• Home
  • »
  • News
  • »
  • lifestyle
  • »
  • Weight Loss: ತೂಕ ಇಳಿಕೆಗೆ ಹಾಟ್ ಚಾಕೋಲೇಟ್ & ಕಾಫಿ ಎರಡರಲ್ಲಿ ಯಾವುದು ಬೆಸ್ಟ್?

Weight Loss: ತೂಕ ಇಳಿಕೆಗೆ ಹಾಟ್ ಚಾಕೋಲೇಟ್ & ಕಾಫಿ ಎರಡರಲ್ಲಿ ಯಾವುದು ಬೆಸ್ಟ್?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರೋಟೀನ್ ನಮ್ಮ ದೇಹಕ್ಕೆ ಶಕ್ತಿ ಮತ್ತು ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ಆಹಾರದಲ್ಲಿ ಸರಿಯಾದ ಪ್ರಮಾಣದ ಪ್ರೋಟೀನ್ ಸೇರಿಸುವುದು ತುಂಬಾ ಮುಖ್ಯ. ಬಿಸಿ ಚಾಕೊಲೇಟ್ ನಲ್ಲೂ ಪ್ರೋಟೀನ್ ಇದೆ. ಹಾಗಾದ್ರೆ ತೂಕ ಇಳಿಕೆಗೆ ಹಾಟ್ ಚಾಕೋಲೇಟ್ ಮತ್ತು ಕಾಫಿ ಎರಡರಲ್ಲಿ ಯಾವುದು ಉತ್ತಮ ಪಾನೀಯ ಎಂಬುದನ್ನು ನೋಡೋಣ.

ಮುಂದೆ ಓದಿ ...
  • Share this:

    ಚಳಿಗಾಲದಲ್ಲಿ (Winter) ಬಿಸಿ ಟೀ, ಕಾಫಿ (Tea And Coffee) ಇಲ್ಲದಿದ್ದರೆ ಓದೋಕೆ, ಸಮಯ ಕಳೆಯೋಕೆ ಮನಸ್ಸಾಗಲ್ಲ. ಒಂದು ಕಪ್ ಚಹಾ ಇಡೀ ದಿನದ ಒತ್ತಡವನ್ನು ಕಡಿಮೆ ಮಾಡುತ್ತೆ. ಮನಸ್ಸು ರಿಲ್ಯಾಕ್ಸ್ ಆಗುತ್ತೆ. ಫ್ರೆಶ್ ಫೀಲ್ ಬರುತ್ತೆ. ದಿನದ ಎರಡು ಹೊತ್ತು ಕಾಫಿ ಇಲ್ಲದೇ ಮತ್ತು ಚಾಕೋಲೇಟ್ ತಿನ್ನದೇ ದಿನವನ್ನು ಎಷ್ಟೋ ಜನ ಕಳೆಯುವುದಿಲ್ಲ. ದಿನವೂ ಮಿತವಾಗಿ ಎರಡು ಅಥವಾ ಒಂದು ಕಪ್ ಬಿಸಿ ಕಾಫಿ, ಹಾಟ್ ಚಾಕೋಲೇಟ್ ಕೆಲವು ಆರೋಗ್ಯ ಪ್ರಯೋಜನ (Health Benefits) ನೀಡುತ್ತದೆ. ಆದರೆ ತೂಕ ನಷ್ಟದ (Weight Loss) ವಿಷಯ ಬಂದಾಗ ಹಾಟ್ ಚಾಕೋಲೇಟ್, ಕಾಫಿ ಯಾವುದು ಬೆಸ್ಟ್ ಎಂಬ ಗೊಂದಲ ತೂಕ ಇಳಿಸುವವರು, ಮತ್ತು ತೂಕ ನಿಯಂತ್ರಿಸುವವರಲ್ಲಿ ಹುಟ್ಟುತ್ತದೆ.


    ತೂಕ ಇಳಿಕೆಗೆ ಹಾಟ್ ಚಾಕೋಲೇಟ್, ಕಾಫಿಯಲ್ಲಿ ಯಾವುದು ಬೆಸ್ಟ್?


    ಹಾಗಾದ್ರೆ ತೂಕ ಇಳಿಕೆಗೆ ಹಾಟ್ ಚಾಕೋಲೇಟ್, ಕಾಫಿ ಎರಡರಲ್ಲಿ ಯಾವುದು ಉತ್ತಮ ಪಾನೀಯ ಎಂಬುದರ ಬಗ್ಗೆ ಪೂನಂ ಡಯಟ್ ಮತ್ತು ವೆಲ್ನೆಸ್ ಕ್ಲಿನಿಕ್ ನ ನಿರ್ದೇಶಕಿ ಪೂನಂ ದುನೇಜಾ ಅವರು ಏನ್ ಹೇಳಿದ್ದಾರೆ ಇಲ್ಲಿ ನೋಡೋಣ. ಮೊದಲು ಹಾಟ್ ಚಾಕೋಲೇಟ್ ಮತ್ತು ಕಾಫಿ ಎರಡರಲ್ಲೂ ಎಷ್ಟೆಲ್ಲಾ ಕ್ಯಾಲೊರಿ ಇದೆ ತಿಳಿಯೋಣ.


    ಡಯೆಟಿಷಿಯನ್ ಪೂನಂ ದುನೇಜಾ ಅವರು ಹೇಳುವ ಪ್ರಕಾರ, 100 ಗ್ರಾಂ ಬಿಸಿ ಕಾಫಿಯು 77 ಕೆ.ಕೆ.ಎಲ್ ಹೊಂದಿದೆ. 100 ಗ್ರಾಂ ಬಿಸಿ ಚಾಕೊಲೇಟ್‌ನಲ್ಲಿ 1 ಕೆ.ಕೆ.ಎಲ್ ಇದೆ. ಇನ್ನು ವಿವಿಧ ಕಾಫಿಗಳು ವಿಭಿನ್ನ ಕ್ಯಾಲೋರಿ ಹೊಂದಿದೆ.




    ಹಾಟ್ ಚಾಕೋಲೇಟ್ ಮತ್ತು ಕಾಫಿ ಎರಡರಲ್ಲಿ ಹೆಚ್ಚು ಪ್ರೋಟೀನ್ ಯಾವುದು ಹೊಂದಿದೆ?


    ಪ್ರೋಟೀನ್ ನಮ್ಮ ದೇಹಕ್ಕೆ ಶಕ್ತಿ ಮತ್ತು ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ಆಹಾರದಲ್ಲಿ ಸರಿಯಾದ ಪ್ರಮಾಣದ ಪ್ರೋಟೀನ್ ಸೇರಿಸುವುದು ತುಂಬಾ ಮುಖ್ಯ. ಬಿಸಿ ಚಾಕೊಲೇಟ್ ನಲ್ಲೂ ಪ್ರೋಟೀನ್ ಇದೆ.


    100 ಗ್ರಾಂ ಬಿಸಿ ಚಾಕೊಲೇಟ್ ಸೇವಿಸಿದರೆ 3.52 ಗ್ರಾಂ ಪ್ರೊಟೀನ್ ಸಿಗುತ್ತೆ. 100 ಗ್ರಾಂ ಬಿಸಿ ಕಾಫಿ ಸೇವಿಸಿದ್ರೆ 0.12 ಗ್ರಾಂ ಪ್ರೋಟೀನ್ ಸಿಗುತ್ತೆ. ಇದರಲ್ಲಿ ಬಿಸಿ ಚಾಕೊಲೇಟ್ ಉತ್ತಮ ಪ್ರೊಟೀನ್ ಹೊಂದಿದೆ ಅಂತಾರೆ ತಜ್ಞರು.


    for weight loss hot chocolate and coffee which one is best choice
    ಸಾಂದರ್ಭಿಕ ಚಿತ್ರ


    ತೂಕ ನಷ್ಟಕ್ಕೆ ಹಾಟ್ ಚಾಕೋಲೇಟ್ ಮತ್ತು ಕಾಫಿ ಎರಡರಲ್ಲಿ ಯಾವುದು ಉತ್ತಮ?


    ತೂಕ ನಷ್ಟದ ವಿಚಾರದಲ್ಲಿ ಕಾಫಿ ಮತ್ತು ಬಿಸಿ ಚಾಕೊಲೇಟ್ ಎರಡೂ ಆರೋಗ್ಯಕ್ಕೆ ಉತ್ತಮ ಅಂತಾ ಹೇಳಿದ್ರೆ ಯಾವುದು ಬೆಸ್ಟ್ ಆಯ್ಕೆ ಆಗಬೇಕು? ಈ ಪ್ರಶ್ನೆಗೆ ಉತ್ತರಿಸಿದ ತಜ್ಞೆ ಪೂನಂ ದುನೇಜಾ, ಸರಿಯಾದ ಪದಾರ್ಥವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಬಹಳ ಮುಖ್ಯ. ಕಾಫಿಯಲ್ಲಿ ಕಾರ್ಬೋಹೈಡ್ರೇಟ್‌ ಗಳಿಲ್ಲ. ಇದರ ಗ್ಲೈಸೆಮಿಕ್ ಸೂಚ್ಯಂಕ ಜೀರೋ ಆಗಿದೆ.


    100 ಗ್ರಾಂ ಬಿಸಿ ಚಾಕೊಲೇಟ್‌ನಲ್ಲಿ ಕಾರ್ಬೋಹೈಡ್ರೇಟ್‌ಗಳು 10.7 ಇದೆ. ಇದರ ಗ್ಲೈಸೆಮಿಕ್ ಸೂಚ್ಯಂಕವು 51 ವರೆಗೆ ಇರುತ್ತೆ. ಹಾಗಾಗಿ ತೂಕ ನಷ್ಟಕ್ಕೆ ಕಾಫಿ ಉತ್ತಮ ಪಾನೀಯ ಎಂದು ಹೇಳಿದ್ದಾರೆ.


    ಹಾಟ್ ಚಾಕೋಲೇಟ್ ಮತ್ತು ಕಾಫಿ ಎರಡರಲ್ಲಿ ಯಾವುದು ಶಕ್ತಿ ನೀಡುತ್ತದೆ?


    ಬಿಸಿ ಕಾಫಿ ಮತ್ತು ಬಿಸಿ ಚಾಕೊಲೇಟ್‌ ನಲ್ಲಿ ಲಿಪಿಡ್‌ ಗಳ ಪ್ರಮಾಣದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಇದು ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೊಟೀನ್‌ಗಳಿಂದ ತಯಾರಿಸಿದ ಅತ್ಯಗತ್ಯ ರಾಸಾಯನಿಕ ಆಗಿದೆ.


    ದೇಹದಲ್ಲಿ ಶಕ್ತಿ ಕಾಪಾಡುತ್ತದೆ. 100 ಗ್ರಾಂ ಕಾಫಿಯಲ್ಲಿ ಕೇವಲ 0.02 ಗ್ರಾಂ ಲಿಪಿಡ್ ಇದೆ. 100 ಗ್ರಾಂ ಬಿಸಿ ಚಾಕೊಲೇಟ್ 10.7 ವರೆಗೆ ಲಿಪಿಡ್ ಇದೆ. ಹಾಗಾಗಿ ಹಾಟ್ ಚಾಕೊಲೇಟ್‌ನಲ್ಲಿ ಹೆಚ್ಚಿನ ಪ್ರಮಾಣದ ಲಿಪಿಡ್‌ ಇದ್ದು, ಶಕ್ತಿ ಕಾಪಾಡಲು ಇದು ಬೆಸ್ಟ್ ಆಗಿದೆ.


    ಇದನ್ನೂ ಓದಿ: ಟೈಪ್‌ 2 ಮಧುಮೇಹ ಎಂದರೇನು? ಈ ಸಮಸ್ಯೆಯ ಲಕ್ಷಣಗಳು ಇಲ್ಲಿದೆ


    ದಿನಕ್ಕೆ ಎಷ್ಟು ಕಾಫಿ ಸೇವಿಸಬೇಕು?  


    ಕೆಫೀನ್, ದೇಹದ ತೂಕ, BMI ಮತ್ತು ದೇಹದ ಕೊಬ್ಬನ್ನು ಕಡಿಮೆ ಮಾಡಲು ನೇರವಾಗಿ ಸಹಾಯ ಮಾಡುತ್ತೆ. ಇದರ ಸೇವನೆಯು ಸ್ನಾಯುಗಳು ಮತ್ತು ನರಮಂಡಲವನ್ನು ಬಲಪಡಿಸುತ್ತದೆ ಮತ್ತು ಶಕ್ತಿ ವ್ಯರ್ಥವಾಗುವುದನ್ನು ತಡೆಯುತ್ತದೆ.


    ಕಾಫಿಯ ಹೆಚ್ಚಿನ ಸೇವನೆ ಸಿವಿಡಿ ಅಪಾಯ ಹೆಚ್ಚಿಸುವುದಿಲ್ಲವೆಂದು ಅಧ್ಯಯನವೊಂದು ಹೇಳಿದೆ. ದಿನಕ್ಕೆ ಮೂರು ಕಾಫಿ ಕುಡಿಯುವುದು ಉತ್ತಮ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು