ಫೇಸ್ ಪ್ಯಾಕ್


    ಒಂದು ಬಟ್ಟಲಿನಲ್ಲಿ ಎರಡು ಚಮಚ ಕ್ಯಾರೆಟ್ ಪೇಸ್ಟ್, ಎರಡು ಚಮಚ ಕಡಲೆ ಹಿಟ್ಟು ಮತ್ತು ಎರಡು ಚಮಚ ಮೊಸರು ಸೇರಿಸಿ. ಚಿಟಿಕೆ ಅರಿಶಿನ ಸೇರಿಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತೊಳೆಯಿರಿ. ಪಪ್ಪಾಯಿಯು ತ್ವಚೆಗೆ ನೈಸರ್ಗಿಕ ಹೊಳಪು ನೀಡುತ್ತದೆ. ತ್ವಚೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

    Published by:renukadariyannavar
    First published: