• Home
 • »
 • News
 • »
 • lifestyle
 • »
 • Weight Loss: ತೂಕ ಇಳಿಕೆಗೆ ದ್ರಾಕ್ಷಿ ರಾಬ್ಡಿ ಬೆಸ್ಟ್​!

Weight Loss: ತೂಕ ಇಳಿಕೆಗೆ ದ್ರಾಕ್ಷಿ ರಾಬ್ಡಿ ಬೆಸ್ಟ್​!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತೂಕ ಇಳಿಕೆಗೆ ನೀವು ಹಲವು ಹಣ್ಣು ಮತ್ತು ಪದಾರ್ಥಗಳನ್ನು ಡಯಟ್ ನಲ್ಲಿ ಸೇರಿಸುವಂತೆ ಸಲಹೆ ನೀಡಲಾಗುತ್ತದೆ. ಅದರಲ್ಲಿ ದ್ರಾಕ್ಷಿ ಕೂಡ ಒಂದು. ದ್ರಾಕ್ಷಿ ತೂಕ ಇಳಿಕೆಗೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿ ಅಂತಾ ಹೇಳಲಾಗಿದೆ.

 • Share this:

  ತೂಕ ಇಳಿಕೆ (Weight Loss) ಅನ್ನೋದು ಒಂದು ಸವಾಲಿದ್ದಂತೆ. ಅದನ್ನು ಸಂಪೂರ್ಣವಾಗಿ ತಾಳ್ಮೆ ಮತ್ತು ಪರಿಶ್ರಮದಿಂದ ಮಾಡಿದ್ರೆ ಮಾತ್ರ ಕೆಲವೇ ದಿನಗಳಲ್ಲಿ ಉತ್ತಮ ರಿಸಲ್ಟ್ (Good Result) ಸಿಗುತ್ತೆ. ಕೆಲವು ದಿನ ಚೆನ್ನಾಗಿ ವರ್ಕೌಟ್ (Workout) ಮಾಡಿ, ಡಯಟ್ (Diet) ಮಾಡಿ, ಮತ್ತೆ ಕೆಲವು ದಿನಗಳಲ್ಲಿ ಅದನ್ನು ಮರೆತು, ಹೇಗೆ ಬೇಕೋ ಹಾಗೇ ತಿನ್ನುವುದು, ಡಯಟ್ ಮಾಡ್ದೇ ಇರುವುದು, ವರ್ಕೌಟ್ ಮಾಡದೇ ಇರುವುದು ಮಾಡಿದ್ರೆ ತೂಕ ಅಷ್ಟೇ ಬೇಗ ಏರಿಕೆ ಆಗುತ್ತದೆ. ಹಾಗಾಗಿ ಡಯಟ್ ಹಾಗೂ ವರ್ಕೌಟ್, ತಿನ್ನುವ ಕ್ಯಾಲೋರಿಗಳ ಬಗ್ಗೆ ಹಾಗೂ ಜೀವನಶೈಲಿಯ ಬಗ್ಗೆ ಯಾವಾಗಲೂ ನಿರ್ಲಕ್ಷ್ಯ ಮಾಡಬಾರದು. ಅಂದಾಗ ತೂಕ ಇಳಿಕೆ ಸುಲಭ ಸಾಧ್ಯವಾಗುತ್ತದೆ.


  ತೂಕ ಇಳಿಕೆಗೆ ದ್ರಾಕ್ಷಿಯ ಈ ರೆಸಿಪಿ ಸಹಕಾರಿ!


  ತೂಕ ಇಳಿಕೆಗೆ ನೀವು ಹಲವು ಹಣ್ಣು ಮತ್ತು ಪದಾರ್ಥಗಳನ್ನು ಡಯಟ್ ನಲ್ಲಿ ಸೇರಿಸುವಂತೆ ಸಲಹೆ ನೀಡಲಾಗುತ್ತದೆ. ಅದರಲ್ಲಿ ದ್ರಾಕ್ಷಿ ಕೂಡ ಒಂದು. ದ್ರಾಕ್ಷಿ ತೂಕ ಇಳಿಕೆಗೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿ ಅಂತಾ ಹೇಳಲಾಗಿದೆ.


  ದ್ರಾಕ್ಷಿಯಲ್ಲಿ ಇರುವ ಉತ್ಕರ್ಷಣ ನಿರೋಧಕಗಳು ನೈಸರ್ಗಿಕವಾಗಿ ರಕ್ತದೊತ್ತಡ ಸಮಸ್ಯೆ ನಿವಾರಿಸಲು ಸಹಕಾರಿ. ಅದೇ ರೀತಿ ದ್ರಾಕ್ಷಿಯು ಕೊಲೆಸ್ಟ್ರಾಲ್ ಮಟ್ಟ ಸಮತೋಲನಗೊಳಿಸಲು ಸಹಕಾರಿ. ದ್ರಾಕ್ಷಿಯ ಸೇವನೆಯಿಂದ ವಯಸ್ಸಾಗುವಿಕೆ ಪ್ರಕ್ರಿಯೆ ನಿಧಾನವಾಗುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.
  ದ್ರಾಕ್ಷಿಯ ರಾಬ್ಡಿ ಪಾಕವಿಧಾನ ತೂಕ ನಷ್ಟಕ್ಕೆ ಲಾಭಕಾರಿ


  ದ್ರಾಕ್ಷಿ ಹಣ್ಣಿನಿಂದ ಮಾಡಲಾಗುವ ರಾಬ್ಡಿ ರೆಸಿಪಿಯಲ್ಲಿ ಕೊಬ್ಬು ಮುಕ್ತ ಹಾಲಿನ ದೇಸಿ ಖಾಂಡ್ ವನ್ನು ಬಳಕೆ ಮಾಡ್ತಾರೆ. ಹೀಗಾಗಿ ಇದರ ಸೇವನೆ ನಿಮ್ಮ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.


  ದೇಸಿ ಖಂಡ ಪದಾರ್ಥವು ಉತ್ತಮ ಪ್ರಮಾಣದ ಫೈಬರ್, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಆಂಟಿ-ಆಕ್ಸಿಡೆಂಟ್ನಿಂದ ಸಮೃದ್ಧವಾಗಿದೆ. ಇದು ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ. ಹಾಗಾದ್ರೆ ದ್ರಾಕ್ಷಿ ಹಣ್ಣಿನ ರಾಬ್ಡಿ ರೆಸಿಪಿ ಮಾಡುವುದು ಹೇಗೆ ನೋಡೋಣ.


  ತೂಕ ಇಳಿಕೆಗೆ ದ್ರಾಕ್ಷಿ ಹಣ್ಣಿನ ರಾಬ್ಡಿ ರೆಸಿಪಿ


   ಬೇಕಾಗುವ ಪದಾರ್ಥಗಳು


  ಎರಡು ಬಟ್ಟಲು ಹಸಿರು ದ್ರಾಕ್ಷಿ, ಎರಡು ಲೀಟರ್ ಕೊಬ್ಬು ಮುಕ್ತ ಹಾಲು, ಮೂರು ಬಹು ಧಾನ್ಯದ ಬ್ರೆಡ್, ಹತ್ತು ಚಮಚ ದೇಸಿ ಖಂಡ, ಅರ್ಧ ಚಮಚ ಹಸಿರು ಆಹಾರ ಬಣ್ಣ, ಅರ್ಧ ಚಮಚ ಏಲಕ್ಕಿ ಪುಡಿ, ಅರ್ಧ ಚಮಚ ದಾಲ್ಚಿನ್ನಿ ಪುಡಿ, ಹದಿನೈದು ಗೋಡಂಬಿ, ಹದಿನೈದು ಬಾದಾಮಿ, ಹತ್ತು ಒಣದ್ರಾಕ್ಷಿ, ಬೇಕು.


  ದ್ರಾಕ್ಷಿ ಹಣ್ಣಿನ ರಾಬ್ಡಿ ರೆಸಿಪಿ ತಯಾರಿಸುವ ವಿಧಾನ


  ಮೊದಲು ಪಾತ್ರೆಯಲ್ಲಿ ಹಾಲು ಕುದಿಸಿ, ಅದಕ್ಕೆ ಎರಡು ಕಪ್ ನೀರು ಸೇರಿಸಿ. ನಂತರ ಹಾಲನ್ನು ಕಡಿಮೆ ಉರಿಯಲ್ಲಿ ಬೇಯಿಸಿ. ಈಗ ಬ್ರೆಡ್ ಮತ್ತು ದ್ರಾಕ್ಷಿಯನ್ನು ಪ್ರತ್ಯೇಕವಾಗಿ ರುಬ್ಬಿರಿ. ಇದನ್ನು ಪ್ರತ್ಯೇಕವಾಗಿ ಇರಿಸಿ.


  ಸಾಂದರ್ಭಿಕ ಚಿತ್ರ


  ಹಾಲು ಚೆನ್ನಾಗಿ ಬೆಂದ ನಂತರ ಅದಕ್ಕೆ ರುಬ್ಬಿದ ಬ್ರೆಡ್ ಹಾಕಿ ಚೆನ್ನಾಗಿ ಬೆರೆಸಿ. ಎರಡು ನಿಮಿಷ ಬೇಯಿಸಿ. ಈಗ ರುಬ್ಬಿದ ದ್ರಾಕ್ಷಿ ರಸವನ್ನು ಹಾಲಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದಕ್ಕೆ ಹಸಿರು ಆಹಾರ ಬಣ್ಣ ಹಾಕಿ ಬೆರೆಸಿ.


  ಮಾಧುರ್ಯಕ್ಕಾಗಿ ದೇಸಿ ಖಂಡವನ್ನು ಹಾಕಿ ಚೆನ್ನಾಗಿ ಬೆರೆಸಿ. ಬೇಕೆಂದರೆ ಸಕ್ಕರೆ ಸೇರಿಸಿ. ನಂತರ ಹಾಲಿನ ಸಂಪೂರ್ಣ ಮಿಶ್ರಣವನ್ನು ನಾಲ್ಕು ನಿಮಿಷ ಬೇಯಿಸಿ. ನಂತರ ಅದಕ್ಕೆ ಏಲಕ್ಕಿ ಪುಡಿ ಮತ್ತು ದಾಲ್ಚಿನ್ನಿ ಪುಡಿ, ಎಲ್ಲಾ ಒಣ ಹಣ್ಣುಗಳನ್ನು ನುಣ್ಣಗೆ ಕತ್ತರಿಸಿ ಹಾಲಿಗೆ ಹಾಕಿ ಮಿಶ್ರಣ ಮಾಡಿ.


  ನಂತರ ಅದನ್ನು ತಣ್ಣಗಾಗಿಸಿ. ಬೇಕೆಂದರೆ ಫ್ರಿಜ್ನಲ್ಲಿ ಇರಿಸಬಹುದು. ಅಥವಾ ಕೋಣೆಯ ಉಷ್ಣಾಂಶದಲ್ಲಿ ನಾಲ್ಕು ಗಂಟೆ ಹಾಗೇ ಬಿಡಿ. ನಂತರ ದ್ರಾಕ್ಷಿ ರಾಬ್ಡಿಯನ್ನು ಸೇವಿಸಿ.


  ಇದನ್ನೂ ಓದಿ: ಉತ್ತಮ ನಿದ್ರೆಗೆ, ಕೂದಲಿನ ಆರೋಗ್ಯಕ್ಕೆ, ರಕ್ತ ಹೆಚ್ಚಳಕ್ಕೆ ಸಹಕಾರಿ ಬೀಟ್​ರೂಟ್​​ ಸೇವನೆ


  ದ್ರಾಕ್ಷಿ ರಾಬ್ಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ


  ದ್ರಾಕ್ಷಿ ರಾಬ್ಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟ್‌ ಮತ್ತು ಪ್ರೋಟೀನ್‌ ಇದೆ. ಜೊತೆಗೆ ಹಲವು ಪೋಷಕಾಂಶಗಳಿವೆ. ರೋಗಗಳಿಂದ ದೂರವಿರಲು ಸಹಾಯ ಮಾಡುತ್ತದೆ.

  Published by:renukadariyannavar
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು