• Home
  • »
  • News
  • »
  • lifestyle
  • »
  • Fitness Secret: ತೂಕ ಇಳಿಕೆ ಅಂದರೆ ಉಪವಾಸ ಇರುವುದಲ್ಲ! ಆಹಾರ ತಿನ್ನೋದಕ್ಕೂ ಇದೆ ರೂಲ್ಸ್!

Fitness Secret: ತೂಕ ಇಳಿಕೆ ಅಂದರೆ ಉಪವಾಸ ಇರುವುದಲ್ಲ! ಆಹಾರ ತಿನ್ನೋದಕ್ಕೂ ಇದೆ ರೂಲ್ಸ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತೂಕ ಇಳಿಕೆಗೆ ಆಹಾರ ಸೇವನೆ ಮಾಡುವಾಗ ಅದರ ಭಾಗ ಮತ್ತು ಗಾತ್ರವನ್ನು ನೋಡಿಕೊಳ್ಳಬೇಕು ಎಂದು ತಿಳಿಸುತ್ತಾರೆ. ಇದು ತೂಕವನ್ನು ಕಡಿಮೆ ಮಾಡಲು ಪರಿಣಾಮಕಾರಿ ಆಗಿದೆ. ಆಹಾರದ ಭಾಗದ ಗಾತ್ರವನ್ನು ಒಬ್ಬ ವ್ಯಕ್ತಿಯು ಒಂದೇ ಸಮಯದಲ್ಲಿ ಸೇವಿಸುವ ಆಹಾರದ ಪ್ರಮಾಣ ಎಂದು ಹೇಳಲಾಗಿದೆ.

  • Share this:

    ಇತ್ತೀಚಿನ ದಿನಗಳಲ್ಲಿ ಅನೇಕ ಜನರು (People) ತಮ್ಮ ಫಿಟ್ನೆಸ್ (Fitness) ಬಗ್ಗೆ ಹೆಚ್ಚು ಕಾಳಜಿ (Care) ವಹಿಸುತ್ತಿದ್ದಾರೆ. ಮತ್ತು ತಮ್ಮ ತೂಕ ಇಳಿಸುವ (Weight Loss) ಪ್ರಯಾಣದ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಪ್ರತಿಯೊಬ್ಬರೂ ಏನು ತಿನ್ನಬೇಕು, ಎಷ್ಟು ತಿನ್ನಬೇಕು ಮತ್ತು ವ್ಯಾಯಾಮ (Exercise) ಮಾಡುವುದು ಎಲ್ಲದರ ಬಗ್ಗೆ ನೋಡಿಕೊಳ್ಳಬೇಕಾಗುತ್ತದೆ. ತಜ್ಞರು ಮತ್ತು ಫಿಟ್‌ನೆಸ್ ಪ್ರಭಾವಿಗಳು ಆರೋಗ್ಯಕರ ಜೀವನಶೈಲಿ ಫಾಲೋ ಮಾಡುವಂತೆ ಶಿಫಾರಸು ಮಾಡುತ್ತಾರೆ. ಆದರೆ ಅದೇ ವೇಳೆ ಅವರು ನಿಮ್ಮಿಷ್ಟದ ಏನನ್ನೇ ತಿನ್ನಲು ಬಯಸಿದರೆ ಎಷ್ಟು ಪ್ರಮಾಣದಲ್ಲಿ ಏನು ತಿನ್ನಬೇಕು ಎಂಬುದನ್ನು ನೋಡಿಕೊಂಡು ತಿನ್ನುವುದು ಉತ್ತಮ ಎಂದು ಹೇಳುತ್ತಾರೆ.


    ಆಹಾರ ಸೇವನೆ ಹೇಗಿರಬೇಕು?


    ತೂಕ ಇಳಿಕೆಗೆ ಆಹಾರ ಸೇವನೆ ಮಾಡುವಾಗ ಅದರ ಭಾಗ ಮತ್ತು ಗಾತ್ರವನ್ನು ನೋಡಿಕೊಳ್ಳಬೇಕು ಎಂದು ತಿಳಿಸುತ್ತಾರೆ. ಇದು ತೂಕವನ್ನು ಕಡಿಮೆ ಮಾಡಲು ಪರಿಣಾಮಕಾರಿ ಆಗಿದೆ.


    ಆಹಾರದ ಭಾಗದ ಗಾತ್ರವನ್ನು ಒಬ್ಬ ವ್ಯಕ್ತಿಯು ಒಂದೇ ಸಮಯದಲ್ಲಿ ಸೇವಿಸುವ ಆಹಾರದ ಪ್ರಮಾಣ ಎಂದು ಹೇಳಲಾಗಿದೆ. ಒಂದೇ ಬಾರಿಗೆ ಎಷ್ಟು ತಿನ್ನುತ್ತೇವೆ ಮತ್ತು ಎಷ್ಟು ತಿನ್ನಬೇಕು ಎಂಬುದು ಆಹಾರದ ಭಾಗದ ಗಾತ್ರದ ಸಹಾಯದಿಂದ ತಿಳಿಯುತ್ತದೆ.




    ನಮ್ಮ ಆಹಾರದ ತಟ್ಟೆಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದರೆ ಮತ್ತು ನಂತರ ಒಂದು ಭಾಗದಲ್ಲಿ ಬೇಳೆ ಕಾಳು, ಎರಡನೆಯದರಲ್ಲಿ ಅಕ್ಕಿ, ಮೂರನೆಯದರಲ್ಲಿ ತರಕಾರಿ ಮತ್ತು ನಾಲ್ಕನೆಯದರಲ್ಲಿ ಸಲಾಡ್ ಇರಿಸಬೇಕು. ಇದು ಆರೋಗ್ಯಕರ ಭಾಗದ ಗಾತ್ರ ಎಂದು ಹೇಳಲಾಗುತ್ತದೆ.


    ದಾಲ್ ಮತ್ತು ಅನ್ನ ಸೇವನೆಯನ್ನು ಮೂರು ರೊಟ್ಟಿ, ಪಲ್ಯ ತಿನ್ನುತ್ತಿದ್ದರೆ, ಅದನ್ನು ಆರೋಗ್ಯಕರ ಭಾಗದ ಗಾತ್ರ ಎಂದು ಹೇಳಲಾಗುವುದಿಲ್ಲ. ಹಾಗಾದರೆ ಭಾಗದ ಗಾತ್ರವು ಆರೋಗ್ಯಕ್ಕೆ ಏಕೆ ಮುಖ್ಯವಾಗಿದೆ?


    ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಆಹಾರದ ಭಾಗದ ಗಾತ್ರವು ನೀವು ಏನು ತಿನ್ನಬೇಕು ಮತ್ತು ಸೇವೆಯ ಗಾತ್ರವು ನಿಮಗೆ ಎಷ್ಟು ತಿನ್ನಲು ನೀಡಬೇಕು ಎಂಬುದನ್ನು ಅವಲಂಬಿಸಿದೆ. ಸೇವೆಯ ಗಾತ್ರವು ಹೆಚ್ಚಾದರೆ ತೂಕ ಹೆಚ್ಚಿಸುವ ಸಾಧ್ಯತೆಯಿದೆ.


    ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಪ್ರಕಾರ, ನಿಮಗೆ ಹೆಚ್ಚು ಆಹಾರ ನೀಡಲಾಗುತ್ತದೆ, ನೀವು ಹೆಚ್ಚು ತಿನ್ನುತ್ತೀರಿ. ಹಾಗಾಗಿ ಆಹಾರವನ್ನು ಸಣ್ಣ ಭಾಗಗಳಲ್ಲಿ ತಿನ್ನಿರಿ. ಇದು ನಿಮ್ಮನ್ನು ಹೆಚ್ಚು ತಿನ್ನದಂತೆ ನಿಯಂತ್ರಿಸುತ್ತದೆ. ಸರಿಯಾದ ಆಹಾರ ಭಾಗದ ಗಾತ್ರವು ತೂಕ ಇಳಿಕೆಗೆ ಸಹಕಾರಿ.


    ರಕ್ತದ ಸಕ್ಕರೆ ನಿಯಂತ್ರಿಸುತ್ತದೆ


    ದೇಹವು ನೀವು ತಿನ್ನುವ ಆಹಾರವನ್ನು ಕಾರ್ಬೋಹೈಡ್ರೇಟ್ಗಳನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ. ಇದು ನಿಮ್ಮ ದೇಹದ ಶಕ್ತಿಯ ಪ್ರಾಥಮಿಕ ಮೂಲವಾಗಿ ಕೆಲಸ ಮಾಡುತ್ತದೆ. ಹೆಚ್ಚಿನ ಪ್ರಮಾಣದ ಆಹಾರ ಸೇವನೆ ಗ್ಲೂಕೋಸ್ ಮಟ್ಟವು ವೇಗವಾಗಿ ಏರುತ್ತದೆ. ರಕ್ತಪ್ರವಾಹವು ಗ್ಲೂಕೋಸ್‌ನಿಂದ ತುಂಬಿದಾಗ ಮೇದೋಜ್ಜೀರಕ ಗ್ರಂಥಿಯು ಆ ಗ್ಲೂಕೋಸ್ ಅನ್ನು ಬಳಸಲು ಇನ್ಸುಲಿನ್ ಬಿಡುಗಡೆ ಮಾಡುತ್ತದೆ.


    ಇದು ಕಡಿಮೆ ರಕ್ತದ ಸಕ್ಕರೆಗೆ ಕಾರಣವಾಗಬಹುದು. ಆಗ ಮೆದುಳು ಹೆಚ್ಚು ಗ್ಲೂಕೋಸ್ ಬೇಕೆನ್ನಿಸಿ ಮತ್ತಷ್ಟು ಹಸಿವು ಅನುಭವಿಸಲು ಕಾರಣವಾಗುತ್ತದೆ. ಸಣ್ಣ ಭಾಗಗಳಲ್ಲಿ ಆಹಾರ ಸೇವಿಸುವುದು ಕಡುಬಯಕೆಗಳನ್ನು ನಿಗ್ರಹಿಸುತ್ತದೆ. ಕ್ಯಾಲೋರಿ ಸೇವನೆ ಕಡಿಮೆ ಮಾಡುತ್ತದೆ. ಹೊಟ್ಟೆ ಬೇಗನೇ ತುಂಬುತ್ತದೆ ಮತ್ತು ಹಸಿವಾಗುವುದಿಲ್ಲ.


    ಇದನ್ನೂ ಓದಿ: ಕೂದಲ ಆರೋಗ್ಯಕ್ಕೆ ಎಣ್ಣೆ ಹಚ್ಚುವ ಸರಿಯಾದ ವಿಧಾನ ಯಾವುದು?


    ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿಡುತ್ತದೆ. ಉಬ್ಬುವುದು ಕಡಿಮೆಯಾಗುತ್ತದೆ. ಮಲಬದ್ಧತೆ ಸಮಸ್ಯೆ ಇರುವುದಿಲ್ಲ. ಕ್ಯಾಲೋರಿ ಸೇವನೆ ಕಡಿಮೆ. ತೂಕ ಇಳಿಕೆಗೆ ಸಹಕಾರಿ. ಹೆಚ್ಚು ಶಕ್ತಿಯುತವಾಗಿರಲು ಸಹಕಾರಿ ಆಗಿದೆ.

    Published by:renukadariyannavar
    First published: