ಕೊರೊನಾ (Corona) ನಂತರ ಜನರು (People) ಹೆಚ್ಚು ಆರೋಗ್ಯದ (Health) ಬಗ್ಗೆ ಕಾಳಜಿ (Care) ವಹಿಸುತ್ತಿದ್ದಾರೆ. ಫಿಟ್ನೆಸ್ (Fitness) ನತ್ತ ಮುಖ ಮಾಡಿದ್ದಾರೆ. ಆರೋಗ್ಯದ ಬಗ್ಗೆ ತಿಳಿವಳಿಕೆ, ಅರಿವು ಮೂಡಿಸುವ ಮೂಲಕ ಸ್ಥೂಲಕಾಯ (Obesity) ಹೊಡೆದೋಡಿಸಲು ಹಲವರು ತೀರ್ಮಾನಿಸಿದ್ದಾರೆ. ಆದರೆ ಸ್ಥೂಲಕಾಯ ಕಡಿಮೆ ಮಾಡುವುದು, ತೂಕ ನಿಯಂತ್ರಿಸುವುದು ದಿನನಿತ್ಯದ ನಿಯಮಿತವಾಗಿ ದಿನಚರಿಯ ಭಾಗವಾದಾಗ ಮಾತ್ರ ಸ್ಥೂಲಕಾಯ ಕಡಿಮೆ ಮಾಡಿ, ಸ್ಲಿಮ್ ಮತ್ತು ಫಿಟ್ ಆಗಿರಲು ಸಾಧ್ಯ. ದಿನವೂ ಡಯಟ್, ವ್ಯಾಯಾಮ, ವಾಕಿಂಗ್ ಮಾಡುವುದು ತೂಕ ನಷ್ಟಕ್ಕೆ (Weight Loss) ಸಹಾಯ ಮಾಡುತ್ತದೆ. ಅಂದ ಹಾಗೇ ತುಂಬಾ ಜನರು ತೂಕ ನಷ್ಟದ ವಿಚಾರದಲ್ಲಿ ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತಾರೆ.
ತೂಕ ನಷ್ಟಕ್ಕೆ ಸಿಂಪಲ್ ಸಲಹೆ
ತೂಕ ಇಳಿಸೋದು ಯಾವಾಗ? ಬೊಜ್ಜು ಯಾವಾಗಪ್ಪಾ ಕರಗುತ್ತೆ? ಈ ಡಯಟ್ ಮಾಡುವ ಸಹವಾಸ ಯಾವಾಗ ಮುಗಿಯುತ್ತೆ? ಹೀಗೆ ಹಲವು ರೀತಿಯ ಪ್ರಶ್ನೆ ಮತ್ತು ಬೇಸರ ತೂಕ ನಷ್ಟದ ಜರ್ನಿಯಲ್ಲಿ ಹಲವರಲ್ಲಿ ಮೂಡುತ್ತದೆ. ಇದು ತೂಕ ನಷ್ಟವನ್ನು ಬೇಸರದಾಯಕ ಮತ್ತು ಒತ್ತಡ ಅನುಭವಿಸಲು ಕಾರಣವಾಗುತ್ತದೆ.
ಆದರೆ ವೇಟ್ ಲಾಸ್ ಮಾಡುವಾಗ ಖುಷಿಯಿಂದ ಮತ್ತು ಬೇಸರ ಮುಕ್ತವಾಗಿ, ಒತ್ತಡ ರಹಿತರಾಗಿ ಮಾಡುವುದು ಮುಖ್ಯ. ದಿನವೂ ನೀವು ವ್ಯಾಯಾಮ ಮಾಡುತ್ತಿದ್ದರೆ, ಖುಷಿಯಿಂದ ಮಾಡಿ. ಜೊತೆಗೆ ದಿನವೂ ಬೇರೆ ಬೇರೆ ವರ್ಕೌಟ್ ಗಳನ್ನು ದಿನಚರಿಯಲ್ಲಿ ಸೇರಿಸಿ.
ಡಯಟ್ ಎಂದಾಕ್ಷಣ ತುಂಬಾ ಬೇಸರವೆನ್ನಿಸುವ ತಿಂಡಿ, ಊಟ ಮಾಡಬೇಡಿ. ನಿಮಗಿಷ್ಟದ ಪದಾರ್ಥವನ್ನು ಹೆಲ್ದೀ ಆಗಿ ತಯಾರಿಸಿ ಸೇವನೆ ಮಾಡಿ. ಯಾಕಂದ್ರೆ ತೂಕ ನಷ್ಟಕ್ಕೆ ಬಾಹ್ಯ ಆರೋಗ್ಯ ಮಾತ್ರವಲ್ಲದೇ, ಮಾನಸಿಕ ಆರೋಗ್ಯ ಸಹ ಮುಖ್ಯ.
ನೀವು ತೂಕ ನಷ್ಟದಲ್ಲಿ ಮಾಡುವ ಪ್ರತಿಯೊಂದು ಚಟುವಟಿಕೆಯು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿಯ ದೈಹಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ.
ತೂಕ ನಷ್ಟಕ್ಕೆ ಸೃಜನಶೀಲ ಚಟುವಟಿಕೆ
ನೀವು ತೂಕ ನಷ್ಟಕ್ಕೆ ಬೋರ್ ಎನ್ನಿಸುವ ವ್ಯಾಯಾಮ ಕೈ ಬಿಟ್ಟು, ನಿಮ್ಮಿಷ್ಟದ ಡಾನ್ಸ್, ಆಕ್ಟಿಂಗ್, ಹಾಡು, ನೃತ್ಯ, ಯೋಗ ಭಂಗಿಗಳನ್ನು ಮಾಡಿ. ಇದು ಮಾನಸಿಕ ಆರೋಗ್ಯದ ಜೊತೆಗೆ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ನಿಮ್ಮನ್ನು ಸದೃಢಗೊಳಿಸುತ್ತದೆ.
ಕ್ರಿಯೇಟಿವ್ ಥೆರಪಿ ಎಂದರೇನು?
ಕ್ರಿಯೇಟಿವ್ ಥೆರಪಿಯಲ್ಲಿ ನೃತ್ಯ, ಚಿತ್ರಕಲೆ ಮತ್ತು ಸಂಗೀತ ಸೇರಿದಂತೆ ಹಲವು ಕಲಾ ಪ್ರಕಾರಗಳಲ್ಲಿ ಭಾಗವಹಿಸುವ ಮೂಲಕ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಂದ ಹೊರ ಬರುವುದಾಗಿದೆ. ಇದಕ್ಕಾಗಿ ನೀವು ನಿಮಗೆ ಹೇಗೇ ಬೇಕೋ ಹಾಗೇ, ನಿಮ್ಮ ಖುಷಿಗೆ ತಕ್ಕಂತೆ ಕಲಾ ಪ್ರಕಾರ ಆಯ್ಕೆ ಮಾಡಿಕೊಳ್ಳಿ.
ಸೃಜನಶೀಲ ವ್ಯಾಯಾಮವು ಹೇಗೆ ಪ್ರಯೋಜನಕಾರಿ?
ಸೃಜನಾತ್ಮಕ ಚಿಕಿತ್ಸೆಯು ವಿವಿಧ ಮಾನಸಿಕ ಆರೋಗ್ಯ ಸಮಸ್ಯೆ ನಿವಾರಿಸುತ್ತದೆ. ಒತ್ತಡ, ಆಘಾತ ಮತ್ತು ಆಲ್ಝೈಮರ್ ಸಮಸ್ಯೆ ಪರಿಣಾಮಕಾರಿ ಆಗಿದೆ. ತಲೆ ಗಾಯ, ಬುದ್ಧಿಮಾಂದ್ಯತೆ, ದೈಹಿಕ ಮತ್ತು ಬೆಳವಣಿಗೆಯ ಅಸಾಮರ್ಥ್ಯ ಸಮಸ್ಯೆ ಕಡಿಮೆ ಮಾಡುತ್ತದೆ.
ಸೃಜನಾತ್ಮಕ ವ್ಯಾಯಾಮವು ವಿವಿಧ ಆರೋಗ್ಯ ಸಂಬಂಧಿ ಸಮಸ್ಯೆ ಕಡಿಮೆ ಮಾಡುತ್ತದೆ. ಭಾವನಾತ್ಮಕ ಒತ್ತಡ ಸಮತೋಲನಗೊಳಿಸುತ್ತದೆ. ಆರೋಗ್ಯಕರ ಸಂಬಂಧ ಕಾಪಾಡುತ್ತದೆ. ಅನಾರೋಗ್ಯ ಮತ್ತು ನೋವು ಕಡಿಮೆ ಮಾಡುತ್ತದೆ. ವೈಯಕ್ತಿಕ ಸಾಧನೆ ಹೆಚ್ಚಿಸುತ್ತದೆ. ದೇಹ ವಿಶ್ರಾಂತಿ ಪಡೆಯಲು ಸಹಕಾರಿ. ಆತ್ಮವಿಶ್ವಾಸ ಹೆಚ್ಚಿಸುತ್ತದೆ.
ಕ್ರಿಯೇಟಿವ್ ಆರ್ಟ್ ಥೆರಪಿ ಹೀಗಿದೆ
ಸಂಗೀತ
ಸಂಗೀತವು ಆಲ್ಝೈಮರ್ ಮೆಮೊರಿ, ಖಿನ್ನತೆ ಮತ್ತು ಆತಂಕ ಕಡಿಮೆ ಮಾಡುತ್ತದೆ. ಸಂಗೀತ ಆಲಿಸುವುದು ಸುಧಾರಣೆ ತರುತ್ತದೆ.
ನೃತ್ಯ
ನೃತ್ಯ ಚಿಕಿತ್ಸೆ ಖಿನ್ನತೆ ಕಡಿಮೆ ಮಾಡುತ್ತದೆ. ಆತಂಕ ಕಡಿಮೆ ಮಾಡುತ್ತದೆ. ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ ಕಾಪಾಡುತ್ತದೆ.
ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಒದಗಿಸಲು ಈ ಸೂಪರ್ ಫುಡ್ ಸೇವಿಸಿ
ಕಾವ್ಯ
ಕವನ ಚಿಕಿತ್ಸೆ ಕವನ ಬರೆಯುವ ಅಥವಾ ಕವನ ಓದುವುದು ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. ಆಂತರಿಕ ಭಾವನೆ ಚೆನ್ನಾಗಿಡುತ್ತದೆ. ಮಾನಸಿಕ ಮತ್ತು ದೈಹಿಕ ಸಮಸ್ಯೆ ನಿವಾರಿಸುತ್ತದೆ. ಚಿತ್ರಕಲೆ, ನೃತ್ಯ, ಶಿಲ್ಪಕಲೆ, ಮಾನಸಿಕವಾಗಿ ಶಾಂತವಾಗಿ ಮತ್ತು ಆರೋಗ್ಯಕರವಾಗಿರಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ