ಕೆಲವರು ಈರುಳ್ಳಿಯನ್ನು (Onion) ಆಹಾರದಲ್ಲಿ ಬಳಸಲ್ಲ. ಅಂತಹವರು ತರಕಾರಿಗೆ ರುಚಿ (Taste) ಮತ್ತು ಗ್ರೇವಿಗಾಗಿ ಕೇವಲ ಟೊಮ್ಯಾಟೊ ಮಾತ್ರ ಬಳಸ್ತಾರೆ. ಅನೇಕ ಜನರು ಟೊಮ್ಯಾಟೊವನ್ನು (Tomato) ಸಲಾಡ್ ರೂಪದಲ್ಲಿ ಹೆಚ್ಚು ಸೇವಿಸಲು ಇಷ್ಟ ಪಡ್ತಾರೆ. ಯಾಕಂದ್ರೆ ಇದು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಮುಖ್ಯವಾದ ವಿಷಯ ಅಂದ್ರೆ ಟೊಮ್ಯಾಟೊ ತೂಕ ಇಳಿಸಲು (Weight Loss) ಸಹಕಾರಿ ಆಗಿದೆ. ಜೀರ್ಣಾಂಗ ವ್ಯವಸ್ಥೆಗೆ ಟೊಮ್ಯಾಟೊ ಸಾಕಷ್ಟು ಪ್ರಯೋಜನಕಾರಿ ಆಗಿದೆ. ಮೈಕ್ರೋಬಯಾಲಜಿ ಸ್ಪೆಕ್ಟ್ರಮ್ ಜರ್ನಲ್ ನಲ್ಲಿ ಅಧ್ಯಯನವೊಂದು ಪ್ರಕಟವಾಗಿದೆ. ಅದರ ಪ್ರಕಾರ, ಟೊಮ್ಯಾಟೊಗಳು ತೂಕ ಇಳಿಕೆಗೆ ಸಹಕಾರಿ ಎಂದು ಹೇಳಲಾಗಿದೆ. ಜೊತೆಗೆ ಟೊಮ್ಯಾಟೊ ಕರುಳಿನ ಆರೋಗ್ಯಕ್ಕೆ ಸಹ ಪ್ರಯೋಜನ ನೀಡುತ್ತದೆ. ಮತ್ತು ಕರುಳಿನಲ್ಲಿರುವ ಸೂಕ್ಷ್ಮಜೀವಿಗಳನ್ನು ಹೆಚ್ಚಿಸುತ್ತದೆ.
ಟೊಮ್ಯಾಟೊ ತೂಕ ಇಳಿಕೆಗೆ ಸಹಕಾರಿ
ಟೊಮ್ಯಾಟೊಗಳು ತೂಕ ಇಳಿಕೆಗೆ ಸಹಕಾರಿ ಎಂದು ಓಹಿಯೋ ಸ್ಟೇಟ್ ಯೂನಿವರ್ಸಿಟಿ ಅಧ್ಯಯನವೊಂದು ಹೇಳಿದೆ. ಈ ಅಧ್ಯಯನದಲ್ಲಿ ಹಂದಿಗಳನ್ನು ಪ್ರಯೋಗಕ್ಕೆ ಬಳಕೆ ಮಾಡಿದ್ದಾರೆ. ಟೊಮ್ಯಾಟೊ ಹಂದಿಗಳ ಮೇಲಿನ ಪ್ರಯೋಗದಲ್ಲಿ ತೂಕ ಇಳಿಕೆ ಮತ್ತು ಕರುಳಿನ ಆರೋಗ್ಯಕ್ಕೆ ಸಹಕಾರಿ ಎಂದು ಹೇಳಿದ್ದಾರೆ.
ಎರಡು ವಾರಗಳ ಕಾಲ ಟೊಮ್ಯಾಟೊ ಭರಿತ ಆಹಾರ ಸೇವನೆ ಮಾಡಿದರೆ ಅದರಿಂದ ಫೈಬರ್, ಸಕ್ಕರೆ, ಪ್ರೋಟೀನ್, ಕೊಬ್ಬು ಮತ್ತು ಕ್ಯಾಲೊರಿ ಸಿಗುತ್ತದೆ. ಇದು ಕೆಲವು ರೀತಿಯ ಕ್ಯಾನ್ಸರ್ ಮತ್ತು ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.
ಟೊಮ್ಯಾಟೊ ಭರಿತ ಆಹಾರ ಸೇವನೆಯಿಂದ ತೂಕ ಇಳಿಕೆ
ಟೊಮ್ಯಾಟೊ ಭರಿತ ಆಹಾರ ಸೇವನೆಯಿಂದ ಹಂದಿಗಳ ತೂಕ ಇಳಿಕೆ ಕಂಡು ಬಂದಿದೆ. ದೇಹದ ತೂಕದ 10 ಪ್ರತಿಶತದಷ್ಟು ತೂಕ ಇಳಿಕೆಯಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಹಿರಿಯ ಲೇಖಕಿ ಜೆಸ್ಸಿಕಾ ಕೂಪರ್ ಸ್ಟೋನ್, ಕರುಳಿನ ಸೂಕ್ಷ್ಮಜೀವಿಯ ಮಾಡ್ಯುಲೇಶನ್ ಮೂಲಕ ಟೊಮ್ಯಾಟೋ ಪ್ರಯೋಜನಕಾರಿ ಅಂತಾರೆ.
ತೂಕ ನಷ್ಟಕ್ಕೆ ಟೊಮ್ಯಾಟೊ ಹೇಗೆ ಸಹಕಾರಿ?
ಟೊಮ್ಯಾಟೋ ಸೇವನೆ ಹೆಚ್ಚಿನ ಪ್ರಮಾಣವು ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ಟೊಮೆಟೊದಲ್ಲಿ ಉತ್ತಮ ಪ್ರಮಾಣದ ನೀರು ಮತ್ತು ಫೈಬರ್ ಸಮೃದ್ಧವಾಗಿದೆ. ಟೊಮೆಟೊ ತೂಕ ಕಡಿಮೆ ಮಾಡಲು ಸಹಕಾರಿ ಆಗಿದೆ.
ಆದರೆ ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ. ಟೊಮ್ಯಾಟೊ ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿ ಇಡಲು ಪ್ರಯೋಜನಕಾರಿ ಆಗಿದೆ.
ಆಹಾರದಲ್ಲಿ ಟೊಮ್ಯಾಟೊ ಹೇಗೆ ಸೇರಿಸಬೇಕು?
ಸ್ಯಾಂಡ್ವಿಚ್ ತಿಂದಾಗಲೆಲ್ಲಾ ಅದರಲ್ಲಿ ಟೊಮೆಟೊ ಸ್ಲೈಸ್ ಹಾಕಿ ಸೇವನೆ ಮಾಡಿ. ಇದು ನಿಮ್ಮ ಸ್ಯಾಂಡ್ ವಿಚ್ನ ರುಚಿ ಹೆಚ್ಚಿಸುತ್ತದೆ. ಜೊತೆಗೆ ಆರೋಗ್ಯ ಪ್ರಯೋಜನ ನೀಡುತ್ತದೆ. ತಾಜಾ ಕತ್ತರಿಸಿದ ಟೊಮ್ಯಾಟೊ ಮತ್ತು ತರಕಾರಿ ಸಲಾಡ್ ಜೊತೆ ಸೇವಿಸಿ.
ಬೇಯಿಸಿದ ಮೊಟ್ಟೆ ಮತ್ತು ಆಮ್ಲೆಟ್ ಗೆ ಕಚ್ಚಾ ಕತ್ತರಿಸಿದ ಹಸಿ ಟೊಮೆಟೊ ಕೂಡ ಸೇರಿಸಿ ಸೇವನೆ ಮಾಡಿ. ಇದು ರುಚಿ ಮತ್ತು ಆರೋಗ್ಯ ಪ್ರಯೋಜನ ನೀಡುತ್ತದೆ.
ನೀವು ಟೊಮ್ಯಾಟೋವನ್ನು ಪಿಜ್ಜಾ ಅಥವಾ ಪಾಸ್ಟಾ ತಯಾರಿಕೆಯಲ್ಲೂ ಬಳಸಿ. ಇದು ನಿಮ್ಮ ರುಚಿ ಹೆಚ್ಚಿಸುತ್ತದೆ. ಆರೋಗ್ಯಕರ ಆಯ್ಕೆ ಆಗಿದೆ. ಪಾಸ್ತಾ ತಿನ್ನುತ್ತಿದ್ದರೆ ಅದಕ್ಕೆ ಟೊಮೆಟೊ ಸಾಸ್ ಸೇರಿಸಿ.
ಇದನ್ನೂ ಓದಿ: ಕ್ಯಾನ್ಸರ್ ಬರದಂತೆ ತಡೆಯಲು ಈ ಆಹಾರಗಳನ್ನು ಸೇವಿಸೋದು ಬೆಸ್ಟ್
ನೀವು ಪನೀರ್ ಪ್ರಿಯರಾಗಿದ್ದರೆ ನೀವು ಪನೀರ್ ಅಥವಾ ಇನ್ನಾವುದೇ ತರಕಾರಿ ತಯಾರಿಕೆ ವೇಳೆ ತಪ್ಪದೇ ಟೊಮೆಟೊ ಗ್ರೇವಿ ಮಾಡಿ ಸೇವಿಸಿ. ಇಷ್ಟೇ ಅಲ್ಲದೇ ತೂಕ ಇಳಿಕೆಗೆ ನೀವು ಟೊಮೆಟೊ ರಸ, ಸೂಪ್, ಜ್ಯೂಸ್ ಸ್ಮೂಥಿ ಇತ್ಯಾದಿ ರೂಪದಲ್ಲಿ ಸೇವಿಸಿ. ಇದು ಆರೋಗ್ಯ ಪ್ರಯೋಜನ ನೀಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ