Weight Loss: ಆಹಾರ ಕಡಿಮೆ ಮಾಡೋ ಬದಲು ತೂಕ ಇಳಿಕೆಗೆ ಹೆಚ್ಚಿಸಿಕೊಳ್ಳಿ ಚಯಾಪಚಯ ಕ್ರಿಯೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೆಟಬಾಲಿಸಂ ಇದು ನಿಮ್ಮ ದೇಹಕ್ಕೆ ಕೆಲಸ ಮಾಡಲು ಬೇಕಾದ ಶಕ್ತಿ ಒದಗಿಸುತ್ತದೆ. ಉತ್ತಮವಾಗಿ ಬದುಕಲು ಸಹಾಯ ಮಾಡುತ್ತದೆ. ಚಯಾಪಚಯವು ದೇಹದಲ್ಲಿ ಎಲ್ಲಾ ರೀತಿಯ ಚಟುವಟಿಕೆಗಳು ಸರಿಯಾಗಿ ನಡೆಯಲು ಸಹಾಯ ಮಾಡುತ್ತದೆ.

  • Share this:

    ಚಯಾಪಚಯ (Metabolism) ಅಂದ್ರೆ ದೇಹದ (Body) ಮೆಟಬಾಲಿಸಂ ತುಂಬಾ ಚೆನ್ನಾಗಿರುವುದು ಮುಖ್ಯವಾಗುತ್ತದೆ. ತೂಕ ಇಳಿಕೆಗೂ (Weight Loss) ಮೊದಲು ತಜ್ಞರು ದೇಹದ ಮೆಟಬಾಲಿಸಂ ಹೇಗಿದೆ ಮತ್ತು ಎಷ್ಟು ಇದೆ ಎಂದು ಚೆಕ್ ಮಾಡುತ್ತಾರೆ. ಇದೊಂದು ತೂಕ ಇಳಿಕೆಗೆ ವ್ಯಕ್ತಿಗೆ ಸಲಹೆ, ಸೂಚನೆ ಮತ್ತು ಡಯಟ್ (Diet) ಹಾಗೂ ವ್ಯಾಯಾಮಕ್ಕೆ (Exercise) ಯಾವೆಲ್ಲಾ ನಿಯಮ ಪಾಲನೆ ಮಾಡಬೇಕೆಂಬುದನ್ನು ಹೇಳಲು ಮತ್ತು ತಿಳಿಯಲು ಸಹಾಯ ಮಾಡುತ್ತದೆ. ಮೆಟಬಾಲಿಸಂ ಇದು ನಿಮ್ಮ ದೇಹಕ್ಕೆ ಕೆಲಸ ಮಾಡಲು ಬೇಕಾದ ಶಕ್ತಿ ಒದಗಿಸುತ್ತದೆ. ಉತ್ತಮವಾಗಿ ಬದುಕಲು ಸಹಾಯ ಮಾಡುತ್ತದೆ. ಚಯಾಪಚಯವು ದೇಹದಲ್ಲಿ ಎಲ್ಲಾ ರೀತಿಯ ಚಟುವಟಿಕೆಗಳು ಸರಿಯಾಗಿ ನಡೆಯಲು ಸಹಾಯ ಮಾಡುತ್ತದೆ.


    ತೂಕ ಇಳಿಕೆಗೆ ಮೆಟಬಾಲಿಸಂ ಹೇಗೆ ಸಹಾಯಕಾರಿ?


    ತೂಕ ಇಳಿಕೆಗೆ ಚಯಾಪಚಯ ತುಂಬಾ ಚೆನ್ನಾಗಿ ಇರಬೇಕು ಅಂತಾರೆ ತಜ್ಞರು. ಮೆಟಬಾಲಿಸಂ ನೀವು ಸೇವಿಸುವ ಆಹಾರದಿಂದ ಪೋಷಕಾಂಶಗಳನ್ನು ಶಕ್ತಿಯಾಗಿ ಪರಿವರ್ತಿಸುವ ಕೆಲಸ ಮಾಡುತ್ತದೆ.


    ದೇಹದ ಎಲ್ಲಾ ಕಾರ್ಯಗಳು ಚೆನ್ನಾಗಿ ಆಗಬೇಕಾದ್ರೆ ಮೆಟಬಾಲಿಸಂ ಚೆನ್ನಾಗಿ ಇರಬೇಕಾಗುತ್ತದೆ. ಯಾಕಂದ್ರೆ ಎಲ್ಲಾ ಚಟುವಟಿಕೆಗಳು ಚಯಾಪಚಯ ಕ್ರಿಯೆಯನ್ನು ಅವಲಂಬಿಸಿವೆ.


    ದೇಹದ ಉಸಿರಾಟ, ಆಹಾರ ಜೀರ್ಣಿಸಿಕೊಳ್ಳುವುದು, ರಕ್ತ ಪರಿಚಲನೆ, ದೇಹದ ಚಲನೆ, ಹಾನಿಗೊಳಗಾದ ಅಂಗಾಂಶಗಳು ಮತ್ತು ಕೋಶ ಸರಿಪಡಿಸಲು ಶಕ್ತಿ ಒದಗಿಸುತ್ತದೆ. ಚಯಾಪಚಯವು ಆರೋಗ್ಯದ ರಾಜ ಇದ್ದಂತೆ.




    ಮೆಟಬಾಲಿಸಂ ಹೆಚ್ಚಿಸುವುದು ಹೇಗೆ?


    ಮೆಟಬಾಲಿಸಂ ಹೆಚ್ಚಾದಷ್ಟೂ ಹೆಚ್ಚು ಕ್ಯಾಲೊರಿ ಬರ್ನ್ ಮಾಡಬಹುದು. ಮತ್ತು ಬೇಗ ತೂಕ ಇಳಿಸಬಹುದು. ವಯಸ್ಸು, ಪೋಷಣೆ, ಆರೋಗ್ಯವು ನಿಮ್ಮ ಚಯಾಪಚಯ ದರದ ಮೇಲೆ ಉತ್ತಮ ಹಾಗೂ ಕೆಟ್ಟ ಪರಿಣಾಮ ಬೀರುತ್ತದೆ.


    ಚಯಾಪಚಯವು ಸೇವಿಸುವ ಕ್ಯಾಲೊರಿ ಬರ್ನ್ ಮಾಡುತ್ತದೆ. ಅದನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಚಯಾಪಚಯವು ಉತ್ತಮವಾಗಿದ್ದರೆ ವೇಗವಾಗಿ ಕ್ಯಾಲೊರಿ ಬರ್ನ್ ಮಾಡುತ್ತದೆ. ನೀವು ಹೆಲ್ದೀ ತೂಕ ಹೊಂದಲು ಸಹಾಯ ಮಾಡುತ್ತದೆ.


    ಚಯಾಪಚಯ ದರ ಹೆಚ್ಚಿಸುವುದು ಹೇಗೆ?


    ದೈನಂದಿನ ಚಟುವಟಿಕೆಗಳಲ್ಲಿ ಕೆಲಸದ ಒತ್ತಡ ಹೆಚ್ಚು. ಆಗ ಪರಿಣಾಮವಾಗಿ ಹೆಚ್ಚು ಶಕ್ತಿಯ ಬಳಕೆ ಆಗುತ್ತದೆ. ಇದು ಚಯಾಪಚಯ ದರ ಚೆನ್ನಾಗಿಡಲು ಸಹಾಯ ಮಾಡುತ್ತದೆ.


    ಆರೋಗ್ಯಕರ ಆಹಾರ ಸೇವನೆಯ ಜೊತೆಗೆ ದೈಹಿಕ ಚಟುವಟಿಕೆಗಳು ಮುಖ್ಯ. ಇದು ದೇಹವು ಆ್ಯಕ್ಟಿವೇಟ್ ಆಗಲು ಸಹಕಾರಿ. ಚಯಾಪಚಯ ಹೆಚ್ಚಿಸುತ್ತದೆ.


    ಪ್ರೋಟೀನ್ ಸೇವನೆ ಮಾಡಿ


    ಆಹಾರದಲ್ಲಿ ಪ್ರೊಟೀನ್ ಸಮೃದ್ಧ ಪದಾರ್ಥ ಸೇವನೆ ಮಾಡಿ. ಇದು ಚಯಾಪಚಯ ದರ ಚೆನ್ನಾಗಿಡಲು ಸಹಾಯ ಮಾಡುತ್ತದೆ. ಆಹಾರದಲ್ಲಿನ ಪೋಷಕಾಂಶಗಳನ್ನು ಜೀರ್ಣಿಸಿಕೊಳ್ಳಲು, ಹೀರಿಕೊಳ್ಳಲು ಮತ್ತು ಪ್ರಕ್ರಿಯೆಗೊಳಿಸಲು ಸಹಕಾರಿ.


    ಸಾಂದರ್ಭಿಕ ಚಿತ್ರ


    ಹೆಚ್ಚು ನೀರು ಕುಡಿಯಿರಿ


    ಸಕ್ಕರೆ ಪಾನೀಯಗಳ ಬದಲಿಗೆ ನೀರನ್ನು ಕುಡಿಯಿರಿ. ಇದು ಜನರು ತೂಕ ಇಳಿಕೆಗೆ ಸಹಕಾರಿ. ಸಕ್ಕರೆ ಪಾನೀಯಗಳು ಕ್ಯಾಲೊರಿ ಹೊಂದಿರುತ್ತದೆ. ಕುಡಿಯುವ ನೀರಿನಿಂದಾಗಿ ಕ್ಯಾಲೋರಿ ಸ್ವಯಂಚಾಲಿತವಾಗಿ ಬರ್ನ್ ಆಗುತ್ತದೆ.


    ಹೆಚ್ಚಿನ ತೀವ್ರತೆಯ ತಾಲೀಮು ಮಾಡಿ


    ಹೆಚ್ಚಿನ ತೀವ್ರತೆಯ ಮಧ್ಯಂತರ ತಾಲೀಮು ಮಾಡಿ. ಇದು ಚಯಾಪಚಯ ದರ ಹೆಚ್ಚಿಸುತ್ತದೆ. ಇದು ಹೆಚ್ಚು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ.


    ಭಾರವಾದ ವಸ್ತು ಎತ್ತುವುದು


    ಸ್ನಾಯು ನಿರ್ಮಿಸುವುದು ನಿಮ್ಮ ಚಯಾಪಚಯ ಹೆಚ್ಚಿಸಲು ಸಹಾಯ ಮಾಡುತ್ತದೆ. ವಿಶ್ರಾಂತಿ ಸಮಯದಲ್ಲೂ ಪ್ರತಿದಿನ ಹೆಚ್ಚಿನ ಕ್ಯಾಲೊರಿ ಬರ್ನ್ ಮಾಡಲು ಇದು ಸಹಕಾರಿ.


    ತೂಕ ಎತ್ತುವುದು ಸ್ನಾಯುವಿನ ದ್ರವ್ಯರಾಶಿ ಕಾಪಾಡುತ್ತದೆ. ತೂಕ ನಷ್ಟದ ಸಮಯದಲ್ಲಿ ಸಂಭವಿಸುವ ಚಯಾಪಚಯ ಕುಸಿತ ತಡೆಯುತ್ತದೆ.


    ಚಯಾಪಚಯ ಹೆಚ್ಚಿಸುವುದು ತೂಕ ಇಳಿಕೆಗೆ ಸಹಕಾರಿಯೇ?


    ಚಯಾಪಚಯ ಹೆಚ್ಚಿಸಲು ಗಂಭೀರ ಅಡ್ಡ ಪರಿಣಾಮ ಹೊಂದಿರುವ ಪದಾರ್ಥ ಒಳಗೊಂಡಿರಬಹುದು. ತೂಕ ಕಳೆದುಕೊಳ್ಳಲು ಹೆಚ್ಚಿನ ಕ್ಯಾಲೊರಿ ಬರ್ನ್ ಮಾಡಬೇಕಾಗುತ್ತದೆ.


    ಇದನ್ನೂ ಓದಿ: ಮೂಳೆಗಳ ಊತ ಹಾಗೂ ಪಾದಗಳ ಸುಡುವ ಸಂವೇದನೆ ಸಮಸ್ಯೆಗೆ ಕಾರಣವೇನು?  


    ಸಂಸ್ಕರಿಸಿದ ಸಕ್ಕರೆ ಮತ್ತು ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬು ಪದಾರ್ಥ ಸೇವನೆ ಕಡಿಮೆ ಮಾಡಿ. ಹಾಗೂ ಸಂಸ್ಕರಿಸಿದ ಆಹಾರಗಳ ಬದಲಿಗೆ ಹಣ್ಣು, ತರಕಾರಿ, ಧಾನ್ಯ, ನೇರ ಪ್ರೋಟೀನ್ , ಆರೋಗ್ಯಕರ ಕೊಬ್ಬು ಸೇವಿಸಿ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು