ಸ್ಥೂಲಕಾಯ ಸಮಸ್ಯೆ (Obesity Problem) ದೈನಂದಿನ ಬದುಕಿನಲ್ಲಿ (Daily Life) ತುಂಬಾ ಸಾಮಾನ್ಯ ಸಮಸ್ಯೆ ಎಂಬಂತೆ ಕಾಣುತ್ತದೆ. ಆದರೆ ಅದು ಕಾಯಿಲೆಗಳನ್ನು (Diseases) ಸಾಲು ಸಾಲಾಗಿ ಹೊತ್ತು ತರುತ್ತದೆ. ವ್ಯಕ್ತಿಯು ಚೆನ್ನಾಗಿರಬೇಕು, ಸುಂದರ ದೇಹ ಕಾಯ ಹೊಂದಬೇಕು, ಸದೃಢ ಆರೋಗ್ಯ (Health) ಹಾಗೂ ಮಾನಸಿಕ ಆರೋಗ್ಯ ಹೊಂದಬೇಕಾದರೆ ತನ್ನ ಎತ್ತರಕ್ಕೆ ತಕ್ಕಂತೆ ತೂಕ ಹೊಂದುವುದು ತುಂಬಾ ಮುಖ್ಯ. ತೂಕ ಇಳಿಕೆ (Weight Loss) ನಿಮ್ಮನ್ನು ಆರೋಗ್ಯ ಹಾಗೂ ಉಲ್ಲಾಸದಿಂದ ಇರಿಸಲು ಸಾಧ್ಯ. ತೂಕ ಇಳಿಕೆ ಒಂದೆರಡು ದಿನದಲ್ಲಿ ಮಾಡಿ ಮುಗಿಸುವ ಕೆಲಸವಲ್ಲ, ಅದಕ್ಕಾಗಿ ದೀರ್ಘಕಾಲದ ಶ್ರಮ ಮತ್ತು ತಾಳ್ಮೆ ಹಾಗೂ ಡಯಟ್, ವರ್ಕೌಟ್ ಮಾಡುವುದು ಮುಖ್ಯ.
ತೂಕ ಇಳಿಕೆಗೆ ಅಡುಗೆ ಮನೆಯಲ್ಲೇ ಇದೆ ಪರಿಹಾರ
ಯಾರೆಲ್ಲಾ ತೂಕ ನಿಯಂತ್ರಿಸಲು ಮತ್ತು ತೂಕ ಇಳಿಸಲು ಪ್ರಯತ್ನ ಮಾಡುತ್ತಿದ್ದಾರೋ ಅವರೆಲ್ಲಾ ತಮ್ಮ ಆಹಾರ ಕ್ರಮದಲ್ಲಿ ಕೆಲವು ಪದಾರ್ಥಗಳನ್ನು ಸೇರಿಸಬೇಕು. ನೀವು ದುಬಾರಿ ವಸ್ತುಗಳನ್ನು ಕೊಂಡು ತರುವ ಅವಶ್ಯಕತೆಯಿಲ್ಲ.
ಯಾಕಂದ್ರೆ ಮನೆಯಲ್ಲಿ ದಿನವೂ ಅಡುಗೆಗೆ ಬಳಸುವ ಕೆಲವು ಪದಾರ್ಥಗಳು ತೂಕವನ್ನು ತ್ವರಿತವಾಗಿ ಇಳಿಸುವ ಶಕ್ತಿ ಹೊಂದಿವೆ. ಮನೆಯಲ್ಲಿ ನೈಸರ್ಗಿಕ ಪದಾರ್ಥಗಳ ಸೇವನೆ ಜೊತೆಗೆ ತೂಕ ಇಳಿಕೆಗೆ ನೀವು ಪ್ರಯತ್ನಿಸಿದರೆ ಅದು ನಿಮ್ಮನ್ನು ಆರೋಗ್ಯಕರವಾಗಿ ಹಾಗೂ ಯಾವುದೇ ಅಡ್ಡ ಪರಿಣಾಮವಿಲ್ಲದೇ ತೂಕ ಇಳಿಸಲು ಸಹಾಯ ಮಾಡುತ್ತದೆ.
ದೇಹದ ಕೊಬ್ಬು ತೆಗೆದು ಹಾಕಲು, ತೂಕ ನಷ್ಟಕ್ಕೆ ಮಾರುಕಟ್ಟೆಯಲ್ಲಿ ಅನೇಕ ಔಷಧಿಗಳು, ಪೂರಕಗಳಿವೆ. ಆದರೆ ಇದಕ್ಕಿಂತ ಸ್ಥೂಲಕಾಯ ತೊಡೆದು ಹಾಕಲು ನೈಸರ್ಗಿಕ ವಿಧಾನ ಫಾಲೋ ಮಾಡುವುದು ತುಂಬಾ ಪ್ರಯೋಜನಕಾರಿ ಅಂತಾರೆ ತಜ್ಞರು.
ಪ್ಯಾಕೇಜ್ ಆಹಾರ ಸೇವನೆ ತಪ್ಪಿಸಿ
ತೂಕ ನಷ್ಟಕ್ಕೆ ಹೊರಗಿನ ಹಾಗೂ ಪ್ಯಾಕೇಜ್ ಮಾಡಿದ ಆಹಾರ ಸೇವನೆ ತಪ್ಪಿಸಿ. ತೂಕ ಇಳಿಕೆಗೆ ಸಹಾಯ ಮಾಡುವ ಹಸಿರು ಚಹಾ, ಪ್ರೋಬಯಾಟಿಕ್ ಸೇವನೆ, ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆ ಮಾಡಿ. ಸಾಕಷ್ಟು ನೀರು ಕುಡಿಯಿರಿ. ಕಡಿಮೆ ಕ್ಯಾಲೋರಿ ಆರೋಗ್ಯಕರ ಮತ್ತು ಸಮತೋಲಿತ ಆಹಾರ ಸೇವನೆ ಮಾಡಿ.
ಪೌಷ್ಟಿಕ ತಜ್ಞೆ ರೂಪಾನಿ ತೂಕ ನಷ್ಟಕ್ಕೆ ನೈಸರ್ಗಿಕ ಮತ್ತು ಕೆಲವು ಮನೆಮದ್ದುಗಳನ್ನು ಹೇಳಿದ್ದಾರೆ. ತೂಕ ನಷ್ಟಕ್ಕೆ ಸೂಪರ್ ಫುಡ್ ಗಳೆಂದು ಅಡುಗೆ ಮನೆಯಲ್ಲಿ ಬಳಸುವ ಕೆಲವು ಆಹಾರಗಳ ಬಗ್ಗೆ ಹೇಳಿದ್ದಾರೆ.
ತೂಕ ಇಳಿಸುವ ಪ್ರಯಾಣ ಸುಲಭಗೊಳಿಸಲು ಈ ಮನೆಮದ್ದುಗಳು ಸಹಕಾರಿ. ಜೊತೆಗೆ ಇವುಗಳ ಸೇವನೆ ಮಧುಮೇಹ ಕಾಯಿಲೆ ನಿಯಂತ್ರಿಸಲು ಮತ್ತು ಹೃದಯದ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.
ದಾಲ್ಚಿನ್ನಿ
ದಾಲ್ಚಿನ್ನಿಯಲ್ಲಿ ಫೈಬರ್ ಹೇರಳವಾಗಿದೆ. ಇದು ತೂಕ ನಷ್ಟಕ್ಕೆ ಪರಿಣಾಮಕಾರಿ. ದಿನಕ್ಕೆ 1 ಗ್ಲಾಸ್ ನೀರಿನಲ್ಲಿ ಅರ್ಧ ಟೀಚಮಚ ದಾಲ್ಚಿನ್ನಿ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ ಕುಡಿಯಲು ತಜ್ಞರು ಶಿಫಾರಸು ಮಾಡುತ್ತಾರೆ. ಇದು ತೂಕ ನಷ್ಟ ಮಾತ್ರವಲ್ಲದೆ ಮಧುಮೇಹ ಸೇರಿದಂತೆ ಒಟ್ಟಾರೆ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಕಸೂರಿ ಮೇಥಿ
ಕಸೂರಿ ಫೈಬರ್ ಮತ್ತು ಕಬ್ಬಿಣದ ಅತ್ಯುತ್ತಮ ಮೂಲ. ಇದು ಆಹಾರದ ರುಚಿ ಹೆಚ್ಚಿಸುತ್ತದೆ. ಜೊತೆಗೆ ಪೌಷ್ಟಿಕಾಂಶ ನೀಡುತ್ತದೆ. ಮಧುಮೇಹ, ಹೃದ್ರೋಗಿಗಳು ಮತ್ತು ಬೊಜ್ಜಿನಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿ ಕಸೂರಿ ಮೆಂತ್ಯ ಸೇರಿಸಿ ಅಂತಾರೆ ತಜ್ಞರು.
ಅರಿಶಿನ
ಅರಿಶಿನ ಮಸಾಲೆಯಾಗಿ ಮತ್ತು ಆಯುರ್ವೇದದಲ್ಲಿ ಔಷಧೀಯವಾಗಿ ಬಳಕೆ ಮಾಡಲಾಗುತ್ತಿದೆ. ಇದರಲ್ಲಿರುವ ಕರ್ಕ್ಯುಮಿನ್ ಕೊಬ್ಬಿನ ಅಂಗಾಂಶಗಳ ಬೆಳವಣಿಗೆ ತಡೆಯುತ್ತದೆ. ಇದು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ತೂಕ ಕಡಿಮೆ ಮಾಡುತ್ತದೆ.
ಲೆಮನ್ ಗ್ರಾಸ್
ಲೆಮನ್ ಗ್ರಾಸ್ ಚಹಾ ಸೇವನೆಯು ದೇಹವನ್ನು ನಿರ್ವಿಷಗೊಳಿಸುತ್ತದೆ. ಇದು ನಿಮ್ಮ ಚಯಾಪಚಯ ಹೆಚ್ಚಿಸುತ್ತದೆ. ಕಡಿಮೆ ಕ್ಯಾಲೋರಿ ಹೊಂದಿದೆ. ತೂಕ ನಷ್ಟ ಪ್ರಯಾಣಕ್ಕೆ ಉತ್ತಮ ಪಾನೀಯವಾಗಿದೆ.
ಎಳ್ಳು
ಎಳ್ಳಿನಲ್ಲಿ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲವಿದ್ದು, ಕೊಬ್ಬು ಕಡಿಮೆ ಮಾಡುತ್ತದೆ. ನಿಯಮಿತ ಸೇವನೆಯು ರಕ್ತದ ಸಕ್ಕರೆ ಮತ್ತು ಬೊಜ್ಜು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಮೂಲಂಗಿಯನ್ನು ಈ ರೀತಿ ಸಂಗ್ರಹಿಸಿಡಿ, ಇಲ್ಲವಾದರೆ ರುಚಿ ಕೆಡುತ್ತೆ
ಕರಿಬೇವಿನ ಎಲೆ
ಕರಿಬೇವಿನ ಎಲೆಗಳು ಚರ್ಮ, ಕೂದಲು ಮತ್ತು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿ. ಕರಿಬೇವಿನ ಎಲೆಗಳನ್ನು ಜಗಿಯುವುದು ಅಥವಾ ತಿನ್ನುವುದು ಕ್ಯಾಲೊರಿ ಕರಗಿಸಲು ಮತ್ತು ಬೊಜ್ಜು ತಡೆಯಲು ಸಹಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ