• Home
  • »
  • News
  • »
  • lifestyle
  • »
  • Weight Loss: ಈ ಹಸಿರು ಪದಾರ್ಥಗಳು ತೂಕ ನಷ್ಟಕ್ಕೆ ಸಹಕಾರಿ, ಪ್ರತಿದಿನ ತಪ್ಪದೇ ಸೇವಿಸಿ!

Weight Loss: ಈ ಹಸಿರು ಪದಾರ್ಥಗಳು ತೂಕ ನಷ್ಟಕ್ಕೆ ಸಹಕಾರಿ, ಪ್ರತಿದಿನ ತಪ್ಪದೇ ಸೇವಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಯುರ್ವೇದದಲ್ಲಿ ಗಿಡಮೂಲಿಕೆಗಳೆಂದು ಹೆಸರಿಸಲಾದ ಕೆಲವು ಆಹಾರ ಪದಾರ್ಥಗಳು ಹೇಗೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತವೆ ಎಂಬುದನ್ನು ನೋಡೋಣ. ಜೊತೆಗೆ ಈ ಪದಾರ್ಥಗಳು ಹೇಗೆ ದೇಹದಿಂದ ವಿಷ ತೆಗೆದು ಹಾಕುವ ಮೂಲಕ ಕೊಬ್ಬನ್ನು ಕಡಿಮೆ ಮಾಡುತ್ತದೆ ಎಂದು ತಿಳಿಯೋಣ.

  • Share this:

    ತೂಕ ಇಳಿಕೆ (Weight Loss) ಸಾಮಾನ್ಯ ಸಂಗತಿಯಲ್ಲ. ತೂಕ ನಷ್ಟಕ್ಕಾಗಿ ತುಂಬಾ ಜನರು (People) ಡಯಟ್ (Diet) ಫಾಲೋ ಮಾಡ್ತಾರೆ. ಹೆಚ್ಚಿನ ಜನರು ಡಯಟ್ ನಲ್ಲಿ ಹಣ್ಣು (Fruits), ಸ್ಮೂಥಿ, ಜ್ಯೂಸ್, ಸಲಾಡ್, ಹಸಿರು ತರಕಾರಿಗಳು (Green Vegetables), ಕ್ಯಾರೆಟ್ ಹೀಗೆ ಹಲವು ಹೆಲ್ದೀ ಪದಾರ್ಥಗಳನ್ನು ಕಚ್ಚಾ ಮತ್ತು ಖಾದ್ಯಗಳ ರೂಪದಲ್ಲಿ ಸೇವನೆ ಮಾಡುತ್ತಾರೆ. ಅದಾಗ್ಯೂ ಭಾರತೀಯರು ಅಡುಗೆಗೆ ಹಲವು ಮಸಾಲೆ ಪದಾರ್ಥಗಳನ್ನು ಬಳಕೆ ಮಾಡುತ್ತಾರೆ. ಈ ಮಸಾಲೆ ಪದಾರ್ಥಗಳು ತೂಕ ಇಳಿಕೆ ಜೊತೆಗೆ ದೇಹಕ್ಕೆ ಹಲವು ಪೋಷಕಾಂಶಗಳನ್ನು ನೀಡುತ್ತದೆ. ಅಂದ ಹಾಗೇ ತಜ್ಞರ ಪ್ರಕಾರ, ಕೆಲವು ಹಸಿರು ಪದಾರ್ಥಗಳು ತೂಕ ಇಳಿಕೆಗೆ ಸಾಕಷ್ಟು ಪ್ರಯೋಜನಕಾರಿ ಎಂದು ತಿಳಿಸಿದ್ದಾರೆ.


    ಈ ಹಸಿರು ಪದಾರ್ಥಗಳು ತೂಕ ನಷ್ಟಕ್ಕೆ ಸಹಕಾರಿ


    ಇವುಗಳನ್ನು ಆಹಾರದಲ್ಲಿ ಸೇರಿಸಿದ್ರೆ ತೂಕ ಇಳಿಕೆ ಆಗುತ್ತದೆ ಎಂದು ಹೇಳಿದ್ದಾರೆ. ತರಕಾರಿಗಳು ಮತ್ತು ಮಸಾಲೆ ಪದಾರ್ಥಗಳು ಸಾಕಷ್ಟು ಔಷಧೀಯ ಗುಣ ಹೊಂದಿವೆ. ಇದು ನಾಲಿಗೆಗಿಂತ ಆರೋಗ್ಯಕ್ಕೆ ಹೆಚ್ಚು ರುಚಿಕರವಾಗಿದೆ. ಅಂದರೆ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ.


    ತರಕಾರಿಗಳು ಮತ್ತು ಮಸಾಲೆ ಪದಾರ್ಥಗಳು ನಾಲಿಗೆಗೆ ಉತ್ತಮ ರುಚಿ, ಹಾಗೂ ಆರೋಗ್ಯಕ್ಕೆ ಅನೇಕ ಪ್ರಯೋಜನ ತಂದು ಕೊಡುತ್ತದೆ. ಈ ಮಸಾಲೆ ಮತ್ತು ಸೊಪ್ಪಿನ ನಿಯಮಿತ ಬಳಕೆ ಮತ್ತು ಸೇವನೆಯು ಹಲವು ರೋಗಗಳ ಅಪಾಯ ಕಡಿಮೆ ಮಾಡಲು ಪ್ರಯೋಜನಕಾರಿ ಆಗಿದೆ ಎಂಬುದನ್ನು ಹಲವು ಅಧ್ಯಯನಗಳು ತಿಳಿಸಿವೆ.




    ಇಂದು ನಾವು ಆಯುರ್ವೇದದಲ್ಲಿ ಗಿಡಮೂಲಿಕೆಗಳೆಂದು ಹೆಸರಿಸಲಾದ ಕೆಲವು ಆಹಾರ ಪದಾರ್ಥಗಳು ಹೇಗೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತವೆ ಎಂಬುದನ್ನು ನೋಡೋಣ. ಜೊತೆಗೆ ಈ ಪದಾರ್ಥಗಳು ಹೇಗೆ ದೇಹದಿಂದ ವಿಷ ತೆಗೆದು ಹಾಕುವ ಮೂಲಕ ಕೊಬ್ಬನ್ನು ಕಡಿಮೆ ಮಾಡುತ್ತದೆ ಎಂದು ತಿಳಿಯೋಣ.


    ಹಸಿರು ಚಹಾ ತೂಕ ನಷ್ಟಕ್ಕೆ ಸಹಕಾರಿ


    ಪಬ್ಮೆಡ್ ವರದಿ ಪ್ರಕಾರ, ತೂಕ ನಷ್ಟದ ವಿಷಯಕ್ಕೆ ಬಂದ್ರೆ ಗ್ರೀನ್ ಟೀ ಸೇವಿಸಲು ಸಲಹೆ ನೀಡ್ತಾರೆ. ಇದು ಸಾಕಷ್ಟು ಪೋಷಕ ಗುಣಗಳನ್ನು ದೇಹಕ್ಕೆ ಒದಗಿಸುತ್ತದೆ. ಗ್ರೀನ್ ಟೀ ಅತ್ಯುತ್ತಮ ಪಾನೀಯವಾಗಿದೆ.


    ಗ್ರೀನ್ ಟೀ ಸೇವನೆಯಿಂದ ಚಯಾಪಚಯ ಹೆಚ್ಚುತ್ತದೆ. ಇದು ತೂಕ ನಷ್ಟ ವೇಗವಾಗಿ ಆಗಲು ಸಹಕಾರಿ. ನೀವು ತೂಕ ಇಳಿಸಲು ಗ್ರೀನ್ ಟೀ ಸೇಚನೆ ಮಾಡಬಹುದು.


    ಆಹಾರದಲ್ಲಿ ಹಸಿರು ಚಹಾ ಆ್ಯಡ್ ಮಾಡಿ. ಹಸಿರು ಚಹಾ ಸೇವನೆಯು ಹಲವು ರೀತಿಯ ಉತ್ಕರ್ಷಣ ನಿರೋಧಕ ಹೊಂದಿದೆ, ಇದು ಕ್ಯಾನ್ಸರ್ ತಡೆಯುವ ಸಾಮರ್ಥ್ಯ ಹೊಂದಿದೆ.


    ಸಾಂದರ್ಭಿಕ ಚಿತ್ರ


    ಹೆಸರು ಕಾಳು ಸೇವನೆಯಿಂದ ತೂಕ ನಷ್ಟ


    ಹೆಸರು ಕಾಳಿನಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಇ ಮತ್ತು ಕ್ಯಾಲ್ಸಿಯಂ, ಕಬ್ಬಿಣ ಮತ್ತು ಪೊಟ್ಯಾಸಿಯಮ್ ಸೇರಿ ಹಲವು ಪೋಷಕ ಗುಣಗಖಿವೆ. ಹೆಸರು ಕಾಳು ತುಂಬಾ ಕಡಿಮೆ ಕೊಬ್ಬಿನಿಂದ ಕೂಡಿದೆ. ಇದು ಪ್ರೋಟೀನ್ ಮತ್ತು ಫೈಬರ್‌ ಹೊಂದಿದೆ. ಇವೆರಡೂ ದೀರ್ಘಕಾಲದವರೆಗೆ ಹೊಟ್ಟೆ ತುಂಬಿರಲು ಸಹಕಾರಿ.


    ತೂಕ ನಷ್ಟಕ್ಕೆ ಹಸಿರು ಮೆಣಸಿನಕಾಯಿಗಳು


    NIH ನ ವರದಿ ಪ್ರಕಾರ, ಹಸಿರು ಮೆಣಸಿನಕಾಯಿ ತೂಕ ನಷ್ಟಕ್ಕೆ ಸಹಕಾರಿ ಆಗಿದೆ. ವಾಸ್ತವವಾಗಿ, ಕ್ಯಾಪ್ಸೈಸಿನ್ ಎಂಬ ಅಂಶವು ಹಸಿರು ಮೆಣಸಿನಕಾಯಿಯಲ್ಲಿದೆ. ಇದು ಸ್ಥೂಲಕಾಯತೆಯ ವಿರೋಧಿ ಗುಣಲಕ್ಷಣ ಹೊಂದಿದೆ. ಸ್ಥೂಲಕಾಯ ಹೋಗಲಾಡಿಸುತ್ತದೆ. ಹಾಗೂ ತೂಕ ನಿಯಂತ್ರಿಸುತ್ತದೆ. ಚಯಾಪಚಯ ಹೆಚ್ಚಿಸುತ್ತದೆ.


    ಕರಿಬೇವಿನ ಎಲೆ


    ಎನ್ ಸಿಬಿಐ ವರದಿಯ ಪ್ರಕಾರ, ಕರಿಬೇವಿನ ಎಲೆಗಳು ತೂಕ ನಷ್ಟಕ್ಕೆ ಪ್ರಯೋಜನಕಾರಿ. ಹಲವು ವಿಶೇಷ ಅಂಶಗಳು ಕರಿಬೇವಿನ ಎಲೆಗಳಲ್ಲಿವೆ.  ಇದು ತೂಕ ನಷ್ಟ, ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ನಿಯಂತ್ರಿಸಲು ಕೆಲಸ ಮಾಡುತ್ತದೆ.


    ಇದನ್ನೂ ಓದಿ: ಓಟ್ ಮೀಲ್​ ಅನ್ನು ಹೀಗೆ ತಿಂದ್ರೆ ಒಂದು ತಿಂಗಳು ಸಾಕು ತೂಕ ಇಳಿಸೋಕೆ


    ತೂಕ ನಷ್ಟಕ್ಕೆ ಹಸಿರು ಏಲಕ್ಕಿ


    ಏಲಕ್ಕಿಯು ಥರ್ಮೋಜೆನಿಕ್ ಸಸ್ಯವಾಗಿದೆ. ಇದು ನಿಮ್ಮ ದೇಹದಿಂದ ವಿಷ ತೆಗೆದು ಹಾಕುತ್ತದೆ. ಚಯಾಪಚಯ ಹೆಚ್ಚಿಸುತ್ತದೆ. ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ತೊಡೆದು ಹಾಕುತ್ತದೆ.

    Published by:renukadariyannavar
    First published: