ತೂಕ ಇಳಿಕೆ (Weight Loss) ಎಲ್ಲರ ಬಯಕೆ. ಹೀಗಾಗಿ ಅನೇಕರು ಹೆಲ್ದೀ ವೇಟ್ (Healthy Weight) ಕಾಪಾಡಿಕೊಳ್ಳಲು ನಿಯಮಿತ ವ್ಯಾಯಾಮ (Exercise), ವಾಕಿಂಗ್ ಮಾಡ್ತಾರೆ. ಆದ್ರೆ ತೂಕ ನಷ್ಟಕ್ಕೆ ಕೇವಲ ವ್ಯಾಯಾಮ, ವಾಕಿಂಗ್, ಕಡಿಮೆ ತಿನ್ನುವುದು ಮಾತ್ರ ಮಾಡಿದ್ರೆ ಸಾಕಾ? ಇಲ್ಲ, ನೀವು ಆರೋಗ್ಯವಾಗಿ ಮತ್ತು ಫಿಟ್ (Fit) ಆಗಿ ಇರೋಕೆ ಬೇರೆ ಬೇರೆ ರೀತಿಯ ಆಹಾರ (Food) ಸೇವನೆ ಮಾಡುವುದು ಮುಖ್ಯ. ಇತ್ತೀಚಿನ ದಿನಗಳಲ್ಲಿ ಇನ್ಸ್ಟಂಟ್ ಸೂಪ್ ಪ್ಯಾಕೆಟ್ ಗಳು ಮಾರ್ಕೆಟ್ ನಲ್ಲಿ ಸಿಗುತ್ತವೆ. ಇವು ವೇಟ್ ಲಾಸ್ ಗೆ ಸಹಕಾರಿ ಎಂಬುದನ್ನು ಕೇಳಿ ನೀವು ಖರೀದಿ ಮಾಡಬಹುದು.
ತೂಕ ನಷ್ಟಕ್ಕೆ ಕೆಲವು ಸೂಪ್ ಗಳ ಸೇವನೆ ಸಹಕಾರಿ
ಹೌದು, ತೂಕ ನಷ್ಟಕ್ಕೆ ಕೆಲವು ಸೂಪ್ ಗಳ ಸೇವನೆಯೂ ಪರಿಣಾಮಕಾರಿಯಾಗಿದೆ. ಮತ್ತು ಇವುಗಳು ನಿಮ್ಮನ್ನು ಹೆಲ್ದೀ, ಎನರ್ಜೆಟಿಕ್ ಹಾಗೂ ಫಿಟ್ ಆಗಿಸಲು ಸಹಾಯ ಮಾಡುತ್ತವೆ. ಭಾರತದ ಪ್ರಸಿದ್ಧ ಆಹಾರ ತಜ್ಞೆ ಅಂಜಲಿ ಮುಖರ್ಜಿ, ವೇಟ್ ಲಾಸ್ ಸೂಪ್ ಬಗ್ಗೆ ಹೇಳಿದ್ದಾರೆ.
ಈ ವೇಟ್ ಲಾಸ್ ಸೂಪ್ ನ್ನು ಪ್ರತಿನಿತ್ಯ ನಿಯಮಿತವಾಗಿ ಬೆಳಗ್ಗೆ ಕುಡಿದರೆ ತೂಕ ಇಳಿಕೆ ಸುಲಭವಾಗುತ್ತದೆ. ಹಾಗಾದ್ರೆ ತೂಕ ನಷ್ಟಕ್ಕೆ ಸಹಾಯ ಮಾಡುವ ಸೂಪ್ ಯಾವವು? ಅವುಗಳನ್ನು ಹೇಗೆ ತಯಾರಿಸಬೇಕು ಅನ್ನೋದನ್ನ ತಿಳಿಯೋಣ.
ತೂಕ ನಷ್ಟಕ್ಕೆ ಸೆಲರಿ ಸೂಪ್
ಆಹಾರ ತಜ್ಞೆ ಅಂಜಲಿ ಮುಖರ್ಜಿ ಅವರು ಪ್ರತಿದಿನ ನಿಯಮಿತವಾಗಿ ಸೇವಿಸಲು ಸೆಲರಿ ಸೂಪ್ ಬಗ್ಗೆ ತಿಳಿಸಿದ್ದಾರೆ. ಎಂಟು ಪದಾರ್ಥಗಳನ್ನು ಮಿಶ್ರಣ ಮಾಡಿ, ಸೂಪ್ ತಯಾರಿಸುವ ಪಾಕವಿಧಾನ ತಿಳಿಸಿದ್ದಾರೆ. ಅಂದ ಹಾಗೇ ಈ ಸೂಪ್ ನಲ್ಲಿ ಬಳಸೋ ಎಲ್ಲಾ ರೀತಿಯ ಪದಾರ್ಥಗಳು ತೂಕ ಕಡಿಮೆ ಮಾಡಲು ಸಹಕಾರಿ.
ಈ ಸೆಲರಿ ಸೂಪ್ ಕುಡಿದರೆ ದೇಹದಲ್ಲಿ ಯಾವುದೇ ದೌರ್ಬಲ್ಯ ಇರಲ್ಲ. ಇದರಲ್ಲಿ ಬಳಸಲಾಗುವ ಓರೆಗಾನೊ ಎಲೆಗಳು ಮತ್ತು ಟೊಮೆಟೊ ತೂಕ ಕಡಿಮೆ ಮಾಡಲು ಮತ್ತು ಹೆಲ್ದೀ ತೂಕ ಕಾಪಾಡಿಕೊಳ್ಳಲು ಪರಿಣಾಮಕಾರಿ.
ತೂಕ ನಷ್ಟ ಸೆಲರಿ ಸೂಪ್ ತಯಾರಿಸುವುದು ಹೇಗೆ?
ಸೆಲರಿ ಎಲೆಗಳ ಕಟ್ಟು, ಸಣ್ಣದಾಗಿ ಹೆಚ್ಚಿದ ಮಧ್ಯಮ ಗಾತ್ರದ ಟೊಮೆಟೊ, ಮಧ್ಯಮ ಗಾತ್ರದ ಕ್ಯಾರೆಟ್, ಮೂರು ಬೆಳ್ಳುಳ್ಳಿ ಮತ್ತು ಲವಂಗ, ಒಂದೂವರೆ ಕಪ್ ತರಕಾರಿ ಸ್ಟಾಕ್, ಒಂದು ಟೀಚಮಚ ಕರಿಮೆಣಸು, ಒಂದು ಚಮಚ ಎಣ್ಣೆ, ಉಪ್ಪು ಬೇಕಾಗುತ್ತದೆ.
ಮೊದಲು ಸೆಲರಿ, ಟೊಮೆಟೊ, ಕ್ಯಾರೆಟ್ ಮತ್ತು ಬೆಳ್ಳುಳ್ಳಿಯನ್ನು ನುಣ್ಣಗೆ ಕತ್ತರಿಸಿರಿ. ಈಗ ಕುಕ್ಕರ್ ಅನ್ನು ಗ್ಯಾಸ್ ಮೇಲಿರಿಸಿ. ನಂತರ ಕುಕ್ಕರ್ಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಕತ್ತರಿಸಿದ ಎಲ್ಲಾ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಬೇಯಿಸಿ. ನಂತರ ತರಕಾರಿ ಸ್ಟಾಕ್ ಸೇರಿಸಿ, ಬೇಯಿಸಿ.
ಎಲ್ಲಾ ಪದಾರ್ಥಗಳು ಬೆಂದ ನಂತರ ಪದಾರ್ಥಗಳನ್ನು ತಣ್ಣಗಾಗಲು ಬಿಡಿ. ಬಳಿಕ ಮಿಕ್ಸಿಗೆ ಹಾಕಿ ರುಬ್ಬಿ. ಈಗ ಬಿಸಿಯಾದ ಸೂಪ್ ರೆಡಿ. ರುಚಿಗೆ ಬೇಕಾದಷ್ಟು ಹನಿ ನಿಂಬೆ ಮತ್ತು ಉಪ್ಪನ್ನು ಹಾಕಿ ಸೇವಿಸಿ.
ಸೆಲರಿ ಎಲೆ ಹೇಗೆ ವೇಟ್ ಲಾಸ್ ಗೆ ಪ್ರಯೋಜನಕಾರಿ?
ಸೆಲರಿ ಎಲೆ ಫೈಬರ್ ನಿಂದ ಕೂಡಿದೆ. ಕಡಿಮೆ ಕ್ಯಾಲೋರಿ ಆಹಾರ ಪದಾರ್ಥವಾಗಿದೆ. ಇದು ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ನಿಯಂತ್ರಣದಲ್ಲಿಡುತ್ತದೆ. ದೀರ್ಘಕಾಲದವರೆಗೆ ಹಸಿವಾಗದಂತೆ ತಡೆಯುತ್ತದೆ. ಈ ಮೂಲಕ ಹೆಚ್ಚು ಆಹಾರ ಸೇವನೆ ತಡೆದು ವೇಟ್ ಲಾಸ್ ಗೆ ಸಹಕಾರಿಯಾಗಿದೆ.
ಸೂಪ್ ನಲ್ಲಿ ಬಳಸಲಾದ ಟೊಮೆಟೊ ವೇಟ್ ಲಾಸ್ ಗೆ ಹೇಗೆ ಪ್ರಯೋಜನಕಾರಿ?
ಲೈಕೋ ಪ್ರೋಟೀನ್ ನಿಂದ ಸಮೃದ್ಧವಾಗಿರುವ ಟೊಮೆಟೊ ದೇಹವನ್ನು ಸದೃಢವಾಗಿರಿಸುತ್ತದೆ. ಲೈಕೋ ಪ್ರೋಟೀನ್ ಒಂದು ರೀತಿಯ ಉತ್ಕರ್ಷಣ ನಿರೋಧಕ. ಇದು ದೇಹದ ಆರೋಗ್ಯ ಕಾಪಾಡುತ್ತದೆ. ಟೊಮೆಟೊ ದೇಹವನ್ನು ನಿರ್ವಿಷಗೊಳಿಸುತ್ತದೆ.
ಸೂಪ್ ನಲ್ಲಿ ಬಳಸಲಾದ ಕ್ಯಾರೆಟ್ ವೇಟ್ ಲಾಸ್ ಗೆ ಹೇಗೆ ಪ್ರಯೋಜನಕಾರಿ?
ಕ್ಯಾರೆಟ್ ಫೈಬರ್ ಹೊಂದಿದೆ. ಕ್ಯಾರೆಟ್ ನಲ್ಲಿ ಉತ್ತಮ ಪ್ರಮಾಣದ ಪೊಟ್ಯಾಸಿಯಂ ಇದೆ. ಆಂಟಿಆಕ್ಸಿಡೆಂಟ್ಗಳು ದೇಹದ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುತ್ತದೆ. ಇದು ರಕ್ತದೊತ್ತಡ ಸಮತೋಲನದಲ್ಲಿಡುತ್ತದೆ. ಕ್ಯಾರೆಟ್ನಲ್ಲಿರುವ ಬೀಟಾ ಕ್ಯಾರೋಟಿನ್ ಸಮೃದ್ಧವಾಗಿದೆ.
ಇದನ್ನೂ ಓದಿ: ಶೀತ, ಜ್ವರ ಚಳಿಗಾಲದಲ್ಲಿಯೇ ಹೆಚ್ಚು ಕಾಡುತ್ತವೆ ಏಕೆ? ಅಧ್ಯಯನಗಳು ಏನ್ ಹೇಳ್ತಿವೆ?
ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಯಾಗಿ, ಕಣ್ಣುಗಳ ಸಮಸ್ಯೆ ಗುಣವಾಗಿಸುತ್ತದೆ. ಹಾಗೂ ತೂಕ ನಷ್ಟಕ್ಕೆ ಸಹಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ