• Home
 • »
 • News
 • »
 • lifestyle
 • »
 • Weight Loss: ತೂಕ ಇಳಿಕೆಗೆ ಜಪಾನಿ ಮಹಿಳೆಯರ ಆಹಾರ ಪದ್ಧತಿ ಫಾಲೋ ಮಾಡಿ

Weight Loss: ತೂಕ ಇಳಿಕೆಗೆ ಜಪಾನಿ ಮಹಿಳೆಯರ ಆಹಾರ ಪದ್ಧತಿ ಫಾಲೋ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಾವು ತಿನ್ನುವ ಆಹಾರ ಮತ್ತು ಕುಡಿಯುವ ವಿಧಾನ ತೂಕ ಹೆಚ್ಚಿಸುತ್ತದೆ. ಪೌಷ್ಟಿಕಾಂಶದ ಮೇಲಿನ ಸಂಶೋಧನೆಯು ಜಪಾನಿ ಮಹಿಳೆಯರ ಆಹಾರ ಪದ್ಧತಿ ತೂಕ ಇಳಿಕೆಗೆ ಸಹಕಾರಿ ಎಂದು ಹೇಳಿದೆ. ಲೇಖಕಿ ನವೋಮಿ ಮೊರಿಯಾಮಾ ಅವರು ತಮ್ಮ ಪುಸ್ತಕವೊಂದರಲ್ಲಿ ಜಪಾನೀಸ್ ವುಮೆನ್ ಡೋಂಟ್ ಗೆಟ್ ಓಲ್ಡ್ ಅಂಡ್ ಫ್ಯಾಟ್ ಎಂದು ಹೇಳಿದ್ದಾರೆ.

ಮುಂದೆ ಓದಿ ...
 • Share this:

  ಕೆಲವು ಮಹಿಳೆಯರು (Women’s) ತಮ್ಮ ಹೆಚ್ಚಿದ ತೂಕಕ್ಕೆ ಅಥವಾ ಹೆಚ್ಚುತ್ತಿರುವ ತೂಕಕ್ಕೆ ಮತ್ತು ಸ್ಥೂಲಕಾಯ (Obesity) ಸಮಸ್ಯೆಗೆ (Problem) ಅನುವಂಶಿಕತೆಯೇ ಕಾರಣ ಅಂತಾರೆ. ಇನ್ನು ಕೆಲವರು ತಮಗೆ ತುಂಬಾ ಮೂಳೆ ನೋವು, ಸಂಧಿವಾತ ಎಂದು ಬೈದುಕೊಳ್ತಾರೆ. ಆದರೆ ತಮ್ಮ ಅಧಿಕ ತೂಕ ಮತ್ತು ಸ್ಥೂಲಕಾಯಕ್ಕೆ ತಾವೇ ಕಾರಣ ಎಂಬುದನ್ನು ಮರೆತು ಬಿಡ್ತಾರೆ. ಸ್ಥೂಲಕಾಯಕ್ಕೆ ಅವರು ತಿನ್ನುವ ಆಹಾರ, ದೈಹಿಕ ಚಟುವಟಿಕೆ ಮತ್ತು ಜೀವನಶೈಲಿ (Lifestyle) ಮುಖ್ಯ ಕಾರಣವಾಗಿರುತ್ತದೆ. ನಾವು ತಿನ್ನುವ ಆಹಾರ ಮತ್ತು ಕುಡಿಯುವ ವಿಧಾನ ತೂಕ ಹೆಚ್ಚಿಸುತ್ತದೆ. ಪೌಷ್ಟಿಕಾಂಶದ ಮೇಲಿನ ಸಂಶೋಧನೆಯು ಜಪಾನಿ ಮಹಿಳೆಯರ ಆಹಾರ ಪದ್ಧತಿ ತೂಕ ಇಳಿಕೆಗೆ ಸಹಕಾರಿ ಎಂದು ಹೇಳಿದೆ.


  ತೂಕ ಇಳಿಕೆಗೆ ಜಪಾನಿ ಮಹಿಳೆಯರ ಆಹಾರ ಪದ್ಧತಿ


  ಸಹ-ಲೇಖಕಿ ನವೋಮಿ ಮೊರಿಯಾಮಾ ಅವರು ತಮ್ಮ ಪುಸ್ತಕವೊಂದರಲ್ಲಿ ಜಪಾನೀಸ್ ವುಮೆನ್ ಡೋಂಟ್ ಗೆಟ್ ಓಲ್ಡ್ ಅಂಡ್ ಫ್ಯಾಟ್ ಎಂದು ಹೇಳಿದ್ದಾರೆ. ಜಪಾನಿ ಮಹಿಳೆಯರು ಪ್ಯಾಕ್ ಮಾಡಿದ ಅಥವಾ ಫ್ರಿಡ್ಜ್‌ನಲ್ಲಿ ಇಡುವ ಆಹಾರವನ್ನು ಎಂದಿಗೂ ಸೇವನೆ ಮಾಡಲ್ಲ. ಆ ಖಾದ್ಯ ಎಷ್ಟೇ ರುಚಿಯಾಗಿದ್ರೂ ಹಸಿವಾದಾಗ ಅವರು ಹೊಸದಾಗಿಯೇ ಆಹಾರ ಬೇಯಿಸಿ ತಿನ್ನುತ್ತಾರೆ ಎಂದು ಹೇಳಿದ್ದಾರೆ.


  ಆದರೆ ಇತ್ತೀಚಿನ ದಿನಗಳಲ್ಲಿ ಅಮೆರಿಕ ಮತ್ತು ಬ್ರಿಟನ್‌ನ ಅನುಕರಣೆ ಮಾಡುತ್ತಿರುವ ಭಾರತೀಯರು ಸಂರಕ್ಷಿತ ಆಹಾರ ಮತ್ತು ಫ್ರಿಜ್‌ನಲ್ಲಿಟ್ಟ ಆಹಾರ ಸೇವನೆ ಮಾಡ್ತಾರೆ. ಈ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹಲವು ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ.
  ಒಂದು ದಿನ ಮೊದಲೇ ಮಾಡಿದ ಆಹಾರದಲ್ಲಿ ವಿಷದ ಪ್ರಮಾಣ ಹೆಚ್ಚು. ಅದರ ಸೇವನೆ ಹೊಟ್ಟೆಯುಬ್ಬರ ಸಮಸ್ಯೆ ಉಂಟು ಮಾಡುತ್ತದೆ. ಇದು ಬೊಜ್ಜು, ಹೆಪಟೈಟಿಸ್, ಮಲಬದ್ಧತೆ, ಚರ್ಮದ ಸಮಸ್ಯೆ ಉಂಟು ಮಾಡುತ್ತದೆ ಎಂದು ತಜ್ಞರು ಹೇಳ್ತಾರೆ.


  ತೂಕ ನಷ್ಟ


  ಹೆಚ್ಚಿನ ಭಾರತೀಯ ಮಹಿಳೆಯರು ಕೆಲಸ ಮುಗಿಸಿದ ದೊಡ್ಡ ತಟ್ಟೆಯಲ್ಲಿ ಬಡಿಸಿದ ಖಾದ್ಯ ಸೇವಿಸುತ್ತಾರೆ. ಈ ಆಹಾರ ಅವರ ಹೊಟ್ಟೆ ಸಮಸ್ಯೆಗೆ ಕಾರಣವಾಗುತ್ತದೆ. ಬಹಳಷ್ಟು ಆಹಾರವನ್ನು ಒಮ್ಮೆಲೆ ಸೇವಿಸುವುದು ಆರೋಗ್ಯ ಸಮಸ್ಯೆ ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹಾಗಾಗಿ ಆಹಾರ ಸೇವಿಸುವಾಗ ಕಡಿಮೆ ಪ್ರಮಾಣದಲ್ಲಿ ಸಣ್ಣ ಭಾಗಗಳಲ್ಲಿ ಸೇವನೆ ಮಾಡಬೇಕು.


  ಜಪಾನಿನ ಮಹಿಳೆಯರು ಯಾವಾಗಲೂ ಸಣ್ಣ ತಟ್ಟೆಗಳಲ್ಲಿ ಆಹಾರ ಸೇವಿಸುತ್ತಾರೆ. ಹಲವು ಬಗೆಯ ತಿನಿಸುಗಳಿದ್ದರೂ ಸಹ ಚಿಕ್ಕ ಬಟ್ಟಲಿನಲ್ಲಿ ತಿನ್ನುತ್ತಾರೆ. ಇದು ಅವರನ್ನು ಆರೋಗ್ಯವಾಗಿ ಮತ್ತು ಫಿಟ್ ಆಗಿರಿಸುತ್ತದೆ. ಬರ್ಗರ್‌ ನಂತಹ ಹೆಚ್ಚಿನ ಕ್ಯಾಲೋರಿ ಆಹಾರ ಸೇವನೆ ತಪ್ಪಿಸುತ್ತಾರೆ.


  ತೂಕ ಇಳಿಕೆಗೆ ಯಾವಾಗಲೂ ಹಾಫ್ ಪ್ಲೇಟ್ ನಿಯಮ ಫಾಲೋ ಮಾಡ್ಬೇಕು. ತಟ್ಟೆಯ ಅರ್ಧದಷ್ಟು ಸಲಾಡ್ ಮತ್ತು ಹಸಿರು ತರಕಾರಿ ಸೇವಿಸಬೇಕು. ಚಪಾತಿ, ದಾಲ್, ಕಡಿಮೆ ಕೊಬ್ಬಿನ ಡೈರಿ ಉತ್ಪನ್ನ, ಮೊಟ್ಟೆಯ ಬಿಳಿಭಾಗ ಅಥವಾ ಮೀನು ಸೇವಿಸುವುದು ಉತ್ತಮ.


  ಮನೆಯ ಆಹಾರವನ್ನೇ ಸೇವಿಸಿ


  ಹೊರಗಿನ ಆಹಾರಕ್ಕಿಂತ ಮನೆಯಲ್ಲಿ ತಯಾರಿಸಿದ ಆಹಾರವನ್ನೇ ಸೇವನೆ ಮಾಡಿ. ರೆಸ್ಟೊರೆಂಟ್‌ ಊಟ ತ್ಯಜಿಸಿ. ಕಡಿಮೆ ಕ್ಯಾಲೋರಿ ಆಹಾರಕ್ಕೆ ಆದ್ಯತೆ ನೀಡಿ. ಇದು ಹೃದಯದ ಆರೋಗ್ಯಕ್ಕೂ ಉತ್ತಮ.


  ಆರೋಗ್ಯಕರ ಅಡುಗೆಗೆ ಆದ್ಯತೆ ನೀಡಿ


  ಜಪಾನಿನ ಜನರು ಸಸ್ಯಾಹಾರಿ ಆಹಾರ ಹೆಚ್ಚು ಸೇವನೆ ಮಾಡುತ್ತಾರೆ. ಯಾವುದೇ ಜಪಾನೀ ಮಹಿಳೆಯೂ ಸಹ ಹಸಿರು ಬೀನ್ಸ್, ಕ್ಯಾರೆಟ್, ಪಾಲಕ, ಈರುಳ್ಳಿ, ಟೊಮ್ಯಾಟೊ ಬೇಯಿಸಿ ತಿನ್ನುತ್ತಾರೆ.


  ಇದನ್ನೂ ಓದಿ: ಹಲ್ಲುಗಳು ಹಳದಿಯಾಗಿದ್ರೆ ನಿರ್ಲಕ್ಷ್ಯ ಬೇಡ, ಇದು ಈ ಕಾಯಿಲೆಯ ಲಕ್ಷಣ ಇರಬಹುದು!


  ಅವರು ಬೆಳಗಿನ ಉಪಾಹಾರಕ್ಕಾಕ್ಕೆ ವಿವಿಧ ರೀತಿಯ ತರಕಾರಿ ಸೂಪ್ ಮತ್ತು ಸಲಾಡ್ ತಿನ್ನುತ್ತಾರೆ. ತರಕಾರಿಗಳನ್ನು ಹುರಿಯಬೇಕಾದರೆ ಕಡಿಮೆ ಪ್ರಮಾಣದ ಎಣ್ಣೆ ಹಾಕುತ್ತಾರೆ. ಕೆಂಪು ಮಾಂಸ ಸೇವನೆ ಕಡಿಮೆ ಮಾಡುತ್ತಾರೆ. ಒಮೆಗಾ 3 ಕೊಬ್ಬಿನಾಮ್ಲಕ್ಕೆ ಆದ್ಯತೆ ನೀಡುತ್ತಾರೆ. ನೀವೂ ಸಹ ತೂಕ ಇಳಿಕೆಗೆ ಇದೇ ಆಹಾರ ಪದ್ಧತಿ ಫಾಲೋ ಮಾಡಿ.

  Published by:renukadariyannavar
  First published: