ತೂಕ ನಷ್ಟಕ್ಕೆ (Weight Loss) ನೀವು ತಿನ್ನುವ ಆಹಾರದ (Food) ಬಗ್ಗೆ ಸಾಕಷ್ಟು ಗಮನ ಹರಿಸಬೇಕಾಗುತ್ತದೆ. ಡಯಟ್ (Diet) ಮಾಡುವುದು ತ್ವರಿತ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಅದರಲ್ಲೂ ಆಹಾರದಲ್ಲಿ ಪೋಷಕಾಂಶ (Nutrients) ಭರಿತ ತರಕಾರಿ ಮತ್ತು ಹಣ್ಣುಗಳನ್ನು (Vegetables And Fruits) ಸೇರಿಸುವುದು ತುಂಬಾ ಮುಖ್ಯ. ಬಾಯಿಗೆ ರುಚಿ ಕೊಡುವ ಜಂಕ್ ಫುಡ್, ಕರಿದ ಪದಾರ್ಥಗಳು, ಸಕ್ಕರೆ, ಮೈದಾ ಆಹಾರ ಪದಾರ್ಥ ಸೇವನೆ ಸಂಪೂರ್ಣವಾಗಿ ತಪ್ಪಿಸಬೇಕಾಗುತ್ತದೆ. ಇಲ್ಲವೇ ವಾರದಲ್ಲಿ ಒಮ್ಮೆ ಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು ಅಂತಾರೆ ತಜ್ಞರು. ಪೇಸ್ಟ್ರಿ, ಪಿಜ್ಜಾ, ಬರ್ಗರ್, ಜಾಮೂನು, ಬೇಕರಿ ತಿಂಡಿಗಳು, ಬಿಳೆ ಬ್ರೆಡ್, ಬಿಸ್ಕತ್ತು ಇಂತಹ ಪದಾರ್ಥಗಳ ಸೇವನೆ ತೂಕ ಇಳಿಕೆಗೆ ತೊಂದರೆ ಉಂಟು ಮಾಡುತ್ತವೆ.
ತೂಕ ಇಳಿಕೆಗೆ ಕಟ್ಟುನಿಟ್ಟಿನ ಆಹಾರ ಕ್ರಮ ಪಾಲಿಸಿ
ತೂಕ ಇಳಿಸುವವರು ಕಟ್ಟು ನಿಟ್ಟಿನ ಆಹಾರ ಕ್ರಮ ಪಾಲಿಸಿದರೆ ಆರೋಗ್ಯ ಮತ್ತು ತೂಕ ನಷ್ಟ ಎರಡಕ್ಕೂ ಪ್ರಯೋಜನ ನೀಡುತ್ತದೆ. ನಮ್ಮ ಆಹಾರದಲ್ಲಿ ಗೋಧಿ ಪದಾರ್ಥಗಳನ್ನು ಹೆಚ್ಚಾಗಿ ಬಳಕೆ ಮಾಡುವುದು ಗೊತ್ತೇ ಇದೆ. ತೂಕ ನಷ್ಟದ ಜರ್ನಿಯಲ್ಲಿ ಮೊಳಕೆ ಕಾಳುಗಳ ಸೇವನೆ ಸಾಕಷ್ಟು ಪ್ರಯೋಜನಕಾರಿ.
ಮೊಳಕೆಯೊಡೆದ ಹೆಸರು ಕಾಳು, ಮೊಳಕೆಯೊಡೆದ ಕಡಲೆಕಾಳು, ಮೊಳಕೆಯೊಡೆದ ಗೋಧಿ, ಹುರುಳಿ, ಮಡಿಕೆ ಕಾಳು ಹೀಗೆ ವಿವಿಧ ಕಾಳುಗಳನ್ನು ರಾತ್ರಿಯಿಡೀ ನೆನೆಸಿಟ್ಟು, ಬೆಳಗ್ಗೆ ನೀರನ್ನು ಸೋಸಿ ತೆಗೆದು, ಬಟ್ಟೆಯಲ್ಲಿ ಕಟ್ಟಿಟ್ಟು ಮೊಳಕೆ ಬರಿಸಿ ಸಲಾಡ್ ರೂಪದಲ್ಲಿ ಸೇವನೆ ಮಾಡುವುದು ತೂಕ ನಷ್ಟಕ್ಕೆ ಸಾಕಷ್ಟು ಪ್ರಯೋಜನ ತಂದು ಕೊಡುತ್ತದೆ.
ಮೊಳಕೆಯೊಡೆದ ಗೋಧಿ ಕಾಳು ಸೇವನೆ ಮತ್ತು ತೂಕ ನಷ್ಟ
ಮೊಳಕೆ ಕಾಳುಗಳ ಸೇವನೆಯು ಆರೋಗ್ಯ ಪ್ರಯೋಜನಗಳನ್ನು ದುಪ್ಪಟ್ಟಾಗಿಸುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ. ಮೊಳಕೆಯೊಡೆದ ಗೋಧಿ ಕಾಳು ಸೇವನೆ ಮಾಡಿದರೆ ಅದು ದೇಹದಿಂದ ವಿಷ ತೆಗೆದು ಹಾಕುತ್ತದೆ. ಇದು ಚಯಾಪಚಯ ಕ್ರಿಯೆ ವೇಗವಾಗುವಂತೆ ಮಾಡುತ್ತದೆ. ಶಕ್ತಿ ನೀಡುತ್ತದೆ.
ಮೊಳಕೆಯೊಡೆದ ಗೋಧಿ ಕಾಳು ಕಡಿಮೆ ಕ್ಯಾಲೋರಿ ಹೊಂದಿದೆ. ಹಾಗಾಗಿ ಇದರ ಸೇವನೆ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ರೋಗಗಳ ಅಪಾಯ ಕಡಿಮೆ ಮಾಡುತ್ತದೆ
ಗೋಧಿಯಲ್ಲಿ ಎಥೋಲಿಕ್ ಸಾರಗಳಿವೆ. ಇವು ಉತ್ಕರ್ಷಣ ನಿರೋಧಕ ಗುಣ ಉತ್ತೇಜಿಸುತ್ತವೆ. ಅದರಲ್ಲಿ ಗ್ಲೈಕೋಸೈಡ್ ಅಣುವಿದೆ. ಇದು ಆಕ್ಸಿಡೇಟಿವ್ ಒತ್ತಡ, ಟೈಪ್ 2 ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಅಪಾಯ ಕಡಿಮೆ ಮಾಡುತ್ತದೆ.
ಹೃದಯದ ಆರೋಗ್ಯ ಕಾಪಾಡುತ್ತದೆ. ಕರುಳಿನ ಚಲನೆಗೆ ಸಹಕಾರಿ. ದೇಹದಿಂದ ವಿಷ ತೆಗೆದು ಹಾಕುತ್ತದೆ. ತೂಕ ಕಡಿಮೆ ಆಗುತ್ತದೆ. ಮೊಳಕೆಯೊಡೆದ ಗೋಧಿಯಲ್ಲಿ ಫೋಲೇಟ್, ಕಬ್ಬಿಣ, ವಿಟಮಿನ್ ಸಿ, ಸತು, ಮೆಗ್ನೀಸಿಯಮ್, ಕಿಣ್ವ, ಕ್ಯಾಲ್ಸಿಯಂ, ಡಯೆಟರಿ ಫೈಬರ್ ಮತ್ತು ಪ್ರೊಟೀನ್ ಇದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ.
ಮೊಳಕೆಯೊಡೆದ ಗೋಧಿಯು ಹೇಗೆ ತೂಕ ಕಡಿಮೆ ಮಾಡುತ್ತದೆ?
ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ
ಮೊಳಕೆಯೊಡೆದ ಗೋಧಿಯಲ್ಲಿ ಫೈಬರ್ ಅಂಶ ಹೆಚ್ಚು. ಕರಗುವ ನಾರಿನ ಪ್ರಮಾಣ ಹೆಚ್ಚು. ಮಲಬದ್ಧತೆ ನಿವಾರಿಸುತ್ತದೆ. ಒಂದು ಬಟ್ಟಲು ಮೊಳಕೆಯೊಡೆದ ಗೋಧಿ ಸೇವನೆಯು ದೀರ್ಘಕಾಲ ಹೊಟ್ಟೆ ತುಂಬಿಸುತ್ತದೆ. ಇದು ಪದೇ ಪದೇ ತಿನ್ನುವುದನ್ನು ತಡೆಯುತ್ತದೆ. ಹೀಗೆ ವೇಟ್ ಲಾಸ್ ಗೆ ಸಹಕಾರಿ.
ಕಡಿಮೆ ಕ್ಯಾಲೋರಿ ಹೊಂದಿದೆ
ಮೊಳಕೆಯೊಡೆದ ಗೋಧಿ ಕಡಿಮೆ ಕ್ಯಾಲೋರಿ ಹೊಂದಿದೆ. ವ್ಯಾಯಾಮ ಮತ್ತು ಇದನ್ನು ಸೇವನೆ ಮಾಡಿದ್ರೆ ತ್ವರಿತವಾಗಿ ತೂಕ ಕಳೆದುಕೊಳ್ಳಬಹುದು. ಜೀರ್ಣಾಂಗ ವ್ಯವಸ್ಥೆ ಸರಿಪಡಿಸಿ, ಬೆಲ್ಲಿ ಫ್ಯಾಟ್ ಕಡಿಮೆ ಮಾಡುತ್ತದೆ. ಕಡಿಮೆ ಕೊಬ್ಬು ಹೊಂದಿದೆ.
ಪ್ರೋಟೀನ್ ಸಮೃದ್ಧ ಆಹಾರ
ಮೊಳಕೆಯೊಡೆದ ಗೋಧಿ, ತೂಕ ಇಳಿಕೆಗೆ ಬೇಕಾದ ಪ್ರೊಟೀನ್ ಸಮೃದ್ಧ ಆಹಾರವಾಗಿದೆ. ಇದು ತೂಕ ಕಳೆದುಕೊಳ್ಳಲು ಸಹಕಾರಿ. ಇದರಲ್ಲಿ ಅಮೈನೋ ಆಮ್ಲವಿದ್ದು, ತೂಕ ನಿಯಂತ್ರಿಸುತ್ತದೆ. ಸ್ನಾಯುಗಳ ಆರೋಗ್ಯ ಕಾಪಾಡುತ್ತದೆ.
ಇದನ್ನೂ ಓದಿ: ಈ ಪದಾರ್ಥಗಳ ಸೇವನೆಯಿಂದ ಆಸಿಡಿಟಿ ಸಮಸ್ಯೆ ಹೆಚ್ಚುತ್ತದೆ, ಹುಷಾರು!
ಮೊಳಕೆಯೊಡೆದ ಗೋಧಿಯನ್ನು ಮಧ್ಯಾಹ್ನ ಊಟ, ರಾತ್ರಿ ಊಟ, ಉಪಹಾರಕ್ಕೆ ಯಾವಾಗ ಬೇಕಾದರೂ ಸೇವಿಸಬಹುದು. ಸಲಾಡ್ ರೂಪದಲ್ಲೂ ಸೇವಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ