ತೂಕ ನಷ್ಟಕ್ಕೆ (Weight Loss) ಪ್ರಯತ್ನಿಸುತ್ತಿರುವವರು ತಮ್ಮ ಆಹಾರ ಕ್ರಮದ (Food Plan) ಬಗ್ಗೆ ಹೆಚ್ಚು ಕಾಳಜಿ (Care) ವಹಿಸಬೇಕು. ಯಾಕಂದ್ರೆ ತಿನ್ನುವ ಪ್ರತಿಯೊಂದು ಆಹಾರವು (Food) ತೂಕ ಹೆಚ್ಚಳ ಮಾಡಬಹುದು. ಎಷ್ಟು ಕ್ಯಾಲೋರಿ ಮತ್ತು ಯಾವ ಪದಾರ್ಥ (Ingredient) ಸೇವನೆ ಮಾಡಿದ್ರೆ ಉತ್ತಮ ಎಂಬುದನ್ನು ತಿಳಿದಿರುವುದು ಮುಖ್ಯ. ನೀವು ಅಧಿಕ ತೂಕ ಹೊಂದಿದ್ದು, ತೂಕ ಇಳಿಸಲು ಪ್ರಯತ್ನ ಮಾಡುತ್ತಿದ್ದು, ಬೆಳಗ್ಗೆ ಚಹಾ (Tea) ಕುಡಿಯುವ ರೂಢಿ ಹೊಂದಿದ್ದರೆ ಇದು ಅನಾರೋಗ್ಯಕರ ಆಯ್ಕೆ ಆಗಿದೆ. ಯಾಕಂದ್ರೆ ದಿನದ ಆರಂಭವನ್ನು ಆರೋಗ್ಯಕರ ಪಾನೀಯದ ಜೊತೆ ಆರಂಭಿಸಿ. ಕೆಫೀನ್ ಮತ್ತು ಸಕ್ಕರೆ ಚಹಾದ ಜೊತೆ ದಿನದ ಆರಂಭವು ಸಾಕಷ್ಟು ತೊಂದರೆ ಉಂಟು ಮಾಡುತ್ತದೆ.
ತೂಕ ಇಳಿಕೆಗೆ ಬೆಳಗಿನ ಚಹಾ ಮತ್ತು ಬಿಸ್ಕತ್ತು ಸೇವನೆ ಎಷ್ಟು ಆರೋಗ್ಯಕರ?
ಭಾರತದಲ್ಲಿ ಹೆಚ್ಚಿನ ಜನರು ತಮ್ಮ ದಿನವನ್ನು ಒಂದು ಕಪ್ ಚಹಾ, ಕಾಫಿ ಹಾಗೂ ಬಿಸ್ಕತ್ತಿನ ಸೇವನೆ ಮೂಲಕ ಆರಂಭಿಸುತ್ತಾರೆ. ಹಾಲಿನ ಚಹಾದಿಂದ ಹಿಡಿದು ಹಸಿರು ಮತ್ತು ಕಪ್ಪು ಚಹಾ, ಮಸಾಲಾ ಚಹಾ ಕೂಡ ಇದೆ.
ಆದರೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ಮತ್ತು ಬಿಸ್ಕತ್ತು ತಿನ್ನುವುದು ಆರೋಗ್ಯಕ್ಕೆ ಹಾನಿಕರ ಎಂದು ಹೇಳಲಾಗಿದೆ. ಬೆಳಗಿನ ಚಹಾದ ಜೊತೆ ಬಿಸ್ಕತ್ತು ಸೇವಿಸುವುದು ಆರೋಗ್ಯಕರವೇ ಎಂಬ ಬಗ್ಗೆ ಆಹಾರ ತಜ್ಞೆ ಪೂನಂ ದುನೇಜಾ ಏನು ಹೇಳಿದ್ದಾರೆ ನೋಡೋಣ.
" width="300" height="550">
ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದ್ರೆ ತೂಕ ಹೆಚ್ಚುತ್ತೆ!
ಆಹಾರ ತಜ್ಞರಾದ ಪೂನಂ ದುನೇಜಾ ಅವರ ಪ್ರಕಾರ, ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಸೇವಿಸುವುದು ಅನಾರೋಗ್ಯಕರ. ಅಲ್ಲದೇ ಇದು ತೂಕ ಇಳಿಸುವ ಪ್ರಯಾಣಕ್ಕೂ ಹಾನಿ ಉಂಟು ಮಾಡುತ್ತದೆ.
ನೀವು ತೂಕ ಇಳಿಸುವ ಪ್ರಯಾಣದಲ್ಲಿದ್ದರೆ, ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಸೇವನೆ ಮಾಡುವುದು ತೂಕ ಹೆಚ್ಚಿಸುತ್ತದೆ ಎಂದು ಎಚ್ಚರಿಸಿದ್ದಾರೆ. ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಸೇವನೆ ಅಭ್ಯಾಸವು ಭವಿಷ್ಯದಲ್ಲಿ ಮಧುಮೇಹ ಮತ್ತು ಹೈಪೋಥೈರಾಯ್ಡಿಸಮ್ ಸೇರಿ ಹಲವು ಗಂಭೀರ ಕಾಯಿಲೆ ಅಪಾಯ ಹೆಚ್ಚಿಸುತ್ತದೆ.
ಕುಕೀಸ್ ಜೊತೆ ಚಹಾ ಸೇವಿಸಬಹುದೇ?
ಚಹಾ ಸೇವನೆ ಮಾಡದೇ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಕೀಸ್ ಸೇವನೆ ಮಾಡುತ್ತಿದ್ದರೆ ಇದು ಸಹ ಆರೋಗ್ಯಕ್ಕೆ ಹೆಚ್ಚು ಹಾನಿಕಾರಕವಾಗಿದೆ. ಖಾಲಿ ಹೊಟ್ಟೆಯಲ್ಲಿ ಕುಕೀಸ್ ಜೊತೆ ಚಹಾ ಸೇವಿಸಿದ್ರೆ ಇದು ನಿಮ್ಮ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು ಎಂದಿದ್ದಾರೆ ತಜ್ಞರಾದ ಪೂನಂ ಡುನೇಜಾ.
ಇದು ಮುಂದಿನ ಕೆಲವು ಗಂಟೆಗಳ ಕಾಲ ಹಸಿವಾಗದಂತೆ ತಡೆಯುತ್ತದೆ. ಇದು ಸ್ವಾಭಾವಿಕವಾಗಿ ಒಳ್ಳೆಯದಲ್ಲ. ಇದು ನಿಮ್ಮ ನೈಸರ್ಗಿಕ ಹಸಿವನ್ನು ಕಡಿಮೆ ಮಾಡುತ್ತದೆ. ದೇಹವನ್ನು ಬೇರೆ ಸ್ಥಿತಿಗೆ ಕೊಂಡೊಯ್ಯುತ್ತದೆ.
ದೇಹದ ಮೇಲೆ ಯಾವ ಪರಿಣಾಮ ಬೀರುತ್ತದೆ?
ತಜ್ಞರ ಪ್ರಕಾರ, ಬೆಳಿಗ್ಗೆ ಎದ್ದ ತಕ್ಷಣ ದೇಹವು ಉಪವಾಸದ ಸ್ಥಿತಿಯಲ್ಲಿರುತ್ತದೆ. ಇಂತಹ ವೇಲೆ ದೇಹಕ್ಕೆ ಸಾಕಷ್ಟು ಶಕ್ತಿಯ ಅಗತ್ಯವಿದೆ. ನೀವು ಖಾಲಿ ಹೊಟ್ಟೆಯಲ್ಲಿ ಕುಕೀಸ್ ಮತ್ತು ಚಹಾ ಸೇವನೆ ಮಾಡಿದ್ರೆ ಅದು ಚಯಾಪಚಯ ಕಡಿಮೆ ಮಾಡುತ್ತದೆ. ದೇಹವನ್ನು ಶೇಖರಣಾ ಹಂತದಲ್ಲಿರಿಸುತ್ತದೆ.
ಕೊಬ್ಬು ಹೆಚ್ಚುತ್ತದೆ
ಏನೇ ತಿಂದರೂ ದೇಹಕ್ಕೆ ಶಕ್ತಿ ಸಿಗುವ ಬದಲು ಅದು ಕೊಬ್ಬಿನ ರೂಪದಲ್ಲಿ ದೇಹದಲ್ಲಿ ಸಂಗ್ರಹ ಆಗುತ್ತದೆ. ಇದು ದೇಹದ ಚಯಾಪಚಯ ಕಡಿಮೆ ಮಾಡುತ್ತದೆ. ರಕ್ತದೊತ್ತಡ, ಹೈಪೋಥೈರಾಯ್ಡಿಸಮ್ ಮತ್ತು ಮಧುಮೇಹ ಕಾಯಿಲೆ ಅಪಾಯ ಹೆಚ್ಚಿಸುತ್ತದೆ.
ನಿಮ್ಮ ದಿನವನ್ನು ಹೀಗೆ ಪ್ರಾರಂಭಿಸಿ
ಆರೋಗ್ಯದ ಹಾನಿ ತಡೆಯಲು ಮತ್ತು ತೂಕ ನಷ್ಟಕ್ಕೆ ವೇಟ್ ಲಾಸ್ ಡ್ರಿಂಕ್ ಸೇವಿಸಿ. ಯೋಗ, ವ್ಯಾಯಾಮ ಮಾಡಿ, ಹೆಚ್ಚು ನೀರು ಕುಡಿಯಿರಿ. ಹಣ್ಣು, ನ್ಯೂಸ್ ಸೇವನೆ ಮೂಲಕ ಆರೋಂಬಿಸಿ. 6 ನೆನೆಸಿದ ಬಾದಾಮಿ ಸೇವಿಸಿ.
ಇದನ್ನೂ ಓದಿ: ಬಾಯಿಗೆ ರುಚಿ ಅಂತ ತುಂಬಾ ಮೇಯನೀಸ್ ತಿಂದ್ರೆ ಏನಾಗುತ್ತೆ ನೋಡಿ
ಕಪ್ಪು ಒಣದ್ರಾಕ್ಷಿ ಅಥವಾ ಪ್ರೋಟೀನ್ ಶೇಕ್ ಅನ್ನು ಉಪಹಾರದ ಪೂರ್ವ ಸೇವನೆ ಮಾಡಿ. ಮೊಟ್ಟೆ ಮತ್ತು ಮೊಳಕೆ ಕಾಳು ಪ್ರೋಟೀನ್ನ ಮೂಲಗಳು ಸಿಹಿ ಕಡುಬಯಕೆ ಕಡಿಮೆ ಮಾಡುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ