ತೂಕ ಇಳಿಕೆ (Weight Loss) ಹಾಗೂ ಫಿಟ್ನೆಸ್ (Fitness) ಕಾಪಾಡಿಕೊಳ್ಳುವುದು ಕೇವಲ ಒಂದು ದಿನದ ಮಾತಲ್ಲ. ನೀವು ಫಿಟ್ನೆಸ್ ಕಾಪಾಡಲು, ದೇಹದ (Body) ತೂಕ ಇಳಿಸಲು ಮತ್ತು ತೂಕ ನಿಯಂತ್ರಿಸಲು ಬಯಸಿದರೆ ಅದಕ್ಕಾಗಿ ದಿನವೂ, ವರ್ಷ ಪೂರ್ತಿ ಕಷ್ಟ ಪಡಬೇಕಾಗುತ್ತದೆ. ತೂಕ ಇಳಿಕೆಗೆ ತಾಳ್ಮೆ ಮತ್ತು ಕಠಿಣ ಪರಿಶ್ರಮ ಬೇಕು. ಫಿಟ್ ಆಗಿರೋಕೆ ದಿನವೂ ನಿಯಮಿತವಾಗಿ ವ್ಯಾಯಾಮ (Exercise), ಯೋಗ (Yoga) ಮಾಡ್ಬೇಕು. ದಿನವೂ ಡಯಟ್ ಮೆಂಟೇನ್ ಮಾಡ್ಬೇಕು. ತಿನ್ನುವ ಹಾಗೂ ಕುಡಿಯುವ ವಿಚಾರದಲ್ಲಿ ಎಷ್ಟು ಕ್ಯಾಲೋರಿ ಸೇವನೆ ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಗಮನವಿರಬೇಕಾಗುತ್ತದೆ. ಅಂದಾಗ ಮಾತ್ರ ಕಡಿಮೆ ಅವಧಿಯಲ್ಲಿ ತೂಕ ಇಳಿಸಲು ಸಾಧ್ಯ.
ತೂಕ ಇಳಿಕೆಗೆ ಯಾವೆಲ್ಲಾ ವಿಷಯಗಳ ಬಗ್ಗೆ ಗಮನಹರಿಸಬೇಕು?
ಫಿಟ್ ಆಗಿರೋಕೆ ಕೇವಲ ವ್ಯಾಯಾಮ ಮಾಡಿದ್ರೆ ಸಾಕಾಗಲ್ಲ. ತೂಕ ಇಳಿಕೆಗೆ ವಾಕಿಂಗ್ ಮಾಡಿದ್ರೆ ಸಾಕಾಗಲ್ಲ. ನಿಯಮಿತವಾಗಿ ವಾಕಿಂಗ್ ಜೊತೆಗೆ ಪರಿಣಾಮಕಾರಿ ವ್ಯಾಯಾಮ ಮತ್ತು ಯೋಗ ಮಾಡುವ ಅವಶ್ಯಕತೆಯಿದೆ. ಜೊತೆಗೆ ದೈಹಿಕ ಚಟುವಟಿಕೆಯ ಅಗತ್ಯತೆ ಇದೆ.
ಆಹಾರ ಕ್ರಮ ಸರಿಯಾಗಿರಬೇಕು. ಕ್ಯಾಲೋರಿ ಸೇವನೆ ಬಗ್ಗೆ ಗಮನಹರಿಸಬೇಕು. ಯಾವ ಪದಾರ್ಥ ಸೇವಿಸುತ್ತೇವೆ ಎಂಬುದನ್ನು ನೋಡಿಕೊಳ್ಳಬೇಕು. ಆರೋಗ್ಯಕರ ಮತ್ತು ದೀರ್ಘಾಯುಷ್ಯಕ್ಕೆ ಪೌಷ್ಠಿಕ ಆಹಾರ ಸೇವಿಸಬೇಕು. ಸರಿಯಾಗಿ ಮತ್ತು ಸರಿಯಾದ ಸಮಯದಲ್ಲಿ ಆಹಾರ ಸೇವನೆ ಮಾಡ್ಬೇಕು.
ಡಾ.ಬಬಿನಾ ಅವರು, ತೂಕ ಇಳಿಕೆಗೆ ಉತ್ತಮ ಆಹಾರ ಪದ್ಧತಿ ಫಾಲೋ ಮಾಡ್ಬೇಕು ಎಂದು ಸಲಹೆ ನೀಡಿದ್ದಾರೆ. ಅವರು ಫಿಟ್ ಆಗಿರಲು ಯಾವೆಲ್ಲಾ ಉತ್ತಮ ಅಭ್ಯಾಸ ರೂಢಿಸಿಕೊಳ್ಬೇಕು ಎಂಬುದರ ಬಗ್ಗೆ ಹೇಳಿದ್ದಾರೆ. ಅದರ ಬಗ್ಗೆ ನೋಡೋಣ.
ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರ ಸೇವಿಸಿ
ಆರೋಗ್ಯವಾಗಿರಲು ಮತ್ತು ತೂಕ ಇಳಿಕೆಗೆ ಹಾಗೂ ತೂಕ ನಿಯಂತ್ರಣಕ್ಕೆ, ಫಿಟ್ನೆಸ್ ಗಾಗಿ ಆರೋಗ್ಯಕರ ಆಹಾರ ಪದ್ಧತಿ ಫಾಲೋ ಮಾಡ್ಬೇಕು. ಇದು ಒಂದೆರಡು ದಿನವಲ್ಲ, ಜೀವಮಾನ ಪೂರ್ತಿ ಆರೋಗ್ಯಕರ ಆಹಾರ ಸೇವನೆಯ ಗುರಿ ಉತ್ತಮ ಆರೋಗ್ಯಕ್ಕೆ ಹಾಗೂ ತೂಕ ಇಳಿಕೆಗೆ ಸಹಕಾರಿ.
ತಿನ್ನುವ ಆಹಾರದ ಬಗ್ಗೆ ಗಮನಹರಿಸಿ
ನೀವು ಯಾವ ಆಹಾರ ತಿನ್ನುತ್ತಿದ್ದೀರಿ? ಎಷ್ಟು ತಿನ್ನುತ್ತಿದ್ದೀರಿ? ಹೇಗೆ ತಿನ್ನುತ್ತಿದ್ದೀರಿ ಎಂಬುದು ಮುಖ್ಯವಾಗುತ್ತದೆ ಅಂತಾರೆ ತಜ್ಞರು. ಸಾಮಾನ್ಯವಾಗಿ ಮನೆ, ಕಚೇರಿಯ ಜವಾಬ್ದಾರಿ ಹಿನ್ನೆಲೆ ನಾವು ಬೇಗನೆ ತಿನ್ನುತ್ತೇವೆ. ಇದು ದೇಹದ ಮೇಲೆ ಪರಿಣಾಮ ಬೀರುತ್ತದೆ.
ತಿನ್ನುವಾಗ ಜಾಗ್ರತೆ ವಹಿಸಿ. ಆಹಾರವನ್ನು ಸಂಪೂರ್ಣವಾಗಿ ಜಗಿದು ತಿನ್ನಿರಿ. ಆಹಾರ ಜಗಿಯದೇ ತಿಂದರೆ ಬೊಜ್ಜು ಹೆಚ್ಚುತ್ತದೆ. ಒಂದೇ ಬಾರಿಗೆ ಹೆಚ್ಚಿನ ಆಹಾರ ಸೇವಿಸಬೇಡಿ. ಸ್ವಲ್ಪ ಸ್ವಲ್ಪ, ಕಡಿಮೆ ಪ್ರಮಾಣದಲ್ಲಿ ತಿನ್ನಿ. ತೂಕ ಕೂಡ ನಿಯಂತ್ರಣದಲ್ಲಿರುತ್ತದೆ.
ಪೌಷ್ಟಿಕ ಆಹಾರ ಸೇವನೆ ಮಾಡಿ
ಡಾ.ಬಬಿನಾ ಪ್ರಕಾರ, ತೂಕ ಇಳಿಕೆಗೆ ಚಿಕ್ಕ ಭಾಗಗಳಲ್ಲಿ ತಿನ್ನಬೇಕು. ಪೋಷಕ ತತ್ವ ಭರಿತ ಆಹಾರ ಸೇವಿಸಬೇಕು. ಪ್ರಮಾಣ ಸಮತೋಲನವಾಗಿರಲಿ. ಚಿಕ್ಕ ತಟ್ಟೆಯಲ್ಲಿ ಆಹಾರ ತೆಗೆದುಕೊಂಡು ಸೇವಿಸಿ. ಅತಿಯಾಗಿ ತಿನ್ನುವುದನ್ನು ತಪ್ಪಿಸಿ.
ಬೆಳಗಿನ ತಿಂಡಿ ತಪ್ಪಿಸಬೇಡಿ
ಬೆಳಗಿನ ಉಪಹಾರವನ್ನು ತಪ್ಪಿಸಬೇಡಿ. ಬೆಳಗಿನ ತಿಂಡಿಯನ್ನು ಹತ್ತು ಗಂಟೆಯೊಳಗೆ ತಿನ್ನುವುದನ್ನು ರೂಢಿಸಿಕೊಳ್ಳಿ. ಬಾಯಲ್ಲಿ ನೀರೂರಿಸುವ ಜಂಕ್ ಫುಡ್ ಪಾಸ್ಟಾ, ಕುಕೀಸ್ ಮತ್ತು ಪಿಜ್ಜಾ ಸೇವನೆ ಮಾಡ್ಬೇಡಿ.
ಪೋಷಕಾಂಶ ಸಮೃದ್ಧ ಆಹಾರ ಸೇವಿಸಿ
ಯಾವಾಗಲೂ ಪೋಷಕಾಂಶಗಳಲ್ಲಿ ಸಮೃದ್ಧ ಆಹಾರ ಸೇವಿಸಿ. ಪ್ರೋಟೀನ್ ಕಾರ್ಬೋಹೈಡ್ರೇಟ್, ಫೈಬರ್, ವಿಟಮಿನ್ಗಳು ಮತ್ತು ಖನಿಜ ಪದಾರ್ಥ ಸೇವಿಸಿ.
ಕಾಲೋಚಿತ ಹಣ್ಣು ಮತ್ತು ಹಸಿರು ತರಕಾರಿ ಸೇವಿಸಿ
ತರಕಾರಿ ಮತ್ತು ಹಣ್ಣು ಸೇವಿಸಿ. ಇದು ಶಕ್ತಿ ನೀಡುತ್ತದೆ. ಜೊತೆಗೆ ಇದರಲ್ಲಿರುವ ಖನಿಜಗಳು ಮೂಳೆಗಳನ್ನು ಬಲಪಡಿಸುತ್ತವೆ. ಫೈಬರ್ ಹೊಟ್ಟೆಯನ್ನು ಸರಿಯಾಗಿ ಸ್ವಚ್ಛಗೊಳಿಸುತ್ತದೆ. ಇದು ತೂಕ ಇಳಿಕೆಗೆ ಸಹಕಾರಿ. ಆಹಾರದಲ್ಲಿ ವಿವಿಧ ರೀತಿಯ ಗಾಢ ಬಣ್ಣದ ತರಕಾರಿ ಸೇರಿಸಿ.
ಸಾಕಷ್ಟು ನೀರು ಕುಡಿಯಿರಿ
ನೀರು ಮೂತ್ರಪಿಂಡಗಳ ಮೂಲಕ ದೇಹದಿಂದ ವಿಷ ಹೊರಗೆ ಹಾಕುತ್ತದೆ. ದೇಹವನ್ನು ಒಳಗಿನಿಂದ ಶುದ್ಧವಾಗಿಸುತ್ತದೆ. ಹಾಗಾಗಿ ದಿನವಿಡೀ ಹೆಚ್ಚು ನೀರು ಕುಡಿಯುತ್ತಿರಿ. ದಿನಕ್ಕೆ ಎಂಟು ಗ್ಲಾಸ್ ನೀರು ಕುಡಿದರೆ ಚರ್ಮವು ಒಣಗುವುದಿಲ್ಲ. ಹೊಳೆಯುವ ಚರ್ಮ ನಿಮ್ಮದಾಗುತ್ತದೆ. ಕೊಬ್ಬು ಮುಕ್ತ ಹಾಲು ಕುಡಿಯಿರಿ. ಕಡಿಮೆ ಕೊಬ್ಬಿನ ಡೈರಿ ಉತ್ಪನ್ನ ಸೇವಿಸಿ.
ಇದನ್ನೂ ಓದಿ: ದೃಷ್ಟಿಗೆ ನೆಲ್ಲಿಕಾಯಿ ಎಷ್ಟು ಪ್ರಯೋಜನಕಾರಿ ಗೊತ್ತೇ? ಬೆಟ್ಟದ ನೆಲ್ಲಿಯ ಸೂಪರ್ ಹೆಲ್ತ್ ಪವರ್
ನಿಯಮಿತ ವ್ಯಾಯಾಮ ಮಾಡಿ
ದಿನವೂ ತಪ್ಪದೇ ವ್ಯಾಯಾಮ ಮಾಡಿ. ವಾಕಿಂಗ್, ಯೋಗ, ಹೀಗೆ ಯಾವುದೇ ಇರಲಿ ಬೆಳಗ್ಗೆ ಬೇಗ ಇದ್ದು, ದೈಹಿಕ ಚಟುವಟಿಕೆ ಪೂರೈಸಿ. ಇದು ತೂಕ ಇಳಿಕೆಗೆ ಸಹಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ