• Home
  • »
  • News
  • »
  • lifestyle
  • »
  • Weight Loss Tips: ಸಣ್ಣಗೆ ಆಗಬೇಕೆಂದರೆ ವರ್ಕೌಟ್ ನಂತರ ಈ ತಪ್ಪುಗಳನ್ನು ಮಾಡಲೇಬೇಡಿ

Weight Loss Tips: ಸಣ್ಣಗೆ ಆಗಬೇಕೆಂದರೆ ವರ್ಕೌಟ್ ನಂತರ ಈ ತಪ್ಪುಗಳನ್ನು ಮಾಡಲೇಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅನೇಕ ಜನರು ಜಿಮ್‌ ಗೆ ಹೋಗಿ ವ್ಯಾಯಾಮ ಮಾಡ್ತಾರೆ. ಆಹಾರ ಕ್ರಮ ಫಾಲೋ ಮಾಡ್ತಾರೆ. ಜೊತೆಗೆ ತಮ್ಮ ಜೀವನಶೈಲಿಯನ್ನು ಸುಧಾರಿಸ್ತಾರೆ. ಆದ್ರೂ ಸಹ ಅವರಿಗೆ ತೂಕ ಇಳಿಸುವುದು ಹೇಗೆ ಎಂದು ತಿಳಿಯುವುದಿಲ್ಲ. ತೂಕ ಇಳಿಕೆ ಸಾಧ್ಯವಾಗದೇ ಪರಿತಪಿಸುತ್ತಾರೆ.

  • Share this:

    ತೂಕ ಇಳಿಸುವ (Weight Loss) ವಿಷಯ ಬಂದಾಗ ಎಲ್ಲರೂ ಜಿಮ್ ನತ್ತ (Jim) ಮುಖ ಮಾಡ್ತಾರೆ. ಇತ್ತೀಚಿನ ದಿನಗಳಲ್ಲಿ ತುಂಬಾ ಜನರು (People) ಜಿಮ್ ಗೆ ಹೋಗಿ ತೂಕ ಇಳಿಸುತ್ತಾರೆ. ಇನ್ನು ಕೆಲವರು ಉತ್ತಮ ಡಯಟ್ ಪ್ಲಾನ್ (Diet Plan) ಫಾಲೋ ಮಾಡ್ತಾರೆ. ಅನಾರೋಗ್ಯಕರ ಆಹಾರ (Unhealthy Food) ಸೇವನೆ ಮತ್ತು ಅನಾರೋಗ್ಯಕರ ಜೀವನಶೈಲಿಯು ಜನರನ್ನು ಹಲವು ಕಾಯಿಲೆಗಳಿಗೆ ದೂಡೂತ್ತಿದೆ. ಹೀಗಾಗಿ ಬಹುತೇಕ ಜನರು ಜಿಮ್‌ ಗೆ ಹೋಗುವುದು ಮತ್ತು ಡಯಟ್ ಅನುಸರಿಸುತ್ತಿದ್ದಾರೆ. ಆದರೆ ತೂಕ ನಷ್ಟಕ್ಕೆ ಈ ಎರಡು ವಿಷಯಗಳು ಮುಖ್ಯವಲ್ಲ ಎಂಬುದನ್ನು ಆಗಾಗ್ಗೆ ಮರೆತು ಬಿಡುತ್ತೇವೆ.


    ತೂಕ ಇಳಿಕೆಗೆ ಮುಖ್ಯ ಅಂಶಗಳು


    ಯಾಕಂದ್ರೆ ಕೇವಲ ಜಿಮ್ ಗೆ ಹೋಗುವುದು, ಡಯಟ್ ಫಾಲೋ ಮಾಡುವುದು ಮಾತ್ರವಲ್ಲದೇ ದಿನವಿಡೀ ನೀವು ಏನು ಮಾಡುತ್ತೀರಿ ಎಂಬುದು ಸಹ ಮುಖ್ಯವಾಗಿದೆ. ಕೇವಲ ಜಿಮ್‌ ಗೆ ಹೋಗಿ ವರ್ಕೌಟ್ ಮತ್ತು ಡಯಟ್ ಪ್ಲಾನ್ ಫಾಲೋ ಮಾಡಿದ್ರೆ ನಿಮ್ಮ ತೂಕ ಕಡಿಮೆಯಾಗುತ್ತದೆ ಎಂದು ನೀವೂ ಯೋಚಿಸಿದ್ದರೆ, ಅದು ತಪ್ಪು.


    ಅನೇಕ ಜನರು ಜಿಮ್‌ ಗೆ ಹೋಗಿ ವ್ಯಾಯಾಮ ಮಾಡ್ತಾರೆ. ಆಹಾರ ಕ್ರಮ ಫಾಲೋ ಮಾಡ್ತಾರೆ. ಜೊತೆಗೆ ತಮ್ಮ ಜೀವನಶೈಲಿಯನ್ನು ಸುಧಾರಿಸ್ತಾರೆ. ಆದ್ರೂ ಸಹ ಅವರಿಗೆ ತೂಕ ಇಳಿಸುವುದು ಹೇಗೆ ಎಂದು ತಿಳಿಯುವುದಿಲ್ಲ. ಮತ್ತು ತೂಕ ಇಳಿಕೆ ಸಾಧ್ಯವಾಗದೇ ಪರಿತಪಿಸುತ್ತಾರೆ.


    ಇದನ್ನೂ ಓದಿ: ಅರಿಶಿನ ಫೇಸ್​ಪ್ಯಾಕ್​ ಹಾಕಿದ್ರೆ ಸಾಕು ತ್ವಚೆ ಒಣಗುವ ಸಮಸ್ಯೆಗೆ ಪರಿಹಾರ ಸಿಗುತ್ತೆ


    ಹೀಗಾಗಿ ತುಂಬಾ ಜನರು ತಮ್ಮ ತೂಕ ಇಳಿಸುವ ಪ್ರಯಾಣವನ್ನು ಮಧ್ಯದಲ್ಲಿಯೇ ಬಿಡುತ್ತಾರೆ. ಇದಕ್ಕೆಲ್ಲಾ ಕಾರಣ ಅವರು ತೂಕ ಇಳಿಕೆ ವೇಳೆ ಮಾಡುವ ಕೆಲವು ತಪ್ಪುಗಳು. ತೂಕ ಇಳಿಕೆ ವೇಳೆ ಮಾಡುವ ತಪ್ಪುಗಳು ತೂಕ ನಷ್ಟದ ಪ್ರಯಾಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.


    ವರ್ಕೌಟ್‌ ನಂತರ ತೂಕ ನಷ್ಟ ಫಾಲೋ ಮಾಡುವವರ ತಪ್ಪುಗಳು ಯಾವವು?


    ವಿಶ್ರಾಂತಿ ಪಡೆಯದೇ ಇರುವುದು


    ಜಿಮ್‌ ನಲ್ಲಿ ದೀರ್ಘ ಕಾಲದವರೆಗೆ ವ್ಯಾಯಾಮ ಮಾಡಿದ ನಂತರ ಸ್ನಾಯುಗಳು ಗಟ್ಟಿ ಆಗುತ್ತವೆ. ವಿಶೇಷವಾಗಿ ನೀವು ದೀರ್ಘ ಕಾಲದವರೆಗೆ ಕೆಲವು ದೈಹಿಕ ಚಟುವಟಿಕೆ ಮಾಡಲು ಪ್ರಯತ್ನ ಮಾಡ್ತಿದ್ದರೆ ವ್ಯಾಯಾಮದ ನಂತರ ನೀವು ದೇಹವನ್ನು ಸರಿಯಾಗಿ ವಿಸ್ತರಿಸಿ. ಇಲ್ಲದಿದ್ದರೆ ಸ್ನಾಯುಗಳು ಗಟ್ಟಿ ಆಗುತ್ತವೆ. ಹಾಗೆಯೇ ನೀವು ಸರಿಯಾಗಿ ವಿಶ್ರಾಂತಿ ಪಡೆಯಿರಿ.


    ವ್ಯಾಯಾಮದ ನಂತರ ನಿದ್ರೆ ಮಾಡಬೇಡಿ


    ಪ್ರತಿಯೊಬ್ಬರೂ ವರ್ಕ್ ಔಟ್ ಮಾಡಿದ ನಂತರ ಸ್ವಲ್ಪ ಆಯಾಸ ಹೊಂದುತ್ತಾರೆ. ಆದರೆ ಆಯಾಸ ಅಂದುಕೊಂಡು ನಿದ್ದೆ ಮಾಡಲು ಹೋಗಬೇಡಿ. ಯಾಕಂದ್ರೆ ನಿಮ್ಮ ತೂಕ ನಷ್ಟ ಪ್ರಯಾಣದ ಸಮಯದಲ್ಲಿ ಸ್ನಾಯುವಿನ ನಮ್ಯತೆ ಕಾಪಾಡಲು ಮತ್ತು ಯಾವುದೇ ಬಿಗಿತ ಅನುಭವಿಸದಿರಲು ನೀವು ದಿನವಿಡೀ ಸಕ್ರಿಯವಾಗಿರಬೇಕು.


    ಜಲಸಂಚಯನ ಕೊರತೆ


    ವರ್ಕೌಟ್ ನಂತರ ನಿಮ್ಮ ಸ್ನಾಯುಗಳಿಗೆ ಸರಿಯಾದ ಜಲಸಂಚಯನ ಅಗತ್ಯವಿದೆ. ಇದು ನಿಮ್ಮ ಮೂಳೆಗಳಲ್ಲಿ ಸರಿಯಾದ ತೇವಾಂಶ ಮತ್ತು ಲೂಬ್ರಿಕೇಶನ್ ನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನೀರು ಕುಡಿಯುವುದು ಸಹ ಮುಖ್ಯ. ವ್ಯಾಯಾಮದ ಸಮಯದಲ್ಲಿ ಬೆವರುವುದು ದೇಹದಲ್ಲಿ ನೀರಿನ ನಷ್ಟಕ್ಕೆ ಕಾರಣ ಆಗುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.


    ವ್ಯಾಯಾಮದ ನಂತರದ ಊಟ


    ವ್ಯಾಯಾಮದ ನಂತರ ನೀವು ಊಟ ಮಾಡದೇ ಇರುತ್ತಿದ್ದರೆ ಇದನ್ನು ಮೊದಲು ಬದಲಾಯಿಸಿ. ನಿಮ್ಮ ತೂಕ ನಷ್ಟ ಪ್ರಯಾಣದಲ್ಲಿ ನೀವು ಬಹಳಷ್ಟು ತೊಂದರೆ  ಎದುರಿಸಬೇಕಾಗಬಹುದು. ಇದು ಜನರು ಆಗಾಗ್ಗೆ ಮಾಡುವ ದೊಡ್ಡ ತಪ್ಪು. ವ್ಯಾಯಾಮದ ನಂತರದ ಊಟ ಮಾಡುವುದು ಮೂಳೆಗಳು ಚೇತರಿಸಿಕೊಳ್ಳಲು ಸಹಾಯ ಮಾಡಲು ಕೆಲವು ರೀತಿಯ ಪ್ರೋಟೀನ್ ನೀಡಲು ಸಹಕಾರಿ.


    ಇದನ್ನೂ ಓದಿ: ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ವಿಶೇಷ ಹೇರ್ ಟಾನಿಕ್ ಮನೆಮದ್ದು!


    ತೂಕ ಇಳಿಸುವ ಪ್ರಯಾಣದ ಬಗ್ಗೆ ಕಾಳಜಿ ವಹಿಸದಿರುವುದು


    ಅನೇಕ ಜನರು ಜಿಮ್‌ ಗೆ ಹೋಗುತ್ತಾರೆ. ಮತ್ತು ಎಲ್ಲಾ ಆಹಾರ ಯೋಜನೆ ಫಾಲೋ ಮಾಡ್ತಾರೆ. ಆದರೆ ನಿಮ್ಮ ತೂಕ ನಷ್ಟದ ಪ್ರಯಾಣ ನೀವು ಟ್ರ್ಯಾಕ್ ಮಾಡದಿದ್ದರೆ ಇದು ನಿಮ್ಮ ದೊಡ್ಡ ತಪ್ಪಾಗುತ್ತದೆ. ನೀವು ದಿನವಿಡೀ ಎಷ್ಟು ಕ್ಯಾಲೊರಿ ಸೇವಿಸುತ್ತೀರಿ ಎಂಬುದನ್ನು ನೋಡಿಕೊಳ್ಳಿ. ನೀವು ಎಷ್ಟು ತೂಕ ಕಳೆದುಕೊಳ್ಳುತ್ತೀರಿ ಎಂಬುದನ್ನು ಸಹ ನೀವು ತಿಳಿದಿರಬೇಕು. ಇದರಿಂದ ನೀವು ಸರಿಯಾದ ದಿಕ್ಕಿನಲ್ಲಿ ಕೆಲಸ ಮಾಡಬಹುದು.

    Published by:renukadariyannavar
    First published: