ಹೊಸ ವರ್ಷವು (New Year) ಪ್ರಾರಂಭವಾಗಿದೆ. ಇಂದು ಮೂರನೇ ದಿನ. ಯಾರೆಲ್ಲಾ ತೂಕ ಇಳಿಕೆಯ (Weight Loss) ಸಂಕಲ್ಪ ಮಾಡಿದ್ದೀರಿ? ಅವರೆಲ್ಲಾ ಕೆಲವು ಮುಖ್ಯ ಸಲಹೆಗಳನ್ನು (Tips) ಪಾಲಿಸಿ. ಯಾಕಂದ್ರೆ ಫಿಟ್ನೆಸ್ (Fitness) ಮತ್ತು ತೂಕ ಇಳಿಕೆ ಕೇವಲ ಒಂದೆರಡು ದಿನದ ಮಾತಲ್ಲ. ಇದು ನಿರಂತರವಾಗಿರಬೇಕು. ಅಂದಾಗ ಮಾತ್ರ ಹ್ಯಾಪಿ ಹಾಗೂ ಸ್ಲಿಮ್ (Slim) ಆಗಿ ಕಾಣಿಸಬಹುದು. ಆರೋಗ್ಯ (Health) ಮತ್ತು ಫಿಟ್ನೆಸ್ ನಿಮ್ಮ ಮುಖ್ಯ ಗುರಿಯಾಗಿರಲಿ. ಅಂದಾಗ ಮಾತ್ರ ತೂಕ ಇಳಿಕೆ ಸರಳವಾಗತ್ತದೆ. ಸ್ಥೂಲಕಾಯ (Obesity) ಇರುವವರು ತೂಕ ನಷ್ಟ ಮಾಡುವುದು ಮುಖ್ಯವಾಗಿದೆ. ಇಲ್ಲದಿದ್ದರೆ ಬೊಜ್ಜು ಹಲವು ಕಾಯಿಲೆಗೆ ದೂಡುತ್ತದೆ. ನಿಮ್ಮನ್ನು ನೀವು ಫಿಟ್ ಆಗಿರಿಸಿಕೊಳ್ಳಲೇಬೇಕು ಎಂದು ತೀರ್ಮಾನ ಮಾಡಿ.
ತೂಕ ನಷ್ಟಕ್ಕೆ ಸಿಂಪಲ್ ಸಲಹೆ ಫಾಲೋ ಮಾಡಿ
ನೀವು ಜಿಮ್ಗೆ ಸೇರುವ ಮೂಲಕ ತೂಕ ಕಡಿಮೆ ಮಾಡಿಕೊಳ್ಳಬಹುದು. ಯೋಗ, ವ್ಯಾಯಾಮ, ವಾಕಿಂಗ್ ಮಾಡಿ. ಡಯಟ್ ಮಾಡಿ. ಜೀವನಶೈಲಿಯಲ್ಲಿ ಉತ್ತಮ ಬದಲಾವಣೆ ಮಾಡಿಕೊಳ್ಳಿ. ಹೆಚ್ಚು ನೀರು ಕುಡಿಯಿರಿ. ಚೆನ್ನಾಗಿ ನಿದ್ರೆ ಮಾಡಿ. ಬೆಳಗ್ಗೆ ಬೇಗ ಏಳಿ, ರಾತ್ರಿ ಬೇಗ ಮಲಗಿ ಈ ಕೆಲವೊಂದು ಪುಟ್ಟ ಪುಟ್ಟ ಸಲಹೆಯನ್ನು ನಿಯಮಿತವಾಗಿ ಮೊದಲು ಫಾಲೋ ಮಾಡಿ.
ನಂತರ ಫಿಟ್ನೆಸ್ ಗಾಗಿ ಬೆಳಗ್ಗೆ ಬೇಗ ಎದ್ದು ವಾಕಿಂಗ್, ರನ್ನಿಂಗ್ , ಜಾಗಿಂಗ್ ಮಾಡಿ. ನಿಯಮಿತವಾಗಿ ಯೋಗ ಮಾಡಿ. ಸೂರ್ಯ ನಮಸ್ಕಾರ ಮಾಡಿ. ತಿಂಡಿಯನ್ನು ಫ್ರೆಶ್ ಆಗಿ ನೀವೇ ತಯಾರಿಸಿ ತಿನ್ನುವುದು ರೂಢಿಸಿಕೊಳ್ಳಿ. ಪೋಷಕಾಂಶ ಭರಿತ ಆಹಾರ ಸೇವಿಸಿ. ಫೈಬರ್, ಪ್ರೊಟೀನ್ ಮತ್ತು ವಿಟಮಿನ್, ಖನಿಜ ಜೀವಸತ್ವ ಸಮೃದ್ಧ ಪದಾರ್ಥ ಸೇವಿಸಿ.
ನಿಮ್ಮ ಸಂಕಲ್ಪವನ್ನು ಅರ್ಧಕ್ಕೆ ಬಿಡಬೇಡಿ. ನಿಮ್ಮದೇ ಆದ ವ್ಯಾಯಾಮ ಮಾಡಿ. ನಿಮ್ಮ ಮನೆಯ ಕೆಲಸಗಳನ್ನು ಮಾಡಿ. ಮಧ್ಯಾಹ್ನ ಹೆಚ್ಚು ಹೊತ್ತು ಮಲಗುವುದನ್ನು ತಪ್ಪಿಸಿ. ಒಂದೇ ಸಮಯಕ್ಕೆ ಭಾರವಾದ ಆಹಾರ ಸೇವನೆ ಮಾಡ್ಬೇಡಿ. ಆಹಾರವನ್ನು ಚಿಕ್ಕ ಭಾಗಗಳಲ್ಲಿ ಸೇವನೆ ಮಾಡುವುದನ್ನು ರೂಢಿಸಿಕೊಳ್ಳಿ.
ಫಿಟ್ನೆಸ್ ಮಟ್ಟ ಎಷ್ಟಿದೆ ಎಂಬುದನ್ನು ನಿರ್ಣಯಿಸಿ
ನೀವು ಎಷ್ಟು ಫಿಟ್ ಆಗಿದ್ದೀರಿ ಎಂಬುದು ನಿಮಗೆ ಗೊತ್ತಿರಲಿ. ಅದರ ನಂತರ ನೀವು ತೂಕ ನಷ್ಟಕ್ಕೆ ಯಾವ ಮಾರ್ಗ ಸರಿಯಾದದ್ದು ಎಂಬುದನ್ನು ನಿರ್ಣಯಿಸಿ. ದಿನವೂ ಕನಿಷ್ಠ ಒಂದು ಕಿಲೋಮೀಟರ್ ಅಥವಾ 10,000 ಹೆಜ್ಜೆ ನಡೆಯಲು ಪ್ರಯತ್ನಿಸಿ. ಮೊಬೈಲ್ ಅಪ್ಲಿಕೇಶನ್ ಅಥವಾ ಫಿಟ್ನೆಸ್ ಬ್ಯಾಂಡ್ ನಲ್ಲಿ ತಿಳಿದುಕೊಳ್ಳಿ.
ನಡೆಯುವ ವೇಗವನ್ನು ನೋಡಿಕೊಳ್ಳಿ. ನೆಲದ ಮೇಲೆ ಕುಳಿತಾಗ ನೀವು ಎಷ್ಟು ವೇಗವಾಗಿ ಓಡಬಹುದು, ಬಾಡಿ ಮಾಸ್ ಇಂಡೆಕ್ಸ್ ಅಳೆಯಿರಿ. ಅತ್ಯಂತ ಸರಳ ದಿನಚರಿಯೊಂದಿಗೆ ತೂಕ ಇಳಿಕೆ ಪ್ರಯಾಣ ಪ್ರಾರಂಭಿಸಿ.
ದಿನಚರಿಯಲ್ಲಿ ಸುಲಭವಾದ ವ್ಯಾಯಾಮ ಸೇರಿಸಿ. ಇಷ್ಟವಿಲ್ಲದ ಅಥವಾ ಮಾಡಲು ಸಾಧ್ಯವಾಗದ ಯಾವುದೇ ವ್ಯಾಯಾಮ ಮಾಡಬೇಡಿ. ಹೊಸದನ್ನು ಪ್ರಯತ್ನಿಸಿ. ನೀವು ಮನೆಯಲ್ಲಿ ತೂಕ ತರಬೇತಿ ಮಾಡಿದರೆ ಸ್ಕಿಪ್ಪಿಂಗ್ ಪ್ರಯತ್ನಿಸಿ.
ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರೆ ಪ್ರತಿದಿನ ಬೆಳಿಗ್ಗೆ ನಿಮ್ಮಿಷ್ಟದ ಆಟ ಆಡಿ. ನಿಮ್ಮ ದೇಹ ಏನು ಹೇಳುತ್ತಿದೆ ಎಂಬುದನ್ನು ಆಲಿಸಿ. ಮನೆಯಲ್ಲಿ ವ್ಯಾಯಾಮ ಮಾಡಿದರೆ,
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಟೊಮೆಟೊ ತಿಂದ್ರೆ ಏನೆಲ್ಲಾ ಪ್ರಯೋಜನವಿದೆ ಗೊತ್ತಾ?
ದೇಹಕ್ಕೆ ಹೆಚ್ಚು ಒತ್ತಡ ಹಾಕದೇ ಆರಾಮವಾಗಿ ಸರಳ ಯೋಗ ಭಂಗಿ ಮಾಡಿ. ನಿಮ್ಮ ತೂಕ ಇಳಿಕೆ ಪ್ರಗತಿ ಪತ್ತೆ ಹಚ್ಚಿ. ಫಿಟ್ನೆಸ್ ಮಟ್ಟ ಎಲ್ಲಿದೆ ಎಂಬುದನ್ನು ಆಗಾಗ್ಗೆ ತಿಳಿದುಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ