ತೂಕ ಇಳಿಕೆಗೆ (Weight Loss) ಹಲವು ರೀತಿಯ ಡಯಟ್ ಪ್ಲಾನ್ ಗಳು (Diet Plan) ಟ್ರೆಂಡಿಂಗ್ ನಲ್ಲಿವೆ (Trending). ಅವುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದು ಮಾಡ್ತಿದೆ ಪ್ರೊಲೋನ್ ಡಯಟ್ (Prolon Diet). ಇದರಲ್ಲಿ ತೂಕ ಇಳಿಸುವವರು ಈ ಡಯಟ್ ಫಾಲೋ ಮಾಡ್ತಾರೆ. ಇದರಲ್ಲಿ ವ್ಯಕ್ತಿಯು ಉಪವಾಸ ಮತ್ತು ಸೀಮಿತ ಕ್ಯಾಲೋರಿ ಸೇವನೆ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲದೇ ಪ್ರೊಲೋನ್ ಡಯಟ್ ಮಾಡುವವರು ನಿಗದಿತ ಆಹಾರವನ್ನು ಮಾತ್ರ ಸೇವನೆ ಮಾಡಬೇಕಾಗುತ್ತದೆ. ಪ್ರೊಲೋನ್ ಡಯಟ್ ಸಸ್ಯಾಹಾರ ಆಧಾರಿತ ನಿರ್ಬಂಧಿತ ಆಹಾರ ಕ್ರಮ ಆಗಿದೆ. ಇದು ಚಯಾಪಚಯ ಬಲಪಡಿಸುವ ಜೊತೆಗೆ ಹಲವು ಆರೋಗ್ಯ ಪ್ರಯೋಜನ ನೀಡುತ್ತದೆ.
ತೂಕ ಇಳಿಕೆಗೆ ಪ್ರೊಲೋನ್ ಡಯಟ್ ಎಷ್ಟು ಪರಿಣಾಮಕಾರಿ?
ಪ್ರೊಲೋನ್ ಡಯಟ್ ನಲ್ಲಿ ಸಾಮಾನ್ಯ ಕ್ಯಾಲೋರಿ ಸೇವನೆ ಮಾಡಲಾಗುತ್ತದೆ. ಪ್ರೊಲೋನ್ ಡಯಟ್ ಒಂದು ವಿಶೇಷ ರೀತಿಯ ತಿನ್ನುವ ಯೋಜನೆ ಆಗಿದೆ. ಆಹಾರ ಮತ್ತು ಉಪವಾಸ ಕ್ರಮ ಎರಡನ್ನೂ ಇಲ್ಲಿ ಫಾಲೋ ಮಾಡಬೇಕಾಗುತ್ತದೆ. ಪ್ರೊಲೋನ್ ಡಯಟ್ ಐದು ದಿನಗಳ ಆಹಾರ ಕ್ರಮ ಅನುಸರಿಸುವ ಕೋರ್ಸ್ ಇದೆ.
ಪ್ರೊಲೋನ್ ಡಯಟ್ ಕೋರ್ಸ್ನಲ್ಲಿ ಸೀಮಿತ ಕ್ಯಾಲೋರಿ ಸೇವನೆಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಆಹಾರ ಕ್ರಮ ಫಾಲೋ ಮಾಡುವವರು ವೇಗವಾಗಿ ತೂಕ ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ. ಪ್ರೊಲೋನ್ ಡಯಟ್ ಪರಿಣಾಮಕಾರಿ ಆಗಿದೆ. ಇದು ತೂಕ ನಷ್ಟಕ್ಕೆ ಸಹಕಾರಿ ಎನ್ನಲಾಗಿದೆ.
ಪ್ರೊಲೋನ್ ಆಹಾರ ಕ್ರಮದಲ್ಲಿ ಏನೇನಿರುತ್ತದೆ?
ಆರೋಗ್ಯ ತಜ್ಞರ ಪ್ರಕಾರ, ಪ್ರೊಲೋನ್ ಡಯಟ್ ಯೋಜನೆಯನ್ನು ಉಪವಾಸದ ಆಹಾರ ಯೋಜನೆ ಎಂದೂ ಕರೆಯುತ್ತಾರೆ. ಈ ಪ್ರೊಲೋನ್ ಡಯಟ್ ನ್ನು ಇಟಾಲಿಯನ್ ಜೀವಶಾಸ್ತ್ರಜ್ಞ ಮತ್ತು ಸಂಶೋಧಕರಾಗಿರುವ ಡಾ.ವಾಟರ್ ಸಿದ್ಧಪಡಿಸಿದ್ದಾರೆ.
ಐದು ದಿನದ ಪ್ಯಾಕೇಜ್ ಮಾಡಿದ ಊಟದ ಕಿಟ್ ಕೊಡಲಾಗುತ್ತದೆ
ಪ್ರೊಲೋನ್ ಆಹಾರ ಯೋಜನೆ ಫಾಲೋ ಮಾಡುವವರಿಗೆ ಐದು ದಿನದ ಪ್ಯಾಕೇಜ್ ಮಾಡಿದ ಊಟದ ಕಿಟ್ ಗಳನ್ನು ಕೊಡಲಾಗುತ್ತದೆ. ಈ ಆಹಾರ ಯೋಜನೆ ಫಾಲೋ ಮಾಡುವವರು ಇದೇ ಆಹಾರದ ಕಿಟ್ ನ್ನು ಬಳಕೆ ಮಾಡಬೇಕು. ಬೇರೆ ಆಹಾರ ಸೇವನೆ ಮಾಡುವಂತಿಲ್ಲ.
ಐದು ದಿನ ನೀಡಲಾದ ಆಹಾರದ ಕಿಟ್ ನಿಂದ ಯಾವ ಪದಾರ್ಥ ಇರುತ್ತದೆಯೋ, ಅದೇ ಪದಾರ್ಥ ಊಟ ಮಾಡಬೇಕು. ಈ ಆಹಾರ ಯೋಜನೆಯಲ್ಲಿ ಊಟ ಮತ್ತು ತಿಂಡಿ ಸಂಪೂರ್ಣವಾಗಿ ಸಸ್ಯ ಆಧಾರಿತ ಊಟವಾಗಿದೆ.
ಕಾರ್ಬೋಹೈಡ್ರೇಟ್ ಪ್ರಮಾಣ ಕಡಿಮೆ ಇರುವ ಪದಾರ್ಥಗಳನ್ನು ಈ ಊಟದ ಕಿಟ್ ಗಳಲ್ಲಿ ನೀಡಲಾಗಿದೆ. ಊಟದ ಕಿಟ್ ನಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಿದೆ.
ಐದು ದಿನದ ಡಯಟ್ ಕಿಟ್ ನಲ್ಲಿ ಯಾವೆಲ್ಲಾ ಪದಾರ್ಥಗಳಿರುತ್ತವೆ?
ಎಲ್ಗಲ್ ತೈಲ, ಸೂಪ್ ಮಿಶ್ರಣ, ಹರ್ಬಲ್ ಟೀ, ಡಾರ್ಕ್ ಚಾಕೊಲೇಟ್, ಆಲಿವ್, ಗ್ಲಿಸರಾಲ್ ಆಧಾರಿತ ಎನರ್ಜಿ ಡ್ರಿಂಕ್ಸ್, ಟ್ರಿಶನಲ್ ಪೂರಕಗಳು, ಎನರ್ಜಿ ಡ್ರಿಂಕ್ಸ್, ಹೆಚ್ಚು ನೀರು ಕುಡಿಯುವುದು. ಇದು ಪ್ರೊಲೋನ್ ಆಹಾರ ಯೋಜನೆಯ ಭಾಗವಾಗಿರುತ್ತದೆ.
ಪ್ರೊಲೋನ್ ಆಹಾರ ಕ್ರಮದಿಂದ ಸಿಗುವ ಪ್ರಯೋಜನಗಳು ಯಾವವು?
ದೇಹದಲ್ಲಿ ಉರಿಯೂತ ಕಡಿಮೆ ಮಾಡುತ್ತದೆ
ತೂಕ ಇಳಿಕೆಗೆ ಪರಿಣಾಮಕಾರಿ ಮತ್ತು ತೂಕ ನಿಯಂತ್ರಣಕ್ಕೆ ಸಹಕಾರಿ
ಹೃದಯ ರಕ್ತನಾಳದ ಆರೋಗ್ಯ ಸುಧಾರಿಸುತ್ತದೆ
ಟೈಪ್ 2 ಮಧುಮೇಹ ನಿಯಂತ್ರಣಕ್ಕೆ ಸಹಕಾರಿ
ಕ್ಯಾನ್ಸರ್ ಕಾಯಿಲೆ ತಡೆಗೆ ಸಹಕಾರಿ
ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆ ಕಡಿಮೆ ಮಾಡುತ್ತದೆ
ಚಯಾಪಚಯ ಬಲಗೊಳ್ಳುತ್ತದೆ
ಆಹಾರ ತಯಾರಿಸುವ ಅಗತ್ಯತೆ ಇರಲ್ಲ
ತಯಾರಿಸಿದ ರೆಡಿಮೇಡ್ ಫುಡ್ ನೀಡಲಾಗುತ್ತದೆ
ಪ್ರೊಲೋನ್ ಆಹಾರ ಕ್ರಮದ ಅನಾನುಕೂಲಗಳು
ಈ ಆಹಾರ ಯೋಜನೆ ತುಂಬಾ ದುಬಾರಿ
ಈ ಆಹಾರ ಕ್ರಮದ ವೇಳೆ ನಿರ್ಜಲೀಕರಣ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚು.
ಇದನ್ನೂ ಓದಿ: ಸ್ನಾನಕ್ಕೂ ಮೊದಲು ದೇಹಕ್ಕೆ ಬೇಕು ಎಣ್ಣೆಯ ಮಸಾಜ್, ಇದರಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತಾ?
ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಪ್ರೊಲೋನ್ ಡಯಟ್ ಮಾಡಬಾರದು
ಅಲರ್ಜಿ ಅಥವಾ ಯಾವುದೇ ನಿರ್ದಿಷ್ಟ ವೈದ್ಯಕೀಯ ಸ್ಥಿತಿಯಿರುವ ಜನರು ಫಾಲೋ ಮಾಡುವಂತಿಲ್ಲ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ