• Home
  • »
  • News
  • »
  • lifestyle
  • »
  • Morning Diet: ತೂಕ ಇಳಿಕೆಗೆ ಅಲೋವೆರಾ ಜ್ಯೂಸ್ ಅನ್ನು ಹೇಗೆ ಬಳಸಬೇಕು?

Morning Diet: ತೂಕ ಇಳಿಕೆಗೆ ಅಲೋವೆರಾ ಜ್ಯೂಸ್ ಅನ್ನು ಹೇಗೆ ಬಳಸಬೇಕು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜಂಕ್ ಮತ್ತು ಪ್ಯಾಕ್ ಮಾಡಿದ ಆಹಾರವು ನಮ್ಮ ಜೀವನದ ಭಾಗವಾಗಿ ಬಿಟ್ಟಿದೆ. ಇದು ತೂಕ ಹೆಚ್ಚಾಗಲು ಕಾರಣ ಆಗಿದೆ. ಹೆಚ್ಚುವ ತೂಕ ಅನಾರೋಗ್ಯ ಮತ್ತು ಕಾಯಿಲೆಗಳಿಗೆ ತುತ್ತಾಗಿಸುತ್ತದೆ. ಹಾಗಾಗಿ ಸ್ಥೂಲಕಾಯವನ್ನು ಸಮಯಕ್ಕೆ ನಿಯಂತ್ರಿಸುವುದು ತುಂಬಾ ಮುಖ್ಯ ಆಗಿದೆ. ತೂಕ ಇಳಿಸಲು ನಿಮಗೆ ಅಲೋವೆರಾ ಸಹಕಾರಿ ಆಗಿದೆ.

ಮುಂದೆ ಓದಿ ...
  • Share this:

    ಇಂದಿನ ದಿನಗಳಲ್ಲಿ ಆರೋಗ್ಯಕ್ಕೆ (Health) ಆಹಾರ (Food) ಪದ್ಧತಿ ತುಂಬಾ ಮುಖ್ಯ. ಉತ್ತಮ ಆರೋಗ್ಯ (Good Health) ಕಾಪಾಡಲು ಮತ್ತು ತೂಕ ನಷ್ಟ (Weight Loss), ತೂಕ ನಿಯಂತ್ರಣ ಮಾಡುವುದು ದೊಡ್ಡ ಸಮಸ್ಯೆ ಆಗಿದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಅಸ್ತವ್ಯಸ್ತ ಜೀವನಶೈಲಿ ಹಾಗೂ ಕೆಟ್ಟ ಆಹಾರ ಪದ್ಧತಿ. ನಾವು ನಮ್ಮ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಜಂಕ್ ಮತ್ತು ಪ್ಯಾಕ್ ಮಾಡಿದ ಆಹಾರವು ನಮ್ಮ ಜೀವನದ ಭಾಗವಾಗಿ ಬಿಟ್ಟಿದೆ. ಇದು ತೂಕ ಹೆಚ್ಚಾಗಲು ಕಾರಣ ಆಗಿದೆ. ಹೆಚ್ಚುವ ತೂಕ ಅನಾರೋಗ್ಯ ಮತ್ತು ಕಾಯಿಲೆಗಳಿಗೆ ತುತ್ತಾಗಿಸುತ್ತದೆ. ಸ್ಥೂಲಕಾಯ ಸಾಕಷ್ಟು ಸಮಸ್ಯೆ ತಂದೊಡ್ಡುತ್ತದೆ.


    ಅಲೋವೆರಾ ತೂಕ ಇಳಿಕೆಗೆ ಸಹಕಾರಿ


    ಹಾಗಾಗಿ ಸ್ಥೂಲಕಾಯವನ್ನು ಸಮಯಕ್ಕೆ ನಿಯಂತ್ರಿಸುವುದು ತುಂಬಾ ಮುಖ್ಯ ಆಗಿದೆ. ತೂಕ ಇಳಿಸಲು ನಿಮಗೆ ಅಲೋವೆರಾ ಸಹಕಾರಿ ಆಗಿದೆ. ಅಲೋವೆರಾ ತೂಕ ಇಳಿಕೆಗೆ ಸಹಕಾರಿ ಆಗಿದೆ. ಜೊತೆಗೆ ಅನೇಕ ಆರೋಗ್ಯ ಅಪಾಯಗಳಿಂದ ರಕ್ಷಿಸುತ್ತದೆ.


    ಪ್ರಕೃತಿಯಲ್ಲಿ ಆರೋಗ್ಯ ವರ್ಧಕಕ್ಕೆ ಉತ್ತಮವಾದ ಅನೇಕ ವಸ್ತುಗಳು ಇವೆ. ಇವುಗಳಲ್ಲಿ ಅಲೋವೆರಾ ಕೂಡ ಒಂದು. ಇದು ತೂಕ ನಿಯಂತ್ರಿಸಲು ಪರಿಣಾಮಕಾರಿ ಆಗಿದೆ. ಅಲೋವೆರಾವನ್ನು ಆಹಾರ ಪೂರಕವಾಗಿ, ಸೌಂದರ್ಯ ವರ್ಧಕಗಳಲ್ಲಿ ಮತ್ತು ಅನೇಕ ರೋಗಗಳಿಗೆ ಪರಿಹಾರವಾಗಿ ಬಳಕೆ ಮಾಡಲಾಗುತ್ತದೆ.


    ಇದನ್ನೂ ಓದಿ: ತ್ವಚೆಯ ಸಮಸ್ಯೆ ಇದ್ದಾಗ ಯಾವ ಪದಾರ್ಥಗಳ ಸೇವನೆ ತಪ್ಪಿಸಬೇಕು?


    ಅಲೋವೆರಾ ಒಂದು ಸಸ್ಯ. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ತೂಕ ನಷ್ಟಕ್ಕೆ ಅಲೋವೆರಾ ಜ್ಯೂಸ್ ಸೇವಿಸಲು ಶಿಫಾರಸು ಮಾಡಲಾಗಿದೆ. ಏಕೆಂದರೆ ಇದು ದೇಹವನ್ನು ನಿರ್ವಿಷಗೊಳಿಸುತ್ತದೆ. ಇದು ತೂಕ ನಿಯಂತ್ರಿಸುತ್ತದೆ.


    ತೂಕ ಇಳಿಕೆಗೆ ಅಲೋವೆರಾ ಜ್ಯೂಸ್ ಹೇಗೆ ಸಹಾಯ ಮಾಡುತ್ತದೆ?


    ತೂಕ ನಷ್ಟಕ್ಕೆ ಅಲೋವೆರಾ ಜ್ಯೂಸ್ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಹೇಳಲು ಸಾಕಷ್ಟು ವೈಜ್ಞಾನಿಕ ಸಂಶೋಧನೆಗಳು ಲಭ್ಯ ಇವೆ. ಅವುಗಳಲ್ಲಿ ಒಂದನ್ನು ಪಬ್‌ಮೆಡ್‌ನ ಸಂಶೋಧನೆಯ ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಮಾಹಿತಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಸಂಶೋಧನೆಯ ಪ್ರಕಾರ


    ಇದು ಸ್ಥೂಲಕಾಯ ವಿರೋಧಿ ಗುಣ ಹೊಂದಿದೆ. ಇದು ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡುತ್ತದೆ. ಅದರ ಸೇವನೆ ಮತ್ತೆ ಮತ್ತೆ ಹಸಿವು ಉಂಟಾಗದಂತೆ ತಡೆಯುತ್ತದೆ. ಇದರಿಂದ ವ್ಯಕ್ತಿಯು ಸೀಮಿತ ಪ್ರಮಾಣದ ಆಹಾರ ಸೇವಿಸುತ್ತಾನೆ. ಇದು ತೂಕ ನಿಯಂತ್ರಿಸಲು ಸಹಕಾರಿ.


    ಬೊಜ್ಜು ಕಡಿಮೆ ಮಾಡಲು ಅಲೋವೆರಾ ಜ್ಯೂಸ್ ಅನ್ನು ಹೇಗೆ ಬಳಸಬೇಕು?


    ಅಲೋವೆರಾ ಜ್ಯೂಸ್


    ಅಲೋವೆರಾ ಎಲೆ ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು, ಮಧ್ಯದಿಂದ ಕತ್ತರಿಸಿ ಅಲೋವೆರಾ ಜೆಲ್ ಅನ್ನು ತೆಗೆಯಿರಿ. ಈ ಜೆಲ್ ಅನ್ನು ಮಿಕ್ಸಿಯಲ್ಲಿ ರುಬ್ಬಿರಿ. ನಂತರ ಒಂದು ಲೋಟ ನೀರಿಗೆ ಎರಡರಿಂದ ಮೂರು ಚಮಚ ಅಲೋವೆರಾ ಜೆಲ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಸೇವಿಸಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ.


    ಅಲೋವೆರಾ ಜೇನುತುಪ್ಪ ಮತ್ತು ನಿಂಬೆ ರಸ


    ಒಂದು ಲೋಟ ನೀರಿನಲ್ಲಿ ಎರಡು ಚಮಚ ಅಲೋವೆರಾ ಜೆಲ್ ಮತ್ತು ನಿಂಬೆ ರಸ ಮಿಶ್ರಣ ಮಾಡಿ. ಈಗ ರುಚಿಗೆ ತಕ್ಕಂತೆ ಜೇನುತುಪ್ಪ ಸೇರಿಸಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ರಸ ಕುಡಿಯಿರಿ. ಇದು ತೂಕ ಇಳಿಕೆಗೆ ಸಹಕಾರಿ.


     ಅಲೋವೆರಾ ಮತ್ತು ಜೇನುತುಪ್ಪ


    ನಿಂಬೆ ಕೆಲವು ಜನರಿಗೆ ಸರಿ ಹೊಂದುವುದಿಲ್ಲ. ಅವರು ನಿಂಬೆ ಇಲ್ಲದೆಯೂ ಜೇನುತುಪ್ಪದ ಜೊತೆ ಅಲೋವೆರಾ ಸೇವನೆ ಮಾಡಬಹುದು. ಇದಕ್ಕಾಗಿ ಮೊದಲು ಎರಡು ಚಮಚ ಅಲೋವೆರಾ ಜೆಲ್ ಅನ್ನು ಒಂದು ಲೋಟ ನೀರಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ತದನಂತರ ಅದಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿ.


    ಅಲೋವೆರಾ ಸ್ಮೂಥಿ


    ಕೆಲವು ಜನರು ಅಲೋವೆರಾ ರಸ ಸೇವಿಸಲ್ಲ. ಅಂತವರು ಅದರ ಸ್ಮೂಥಿಯನ್ನು ಪ್ರಯತ್ನಿಸಬಹುದು. ಇದಕ್ಕಾಗಿ ಎರಡು ಚಮಚ ಅಲೋವೆರಾ ಜೆಲ್ ಅನ್ನು ಒಂದು ಕಪ್ ತೆಂಗಿನ ನೀರು, ಒಂದು ಕಪ್ ನೀರು, ಒಂದು ಚಮಚ ಸ್ಪಿರುಲಿನಾ ಪೌಡರ್, ಒಂದು ಚಿಕ್ಕ ಸೌತೆಕಾಯಿ


    ಇದನ್ನೂ ಓದಿ: ಮೂಳೆಗಳ ಕಾಯಿಲೆಗೆ ಕಾರಣವಾಗುವ ಲೂಬ್ರಿಕಂಟ್ ಎಂದರೇನು? ಇದನ್ನು ಪೂರೈಸುವ ಪದಾರ್ಥಗಳಿವು!


    ಮತ್ತು ಐಸ್ ಕ್ಯೂಬ್‌ ಹಾಕಿ ಮಿಕ್ಸಿಯಲ್ಲಿ ರುಬ್ಬಿ. ನಂತರ ಈ ಎಲ್ಲಾ ಮಿಶ್ರಣವನ್ನು ಹೊರ ತೆಗೆಯಿರಿ, ನಂತರ ಅದರಲ್ಲಿ ನಿಂಬೆ ರಸ ಹಿಂಡಿ ಮತ್ತು ಮಿಶ್ರಣ ಮಾಡಿ. ಸ್ಮೂತಿ ಸೇವಿಸಿ.

    Published by:renukadariyannavar
    First published: