• Home
  • »
  • News
  • »
  • lifestyle
  • »
  • Weight Loss: ತೂಕ ನಷ್ಟಕ್ಕೆ ಇವುಗಳ ಜ್ಯೂಸ್ ಮಾಡಿ ಸೇವಿಸಿ!

Weight Loss: ತೂಕ ನಷ್ಟಕ್ಕೆ ಇವುಗಳ ಜ್ಯೂಸ್ ಮಾಡಿ ಸೇವಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲ ಹಣ್ಣುಗಳು ಮತ್ತು ತರಕಾರಿ ರಸವು ತೂಕ ಇಳಿಕೆಗೆ ಸಾಕಷ್ಟು ಸಹಕಾರಿ. ಇದು ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಕೆಲವು ಜ್ಯೂಸ್ ಮತ್ತು ಡ್ರಿಂಕ್ಸ್ ಮೂಲಕ ವೇಟ್ ಲಾಸ್ ಮಾಡಬಹುದು. ಜಿಮ್ ಅಥವಾ ಡಯಟ್ ಮಾಡಲು ಇಷ್ಟವಿಲ್ಲ ಅನ್ನೋದಾದ್ರೆ ನಿಮ್ಮ ಆಹಾರದಲ್ಲಿ ಕೆಲ ಜ್ಯೂಸ್ ಸೇರಿಸಿ ತೂಕ ಇಳಿಕೆ ಮಾಡಿ.

ಮುಂದೆ ಓದಿ ...
  • Share this:

    ತೂಕ ಹೆಚ್ಚಳ ಇತ್ತೀಚಿನ ದಿನಗಳಲ್ಲಿ ಗಂಭೀರ ಸಮಸ್ಯೆ (Serious Problem) ಆಗಿದೆ. ತೂಕ ಹೆಚ್ಚಳ, ಅಧಿಕ ತೂಕ ಅಥವಾ ಬೊಜ್ಜು (Obesity) ಹಲವು ಕಾಯಿಲೆಗಳನ್ನು (Disease) ಅಂಟುವಂತೆ ಮಾಡುತ್ತದೆ. ಸೌಂದರ್ಯವನ್ನು ಕಡಿಮೆ ಮಾಡುತ್ತದೆ. ತ್ವಚೆಯಿಂದ (Skin) ಹಿಡಿದು ಸಾಕಷ್ಟು ಅಸ್ವಸ್ಥತೆ, ಆರೋಗ್ಯ ಸಮಸ್ಯೆ (Health Problem) ಕಾಡುತ್ತದೆ. ಹಾಗಾಗಿ ಉತ್ತಮ ವ್ಯಾಯಾಮ, ಯೋಗ ಮತ್ತು ಆಹಾರ ಕ್ರಮ ಫಾಲೋ ಮಾಡುವ ಮೂಲಕ ತೂಕ ಇಳಿಕೆಗೆ ಪ್ರಯತ್ನಿಸಿ. ಇದು ಉತ್ತಮ ಮಾರ್ಗವೆಂದು ತಜ್ಞರು ಹೇಳ್ತಾರೆ. ಇನ್ನು ಕೆಲವು ಜ್ಯೂಸ್ ಮತ್ತು ಡ್ರಿಂಕ್ಸ್ ಮೂಲಕ ವೇಟ್ ಲಾಸ್ ಮಾಡಬಹುದು. ಜಿಮ್ ಅಥವಾ ಡಯಟ್ ಮಾಡಲು ಇಷ್ಟವಿಲ್ಲ ಅನ್ನೋದಾದ್ರೆ ನಿಮ್ಮ ಆಹಾರದಲ್ಲಿ ಕೆಲ ಜ್ಯೂಸ್ ಸೇರಿಸಿ, ತೂಕ ಇಳಿಕೆ ಮಾಡಿ.


    ವೇಟ್ ಲಾಸ್ ಡ್ರಿಂಕ್ಸ್


    ಕೆಲ ಹಣ್ಣುಗಳು ಮತ್ತು ತರಕಾರಿ ರಸವು ತೂಕ ಇಳಿಕೆಗೆ ಸಾಕಷ್ಟು ಸಹಕಾರಿ. ಇದು ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಮತ್ತು ತೂಕ ಇಳಿಕೆಗೆ ಸಹಕಾರಿ. ಮತ್ತು ನೀವು ಆ ಜ್ಯೂಸ್ ನ್ನು ಇಷ್ಟಪಟ್ಟು ಸೇವಿಸುತ್ತೀರಿ. ಯಾಕಂದ್ರೆ ಅದನ್ನು ವೇಟ್ ಲಾಸ್ ಗೆ ಹೇಗೆ ಸಿದ್ಧಪಡಿಸಬೇಕು ಅಂದ್ರೆ ವೇಟ್ ಲಾಸ್ ಡ್ರಿಂಕ್ಸ್ ತಯಾರಿಸುವ ವಿಧಾನವನ್ನ ಪೌಷ್ಟಿಕತಜ್ಞೆ ಶಿಖಾ ಅಗರ್ವಾಲ್ ಶರ್ಮಾ ಹೇಳಿದ್ದಾರೆ.


    ತೂಕ ನಷ್ಟಕ್ಕೆ ಬೀಟ್ರೂಟ್ ಮತ್ತು ಆಮ್ಲಾ ಜ್ಯೂಸ್


    ಒಂದು ಕಪ್ ಬೀಟ್ರೂಟ್, ಒಂದು ಕಪ್ ಕತ್ತರಿಸಿದ ಬೆಟ್ಟದ ನೆಲ್ಲಿಕಾಯಿ, ಅರ್ಧ ಇಂಚಿನ ತಾಜಾ ಶುಂಠಿ, ಆರು ಪುದೀನ ಎಲೆ, ಅರ್ಧ ಟೀಸ್ಪೂನ್ ಹುರಿದ ಜೀರಿಗೆ ಪುಡಿ, ಅರ್ಧ ಟೀಸ್ಪೂನ್ ಕಪ್ಪು ಉಪ್ಪು, ಅರ್ಧ ಟೀಸ್ಪೂನ್ ನಿಂಬೆ ರಸ, ಅರ್ಧ ಟೀಸ್ಪೂನ್ ಜೇನುತುಪ್ಪ ಮತ್ತು ನೀರು ಬೇಕು.




    ಕತ್ತರಿಸಿದ ಬೀಟ್ರೂಟ್, ಆಮ್ಲಾ, ಶುಂಠಿ ಮತ್ತು ಪುದೀನ ಎಲೆ ಎಲ್ಲವನ್ನೂ ಬ್ಲೆಂಡರ್ ಗೆ ಹಾಕಿ ನಯವಾದ ಮಿಶ್ರಣ ಮಾಡಿ. ಇದಕ್ಕೆ ನೀರು, ಹುರಿದ ಜೀರಿಗೆ ಪುಡಿ, ಕಪ್ಪು ಉಪ್ಪು, ನಿಂಬೆ ರಸ, ಜೇನುತುಪ್ಪ ಸೇರಿಸಿ, ಗಾಜಿನ ಗ್ಲಾಸ್ ಗೆ ಸುರಿದು ಕುಡಿಯಿರಿ.


    ತೂಕ ನಷ್ಟಕ್ಕೆ ಪಾಲಕ್ ಮತ್ತು ಸೌತೆಕಾಯಿ ಜ್ಯೂಸ್


    ಸೌತೆಕಾಯಿ, ಪಾಲಕ ಎಲೆ, ಶುಂಠಿ ತೊಳೆದು ಸಣ್ಣದಾಗಿ ಹೆಚ್ಚಿರಿ. ನಂತರ ಇವೆಲ್ಲವನ್ನೂ ಬ್ಲೆಂಡರ್‌ನಲ್ಲಿ ಹಾಕಿ ಮಿಶ್ರಣ ಮಾಡಿ. ನಂತರ ನಿಂಬೆ ರಸ, ಕಲ್ಲುಪ್ಪು ಸೇರಿಸಿ ಕುಡಿಯಿರಿ.


    https://kannada.news18.com/web-stories/lifestyle/health-benefits-of-pineapple-juice/index.html
    ಸಾಂದರ್ಭಿಕ ಚಿತ್ರ


    ತೂಕ ನಷ್ಟಕ್ಕೆ ಬಾಟಲ್ ಸೋರೆಕಾಯಿ ಜ್ಯೂಸ್


    ಒಂದು ಕಪ್ ಕತ್ತರಿಸಿದ ಅನಾನಸ್, ಒಂದು ಕಪ್ ಕತ್ತರಿಸಿದ ಕಿತ್ತಳೆ, ಒಂದು ಕಪ್ ಕತ್ತರಿಸಿದ ಬಾಟಲ್ ಸೋರೆಕಾಯಿ, ಒಂದು ಕಪ್ ಕತ್ತರಿಸಿದ ಸೌತೆಕಾಯಿ, ತುಳಸಿ ಎಲೆ ನಾಲ್ಕು, ಆರು ಕರಿಬೇವಿನ ಎಲೆ ಬೇಕು. ಎಲ್ಲವನ್ನೂ ತೊಳೆದು ಬ್ಲೆಂಡರ್‌ ಗೆ ಹಾಕಿ. ನಯವಾದ ಮಿಶ್ರಣವನ್ನು ಗ್ಲಾಸ್ ಗೆ ಸುರಿದು ಸೇವಿಸಿ.


    ತೂಕ ನಷ್ಟಕ್ಕೆ ಟೊಮೆಟೊ ಜ್ಯೂಸ್


    ಮೂರು ಕೆಂಪು ಟೊಮ್ಯಾಟೊ, ಅರ್ಧ ಕಪ್ ಸೌತೆಕಾಯಿ, 6 ತಾಜಾ ಪುದೀನ ಚಿಗುರು, ಕಾಲು ಟೀಸ್ಪೂನ್ ಕಲ್ಲುಪ್ಪು, ಒಂದು ಟೀಸ್ಪೂನ್ ನಿಂಬೆ ರಸ, ಒಂದು ಕಪ್ ತಣ್ಣೀರು ಬೇಕು.


    ಮೊದಲು ಟೊಮೆಟೊ ಕುದಿಸಿ, ತಣ್ಣೀರಿನಲ್ಲಿ ನೆನೆಸಿ. ನಂತರ ಅದಕ್ಕೆ ಸೌತೆಕಾಯಿ ತುಂಡುಗಳನ್ನು ಸೇರಿಸಿ ಮತ್ತು ಮತ್ತೆ ಮಿಶ್ರಣ ಮಾಡಿ. ಮಿಶ್ರಣವನ್ನು ಫಿಲ್ಟರ್ ಮಾಡಿ. ಅದಕ್ಕೆ ತಣ್ಣೀರು, ನಿಂಬೆ ರಸ, ಉಪ್ಪು ಮತ್ತು ಪುದೀನ ಎಲೆ ಸೇರಿಸಿ ಸೇವಿಸಿ.


    ಇದನ್ನೂ ಓದಿ: ಬೆಳಗಿನ ತಿಂಡಿ ಬಿಟ್ಟು ತೂಕ ಇಳಿಸಿಕೊಳ್ಳುವ ಬದಲು ಈ ಕ್ರಮ ಅನುಸರಿಸಿ


    ತೂಕ ನಷ್ಟಕ್ಕೆ ಕ್ಯಾರೆಟ್ ಜ್ಯೂಸ್


    ಕ್ಯಾರೆಟ್, ಸೇಬು ಹಣ್ಣು, ಶುಂಠಿ, ಉಪ್ಪು, ಐಸ್ ತುಂಡು ಬೇಕು. ಎಲ್ಲಾ ಪದಾರ್ಥ ತೊಳೆದು, ಕ್ಯಾರೆಟ್ ಅನ್ನು ಸಿಪ್ಪೆ ತೆಗೆದಯ ಕತ್ತರಿಸಿ. ಸೇಬನ್ನು ಸಿಪ್ಪೆ ತೆಗೆದು ಕತ್ತರಿಸಿ ಎಲ್ಲಾ ಪದಾರ್ಥಗಳನ್ನು ಬ್ಲೆಂಡರ್ನಲ್ಲಿ ಹಾಕಿ. ರುಚಿಗೆ ಉಪ್ಪು ಸೇರಿಸಿ ಸೇವಿಸಿ.

    Published by:renukadariyannavar
    First published: