ತೂಕ ಇಳಿಸುವ (Weight Loss) ಪ್ರಯಾಣದ ಸಮಯದಲ್ಲಿ ಹಸಿವಾಗುವುದು ಕಾಮನ್. ಹಾಗಂತ ತೂಕ ಇಳಿಕೆ ಆಹಾರ ಕ್ರಮದಲ್ಲಿ (Diet Plan) ಯಾವುದೇ ರಾಜಿ ಮಾಡಿಕೊಳ್ಳಬೇಡಿ. ಯಾಕಂದ್ರೆ ನೀವು ಆಹಾರ ಕ್ರಮದಲ್ಲಿರುವಾಗ ಯಾವಾಗಲೂ ಚಿಕ್ಕ ಚಿಕ್ಕ ಭಾಗಗಳಲ್ಲಿ ಆಹಾರ (Food) ಸೇವನೆ ಮಾಡುವುದನ್ನು ರೂಢಿಸಿಕೊಳ್ಳಿ. ಅದರಲ್ಲೂ ಹೆಲ್ದೀ (Healthy) ಆಹಾರ ಪದಾರ್ಥಗಳ ಆಯ್ಕೆ ಮಾಡಿ. ಮೈದಾ, ಜಂಕ್ ಫುಡ್, ಕರಿದ ಪದಾರ್ಥಗಳಿಗೆ ಸಂಪೂರ್ಣವಾಗಿ ಗುಡ್ ಬೈ ಹೇಳಿ. ಸಕ್ಕರೆ, ಪಿಜ್ಜಾ, ಬರ್ಗರ್, ಪೇಸ್ಟ್ರಿಯಂತಹ ನಾಲಿಗೆ ರುಚಿ ಹೆಚ್ಚಿಸುವ ಮತ್ತು ಹೊಟ್ಟೆ ಆರೋಗ್ಯ ಕೆಡಿಸುವ ಪದಾರ್ಥಗಳ ಸೇವನೆ ಮಾಡ್ಬೇಡಿ. ಯಾಕಂದ್ರೆ ತೂಕ ನಷ್ಟದ ವಿಷಯದಲ್ಲಿ ನೀವು ಏನನ್ನು ತಿನ್ನುತ್ತೀರಿ, ಹೇಗೆ ತಿನ್ನುತ್ತೀರಿ, ಎಷ್ಟು ತಿನ್ನುತ್ತೀರಿ ಎಂಬುದು ತುಂಬಾ ಮುಖ್ಯವಾಗುತ್ತದೆ.
ತೂಕ ಇಳಿಕೆಗೆ ಆಹಾರ ಕ್ರಮದ ಬಗ್ಗೆ ನಿರ್ದಿಷ್ಟ ಯೋಜನೆ ಹಾಕಿ
ತೂಕ ಕಳೆದುಕೊಳ್ಳುವಾಗ ಆಹಾರ ಕ್ರಮದಲ್ಲಿ ನಿರ್ದಿಷ್ಟ ಯೋಜನೆ ಹಾಕಲೇಬೇಕು. ಅಂದಾಗ ಮಾತ್ರ ವೇಟ್ ಲಾಸ್ ಬೇಗ ಆಗುತ್ತದೆ. ನೀವು ಎಷ್ಟು ಕ್ಯಾಲೋರಿ ಸೇವಿಸುತ್ತೀರಿ ಮತ್ತು ಎಷ್ಟು ಕ್ಯಾಲೋರಿ ಬರ್ನ್ ಮಾಡುತ್ತೀರಿ ಎಂಬುದರ ಮೇಲೆ ಗಮನವಿರಬೇಕು. ನೀವು ಸೇವಿಸುವ ಆಹಾರಕ್ಕಿಂತ ತುಸು ಹೆಚ್ಚು ಕ್ಯಾಲೋರಿ ಬರ್ನ್ ಮಾಡ್ಬೇಕಾಗುತ್ತದೆ. ಹಾಗಾಗಿ ಕ್ಯಾಲೊರಿ ಬರ್ನ್ ಮಾಡುವ ಬಗ್ಗೆ ತಿಳಿಯಬೇಕು.
ಪ್ರೋಟೀನ್, ಕೊಬ್ಬು ಮತ್ತು ತರಕಾರಿ ಸೇವನೆ
ತೂಕ ಇಳಿಸುವವರು ತಮ್ಮ ಆಹಾರ ಕ್ರಮದಲ್ಲಿ ಪ್ರೋಟೀನ್ ಸಮೃದ್ಧ ಪದಾರ್ಥಗಳನ್ನು ಸೇರಿಸಬೇಕು. ದೇಹಕ್ಕೆ ಬೇಕಾದ ಮುಖ್ಯ ಪೋಷಕಾಂಶ ಪ್ರೊಟೀನ್ ಆಗಿದೆ. ಹಾಗಾಗಿ ಪ್ರೊಟೀನ್ ಸೇರಿಸಿ.
ಇನ್ನು ಎಷ್ಟು ಪ್ರಮಾಣದ ಕೊಬ್ಬು ಹೊಂದಿರುವ ಪದಾರ್ಥಗಳನ್ನು ಸೇರಿಸಬೇಕು ಎಂಬುದನ್ನು ತಿಳಿದುಕೊಳ್ಳಿ. ಊಟದಲ್ಲಿ ತರಕಾರಿ ಸೇರಿಸಿ. ಹಸಿರು ಎಲೆಯ ತರಕಾರಿ ಹಾಗೂ ಕ್ಯಾರೆಟ್, ಬೀನ್ಸ್, ಸೇರಿ ಉತ್ತಮ ಆಹಾರ ಸೇವಿಸಿ.
ನೀರು ಮತ್ತು ನಾರಿನಂಶವಿರುವ ಪದಾರ್ಥ ಸೇವಿಸಿ
ತೂಕ ಇಳಿಕೆಯಲ್ಲಿ ಕಡಿಮೆ ಕ್ಯಾಲೋರಿ ಹಾಗೂ ಹೆಚ್ಚು ನೀರು ಹಾಗೂ ನಾರಿನಂಶವಿರುವ ಪದಾರ್ಥ ಸೇವಿಸಿ. ಒಂದೇ ರೀತಿಯ ಆಹಾರ ಸೇವಿಸಬೇಡಿ. ದಿನವೂ ವಿವಿಧ ಆಹಾರಗಳನ್ನು ಸೇವಿಸಿ. ತಟ್ಟೆಯಲ್ಲಿ ಎಲ್ಲಾ ರೀತಿಯ ಪದಾರ್ಥಗಳನ್ನು ಸೇರಿಸಿ. ಪ್ರೋಟೀನ್, ಫೈಬರ್, ತರಕಾರಿಗಳು, ಧಾನ್ಯಗಳು, ಬೀಜಗಳು, ಹಣ್ಣುಗಳನ್ನು ಸೇರಿಸಿ.
ತೂಕ ಇಳಿಕೆಗೆ ಪ್ರೊಟೀನ್ ಆಹಾರ
ಪ್ರೋಟೀನ್ ತೂಕ ಕಳೆದುಕೊಳ್ಳುವಾಗ ಅವಶ್ಯಕವಾಗಿ ಬೇಕು. ಯಾಕಂದ್ರೆ ತೂಕ ಇಳಿಕೆ ವೇಳೆ ಆರೋಗ್ಯ ಮತ್ತು ಸ್ನಾಯುವಿನ ದ್ರವ್ಯರಾಶಿ ಸಂರಕ್ಷಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಮತ್ತು ಮಿತ ಪ್ರಮಾಣದಲ್ಲಿ ಪ್ರೊಟೀನ್ ಸೇವಿಸಿ. ಪ್ರೋಟೀನ್ ಅಗತ್ಯಗಳ ಮೇಲೆ ಅನೇಕ ಅಂಶಗಳು ಪ್ರಭಾವ ಬೀರುತ್ತವೆ.
ಸಾಕಷ್ಟು ಪ್ರೋಟೀನ್ ಹೊಂದಿರುವ ಆಹಾರ ಸೇವನೆ ಕಡು ಬಯಕೆಗಳನ್ನು ಕಡಿಮೆ ಮಾಡುತ್ತದೆ. ದೀರ್ಘಕಾಲ ಹೊಟ್ಟೆ ತುಂಬಿಸಿರುತ್ತದೆ. ಆಗಾಗ್ಗೆ ತಿನ್ನುವುದನ್ನು ತಪ್ಪಿಸುತ್ತದೆ.
ಆಹಾರವನ್ನು ಚಿಕ್ಕ ಚಿಕ್ಕ ಭಾಗಗಳಾಗಿ ಸೇವಿಸಿ
ನೀವು ದಿನಕ್ಕೆ ಒಮ್ಮೆಲೆ ಆಹಾರ ಸೇವನೆ ಮಾಡ್ಬೇಡಿ. ನಿಯಮಿತವಾಗಿ ಆಹಾರವನ್ನು ನಾಲ್ಕು ಅಥವಾ ಐದು ಚಿಕ್ಕ ಭಾಗಗಳಲ್ಲಿ ಸೇವನೆ ಮಾಡಿ. ಆಗ ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಚಯಾಪಚಯವನ್ನು ಆರೋಗ್ಯವಾಗಿರಿಸುತ್ತದೆ. ಹಸಿವನ್ನು ಕಡಿಮೆ ಮಾಡುತ್ತದೆ. ದೇಹಕ್ಕೆ ಶಕ್ತಿ ನೀಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಪ್ರೊಲೋನ್ ಆಹಾರ ಕ್ರಮ; ತೂಕ ನಷ್ಟಕ್ಕೆ ಇದು ತುಂಬಾ ಕಟ್ಟುನಿಟ್ಟಿನ ಡಯಟ್
ಇತರ ರೀತಿಯ ಆಹಾರಗಳಿಗಿಂತ ಹೆಚ್ಚು ಸಸ್ಯ ಮತ್ತು ತರಕಾರಿ, ಧಾನ್ಯಗಳು, ನೇರ ಪ್ರೋಟೀನ್, ಆರೋಗ್ಯಕರ ಕೊಬ್ಬು, ಕಡಿಮೆ ಕೊಬ್ಬಿನ ಪದಾರ್ಥಗಳ ಸೇವನೆ ಮಾಡಿ. ಇದು ನಿಮ್ಮ ತೂಕ ಇಳಿಕೆ ಜರ್ನಿಯನ್ನು ಸುಲಭ ಮತ್ತು ಸುಂದರವಾಗಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ