ಹೆಲ್ದೀ (Healthy) ಆಗಿರಬೇಕು ಅಂತಾ ಜನ ಡಯಟ್ (Diet) ಫಾಲೋ ಮಾಡ್ತಾರೆ. ವ್ಯಾಯಾಮ (Exercise) ಮಾಡ್ತಾರೆ. ಹಾಗೆಯೇ ಬೊಜ್ಜು, ಸ್ಥೂಲಕಾಯ (Obesity), ಅಧಿಕ ತೂಕ ಹೊಂದಲು ಯಾರೂ ಇಷ್ಟ ಪಡಲ್ಲ. ಇತ್ತೀಚೆಗೆ ಜನರು ಫಿಟ್ (Fit) ಆಗಿರ್ಬೇಕು ಅಂತಾ ಬಯಸ್ತಾರೆ. ಹಾಗಾಗಿ ವೇಟ್ ಕಂಟ್ರೋಲ್ ಮಾಡ್ತಾರೆ. ವೇಟ್ ಇಳಿಸೋಕೆ (Weight Loss) ಸಾಕಷ್ಟು ಪ್ರಯತ್ನ ಮಾಡ್ತಾರೆ. ಬೊಜ್ಜು ಇದ್ರೆ ಚೆನ್ನಾಗಿ ಕಾಣಲ್ಲ. ಅಷ್ಟೇ ಅಲ್ದೇ ಕಾಯಿಲೆಗಳು ಬಾಧಿಸುತ್ತವೆ. ಅದರಲ್ಲೂ ದೀರ್ಘಕಾಲದ ಬೊಜ್ಜು ಹೆಚ್ಚು ಆರೋಗ್ಯ ಸಮಸ್ಯೆ ತಂದೊಡ್ಡುತ್ತದೆ. ಬದಲಾಗುತ್ತಿರುವ ಜೀವನಶೈಲಿ ಮತ್ತು ಸರಿಯಾದ ಆಹಾರದ ಕೊರತೆ ಹಲವು ಸಮಸ್ಯೆ ಹುಟ್ಟಿ ಹಾಕುತ್ತವೆ.
ತೂಕ ಇಳಿಸೋಕೆ ಆಯುರ್ವೇದ ಪರಿಹಾರ
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಸ್ಥೂಲಕಾಯ ಸಮಸ್ಯೆ ಎದುರಿಸುತ್ತಿದ್ದಾರೆ. ತೂಕ ಇಳಿಕೆಗೆ ಹಲವರು ಆಹಾರ ಕ್ರಮ, ಜಿಮ್ ಮಾಡುತ್ತಿದ್ದಾರೆ. ಆದ್ರೆ ಇದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಅಂತಾ ಅನ್ನಿಸಿದರೆ ನೀವು ಆಯುರ್ವೇದ ಸಲಹೆ ಪಾಲಿಸಬಹುದು.
ಆಯುರ್ವೇದವು ಅಡ್ಡ ಪರಿಣಾಮ ಕಡಿಮೆ ಮಾಡಿ, ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅಡುಗೆ ಮನೆಯಲ್ಲಿ ಸಿಗುವ ಕೆಲವು ಆಯುರ್ವೇದ ಗಿಡಮೂಲಿಕೆಗಳ ಮೂಲಕ ತೂಕ ಕಡಿಮೆ ಮಾಡಲು ಟ್ರೈ ಮಾಡಿ.
ತೂಕ ಇಳಿಕೆಗೆ ಮನೆಮದ್ದು
ಜೀರಿಗೆ ನೀರು
ಜೀರಿಗೆ ಪ್ರತಿಯೊಂದು ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಸುವ ಪದಾರ್ಥ ಆಗಿದೆ. ಜೀರಿಗೆಯು ವಿಟಮಿನ್ ಸಿ, ಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ತಾಮ್ರ, ಕಬ್ಬಿಣ ಇತ್ಯಾದಿ ಪೋಷಕಾಂಶಗಳಿಂದ ತುಂಬಿದೆ. ಆಹಾರದ ರುಚಿ ಹೆಚ್ಚಿಸಲು ಜೀರಿಗೆ ಬಳಕೆ ಮಾಡಲಾಗುತ್ತದೆ.
ಜೀರಿಗೆ ಎಲ್ಲರ ಅಡುಗೆ ಮನೆಯಲ್ಲಿ ಇದ್ದೇ ಇರುತ್ತದೆ. ಬೆಳಗ್ಗೆ ಜೀರಿಗೆ ಕುದಿಸಿ ನೀರು ಕುಡಿದರೆ ದೇಹದ ಎಲ್ಲಾ ವಿಷಕಾರಿ ಅಂಶಗಳು ದೇಹದಿಂದ ಹೊರಗೆ ಹೋಗುತ್ತವೆ. ಇದು ಕೆಟ್ಟ ಕೊಬ್ಬು ದೇಹದಲ್ಲಿ ರೂಪುಗೊಳ್ಳಲು ಅನುಮತಿಸುವುದಿಲ್ಲ. ದೇಹದ ಕೆಟ್ಟ ಕೊಬ್ಬನ್ನು ಕರಗಿಸುತ್ತದೆ. ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿರುತ್ತದೆ.
ಅರಿಶಿನ ನೀರು
ಅರಿಶಿನ ಪದಾರ್ಥವು ಪ್ರತಿಯೊಬ್ಬರ ಅಡುಗೆ ಮನೆಯಲ್ಲಿದೆ. ಹಾಗೂ ಇದನ್ನು ಪ್ರತಿಯೊಂದು ಆಹಾರ ಪದಾರ್ಥ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ. ಅರಿಶಿನದಲ್ಲಿ ಕರ್ಕ್ಯುಮಿನ್ ಎಂಬ ಅಂಶವಿದ್ದು, ಇದು ದೇಹದಲ್ಲಿ ಕೊಬ್ಬಿನ ರಚನೆ ತಡೆಯುತ್ತದೆ. ಅರಿಶಿನವು ಉರಿಯೂತ ನಿವಾರಕ ಗುಣ ಹೊಂದಿದ್ದು, ದೇಹಕ್ಕೆ ಸೂಕ್ತ ಪೋಷಣೆ ನೀಡುತ್ತದೆ. ಅರಿಶಿನ ಸೇವಿಸಿದರೆ ಚಯಾಪಚಯ ವೇಗವಾಗಿ ತೂಕ ಕಡಿಮೆ ಆಗುತ್ತದೆ.
ಕರಿಮೆಣಸು ಮಸಾಲೆ ಪದಾರ್ಥ
ಕರಿಮೆಣಸು ಅಡುಗೆ ಮನೆಯಲ್ಲಿದೆ. ಕರಿಮೆಣಸಿನಲ್ಲಿರುವ ಪೈಪರಿನ್ ಅಂಶವು ದೇಹದಲ್ಲಿ ಕೊಬ್ಬು ರಚನೆ ತಡೆಯುತ್ತದೆ. ಕರಿಮೆಣಸಿನಲ್ಲಿ ಕ್ಯಾಲೋರಿಗಳು ಕಡಿಮೆ ಇದೆ. ಇದರ ಸೇವನೆ ತೂಕ ಇಳಿಕೆಗೆ ಸಹಕಾರಿ. ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆ. ನಿಯಮಿತ ಸೇವನೆ ಚಯಾಪಚಯ ಕ್ರಿಯೆಗೆ ಬೆಸ್ಟ್.
ದಾಲ್ಚಿನ್ನಿ ನೀರು
ಪ್ರತಿ ಮನೆಯಲ್ಲೂ ದಾಲ್ಚಿನ್ನಿ ಇದೆ. ಇದನ್ನು ಅಡುಗೆಗೆ ಬಳಸುತ್ತಾರೆ. ದಾಲ್ಚಿನ್ನಿ ನಿಯಮಿತ ಸೇವನೆ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದು ಚಯಾಪಚಯ ಹೆಚ್ಚಿಸಿ, ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ. ಇದು ತೂಕ ಕಡಿಮೆ ಮಾಡಲು ಸಹಕಾರಿ. ದೀರ್ಘಕಾಲ ಹಸಿವನ್ನು ನಿಯಂತ್ರಿಸುತ್ತದೆ.
ಇದನ್ನೂ ಓದಿ: ದೇಹದಲ್ಲಿ ಆಲ್ಕೋಹಾಲ್ ಎಷ್ಟು ಕಾಲ ಉಳಿಯುತ್ತದೆ? ಇಲ್ಲಿದೆ ಸಂಶೋಧನಾ ವರದಿ
ತ್ರಿಫಲ ಚೂರ್ಣ
ಆಯುರ್ವೇದವು ತೂಕ ನಷ್ಟಕ್ಕೆ ತ್ರಿಫಲ ಪರಿಣಾಮಕಾರಿ ಎನ್ನುತ್ತೆ. ತ್ರಿಫಲವು ಚಯಾಪಚಯ ಹೆಚ್ಚಿಸುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ. ಹೊಟ್ಟೆಯು ಬೇಗನೆ ಕ್ಲೀನ್ ಆಗುತ್ತದೆ. ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ